ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೫. ಕ್ಯೂಶೂದ್ವೀಪ

August 23, 2006 - 6:19am — benaka

ನನ್ನ ಜಪಾನ್ ಪ್ರವಾಸ : ೫. ಕ್ಯೂಶೂದ್ವೀಪ

"ಅಯ್ಯಯ್ಯಪ್ಪಾ! ದಿನಕ್ಕೆ ೮೦೦೦ ಯೆನ್!..ಅಲ್ಲಲ್ಲ ಒಂದು ರಾತ್ರಿಗೆ ಎಂಟು ಸಾವಿರ ಯೆನ್! ಹೇಗಿರುತ್ತೋ ಈ ಕೋಣೆ!" ಎನ್ನುತ್ತಾ ಬಾಗಿಲ ಕಿಂಡಿಯಲ್ಲಿ ಹಾಳೆಯನ್ನು ಗೀಚಿ ಬಾಗಿಲು ತೆರೆದೆವನೇ ಅವಾಕ್ಕಾದೆ! ನಾನು ತೂರಿಕೊಂಡು ಹೋಗಿ ಮಲಗುವಷ್ಟೇ ಜಾಗ! ಒಂದು ಹಾಸಿಗೆ, ಮೇಜು, ಕುರ್ಚಿ, ಕಪಾಟು, ಬಚ್ಚಲು-ಶೌಚದ ಮನೆ ಅಲ್ಲೇ ಎಲ್ಲಾ! ಅಲ್ಲದೆ, ಒಂದು ನೀರು ಕುದಿಸುವ ಯಂತ್ರ, ಕೇಶಶೋಷಕ - ಕೂದಲೊಣಗಿಸುವ ಯಂತ್ರ, ಮಂಚಕ್ಕೆ ಹೊಂದಿಕೊಂಡ ದೂರವಾಣಿ, ದೀಪ, ಮೊಳಗು ಗಡಿಯಾರ ಎಲ್ಲಾ ಇದ್ದವು! ಮೇಜಿನ ಕೆಳಗೆ ಶೀತಲ ಪೆಟ್ಟಿಗೆಯೂ ಇತ್ತು! ಸ್ವಾಮೀ ಪಂಚತಾರಾ ವೈಭವಕ್ಕೇನೂ ಕಡಿಮೆಯಿರಲಿಲ್ಲ; ಕಡಿಮೆಯಿದ್ದದ್ದು ಜಾಗ ಮಾತ್ರ! ಆಯಾಸವಾಗಿತ್ತು; ಮಲಗಿಬಿಟ್ಟೆ. ಎದ್ದಾಗ ಬೆಳಿಗ್ಗೆ ೭:೦೦ ಗಂಟೆ! ಓಡಿದೆ ಬಚ್ಚಲಿಗೆ - ನಿತ್ಯಕರ್ಮ ಮುಗಿಸಿ ೭:೧೫ ಕ್ಕೆ ದಡಬಡನೆ ಹೊರಬಿದ್ದೆ. ಆಗಲೇ ಅಸಾಮಿ, ಮುರುಗನ್ ತಿಂಡಿ ಮುಗಿಸಿದ್ದರು. ನಾನೊಂದು ಬನ್ ತಿಂದೆ - ಅಲ್ಲ ತುರುಕಿಕೊಂಡೆ; ಕಿತ್ತಲೆರಸ ಕುಡಿದೆ; ಅವರಿಬ್ಬರೂ ಮುಂದೆ ಹೆಜ್ಜೆ ಹಾಕಿಯೇ ಬಿಟ್ಟರು - ನಾನೂ ಓಡಿ ಸೇರಿಕೊಂಡೆ! ೭:೩೦ ರ ಗಂಟೆ ಢಣ್ಣೆಂದಿತು. ನನಗೋ ಹಿಂದಿನ ದಿನ ವೀಸಾಗೆ, ನಗರಕಛೇರಿಗೆ ಓಡಾಡಿದ್ದರಿಂದಲೋ, ನನ್ನ ಹೊಸ ಪಾದರಕ್ಷೆಯ ಮಹಿಮೆಯೋ, ಕಾಲು ನೋಯುತ್ತಿತ್ತು; ಕಾಲ್ಬೆರಳು ಬೊಬ್ಬೆ ಬಂದಿತ್ತು! ಹೊಟೆಲಿನಿಂದ ೧೦ ನಿಮಿಷ ಮತ್ತೆ ನಡಿಗೆ! ಯಾರಿಗೂ ಬೇಡ ನನ್ನ ಅವಸ್ಥೆ ಎನಿಸಿತ್ತು! ಈ ಮಧ್ಯೆ ಮಧ್ಯಾಹ್ನದ ಊಟಕ್ಕೆಂದು ಬನ್ನು, ಹಣ್ಣಿನರಸ ಕೊಂಡೆವು. ೭:೪೫ ಆಗಿತ್ತು; ಅಲ್ಲಿಂದ ೭ ನಿಮಿಷ ರೈಲಿನಲ್ಲಿ ಪ್ರಯಾಣಿಸಿ 'ತೊಬಾತಾ'ಗೆ ಬಂದಿಳಿದಾಗ ಕಾರೊಂದು ಸಿದ್ಧವಾಗಿತ್ತು. ಅಲ್ಲಿ ಇನ್ನು ಮೂವರು ಸಿದ್ಧವಿದ್ದರು - ಎಲ್ಲರ ಪರಿಚಯವಾಯಿತು; ನಂತರ ಕಾರಿನಲ್ಲಿ ಅರ್ಧಗಂಟೆ ಪ್ರಯಾಣ! ಯಾವುದೋ ಕಾರ್ಖಾನೆಗೆ ಬಂದು ನಿಂತೆವು; ನಾನೆಲ್ಲಿದ್ದೇನೆ? ಸುತ್ತಲೂ ಇರುವುದೇನು? ಏನೂ ತಿಳಿಯುತ್ತಿರಲಿಲ್ಲ! ನನ್ನ ಮುಂದಿದ್ದುದು ಒಂದೇ - "ಇಲ್ಲಿ ನನ್ನ ಕೆಲಸವೇನು?" ಎಂಬ ಪ್ರಶ್ನೆ.

ಸರಿ, ಕಾರ್ಖಾನೆಯವರ ಪರಿಚಯ ಮುಗಿಯಿತು. ೯ ರಿಂದ ೧೧ ಗಂಟೆಯವರೆಗೆ ಸುರಕ್ಷಾ ಮಾಹಿತಿಯ ಪಾಠ! ನನಗೋ, ಹಿಂದಿನ ದಿನವೆಲ್ಲ ನಿದ್ದೆಯಿಲ್ಲ; ಬಲವಂತವಾಗಿ ಬೆಳಿಗ್ಗೆ ಎದ್ದುಬಂದಿದ್ದೆ ನೋಡಿ, ಪಾಠದ ಮಧ್ಯೆ ನಿದ್ದೆ ಶುರುವಾಯಿತು! ನನ್ನ ಪ್ರಾರಬ್ಧ ಕರ್ಮಕ್ಕೆ ನಾವು ಮೂವರೂ ಮೊದಲ ಬೆಂಚಿನಲ್ಲೇ ಕೂರಬೇಕೆ? ನನಗೋ ಹಿಂದಿನಿಂದಲೂ ಪಾಠದ ಮಧ್ಯೆ ನಿದ್ದೆ ಮಾಡಿ ಅಭ್ಯಾಸವೇ ಇಲ್ಲ; ಈಗ ನಿದ್ದೆ ಬರುತ್ತಿದೆ! ಥತ್ತೇರಿ ಎಂದು ಬಯ್ದುಕೊಂಡು ಹೇಗೋ ಎದ್ದಿದ್ದಂತೆ, ನಿದ್ದೆಯಿಲ್ಲದಂತೆ ನಟಿಸಿದೆ. ಪಾಠ ಮುಗಿಯಿತೆಂದು ಎದ್ದರೆ, ಈ ಹಾಳು ಅಸಾಮಿ "ಅರ್ಥವಾಯಿತೇನು?" ಎಂದು ಜೋರಾಗಿ ಕೇಳಬೇಕೆ? ನಾನು ಎಚ್ಚರಿಕೆಯಿಂದ "ಸ್ವಲ್ಪ ಮಾತ್ರ" ಎಂದೆ! ಮೂವರೂ ನಕ್ಕು ಹೊರಟೆವು. ಮುರುಗನ್ ನನಗಿಂತ ಮುಂಚೆ ಬಂದವನಾದ್ದರಿಂದ ಅವನಿಗೆ ಅರ್ಥವಾಗಿರಬೇಕು. ಸರಿ, ಇನ್ನು ಪ್ರಾಜೆಕ್ಟಿನ ಕೆಲಸ - ಉಕ್ಕಿನ ಕರ್ಷಕಶಕ್ತಿ[Tensile Strength]ಯನ್ನು ಅಳೆವ ಬೃಹತ್ ಯಂತ್ರಗಳನ್ನು ಸಂಪೂರ್ಣವಾಗಿ ಗಣಕೀಕರಿಸುವ ತಂತ್ರಾಂಶದ ಜವಾಬ್ದಾರಿ ನಮ್ಮದಾಗಿತ್ತು. ಮುರುಗನ್ ಇದ್ದುದಕ್ಕೆ ಅಂದಿನ ಕೆಲಸ ಹೇಗೋ ಅರ್ಥವಾಯಿತು. ಸಾಯಂಕಾಲ ಮುರುಗನ್ ನನ್ನ ಬಳಿ ಬಂದವನೇ,

"ಸರಿ, ನಾನಿನ್ನು ಬರುತ್ತೇನೆ; ಇನ್ನು ನಿನ್ನ ಜವಾಬ್ದಾರಿ, ನಾನು ರಾತ್ರಿ ಓಸಾಕಾಗೆ ಹೊರಡುತ್ತೇನೆ" ಎಂದ!

ನಾನು ಹೌಹಾರಿದೆ! ಬೆಚ್ಚಿಬಿದ್ದೆ! ಅವನು ಒಂದು ದಿನದ ಮಟ್ಟಿಗೆ ಬಂದವನಂತೆ! ಅಸಾಮಿ, ನಾನು ಉಳಿಯುವುದೆಂದಾಯಿತು! ನಾನು ತಲೆಯಾಡಿಸದೆ ವಿಧಿಯೇ ಇರಲಿಲ್ಲ! 'ಮುಂದೈತೆ ಮಾರಿಹಬ್ಬ' ಎಂಬ ನಾಣ್ಣುಡಿ ನೆನಪಾಯಿತು. ಮುರುಗನ್ ಹೊರಟೇ ಬಿಟ್ಟ!

ಕಾರ್ಖಾನೆಯ ಗಡಿಯಾರ ಢಣ್ಣೆಂದು ಎಲ್ಲ ಒಬ್ಬೊಬ್ಬರಾಗಿ ಮನೆಗೆ ಹೊರಟರು. ರಾತ್ರಿಯಾಯಿತು; ನಮ್ಮ ಕೆಲಸ ಮುಗಿಯಲಿಲ್ಲ. ಅಥವಾ ಸರಿಯಾಗಿ ಹೇಳಬೇಕೆಂದರೆ ನಮ್ಮ ತಂತ್ರಾಂಶವನ್ನು ಯಂತ್ರಕ್ಕೆ ಊಡಿ, ಪರೀಕ್ಷಿಸುವ ಜವಾಬ್ದಾರಿ ಹೊತ್ತವರು ಕೆಲಸವನ್ನು ಮುಗಿಸಲಿಲ್ಲ ಎಂದರೇ ಚೆನ್ನಾಗಿರುತ್ತದೆ. ಅಸಾಮಿಯೂ ಗೊಣಗಿಕೊಂಡು ಸುಮ್ಮನಾದ. ನಾನು ಕೇಳದಿದ್ದರೂ ಅವನೇ ಆಕಳಿಸುತ್ತಾ,

"ರಾತ್ರಿ ಹತ್ತಾಯಿತು; ಬಹುಶಃ ಹನ್ನೊಂದಕ್ಕೆ ಮುಗಿಯಬಹುದು" ಎಂದ!

ನಮ್ಮನ್ನು ಕಾರಿನಲ್ಲಿ ಕರೆತಂದ ಮಂದಿ ಅವರೇ ಆದ್ದರಿಂದ ವಿಧಿಯಿಲ್ಲದೇ ಅವರಿಗೆ ಕಾಯಲೇ ಬೇಕಿತ್ತು. ಅವರಿಲ್ಲದೆ ನಾವು ಹೊರಗೆ ಹೋಗಲು ಟ್ಯಾಕ್ಸಿ ಕರೆಯಬೇಕು; ಹೊಟೆಲಿಗೆ ಹೋಗಲು ೭೦೦೦ ಯೆನ್ ಖರ್ಚಾಗುತ್ತದೆ. ಅವರೇ ಕರೆದೊಯ್ದರೆ ಖರ್ಚಿಲ್ಲ! ಅಸಾಮಿ ಕಾದು ನಿಂತ; ನಾನೂ ನೋಡುತ್ತಿದ್ದೆ. ಅಂತೂ ರಾತ್ರಿ ಹನ್ನೊಂದಕ್ಕೆ ಹೊರಟು ಹೊಟೆಲಿನ ಕೋಣೆಗೆ ಬಂದು ಬಿದ್ದಾಗ ೧೧:೩೦ . ಜಪಾನಿನ ಕೆಲಸದ ಶೈಲಿ ನನಗೆ ಅಂದೇ ಅರಿವಾಗಿತ್ತು! ದಾರಿಯಲ್ಲಿ ಊಟಕ್ಕಾಗಿ ಅನ್ನ, ಮೊಸರು ಕೊಂಡೆ. ಅಸಾಮಿ ಹೇಳಿ ತೋರಿಸಿದ ಪಾಪ!

"ಇಲ್ಲಿ ಸಸ್ಯಾಹಾರ ಅಂದರೆ ಮೀನು, ಮೊಟ್ಟೆ ಎಲ್ಲಾ ಉಂಟು - ನಿನಗದು ಆಗದು; ನಡೆ ಅನ್ನ ಸಿಗುವ ಜಾಗ ತೋರಿಸುತ್ತೇನೆ" ಎಂದಿದ್ದ!

ನನಗೆ ಬಹಳ ಸಂತೋಷವಾಯಿತು! ೨೪ ಗಂಟೆಯೂ ವಹಿವಾಟು ನಡೆಸುವ ಕೊಂಬಿನಿ [ಕೊಂಬಿನಿಯೆಂತೊ = Convenient Store ನ ಅಪಭ್ರಂಶ]ಗೆ ಹೋಗಿ, ಸಿದ್ಧವಾಗಿದ್ದ ಬಿಸಿಬಿಸಿ ಅನ್ನದ ಡಬ್ಬಿ(೨೦೦ ಯೆನ್) ಕೊಂಡಿದ್ದೆವು. ರಾತ್ರಿಯೂಟಕ್ಕೆ ಸಾಕಿತ್ತು - ಸರಿ ಇನ್ನು ಇಲ್ಲಿರುವವರೆಗೂ ಇದೇ ಅಂಗಡಿಯೇ ಗತಿ ಎಂದುಕೊಂಡೆ. ಇದೇನಿದು ಹೊಟೆಲಿನಲ್ಲಿ ಊಟ ಇರುವುದಿಲ್ಲವೇ ಎನ್ನಬೇಡಿ! ಖಂಡಿತ ಇರುವುದಿಲ್ಲ! ಏಕೆಂದರೆ ಅದು ಕೇವಲ ತಂಗುದಾಣ - ಬೆಳಿಗ್ಗೆ ತಿಂಡಿ ಮಾತ್ರ ಉಚಿತ!

ನನಗೆ ಇವೆಲ್ಲ ಮೊದಲೇ ತಿಳಿಸಲ್ಪಟ್ಟಿದ್ದರಿಂದ ಎಂಟಿಆರ್ ಹುಣಿಸೇತೊಕ್ಕು, ಉಪ್ಪಿನಕಾಯಿ, ಚಟ್ನಿಪುಡಿ ತೆಗೆದುಕೊಂಡು ಹೋಗಿದ್ದೆ. ಅನ್ನದೊಡನೆ ಬೆರೆಸಿ ತಿಂದೆ - ಖಾರ ಖಾರವಾಗಿತ್ತು! ಬಲ್ಗೇರಿಯ ದೇಶದ ಮೊಸರು ಅಂದರೆ ಯೊಗುರುತೊ[Yogurt] ಕಲಸಿ ತಿಂದೆ; ಆಹಾ! ತೇಗು ಬಂತು! ಜೊತೆಗೆ ಇಲ್ಲಿನ ಜೀವನ ಕಂಡು ನಗುವೂ ಬಂತು! ರಾತ್ರಿ ೧೨ ಆದ್ದರಿಂದ ನಿದ್ದೆಯೂ ಬಂತು. ಕನಸಿನಲ್ಲಿ ಹಾಡೊಂದು ಕೇಳಿಬಂತು:

ಭಾರತ ಹೋಯ್ತು ಜಪಾನ್ ಬಂತು ಡುಂ ಡುಂ ಡುಂ!
ಅಮ್ಮನ ಕೈಯಡುಗೆ ಹೋಯ್ತು ಡುಂ ಡುಂ ಡುಂ!
ಅಂಟಂಟಾಗಿರೋ ಅನ್ನ ಬಂತು ಡುಂ ಡುಂ ಡುಂ!
ನಿದ್ದೆ ಹೋಯ್ತು, ಶಾಂತಿ ಹೋಯ್ತು ಡುಂ ಡುಂ ಡುಂ!
ದುಡ್ಡೂ ಬಂತು, ಅಳುವೂ ಬಂತು .... ಡುಂ........

ಮುಸುಕೆಳೆದು ಸದ್ದಿಲ್ಲದೆ ಮಲಗಿದೆ. ಕಾಲಿನ ಬೊಬ್ಬೆ ನೋಯುತ್ತಿತ್ತು; ಬೆಳಿಗ್ಗೆ ಮತ್ತೆ ಬೇಗ ಏಳಬೇಕಿತ್ತು.

(ಮುಂದಿನ ಬಾರಿ: ಹೀಗೊಬ್ಬ ಬಾಬಾ ಭಕ್ತ!)

~.~
  • benaka ರವರ ಬ್ಲಾಗ್
  • Login or register to post comments
  • 1106 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 23, 2006 - 6:31am — benaka

ನನ್ನ ಜಪಾನ್ ಪ್ರವಾಸ : ೫. ಕ್ಯೂಶೂದ್ವೀಪ

benaka's picture

ಗೆಳೆಯರೇ,
ನನ್ನ ಜಪಾನ್ ಪ್ರವಾಸ : ೫. ಕ್ಯೂಶೂದ್ವೀಪ ನಿಮ್ಮಮುಂದಿದೆ.

ಅಧ್ಯಾಯ-೬: ಹೀಗೊಬ್ಬ ಬಾಬಾ ಭಕ್ತ! ಇಷ್ಟರಲ್ಲೇ ಬಲೆಗೇರಲಿದೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 23, 2006 - 7:29am — ಉಉನಾಶೆ

ಜಪಾನ್ ಅನುಭವ ಓದಲು ಬಹಳ ಖುಷಿ

ಉಉನಾಶೆ's picture

ನಿಮ್ಮ ಜಪಾನ್ ಅನುಭವ ಓದಲು ಬಹಳ ಖುಷಿಯಾಗುತ್ತದೆ. ಇದೇ ರೀತಿ ಬರೆಯುತ್ತಾ ಇರಿ. ಸಾಧ್ಯವಾದರೆ ಕಂತುಗಳ ನಡುವಿನ ಅಂತರ ಕಡಿಮೆ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 23, 2006 - 9:43am — benaka

ಆದಷ್ಟು ಬೇಗ

benaka's picture

ಶೆಟ್ಟರೇ,
ಧನ್ಯವಾದಗಳು; ಈಗಲೇ ನಿಮ್ಮೆಲ್ಲರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುವ ಆಸೆಯೇನೋ ಇದೆ; ಆದರೆ ಬಿಡುವು ಮಾಡಿಕೊಂಡು ಬೆರಳಚ್ಚಿಸುವುದೇ ದೊಡ್ಡ ಕೆಲಸ!
ಸಂತಸವೇನೆಂದರೆ, ಈಗಲಾದರೂ ಬರೆಯಲು ಸಾಧ್ಯವಾಯಿತಲ್ಲಾ ಎಂಬುದೇ!
ಆದಷ್ಟು ಬೇಗ 'ಬಾಬಾ ಭಕ್ತ'ನನ್ನು ಬಲೆಗೇರಿಸುತ್ತೇನೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೪.ಶರವೇಗದ ಹಳಿಬಂಡಿಯನ್ನೇರಿ......
  • ೬. ಹೀಗೊಬ್ಬ ಬಾಬಾ ಭಕ್ತ!
  • ೯. 'ಕ್ಯೂಶೂ'ನಲ್ಲಿ ಕನ್ನಡ!
  • ೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ
  • ೭. ವೆಂಕಟನ ನಿರ್ಗಮನ.....?
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator