ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಯಾಕೆ ಹಾಕಬಾರದು. ಯಾಕೆ ಇ-ಪುಸ್ತಕ ಮಾಡಿ ಯಾಕೆ ಹಾಕಬಾರದು ?
ಬೆಂಗಳೊರಿನಲ್ಲಿ ಕನ್ನಡ ಪುಸ್ತಕ ತುಂಬ ಪರದಾಡಬೇಕು . ಸಪ್ನ ಬುಕ ಸ್ಟಾಲ ಬಿಟ್ಟರೆ ಎಲ್ಲೊ ಕಾಣೊಲ್ಲ ![]()
ನಿಮ್ಮ ಅನಿಸಿಕೆ ಏನು ?

- betala ರವರ ಬ್ಲಾಗ್
- Login or register to post comments
- 1365 hits
- Email this blog





RSS:
ಪ್ರತಿಕ್ರಿಯೆಗಳು
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ಬಸವನಗುಡಿಯಲ್ಲಿ ಅಂಕಿತ ಪುಸ್ತಕಕ್ಕೆ ಯಾವಾಗಲಾದರೂ ಭೇಟಿ ನೀಡಿದ್ದೀರ? ಅಲ್ಲಿ ಸಾಕಷ್ಟು ಕನ್ನಡ ಪುಸ್ತಕಗಳು ದೊರೆಯುತ್ತವೆ.
ಚಿಕ್ಕಪೇಟೇಲಿ ಸಾಹಿತ್ಯ ಭಂಡಾರ ಇದೆ.
ಸಪ್ನ ಬುಕ್ ಹೌಸ್ ಜಯನಗರದಲ್ಲಿ ಕೂಡ ಇದೆ, ಆದರೆ ಜಾಸ್ತಿ ಪುಸ್ತಕಗಳನ್ನು ಅವರು ಇಟ್ಟಿಲ್ಲ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
www.kannadasaahithya.com ಈಗಾಗಲೆ ಈ ನಿಟ್ಟ್ನಲ್ಲಿ ಪ್ರಯತ್ನ ಮಾಡ್ತಿದಾರೆ.
HPN ಹೇಳ್ದಾಗೆ "ಅಂಕಿತ ಪುಸ್ತಕ ಭಂಡಾರ" ಕನ್ನಡ ಪುಸ್ತಕಗಳ್ಗೆ ತುಂಬಾ ಒಳ್ಳೆ ಅಂಗಡಿ. ನನಗ್ ಗೊತ್ತಿರೊ ಇನ್ನೊಂದು ಕನ್ನಡ ಪುಸ್ತಕಗಳ ಮಳಿಗೆ ಅಂದ್ರೆ "Shankars book store". ಇದು ರಂಗಶಂಕರ'ದ ಒಳ್ಗಿದೆ. ಇಲ್ಲಿನ ವಿಶೇಷ - ಕನ್ನಡ ಪುಸ್ತಕ ತಗೊಂಡ್ರೆ, Bill ಕೂಡ ಕನ್ನಡದಲ್ಲೇ ಕೊಡ್ತಾರೆ !!
ಒಮ್ಮೆ ಭೇಟಿ ಕೊಡಿ -
www.rangashankara.org.
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ಅಂತರ್ಜಾಲದಲ್ಲಿ ಪುಸ್ತಕ. ವಿಚಾರ ಚೆನ್ನಾಗಿದೆ.
ನಾವೆ ಒಂದು ಪುಸ್ತಕವನ್ನು ಟೈಪಿಸಿ ಗುಟೆನ್ ಬರ್ಗ್ ಸೈಟಿಗೆ ಹಾಕಬಹುದು.
ಆದರೆ ಕಾಪಿರೈಟಿನ ಬಗ್ಗೆ ಎಚ್ಚರ.
ವೀರೇಶ ರಾಯ ಚನ್ನಪ್ಪಗೋಳ್
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ನಿಮ್ಮ ಉತ್ತರಗಳಿಗೆ ತುಂಬ ದನ್ಯವಾದಗಳು.
Adobe Acrobat ಮಾದರಿಯಾಲ್ಲಿ ಹಾಕಿ, ಜೊತೆಗೆ security ಅನ್ನು ಕೊಡ ಕೊಡಬಹುದು.
ಲ್ಯಾಂಡ ಮಾರ್ಕ ನಲ್ಲಿ ಕೊಡ ಕೆಲವು ಪುಸ್ತಕಗಳು ಇವೆ ಅಂತ ತಿಳಿತು.
ಅದರೆ ಗಂಗಾರಾಮ ಅಲ್ಲಿ ಇಲ್ಲ, ಹಿಗ್ಗನ ಬೊಥಮ್ಸ ಅಲ್ಲಿ ಇಲ್ಲ.
ಹಿಗ್ಗನ ಬೊಥಮ್ಸ ನಲ್ಲಿ ಕೆಲವು ತಮಿಳು ಪುಸ್ತಕಗಳನ್ನು ಕಂಡೆ !!!! ಇದೆಂಥ ವಿಚಿತ್ರ ನೋಡಿ ...
-nimma bembidadha betal
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ನನ್ನ ಪ್ರಕಾರ, ಪ್ರಾಜೆಕ್ಟ್ ಗುಟನ್ಬರ್ಗ್ ನಲ್ಲಿ ನಾವು ಕನ್ನಡದ ಕಾಪಿ ರೈಟ್ ಚಾಲ್ತಿಯಲ್ಲಿ ಇಲ್ಲದ ಪುಸ್ತಕಗಳನ್ನು ಹಾಕುವುದು ಒಳಿತು.
Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ಯಾಕಪ್ಪ ಅಣ್ಣ, ಕನ್ನಡದವ್ರಿಗೆ ಗತಿ ಇಲ್ಲ ಅಂತ ಹೋಗಿ, ಇನ್ನೊಬ್ರ ಮರ್ಜಿಗೆ ಕನ್ನಡ ಸಾಹಿತ್ಯವನ್ನ ಒತ್ತೆ ಇಡಬೇಕೇನು.... ಕನ್ನಡದವ್ರಿಗೆ ಒಂದು ಪ್ರಾಜೆಕ್ಟ್ ಗುಟೆನ್ಬರ್ಗ್ ಮಾಡೋ ಯೋಗ್ಯತೆ ಇಲ್ವ.. ಅಂತಹ ಪ್ರಯತ್ನಗಳು ಕನ್ನಡದಲ್ಲಿ ಈಗಾಗ್ಲೇ ಚಾಲೂ ಇದೆ, ಅದನ್ನು ಗುರುತಿಸಿ, ಬೆಳೆಸುವ ದೊಡ್ಡ ಮನಸ್ಸು ಕನ್ನಡಿಗರು ಮಾಡಬೇಕಷ್ಟೆ.. ಸಾಮುದಾಯಿಕ ಚಟುವಟಿಕೆಗಳಿಂದಲೇ, ಕನ್ನಡಕ್ಕೆ ಬಲ ಮೂಡುವುದು.. ಅದಕ್ಕೆ, ಕಂಪ್ಯೂಟರ್‍ನ ಎದುರಿಗಿನ ಸುಖಾಸನವನ್ನು ಬಿಟ್ಟು ಜನರಲ್ಲಿಗೆ ನೇರವಾಗಿ ಹೋಗಿ ಮಾತನಾಡುವ, ತಿಳಿದುಕೊಳ್ಳುವ ದೊಡ್ಡಮನಸ್ಸೂ ಬೇಕು..
Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು!
ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರುವ ಅಂಗಡಿಗಳು ಕಡಿಮೆಯಾಗಿರುವುದಕ್ಕೆ ಕನ್ನಡಿಗರು ಕಾರಣರೇ ಹೊರತು ಪುಸ್ತಕ ಅಂಗಡಿಗಳವರಲ್ಲ. ಕನ್ನಡ ಪುಸ್ತಕಗಳನ್ನು ನಿಯಮಿತವಾಗಿ ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡರೆ ಎಲ್ಲರೂ ಮಾರಾಟ ಮಾಡಲು ಆಸಕ್ತಿ ತೋರಬಹುದು. ಸ್ನೇಹಿತ "betala"ರವರು ಅಂದುಕೊಂಡಿರುವಂತೆ ಬೆಂಗಳೂರಿನಲ್ಲಿ ಕನ್ನಡ ಪುಸ್ತಕಕ್ಕೆ ಪರದಾಡುವ ಹಾಗೇನೂ ಹಾಗಿಲ್ಲ. ನಿಮಗೆಲ್ಲ ಗೊತ್ತಿರುವಂತೆ ನಗರದ ಎಲ್ಲಾ ಭಾಗಗಳಲ್ಲೂ ಕನ್ನಡ ಪುಸ್ತಕಗಳು ಸಿಗುತ್ತವೆ(ಜಿಲ್ಲಾ ಕೆಂದ್ರಗಳು ಮತ್ತು ಹೊರನಾಡಿನಲ್ಲಿ ಕನ್ನಡಪುಸ್ತಕಗಳು ನಿಗದಿತ ಜಾಗಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗುತ್ತಿಲ್ಲವೆನ್ನುವುದು ನಿಜ).ಆದರೆ ನಮ್ಮ ಕಾಲಬುಡಕ್ಕೆ ಯಾವುದೂ ಬರುವುದಿಲ್ಲ. ಕೊನೇಪಕ್ಷ ಇರುವ ಪುಸ್ತಕ ಮಳಿಗೆಗಳಿಗೇ ನಿಯಮಿತವಾಗಿ ಭೇಟಿ ಕೊಡುವ ಅಭ್ಯಾಸವನ್ನಾದರೂ ಬೆಳೆಸಿಕೊಂಡರೆ ಈ ತರದ ಸಮಸ್ಯೆ ಬರಲಾರದು. ಜಯನಗರದ ಸಪ್ನ ಬುಕ್ ಸ್ಟಾಲ್‌ನಲ್ಲಿ ಜಾಸ್ತಿ ಪುಸ್ತಕ ಇಲ್ಲವೆನ್ನುವುದು ನಿಜವಾದರೂ ಬಹುತೇಕ ಪುಸ್ತಕಗಳು ಅಲ್ಲಿ ಲಭ್ಯವಿವೆ(ನಾನು ಮೊನ್ನೆ ತಾನೇ ಕೆ ಎಸ್ ನ ರವರ 'ಮೈಸೂರು ಮಲ್ಲಿಗೆ' ಮತ್ತು ವಸುಧೇಂದ್ರರ 'ಯುಗಾದಿ'ಗಳನ್ನು ಅಲ್ಲಿಂದ ಕೊಂಡುಕೊಂಡೆ.
ಕನ್ನಡ ಪುಸ್ತಕಗಳು ಸಿಗುವ ಜಾಗಕ್ಕೆ ಹೋಗುವುದು ಬಿಟ್ಟು ಇಲ್ಲದ ಜಾಗಗಳಲ್ಲೇ ಹುಡುಕುವುದೇಕೆ?(ಇರುದೆಲ್ಲವ ಬಿಟ್ಟು ಇಲ್ಲದುದರೆಡೆಗೇ ತುಡಿವುದೀ ಜೀವ!)
ಇನ್ನು ಗೆಳೆಯ ವೀರೇಶ್ ಹೇಳಿದಂತೆ ಅಂತರ್ಜಾಲದಲ್ಲಿ ಪುಸ್ತಕವನ್ನು ಟೈಪಿಸಿ ಇ-ಪುಸ್ತಕ ಮಾಡುವುದು. ಆಲೋಚನೆ ಚೆನ್ನಾಗಿಯೇನೋ ಇದೆ. ಆದರೆ ಇದರ ಹಿಂದೆ ಹಲವಾರು ಸಮಸ್ಯೆಗಳಿವೆ. ಮೊದಲನೆಯದು ಕಾಫಿರೈಟಿನದು. ನನ್ನ ತಿಳಿವಿನಂತೆ ಕಾಫಿರೈಟಿನ ಸಮಸ್ಯೆಯಿಲ್ಲದ ಪುಸ್ತಕಗಳೆಂದರೆ ತುಂಬ ಹಳೆಯ ಪುಸ್ತಕಗಳು, ರನ್ನ, ಪಂಪ ಇತ್ಯಾದಿ ಕವಿಗಳ ಕಾವ್ಯಗಳು(ವಚನಗಳು, ದಾಸರ ಪದಗಳು ಈಗಾಗಲೇ ಅಂತರ್ಜಾಲದಲ್ಲಿ ಇವೆ).
ಇನ್ನು ಕನ್ನಡ ಪುಸ್ತಕಗಳನ್ನು ಒಂದು ವೇಳೆ ಟೈಪಿಸಿದರೂ ಅದನ್ನು ಗುಟೆನ್‌ಬರ್ಗ್ ಸೈಟಿನಲ್ಲಿ ಹಾಕುವುದು ಏಕೆ? ಇಲ್ಲೇ ಸಂಪದದಲ್ಲಿ ಹಾಕಬಾರದೇಕೆ...? ವಾರಕ್ಕೆ ಹತ್ತು ಪುಟಗಳನ್ನಾದರೂ ನಿಮ್ಮ ನಿಮ್ಮ ಬ್ಲಾಗ್‌ಗಳಲ್ಲಿ ಹಾಕಬಹುದಲ್ಲ. ಹೇಗೂ ಇ-ಪುಸ್ತಕ ಮಾಡಿಕೊಡಲು ನಾಡಿಗರಿದ್ದಾರೆ.
ಸ್ನೇಹಿತರೆ, ಪುಸ್ತಕ ಟೈಪ್ ಮಾಡಿಕೊಡುವುದು ಅಷ್ಟು ಸುಲಭದ ಕೆಲಸವೂ ಅಲ್ಲ ಮತ್ತು ಕಷ್ಟದ್ದೂ ಅಲ್ಲ. ಆದರೆ ಕೆಲವು ಸಂಗತಿಗಳನ್ನು ನಾವು ತಿಳಿದುಕೊಂಡಿರಬೇಕು.
ಅಚ್ಚಾಗಿರುವ ಒಂದು ಪುಟವನ್ನು ಟೈಪಿಸಲು ಸುಮಾರು ೨೫೦೦ ಬೆರಳ ತುದಿಯ ಕೀ-ಸ್ಟ್ರೋಕ್‌ಗಳು ಬೇಕಾಗುತ್ತವೆಂಬುದು ನನ್ನ ಖಚಿತ ಲೆಕ್ಕಾಚಾರ. ಇನ್ನು ಒಂದು ಪುಸ್ತಕದಲ್ಲಿ ೧೦೦ ಪುಟಗಳಿವೆಯೆಂದುಕೊಂಡರೆ ಎರಡೂವರೆ ಲಕ್ಷ ಬೆರಳ ತುದಿಯ ಕೀ-ಸ್ಟ್ರೋಕ್‌ಗಳು ಬೇಕಾಗುತ್ತವೆ! ಅದಕ್ಕಿಂತ ಪುಸ್ತಕದಂಗಡಿ ಹುಡುಕಿಕೊಂಡು ಹೋಗುವುದೇ ಸುಲಭದ್ದೆನಿಸಬಹುದು.
ಯಾವುದೇ ಕಾರಣಕ್ಕೂ ಕಾಫಿರೈಟು ಕಾದಿರಿಸಿರುವ ಪುಸ್ತಕಗಳನ್ನು ನಾವು ಹಾಕಲಾಗುವುದಿಲ್ಲ(ಗುಟೆನ್ ಬರ್ಗ್ ಸೈಟ್‌ನಲ್ಲೂ).
ಇಷ್ಟೆಲ್ಲ ಅರಿತ ಮೇಲೂ ಪುಸ್ತಕದ ಕಾಫಿರೈಟ್ ಕೊಡುವಂತೆ ಲೇಖಕರ ಮನವೊಲಿಸಲು ಆಸಕ್ತಿಯಿರುವ, ವಾರಕ್ಕೆ ಕನಿಷ್ಟ ಹತ್ತು ಪುಟಗಳನ್ನು ಟೈಪಿಸುವ ಬದ್ಧತೆಯಿರುವ ಯಾರಾದರೂ ಮುಂದೆ ಬಂದರೆ ಅವರ ಜೊತೆ ನನ್ನ ಕೈಜೋಡಿಸುವೆ. ಆದರೆ ಒಂದು ಷರತ್ತಿನೊಡನೆ: ಟೈಪಿಸಿದ್ದನ್ನು ನಿಯಮಿತವಾಗಿ ಸಂಪದದಲ್ಲೇ ಹಾಕಬೇಕು.
ಪಿಡಿಎಫ್ ಫೈಲ್ ಮಾಡಿ ಇ-ಪುಸ್ತಕ ತಯಾರಿಸುವುದೂ ಮೇಲಿನ ಮಾದರಿಯ ಚಟುವಟಿಕೆಯನ್ನೇ ಬೇಡುತ್ತದೆ.
ಆಸಕ್ತ ಸಂಪದಿಗರು ದಯಮಾಡಿ ಮುಂದೆ ಬನ್ನಿ...
ರವೀ
Re: Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು!
ರವೀ ಅವರೆ,
ತುಂಬ ದನ್ಯವಾದಗಳು, ನಿಮ್ಮ ಉತ್ತರಕ್ಕೆ.
ನನ್ನ ದೃಷ್ಟಿಕೊನ, ಪುಸ್ತಕ ಮಳಿಗೆಗಳ ತಾರತಮ್ಯ ವ್ಯಕ್ತಪಡಿಸಿದೆ ಅಷ್ಟೆ !!!. "ಪರದಾಡುವ" ಶಿಕ್ಷೆ ಇದೆ, ಇದು ವಾಸ್ತವ !!! ಇನ್ನು ಹೆಚ್ಚು ಅಂಗಡಿಗಳಲ್ಲಿ ದೊರೆಯುವಂತಗಬೇಕು ಅನ್ನುವುದು ನನ್ನ ಆಶೆಯ.
ನಿಮ್ಮ ಚಿಂತನೆ ಚೆನ್ನಾಗಿದೆ, ನಾನು ಅಳಿಲು ಸೇವೆಗೆ ಸಿದ್ದನಿದ್ದೆನೆ.
ನಿಮ್ಮ
-ನಿಮ್ಮ ಬೆಂಬಿಡದ ಬೇತಾಳ .....
ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
veena.
ಕನ್ನಡ ಪುಸ್ತಕಗಳನ್ನು ಅಂತರ್ಜಾಲಕ್ಕೆ ಸೇರಿಸುವ ಅಗತ್ಯ ತುಂಬಾ ಇದೆ. ಓದುಗರಿಗೆ ಕಂಪ್ಯೂಟರ್ ಸಾಕ್ಷರರನ್ನಾಗಿ ಮಾಡುವುದಲ್ಲದೆ, ಕಳೆದು ಹೋಗಿರುವ ಓದುಗರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಪುಸ್ತಕಗಳ ಬೆಲೆಗಳೂ ಹೆಚ್ಚಿರುವುದರಿಂದ ಎಲ್ಲ ವರ್ಗಗಳ ಓದುಗರನ್ನು ತಲುಪುವಲ್ಲಿ ಸಹಕಾರಿಯಾಗುತ್ತದೆ.
ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ನಿಮಗೆ DLI ಬಗ್ಗೆ ಗೊತ್ತಿದಿಯೆ?
ಇಲ್ಲದಿದ್ದರೆ ಈ ಎಳೆಯನ್ನು ನೋಡಿ
http://www.sampada.net/blog/19/02/2007/3216
ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
ಬುಕ್ಸಗಳನ್ನು ಆನ್ಲೈನ್ ಮಾಡೋಕೆ ದಾರಿ ಏನು ? ಇದರ ಬಗ್ಗೆ ಲೇಖಕರನ್ನು ಕೇಳಬೇಕಾ ಅಥ್ವ ಪಬ್ಲಿಶರ್ಸ ಕೇಳಬೇಕಾ ?? http://books.google.com ಮಾದರಿಯಲ್ಲಿ ಕನ್ನಡ ಬುಕ್ಸಗಳಿಗೆ ಮಾಡಿದರೆ ಹೇಗೆ ??
-ನಿಮ್ಮ ಬೆಂಬಿಡದ ಬೇತಾಳ .....