ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಕನ್ನಡಪುಟ
ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!
ನನ್ನ ಜಪಾನ್ ಪ್ರವಾಸ - ಪೀಠಿಕೆ
(ಅ)ಪೂರ್ವ ಪೀಠಿಕೆ
----------------
ಇದು ಕತೆಯಲ್ಲ; ಕವನವಲ್ಲ; ಮನಸ್ಸಿಗೆ ತೋಚಿದ ಒಂದಷ್ಟು ವಿಚಾರಗಳನ್ನು ಗೀಚಿದ್ದು ಅಷ್ಟೇ! ಆದರೆ ಇಷ್ಟೇ ಓದುಗನ ಹೃದಯವನ್ನು ದೋಚಿದ್ದೇ ಆದಲ್ಲಿ, ಹೀಚು ಹಣ್ಣಾಯಿತೆಂದುಕೊಳ್ಳುತ್ತೇನೆ. ಮನಸ್ಸಿಗೆ ಲಗಾಮುಹಾಕುವ ದುಸ್ಸಾಹಸ ಮಾಡಿ ಬರೆಯಹೊರಟಿದ್ದು ಏನೆಂದು ನನಗೇ ತಿಳಿದಿಲ್ಲ; ನನಗನಿಸಿದ್ದು - ನಾ ಬರೆಯಬೇಕು; ಸದ್ಯಕ್ಕೆ ಗೊತ್ತಿರುವುದೆಲ್ಲಾ ಮರೆತು ಹೋಗುವ ಮುನ್ನ ಕನ್ನಡದಲ್ಲಿ ಹಿಡಿದಿಡಬೇಕು - ಅಷ್ಟೇ! ನನ್ನ ಈ ಯೋಚನೆಯೇ ಈಗ ನಾ ಬರೆಯಹೊರಟಿರುವ 'ನನ್ನ ಜಪಾನ್ ಪ್ರವಾಸ'ಕ್ಕೆ ನಾಂದಿ. ಬರವಣಿಗೆಯ ಶೈಲಿಯೋ, ರಸವೋ ಏನೇನೂ ಸಾಲದು ಸ್ವಾಮೀ! ಇದು ದಿನಚರಿಯ ಪುಸ್ತಕವೋ, ಹೊಗಳಿಕೆಯೋ, ಪ್ರಬಂಧವೋ, ಕವನವೋ, ಭಾವನೆಗಳ ಕದನಕುತೂಹಲವೋ ಅರಿಯಲಾಗದೆ ನಾನೇ ಸ್ವಯಂಪ್ರೇರಣೆಯಿಂದ ಕೊಟ್ಟ ವಸ್ತುವಿಶೇಷ - ನವ್ಯಬರಹ. ಪೀಠಿಕೆಯೇ ಹನುಮನ ಬಾಲವಾದರೆ ಆಕಳಿಸುವಂತಾಗಿ, ನಿದ್ರಿಸುವ ಓದುಗರನ್ನೂ ಮನಸ್ಸಿಗೆ ತೆಗೆದುಕೊಂಡು ಪ್ರಸ್ತಾವನೆಯನ್ನು ಇಲ್ಲೇ ಮುಗಿಸುತ್ತೇನೆ; ಮೊದಲೇ ನವ್ಯಬರಹ........
ಬೆನಕ
ಕಾರ್ತಿಕ ಶುದ್ಧ ಪ್ರಥಮಾ,೨೦೦೨
ಓಸಾಕಾ, ಜಪಾನ್

- benaka ರವರ ಬ್ಲಾಗ್
- Login or register to post comments
- 819 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: