Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › benaka ರವರ ಬ್ಲಾಗ್

೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!

May 16, 2006 - 6:15pm — benaka

                             ೨. ಜಪಾನಿನಲ್ಲಿ ಮೊದಲದಿನ

ಸರಿಯಾಗಿ ಬೆಳಿಗ್ಗೆ ೮:೦೦ ಗಂಟೆ: ಬಸ್ಸು ನಿಂತಿತು; ನಿದ್ದೆ ಬಿಟ್ಟೆದ್ದೆ. ಪ್ರಯಾಣಪೂರ್ತಿ ನಿದ್ದೆಯಿಲ್ಲ; ಸಾಲದ್ದಕ್ಕೆ ಜಪಾನ್ ಸಮಯ ಬೇರೆ ಮೂರೂವರೆ ಗಂಟೆ ಮುಂದೆ! OCATನಲ್ಲಿ ಬಂದಿಳಿದು ಸರಂಜಾಮು ಪೆಟ್ಟಿಗೆ ಇಳಿಸಿದ್ದನ್ನು ತೆಗೆದುಕೊಂಡೆ, ಅಲ್ಲೇ ಸ್ವಲ್ಪ ಕುಳಿತೆ; ಮುಂದಕ್ಕೆ ದಾರಿ ಗೊತ್ತಿರಲಿಲ್ಲ. ೧೫ ನಿಮಿಷ ಅಲ್ಲೇ ಶತಪಥ ಹಾಕಿದೆ. ಅಂತೂ ಕಂಡರು ನರೇಂದ್ರ - ವೆಂಕಟರು!

"ಸ್ವಾಗತ ಜಪಾನಿಗೆ" ಎಂದು ಕೈ ಕುಲುಕುತ್ತಾ ಇಬ್ಬರೂ ಎಲ್ಲೋ ಕರೆದೊಯ್ದರು. ಎಲ್ಲೋ ಹತ್ತಿದೆವು; ಎಲ್ಲೋ ಇಳಿದೆವು; ಅಂತೂ ತಲುಪಿದ್ದು ಅದೇ ಸಂಕೀರ್ಣದ ಎರಡನೇ ಅಂತಸ್ತಿನ ಕೆಳಮಾಳಿಗೆಯ ರೈಲುನಿಲ್ದಾಣಕ್ಕೆ! ಪಕ್ಕದಲ್ಲೇ ಇದ್ದ Mc Donald's ಉಪಾಹಾರಗೃಹ ಕಂಡ ತಕ್ಷಣವೇ ವೆಂಕಟನಿಗೆ ನನ್ನ ಹೊಟ್ಟೆಯ ನೆನಪಾಯಿತು.

"ಲೇಯ್ ಹಸಿವು ಆಗಿದೆಯೇನೋ? ನಡಿ ಏನಾದರೂ ತಿನ್ನೋಣ" ಎಂದ. ನಾನು ರಾತ್ರಿ ಮಾಡಿದ ವಿಮಾನದೂಟ ಅರಗಿಹೋಗಿತ್ತು.
"ನಡೀ.." ಎಂದವನೇ ತಡೆದು ನಿಂತೆ. "ಲೇಯ್, ನಾನು ಸಸ್ಯಾಹಾರಿ ಕಣೋ; ಇಲ್ಲೇನು ಸಿಗತ್ತೋ?" ಎಂದೆ.
ವೆಂಕಟ "ಲೋ, ನಾನೂ Vegಏ ಕಣೋ, ನಡಿ ಎಲ್ಲ ಹೇಳ್ಕೊಡ್ತೀನಿ" ಎಂದ.
ನರೇಂದ್ರ ನಗುತ್ತಾ "ಓಹೋ! ನೀನು ವೆಜ್ಜಾ! ಬಾ! ಬಾ! ಈಗ್ತಾನೆ ಬರ್ತಿದೀಯಾ, ಎಲ್ಲಾ ಗೊತ್ತಾಗತ್ತೆ" ಎಂದು ಸ್ವಲ್ಪ ಒಗಟೊಗಟಾಗಿ ಏನೋ ಹೇಳಿದ. ನನಗೋ ಮೊದಲೇ ಭಯ; ಅಪ್ಪಟ ಸಸ್ಯಾಹಾರಿ ನಾನು; ಮೊಟ್ಟೆ-ಗಿಟ್ಟೆ ಕೂಡ ದೂರವೇ ಸರಿ. ಹಾಗಿದ್ದೂ ಮೂವರೂ Mc Donald's ಅಂಗಡಿಯೊಳನುಗ್ಗಿದೆವು! ವೆಂಕಟ ನನಗೆ, ಅವನಿಗೆ ಎರಡು ಹ್ಯಾಂಬರ್ಗರ್ ಸೆಟ್ಟು ಹೇಳಿದ!
"ಲೋ! ಅದ್ರಲ್ಲಿ ದನದ ಮಾಂಸ ಇರತ್ತೆ ಕಣೋ...." ಎಂದು ನಾನು ಹೌಹಾರುತ್ತಾ ಹೇಳಿದೆ.
"ತಡಿಯೋ, ನೋಡೀಗ" ಎಂದವನೇ "ದೊಚಿರಮೋ ನಿಕುನಾಶಿದೆ ಒನೆಗಾಯ್ ಶಿಮಾಸ್" ಎಂದ!
(ಮುಂದುವರೆಯುವುದು)

Ornamental seperator
  • benaka ರವರ ಬ್ಲಾಗ್
  • Login or register to post comments
  • 1636 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 16, 2006 - 6:20pm — benaka

ನನ್ನ ಜಪಾನ್ ಪ್ರವಾಸ:

benaka's picture

ನನ್ನ ಜಪಾನ್ ಪ್ರವಾಸ: ಜಪಾನಿನಲ್ಲಿ ಮೊದಲದಿನ - ಭಾಗ ೧

ಬೆನಕ

  • Login or register to post comments
  • link
  • Email this ಪ್ರತಿಕ್ರಿಯೆ
May 16, 2006 - 6:47pm — ಮಹೇಶ ಭೋಗಾದಿ

ಹೊರದೇಶದ ಖಾದ್ಯ

ಮಹೇಶ ಭೋಗಾದಿ's picture

ಬೆನಕರೆ ನಿಮ್ಮ ಒದ್ದಾಟವನ್ನು ಓದಿ ನನಗೆ ನೆನಪಾಗುವುದು;

ನಾನು ಪೆಪರೋನಿಯನ್ನು ವೆಜ್ ಎಂದು ತಿಳಿದು ಹೇಳಲು ಹೋದಾಗ ನನ್ನ ಸಂಗಡ ಬಂದವರು ನಕ್ಕು ಅದು ಹಂದಿ ಮಾಸವೆಂದಿದ್ದರು. ನನಗೆ ಒಂದು ಸಾರಿ ಹೊಟ್ಟೆ ಬಾಯಿಗೆ ಬಂದು ವಾಪಸ್ಸು ಹೋಯಿತು.

ಇದು ನಡೆದದ್ದು ಕಾಲಿಪೋರ್ನಿಯದ ಸನ್ ಯೋಸೆಯಲ್ಲಿ. ೨ ತಿಂಗಳೂ ಬರೀ ವೆಜ್ ಬರೀಟೋ, ಸಾಲಡ್, ಮತ್ತು ಜಾಂಬ ಜ್ಯೂಸ್ ನಿಂದ ಬದುಕಿದ್ದೆ. ಸ್ವಲ್ಪ ಸ್ವಯಂಪಾಕವೂ ನಡೆಯಿತು.

ಬೆಂಗಳೂರಿಗೆ ಬಂದು, ನಮ್ಮಪ್ಪ, ಅಮ್ಮರ ಜೊತೆ ಮಂಡ್ಯಕ್ಕೆ ಹೋಗುವಾಗ ಮೈಸೂರು ರಸ್ತೆಯಲ್ಲಿರುವ ಕಾಮತ್ ಸವಿರುಚಿಯಲ್ಲಿ ಕಾರು ನಿಲ್ಲಸಿಸಿ ಸರಿಯಾಗಿ ತಿಂದಿದ್ದೆ. ನಮ್ಮಮ್ಮ ನಾನು ಬರಗೆಟ್ಟವರಂತೆ ತಿನ್ನುವುದು ನೋಡಿ, ಏನಂದು ಕೊಂಡರೋ. ಮುಂದಿನ ಮೂರು ದಿನಗಳು ಮನೆಯಲ್ಲಿ ತಿನ್ನು ತಿನ್ನು ಅಂತ ತಿನ್ನಿಸುತ್ತಲೇ ಇದ್ದರು Smiling.

  • Login or register to post comments
  • link
  • Email this ಪ್ರತಿಕ್ರಿಯೆ
May 16, 2006 - 7:30pm — hpn

ಯಾವಾಗ್ ಹೋಗಿದ್ರೀ?

hpn's picture

ಸ್ಯಾನ್ ಹೋಸೀಗ್ ಯಾವಾಗ್ ಹೋಗಿದ್ರೀ, ಸರ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
May 16, 2006 - 7:35pm — ಮಹೇಶ ಭೋಗಾದಿ

ಕಳೆದ ಅಗಸ್ಟ್

ಮಹೇಶ ಭೋಗಾದಿ's picture

ಕಳೆದ ಅಗಸ್ಟ್ ನಲ್ಲಿ ಸ್ವಾಮಿ.

ತುರ್ತುಕೆಲಸ ಅಂತ ನಮ್ಮ ಸಂಸ್ಥೆಯವರು ಕಳುಹಿಸಿದ್ದರು.

ನನಗೆ ಅದು ಇಷ್ಟವಾಗಲಿಲ್ಲ. ಬಂಜರು ನೆಲ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ಇಂದಿನ ಸುದ್ದಿ...!
  • ನಾಳೆ ನೀವೂ ಮಾಯ.............
  • ಬೈಟೊ ಕಾಫಿ !!! - ೧
  • "ಮಗ"
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator