ಚಿಗುರು
ಹಳೆ ಬೇರು ಹೊಸ ಚಿಗುರು
http://cheeguru.blogspot.com/
ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ ..
ಯಾವುದೊ ಒಂದು ಪಡೆದ ಹಾಗೆ ..
ಅಮ್ಮನು ಮಡಿಲ ಅಪ್ಪಿದಹಾಗೆ ..
ಕಣ್ಣಂಚಲ್ಲೀ .... ನಮ್ಮ್ ಅಮ್ಮನ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಮೊದಮೊದಲ್ ಪ್ರೀತಿ ನೀಡಿದವಳು ಅಮ್ಮ
ಮೊದಮೊದಲ್ ಮಾತನಾಡಿಸಿದವಳು ಅಮ್ಮ
ಮೊದಮೊದಲ್ ತೊದಲು ನುಡಿಯ ಕಲಿಸಿದವಳು ಅಮ್ಮ
ಮೊದಮೊದಲ್ ಮುತ್ತು ಕೊಟ್ಟವಳು ಅಮ್ಮ
ಮೊದಮೊದಲ್ ಕೈ ತುತ್ತು ಉಣಿಸಿದವಳು ಅಮ್ಮ
ಮೊದಮೊದಲ್ ಆಟ ಆಡಿಸಿದವಳು ಅಮ್ಮ
ಮೊದಮೊದಲ್ ಪಾಠ ಕಲಿಸಿದವಳು ಅಮ್ಮ
ಮೊದಮೊದಲ್ ನೋಟಕೆ ಕಂಡವಳು ಅಮ್ಮ
ಮೊದಮೊದಲ್ ಹೆಜ್ಜೆಯನಿಡುವುದ ಕಲಿಸಿದವಳು ಅಮ್ಮ
ಮೊದಮೊದಲ್ ಉಡಿಗೆ ತೊಡಿಸಿದಳು ಅಮ್ಮ
ಎಲ್ಲಾದಕ್ಕು ಮುನ್ನುಡಿ ಅವಳೆ ಅಮ್ಮ

- basavarajKM ರವರ ಬ್ಲಾಗ್
- Login or register to post comments
- 122 hits
- Email this blog





RSS: