ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ

May 31, 2006 - 8:25pm — benaka


ನನ್ನ ಜಪಾನ್ ಪ್ರವಾಸ : ೨.ಜಪಾನಿನಲ್ಲಿ ಮೊದಲದಿನ - ಸ್ನಾನ

ಬಚ್ಚಲಿಗೆ ಕಾಲಿಟ್ಟವನೇ ಅಚ್ಚರಿಗೊಂಡೆ! ನಾನು ನಿಲ್ಲುವಷ್ಟೇ ಜಾಗ! ಪಕ್ಕದಲ್ಲಿ ಪಾಶ್ಚಾತ್ಯ ಶೈಲಿಯ ಶೌಚಕೂಪ; ಅದರ ಪಕ್ಕಕ್ಕೇ ಕೈತೊಳೆವ ಶೌಚಪಾತ್ರೆ! ಆ ಕಡೆ ಗೋಡೆಗೆ ಹೊಂದಿಕೊಂಡಂತೆ ಸ್ನಾನದತೊಟ್ಟಿ! ಆ ತೊಟ್ಟಿಯೊಳಗೇ ಬೀಳುವಂತೆ ಜಲಸಿಂಚಕ - ಷವರ್! ತೊಟ್ಟಿಗೂ ಬಚ್ಚಲಿಗೂ ಮಧ್ಯೆ ತೆಳ್ಳನೆಯ ಪ್ಲಾಸ್ಟಿಕ್ ತೆರೆ! ಶೌಚಪಾತ್ರೆ(ಸಿಂಕ್)ಯ ಮೇಲ್ಗಡೆಗೊಂದು ಕನ್ನಡಿ! ಅದರ ಮೇಲೆ ವಿದ್ಯುದ್ದೀಪ; ಅದರ ಪಕ್ಕದಲ್ಲೊಂದು ಛಾವಣಿ ಬೀಸಣಿಗೆ(ಫ್ಯಾನು)! ಇಷ್ಟೆಲ್ಲದರ ಮಧ್ಯೆ ಸ್ನಾನಮಾಡುವ ನಾನು! ಅಷ್ಟರಲ್ಲಿ ಎದ್ದು ಬಂದವನೇ ನರೇಂದ್ರ "ಕೆಂಪು ನಲ್ಲಿ ಬಿಸಿನೀರು, ಆ ಕಡೆ ನೀಲಿಯದು ತಣ್ಣೀರು; ಎರಡನ್ನೂ ಸರಿಯಾಗಿ ಬೆರೆಸಿಕೊಂಡಮೇಲೆ ಷವರ್ ಬಿಟ್ಕೊಳೋ" ಎಂದು ಹೇಳಿ ಅವನ ಮನೆಗೆ ಅಂದರೆ ಪಕ್ಕದ ಕೋಣೆಗೆ ಹೊರಟ. ಇನ್ನೀಗ ಸ್ನಾನ! ಪಾಶ್ಚಿಮಾತ್ಯ ಶೈಲಿಯಲ್ಲೇ ಎಲ್ಲ ಮುಗಿಸಿ, ಭಾರತೀಯ ಶೈಲಿಯಲ್ಲಿ ಶುಚಿಯಾಗಿ ಹೊರಬಂದೆ.
ವೆಂಕಟ "ಏನಯ್ಯಾ, ಎಲ್ಲ ಅಡ್ಜಸ್ಟ್ ಆಯ್ತಾ?" ಎಂದ
ನಾನು "ಹ್ಞೂಂ, ಚೆಂಬು ಇತ್ತಲ್ಲ" ಎಂದೆ. ಇಬ್ಬರೂ ಬಿದ್ದು ಬಿದ್ದು ನಕ್ಕೆವು. ಸ್ನಾನವಾಯಿತು; ಇನ್ನು ಸಂಧ್ಯಾವಂದನೆ - ತಂದಿದ್ದ ವಿಭೂತಿ, ಕುಂಕುಮ, ದೇವರಪಟ ಎಲ್ಲ ಹೊರತೆಗೆದು ಸಂಧ್ಯಾವಂದನೆ, ಪೂಜೆ-ಪುರಸ್ಕಾರ ಎಲ್ಲ ಮುಗಿಸಿದೆ. ವೆಂಕಟ ಅಡಿಗೆ ಸಿದ್ಧಮಾಡುತ್ತಿದ್ದ. ನನ್ನ ಪೂಜೆಯ ಸಂಕಲ್ಪ ಕೇಳಿ ಬಿದ್ದು ಬಿದ್ದು ನಕ್ಕಿದ್ದ ಕಚೇರಿಯ ಮಿತ್ರರ ನೆನಪಾಯಿತು. (ಪೂಜಾದಿ ಕಾರ್ಯಗಳಿಗೆ ಮುನ್ನ ದೇಶ, ಕಾಲ, ವರ್ತಮಾನ, ಧ್ಯೇಯ ಹೇಳಿಕೊಂಡು ಪಂಚಾಂಗದ ತಿಥಿ-ವಾರ ಇತ್ಯಾದಿಗಳನ್ನು ಹೇಳಿ, ಆ ದಿನದ ಪೂಜಾದಿಗಳನ್ನು ಮಾಡಬೇಕು. ಈ ವಿಧಾನಕ್ಕೆ 'ಸಂಕಲ್ಪ' ಎನ್ನುತ್ತಾರೆ.) ಸಂಸ್ಕೃತಭಾಷೆಯಲ್ಲಿ ಸಂಕಲ್ಪ ಹೇಳುವುದೇ ರೂಢಿಯಾದ್ದರಿಂದ, ನಾನು
"ಶುಭೇ ಶೋಭನೇ ಮುಹೂರ್ತೇ....... ಜಂಬೂದ್ವೀಪೇ, ಭರತವರ್ಷಸ್ಯ ಈಶಾನ್ಯದಿಗ್ಭಾಗೇ, ಸಾಗರೋತ್ತರದೇಶೇ, ಜಪಾನ್ ರಾಷ್ಟ್ರೇ, ಮುಖ್ಯದ್ವೀಪೇ, ಓಸಾಕಾ ನಗರ್ಯಾಂ ಯೋದೋ ನದೀತಟೇ[ತೋಕ್ಯೋ ಆಗಿದ್ದಲ್ಲಿ ಸುಮಿದಾ ನದ್ಯಾಃ ತೀರೇ, ಫುಜಿ ಪರ್ವತಸ್ಯ ಪೂರ್ವಭಾಗೇ ಎಂದು ಸೇರಿಸಲು ಸಿದ್ಧವಿದ್ದೆ ಬಿಡಿ].. ಶಾಲಿವಾಹನಶಕೇ, ಬೌದ್ಧಾವತಾರೇ, ಬುದ್ಧಕ್ಷೇತ್ರೇ...."
ಇತ್ಯಾದಿ ಮುಂದುವರೆಸಿದ್ದಾಗ ನಾರಾಯಣ ಹೊಳ್ಳ, ಗುರುರಾಜಾಚಾರಿ ಬಿದ್ದು ಬಿದ್ದು ನಕ್ಕು ಕುಡಿಯುತ್ತಿದ್ದ ಕಾಫಿ ಕಕ್ಕಿ ಗೊಳ್ಳೆಂದು ಎಲ್ಲ ನಕ್ಕಿದ್ದು ನೆನಪಾಯಿತು. ಈಗದೇ ಸಂಕಲ್ಪ ಹೇಳಿಕೊಂಡು ನಾನೇ ನಕ್ಕೆ. ನಂತರ ಅಮ್ಮ ಮಾಡಿಕೊಟ್ಟಿದ್ದ ಚಪಾತಿ ತಿಂದೆ. ವೆಂಕಟನ ಅಡಿಗೆ ಇನ್ನೂ ಸಿದ್ಧವಿರಲಿಲ್ಲ. ನಂತರ ಸ್ವಲ್ಪ ನಿದ್ದೆ ಮಾಡೋಣವೆನ್ನುವಷ್ಟರಲ್ಲಿ ನರೇಂದ್ರ ಬಂದವನೇ,
"ನಾಳೆ ನಾನು ನಗೋಯಾ ಗೆ ಹೊರಡುತ್ತೇನೆ; ಅಷ್ಟರಲ್ಲಿ ಪ್ರಾಜೆಕ್ಟಿನ ವಿಚಾರ ಎಲ್ಲ ಹೇಳುತ್ತೇನೆ ಬಾ" ಎಂದು ಅವನ ಮನೆಗೆ ಕರೆದುಕೊಂಡು ಹೋದ.
ನಂತರ ಕುಮಾರ್ ಸಿಕ್ಕಿದ. ರಾತ್ರಿಯಾಯಿತು; ಬೆಳಗ್ಗೆ ಧಿಮಾಕಿನಿಂದ ಓಡಿಹೋದ ಮಿತ್ರರೆಲ್ಲರೂ ಸಿಕ್ಕರು. ಸದ್ಯ, ಯಾರೂ ನನ್ನನ್ನು ಮರೆತಿರಲಿಲ್ಲ. ಆದರೂ ನಾ ಕಲಿತ ಪಾಠ-೧ ಸುಳ್ಳಾಗಿರಲಿಲ್ಲ. ಅಷ್ಟರಲ್ಲಿ ಒಳಗೆ ಬಂದ ಗೋವರ್ಧನ "ಗುರುವೇ, ಎಲ್ಲಿ ಮನೆ ತಿಂಡಿ?" ಎನ್ನುತ್ತಾ ಕೈಚಾಚಿದ. ಒಬ್ಬೊಬ್ಬರೇ ಒಳಬಂದು ನಗುನಗುತ್ತಾ ಮಾತನಾಡಿಸಿದರು! ನನಗೆ ಹೋದ ಜೀವ ಬಂದಂತಾಯ್ತು. ರಾತ್ರಿ ೧೨ ಆದರೂ ಮಾತು-ಹರಟೆ ಮುಗಿಯಲಿಲ್ಲ. ನಾನು ಅಟ್ಟ ಹತ್ತಿ ಮಲಗಿದರೂ ಕೆಳಗೆ ವೆಂಕಟನನ್ನು ಗೇಲಿ ಮಾಡುತ್ತಾ ಕಾಡು ಹರಟೆ ಸಾಗಿತ್ತು. ನಾನು ದೀಪ ಆರಿಸಿ ಮಲಗಿದೆ; ಬೆಳಿಗ್ಗೆ ಬೇಗ ಏಳಬೇಕಿತ್ತು. ಪಾಠ-೧: ನನ್ನ ಕೆಲಸ ನನಗೆ; ಬೇರೆಯವರ ಸುದ್ದಿ ನನಗೇಕೆ? ಮನೆಯ ತಿಂಡಿ ತಿಂದ ನಂತರ ಎಲ್ಲ ಮೆಲ್ಲನೆದ್ದು ಹೊರಟರು. ವೆಂಕಟನೂ ನಕ್ಕು ಮಲಗಿದ. ನಾಳೆ ಕಚೇರಿಯ ಎಲ್ಲರಿಗೆ ನನ್ನ ಪರಿಚಯ ಆಗಬೇಕಿತ್ತು!

(ಮುಂದುವರೆಯುವುದು...)

~.~
  • benaka ರವರ ಬ್ಲಾಗ್
  • Login or register to post comments
  • 901 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2006 - 8:31pm — benaka

ಜಪಾನಿನಲ್ಲಿ ಮೊದಲದಿನ - ಸ್ನಾನ

benaka's picture

ನನ್ನ ಜಪಾನ್ ಪ್ರವಾಸ : ೨.೩.ಜಪಾನಿನಲ್ಲಿ ಮೊದಲದಿನ - ಸ್ನಾನ

ಅಧ್ಯಾಯ ೨ ರ ಕೊನೆಯ ಭಾಗ ನಿಮ್ಮ ಮುಂದಿದೆ.
ಮುಂದಿನ ಅಧ್ಯಾಯ 'ನನ್ನ ಪರಿಚಯ' ಇಷ್ಟರಲ್ಲೇ ಬಲೆಯೇರಲಿದೆ.
ನಿಮ್ಮವ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 8:54pm — ahoratra

ಜಕಣನಬೆನಕ.

ahoratra's picture

ಚಿಕ್ಕ ಚಿಕ್ಕ ವಿಚಾರಗಳನ್ನು ಚೊಕ್ಕವಾಗಿ ಕೆತ್ತಿದ್ದೀರಿ ಕೈಯಿಲ್ಲದ ಜಕಣ ನಿರ್ಮಿತ ಬೆನಕರೆ.

ಶುಭವಾಗಲಿ ನಿಮಗೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2006 - 8:54pm — ಮಹೇಶ ಭೋಗಾದಿ

ಶೌಚಕೂಪ

ಮಹೇಶ ಭೋಗಾದಿ's picture

ನೀವು ಬಹಳ ತಮಾಷೆ ಮನುಷ್ಯರೀ!!

ಕಮೋಡನ್ನು ಶೌಚಕೂಪವೆಂದಿರಿ, ಶೌಚಹೊಂಡ ಇಲ್ಲವೆ ಶೌಚಹಳ್ಳವೆಂದರೆ ಸರಿ, ಆದರೆ ನೀವು ಶೌಚದ ಬಾವಿಯೆನ್ನಬೇಕೆ? ಬಾವಿಯಲ್ಲಿ ಶೌಚಮಾಡುವುದು ಹೇಗಪ್ಪ, ಎಂದು ಕಲ್ಪಿಸಿಕೊಂಡು ನಕ್ಕು ನಕ್ಕೂ ಸುಸ್ತಾಯಿತು.

ನೀವು ನಿರೂಪಿಸಿದ ಶೌಚ+ಸ್ನಾನಗೃಹ( ಕನ್ನಡದಲ್ಲಿ ಹೇಳಿದರೆ ಕೆಲವರಿಗೆ ಅಸಹ್ಯವಾಗುವುದುದೆಂದು ಹೇಳಲಿಲ್ಲ, ಟಟಟ+ಬಚ್ಚಲು ಮನೆ), ಅದು ಸಾಂಪ್ರದಾಯಿ ಜಪಾನಿ ಶೌಲಿಯದ್ದಲ್ಲವೆನಿಸುತ್ತದೆ. ಅದು ಪಡುವಣಿಗರ(ಪಾಶ್ಚಾತ್ಯರು) ಬಗೆಯದ್ದು. ಸದ್ಯ ನಿಮಗಲ್ಲಿ ಚೊಂಬು ಸಿಕ್ಕಿದ್ದು ಪುಣ್ಯವೇ ಸರಿ. ನನಗೆ ಅದೂ ಸಿಕ್ಕಿರಲಿಲ್ಲ Smiling .

ನೀವು ಸಂಕಲ್ಪಮಾಡಿದ್ದು ವಿಶಿಷ್ಟವಾಗಿದೆ. ಬಹಳ ಸ್ವಾರಸ್ಯಕರವಾಗಿದೆ ನಿಮ್ಮ ಕತೆ.

ನಿಮ್ಮ ನಿರೂಪಣಾಶೈಲಿ ಬಹಳ ಚೆನ್ನಾಗಿದೆ, ನೆಚ್ಚುಗೆಯಾಗಿದೆ. ಹೀಗೆ ಮುಂದುವರಿಸಿ.

ಇವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ,

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 12:38am — hpn

ಜಪಾನಿನ ಟಾಯ್ಲೆಟ್ಟುಗಳು ಪ್ರಪಂಚದಲ್ಲೇ ಅತ್ಯಾಧುನಿಕ

hpn's picture

ಹೆಚ್ಚಿನ ಮಾಹಿತಿ ಇಲ್ಲಿದೆ, ಓದಿ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!
  • ೨.೨. ಜಪಾನಿನಲ್ಲಿ ಮೊದಲ ದಿನ : ಮನೆ
  • ೩. ನನ್ನ ಪರಿಚಯ
  • ೫. ಕ್ಯೂಶೂದ್ವೀಪ
  • ೧೨. ನಾ ತಿಂದ 'ನಾನು'!
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 92 ಅತಿಥಿಗಳು ಆನ್ಲೈನ್ ಇರುವರು.


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator