ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

December 12, 2006 - 12:32am — betala

- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು.
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.
- ಈಗ "keyboard" confusion ಇದೆ, ಕ ಗ ಪ , ಅಥವ "english-2-kannada", ಯಾವುದು ಒಳಿತು ?

ಇದು ಬೇತಾಳ ಎಂಬ ಬಾವಿ ಕಪ್ಪೆಯ ಆಶೆಯ .......

ನೀವು ಏನು ಬಯಸುತ್ತಿರಾ ?

~.~
  • betala ರವರ ಬ್ಲಾಗ್
  • Login or register to post comments
  • 716 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 12, 2006 - 5:29am — hpn

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

hpn's picture

gmailನಲ್ಲಿ ನೀವು ಇಲ್ಲಿ ಟೈಪಿಸಿದಂತೆಯೇ ಕನ್ನಡದಲ್ಲಿ ಟೈಪಿಸಿ ಈ-ಮೇಯ್ಲು ಆ-ಮೇಯ್ಲು ಕಳುಹಿಸಿಕೊಳ್ಳಬಹುದು Eye-wink

ಕೀಬೋರ್ಡ್ ಬಗ್ಗೆ confusion ಜೀವನದುದ್ದಕ್ಕೂ ಇದ್ದದ್ದೇ (ಆ ಕಾರು ಕೊಳ್ಳಬೇಕಿತ್ತೋ, ಈ ಕಾರು ಕೊಳ್ಳಬೇಕಿತ್ತೋ ಎಂಬ ಪ್ರಶ್ನೆಯ ಥರಾ). ನಿಮಗ್ಯಾವುದು ಹೆಚ್ಚು ಸುಲಭ ಮತ್ತು ಸೂಕ್ತ ಎನ್ನಿಸುತ್ತದೋ ಅದನ್ನೇ ಬಳಸಿ.

ಅಂತರಜಾಲದಲ್ಲಿ ಕನ್ನಡ ಪುಸ್ತಕಗಳ ಬಗ್ಗೆ ನನ್ನದೊಂದು ನಿಲುವಿದೆ - ಅದು ಹಳೆಯ ಪುಸ್ತಕಗಳನ್ನು (ಈಗ ಸರ್ಕ್ಯುಲೇಟ್ ಆಗುತ್ತಿರದ ಪುಸ್ತಕಗಳನ್ನು) ಹಾಕುವೆಡೆಗೆ. ಮಾರಾಟವಾಗುತ್ತಿರುವ ಪುಸ್ತಕಗಳನ್ನು ಅಂತರಜಾಲದಲ್ಲಿ ಹಾಕುವುದರಿಂದ ನಮಗೆ ನಾವೇ ಗುಂಡಿ ತೋಡಿಕೊಂಡಂತೆ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 7:03am — betala

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

betala's picture

hpn , ನಿಮ್ಮ ಉತ್ತರಕ್ಕೆ ದನ್ಯವಾದಗಳು.

ಆದರೆ, ಬೇರೇ ದೇಶದಲ್ಲಿ ಇದ್ದರೆ ಕನ್ನಡ ಪುಸ್ತಕಗಳನ್ನು ಪಡೆಯುವುದು ಹೇಗೆ ? ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ ?

-nimma bembidadha betala

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 1:17pm — kannadiga_1956

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

kannadiga_1956's picture

ಬೇರೆ ದೇಶದಲ್ಲಿದ್ದೋರು ಈ ಕೆಳಕಂಡ Website ಉಪಯೋಗಿಸಿ ಕನ್ನಡ ಪುಸ್ತಕಗಳನ್ನ ಪಡಿಬೋದು.

www.totalkannada.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 1:32pm — ಶಶಾಂಕ

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

ಶಶಾಂಕ's picture

Quote:
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.

ಈಗಲೂ ಜಿಮೇಲ್‌ನಲ್ಲಿ ಕನ್ನಡದಲ್ಲಿ ಬರೆದು ಕಳಿಸೋಕ್ಕೆ ಆಗತ್ತೆ. ಹಲವಾರು ಆನ್‌ಲೈನ್‌ ಕನ್ನಡ ಎಡಿಟರ್‌ಗಳು ಇದ್ದಾವೆ, ಸಂಪದದಲ್ಲೂ ಇದೆಯಲ್ಲ. ನೀವು ಎಕ್ಸ್.ಪಿ. ಉಪಯೋಗಿಸುತ್ತಿದ್ದರೆ ಇನ್ನೂ ಸುಲಭ. ಇಲ್ಲಾಂದ್ರೆ ಇಲ್ಲಿಗೆ ಹೋಗಿ ನೋಡಿ.

Quote:
-ಈಗ "keyboard" confusion ಇದೆ, ಕ ಗ ಪ , ಅಥವ "english-2-kannada", ಯಾವುದು ಒಳಿತು ?

ಕಗಪ ಮತ್ತು ಬರಹ ಶೈಲಿಯ ಕೀಲೀಮಣೆಗಳೆರಡೂ ಸುಲಭವಾಗಿದೆ. ಕಗಪವನ್ನು ಒಂದರ್ಧ ಘಂಟೆಯಲ್ಲಿ ಕಲಿತುಬಿಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 2:20pm — veereshraya

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

veereshraya's picture

ಇನ್ನು ೩ ವರ್ಷ್ದಲ್ಲಿ ಕನ್ನಡ ಇಲ್ಲೆಲ್ಲಾ ಇರಬೇಕು.

೧)ಮೊಬೈಲ ಎಸ್.ಎಂ.ಎಸ್ & ಬ್ರೌಸರ್
೨)veeresh@xyz.com ನಂತೆ ವೀರೇಶ@xyz.com ನ ಸಾದ್ಯತೆ.
೩)www.yahoo.com ತರಹ www.ಯಾಹೊ.com
೪)ಎಲ್ಲಾ ATMಗಳಲ್ಲಿ. ಇದರಿಂದ ಇಡೀ ಭಾರತದಲ್ಲೆಲ್ಲಿ ಹೋದರೂ ATMಗಳು ಕನ್ನಡ ಮಾತಾಡಲಿ.
೫)ಎಲ್ಲ ಮೆಸ್ಸೆಂಜರುಗಳಲ್ಲಿ ಮತ್ತು outlook, sunbird, thunderbird ಇತ್ಯಾದಿಗಳಲ್ಲಿ.
೬)ಮಂಗಳೂರಿನಂತ ಊರುಗಳಲ್ಲಿ ಈಗಲೂ ಸಿಗದ ಕನ್ನಡ ಕೀಲಿಮಣೆ ಸ್ಟಿಕ್ಕರುಗಳು ಎಲ್ಲೆಡೆ ಸಿಗಲಿ. ಇದರಿಂದ ನಮ್ಮ ಇಂಗ್ಲೀಷ ಕೀಲಿಮಣೆಗಳು ದುಭಾಷಿಯಾಗಬಹುದು.(ವಿಡಂಬನೆಯೆಂದರೆ ಇವು ಅಮೆರಿಕೆಯಲ್ಲಿ online storeನಲ್ಲಿ ಸಿಗತ್ತೆ)
೭)PDA ಗಳಲ್ಲಿ.
೮)ಹೆಚ್ಚಿನ ಟಿ.ವಿ. ಚಾನಲ್ಗಳು.
೯)Electronic ವಸ್ತುಗಳ UIಗಳು.

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 1:49pm — Sunil Jayaprakash

ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

Sunil Jayaprakash's picture

betala wrote:
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.

ಹರಿ ಹೇಳಿದ ಹಾಗೆ, ಈಗಾಗಲೇ ಯಾವುದೇ ಮೈಯ್ಲ್ ಕ್ಲೈಯಂಟ್ನಿಂದ ಕನ್ನಡದಲ್ಲಿ ಮೇಯ್ಲ್ ಕಳುಹಬಹುದಾಗಿದೆ. ಆದರೆ, by default, ಎಂಬುದು ಕೆಲವು ಕಡೆ ಇನ್ನೂ ಗಗನಕುಸುಮವಾಗಿದೆ.

betala wrote:
- ಈಗ "keyboard" confusion ಇದೆ, ಕ ಗ ಪ , ಅಥವ "english-2-kannada", ಯಾವುದು ಒಳಿತು ?

hpn wrote:
ಕೀಬೋರ್ಡ್ ಬಗ್ಗೆ confusion ಜೀವನದುದ್ದಕ್ಕೂ ಇದ್ದದ್ದೇ (ಆ ಕಾರು ಕೊಳ್ಳಬೇಕಿತ್ತೋ, ಈ ಕಾರು ಕೊಳ್ಳಬೇಕಿತ್ತೋ ಎಂಬ ಪ್ರಶ್ನೆಯ ಥರಾ). ನಿಮಗ್ಯಾವುದು ಹೆಚ್ಚು ಸುಲಭ ಮತ್ತು ಸೂಕ್ತ ಎನ್ನಿಸುತ್ತದೋ ಅದನ್ನೇ ಬಳಸಿ.

ಇದರ ಬಗ್ಗೆ ನನ್ನಲ್ಲಿ ಭಿನ್ನಾಭಿಪ್ರಾಯವಿದೆ. ನಾನಂತೂ ಎಲ್ಲರೂ, INSCRIPT ಬಳಸುವಂತಾಗಲಿ ಎಂದು ಆಶಿಸುತ್ತೇನೆ. ಹೇಗೆ ಮೂಲ English ಕೀಬೋರ್ಡು ಶಿಷ್ಟಾಚಾರವಾಗಿ ಎಲ್ಲರೂ ಬಳಸುವಂತಾಗಿ ಉಳಿದಿದೆಯೋ ಹಾಗೆಯೇ ಕನ್ನಡಕ್ಕೂ ಒಂದೇ ಶಿಷ್ಟಾಚಾರವಿರಬೇಕು.

ಹಾಂ! English-US English-UK ಮುಂತಾಗಿ ಇವೆ. ಆದರೆ ಮೂಲ English ಕೀಬೋರ್ಡ್ ಬದಲಾಗಿಲ್ಲ. ಆದರೆ INSCRIPT ವಿಷಯದಲ್ಲಿ ನಾನು ನಿರಾಶಾವಾಧಿ.

ನಾನು ಏನನ್ನು ಬಯಸುತ್ತೇನೆ.

೧. ನಾವುಗಳು ತಂತ್ರಜ್ಞಾನದ ಮೂಲಕವಾದರೂ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿಯಬೇಕು. ನಮಗೆ ನಮ್ಮ ನುಡಿಯ ಬಗ್ಗೆ ತಿಳಿದಿರುವುದಕ್ಕಿಂತ, ಬೇರೆ ನುಡಿಯ ಬಗ್ಗೆ ತಿಳಿದಿರುವುದೇ ಹೆಚ್ಚು. ಇದರ ಬಗ್ಗೆ ಇಲ್ಲಿ ಚರ್ಚೆ ಬೇಡ.
೨. ಇದಕ್ಕಾಗಿ www.thefreedictionary.com ತರಹದ ಸೈಟುಗಳು ಕನ್ನಡದಲ್ಲೂ ಬರಲಿ. ಈ ನಿಟ್ಟಿನಲ್ಲಿ ಪ್ರೋ. ಜಿ.ವಿಯವರ ನಿಘಂಟು ಬರಹದಲ್ಲಿ ಬಂದದ್ದು ಒಳ್ಳೆಯ ವಿಚಾರ.
೩. ವಿದ್ಯಾರ್ಥಿಗಳು (ವಿಶೇಷವಾಗಿ ಕಲಾವಿಭಾಗದವರು) ಗಣಕಗಳ ಮೂಲಕ ಕನ್ನಡದಲ್ಲಿ ಪ್ರಕಟವಾಗುವ ಕಥೆ, ಕಾದಂಬರಿ, ನಾಟಕ, ಸಿನಿಮಾ, ಹಾಡು, ಸಂಪಾದಕೀಯ, ಚುಟುಕ; ಇವುಗಳ ಕುರಿತು ಚರ್ಚೆ ಮಾಡಬೇಕು.
೪. ನಾವೆಲ್ಲರೂ ಹೆಚ್ಚು ಹೆಚ್ಚು ಮಾತನಾಡಬೇಕು(ಜಗಳವಾದರೂ ಪರವಾಗಿಲ್ಲ. ಮಾತನಾಡಬೇಕು). ಇದರ ಬಗ್ಗೆ ಇಸ್ಮಾಯಿಲ್ ರವರು ಹಿಂದೆ ಕನ್ನಡಿಗರ ಅತಿದೊಡ್ಡ ಸಮಸ್ಯ ಎಂದು ಒಂದು ಲೇಖನ ಬರೆದಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2006 - 3:16pm — shreekant.mishrikoti

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

shreekant.mishrikoti's picture

Since I can't write in Kannada NOW from where I am , I am writing in English .Pls bear with me.

1. Such situation should not be there....
2. I want a translation tool for English-to-Kannada which does replace eng words in a paragraph with Kannada equivalents from a database. There should be a facilty to add word to the database. The database can be in 2 files as in Nudi's dictionary. ( One User , One standard) . Even loose translation will do. it can be corrected. This will help translating lot of knowledge from English to Kannada which will help our people .If our people are served/saved then language also survives!
if such a tool is available . translation will be faster , reducing repetitive typing.
I want it for translating for wikipedia and the like .

thank You

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2007 - 10:48am — ಕಾರ್ತಿಕ್ ವೀರಾಜ್

Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

ಕಾರ್ತಿಕ್ ವೀರಾಜ್'s picture

ಮುಂದಿನ ಮೂರು ವರ್ಷಗಳಲ್ಲಿ ನಾ ಬಯಸುವುದು ಇಷ್ಟೆ.

  ೧. ಕನ್ನಡ ಕೀಲಿ ಮಣೆಯಲ್ಲಿ ಏಕಸಾಮ್ಯತೆ - ಸದ್ಯಕ್ಕೆ ಒಬ್ಬೊಬ್ಬರು ಒಂದೊಂದು ಉಪಯೋಗಿಸುತ್ತಿದಾರೆ. ಎಲ್ಲ ಗಣಕಗಳಲ್ಲು ಸರಾಗವಾಗಿ ಕನ್ನಡವನ್ನು ಬೆರಳಚ್ಚಿಸಲು, ಯೂನಿಕೋಡ್ ಅಧಾರಿತ ಕೀಲೆಮಣೆ ವೀನ್ಯಾಸ ಅತ್ಯವಶ್ಯಕ...
 ೨. ಕನ್ನಡ ಅಂತರ್ಜಾಲಗಳ ಸಂಖ್ಯೆ ಹೆಚ್ಚಬೇಕು....(ಮಾಹಿತಿಗಾಗಿ, ಮನರಂಜನೆಗಾಗಿ, ತಾಂತ್ರಿಕ ಙ್ನಾನಕ್ಕಾಗಿ..)
 ೩. ಕನ್ನಡ ಇ-ಅಂಚೆ ಜಾಲ...
 ೪. ಕನ್ನಡದ ಮಾಹಿತಿ ಶೋಧಕ
 ೫. ಕನ್ನಡದ ಬಳಕೆದಾರ ಸಂಖ್ಯೆಯ ಹೆಚ್ಚಳ..

- ಕಾರ್ತಿಕ್ ವೀರಾಜ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2007 - 11:24am — ASHOKKUMAR

Re: ಕನ್ನಡ ಬಳಕೆ ವ್ಯಾಪಿಸಲಿ.

ASHOKKUMAR's picture

ಕನ್ನಡ ಜನರ ಬಾಯಲ್ಲಿ ಕೇಳಿಬರುತ್ತಿರಲಿ. ಅಂತರ್ಜಾಲದಲ್ಲಿ ಅದರ ಬಳಕೆ ಸಹಜವಾಗಲಿ.ಕರ್ನಾಟಕದಲ್ಲಿ ಕನ್ನಡ ಅಪರೂಪವಾಗದಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2007 - 5:38am — Shyam Kishore

ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ!

Shyam Kishore's picture

ನಿಜಕ್ಕೂ ನನ್ನ ಎದೆಯಾಳದ ಆಶಯ ಅಂದರೆ, ಇನ್ನು ಮೂರು ವರ್ಷದಲ್ಲಿ ಅಲ್ಲ, ಅದಕ್ಕಿಂತಲೂ ಬೇಗ ನಮ್ಮ ಹೃದಯಗಳಲ್ಲಿ ಕನ್ನಡ ನೆಲಸಲಿ ಅನ್ನುವುದು. "ಇದೇನಪ್ಪಾ ಎಂಥ ವಿಚಿತ್ರ ಉತ್ತರ?" ಎಂದು ಹುಬ್ಬೇರಿಸಬೇಡಿ. ನನ್ನ ಅನಿಸಿಕೆಯನ್ನು ಸ್ವಲ್ಪ ವಿವರಿಸುತ್ತೀನಿ. 

೧. ಕನ್ನಡ ಕೇವಲ ನಮ್ಮ ಮನಸ್ಸು-ಬುದ್ಧಿಗಳ ಚೌಕಟ್ಟಿನಲ್ಲಿ ಮಾತ್ರ ನೆಲೆಗೊಂಡಿದ್ದರೆ ಆಗ "ಕನ್ನಡಕ್ಕಾಗಿ" ಅಂತ (ಹೌದು ನನ್ನ ಸ್ವಂತ ಉಪಯೋಗಕ್ಕಾಗಿ ಅಂತಲ್ಲ; ನನಗೆ ಸ್ವಲ್ಪ ತೊಂದರೆ, ಶ್ರಮ ಆದರೂ ಚಿಂತೆಯಿಲ್ಲ, ಕನ್ನಡಕ್ಕಾಗಿ ಅಂತ)  ಯಾವುದೇ ಕೆಲಸವನ್ನು ಮಾಡುವ ಹುಮ್ಮಸ್ಸು ಅಷ್ಟಾಗಿ ಇರುವುದಿಲ್ಲ. ಅದೇ ಕನ್ನಡ ನಮ್ಮ ಹೃದಯಕ್ಕೆ ಹತ್ತಿರವಾದರೆ, ಆಗ ನಮ್ಮಲ್ಲಿ ಕನ್ನಡದ ಕುಂದು-ಕೊರತೆಗಳ ಬಗ್ಗೆ ಯೋಚಿಸುವ ಮನಸ್ಸು-ಬುದ್ಧಿಗಳಿಗಿಂತ ಮೊದಲು ಹೃದಯ ತನ್ನ ಪ್ರೀತಿಯನ್ನು ತೋರಿಸುತ್ತದೆ. ನೀವೇ ಹೇಳಿ, ಎಂದಿಗೂ ಹೃದಯಕ್ಕೆ ಹತ್ತಿರವಾದದ್ದರ ಬಗ್ಗೆ ನಮಗೆ ಹೆಚ್ಚು ಆಸಕ್ತಿ ಅಲ್ಲವೇ?

೨. ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ ಸಂಬಂಧಪಟ್ಟ ವಿಚಾರಗಳ ಬಗೆಗೆ, ಭಾವನೆಗಳ ಆವೇಶವಿಲ್ಲದ, ಅತಿರೇಕಗಳಿಲ್ಲದ, ಶುದ್ಧ ವಿಚಾರವಾದ ಬೇಡವೆಂದು ಖಂಡಿತ ನಾನು ಹೇಳುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕನ್ನಡದ ನಾಡು-ನುಡಿಗೆ ಅಗತ್ಯವಿರೋದು ವಿಚಾರವಾದಕ್ಕಿಂತ ಮೊದಲು ಅಗಾಧ ಕನ್ನಡ ಪ್ರೀತಿ ಅಂತ ನನ್ನ ಅನಿಸಿಕೆ. ಒಂದಷ್ಟು ವರುಷ ಈ "ಕನ್ನಡ ಪ್ರೀತಿ" ನಮ್ಮನ್ನು ಆವರಿಸಿಕೊಳ್ಳಲಿ. ಈ ಪ್ರೀತಿಯಿಂದಾಗಿ, ಒಂದು ರೀತಿಯ ಕುರುಡು ನಂಬಿಕೆ ಅಂತಾರಲ್ಲ ಹಾಗಾದರೂ ಚಿಂತೆಯಿಲ್ಲ, ಕನ್ನಡದ ಪರ ಕೆಲಸಗಳು ಭರದಿಂದ ನಡೆಯಲಿ. ಆನಂತರ ಕನ್ನಡದ ಕುಂದು-ಕೊರತೆಗಳ ಬಗ್ಗೆ ನಿರ್ಭಾವುಕರಾಗಿ ಚರ್ಚೆ ನಡೆಸೋಣ, ಏನಂತೀರಾ?

೩. ಒಮ್ಮೆ ಕನ್ನಡ ನಮ್ಮ ಹೃದಯಕ್ಕೆ ಹತ್ತಿರವಾದರೆ, ತಾನಾಗಿಯೇ ಅದು ನಮ್ಮ ಮನಸ್ಸನ್ನೂ ಆಕ್ರಮಿಸುತ್ತದೆ. ನಾಲಗೆಯ ಮೇಲೆ, ಬರವಣಿಗೆಯಲ್ಲಿ, ನಡೆ-ನುಡಿಗಳಲ್ಲಿ, ಆಚಾರ-ವಿಚಾರಗಳಲ್ಲಿ, ಹೀಗೆ ಎಲ್ಲೆಲ್ಲೂ ನಲಿದಾಡುತ್ತದೆ. ಅದರಿಂದ ಕೊಂಚ ಶ್ರಮವಾಗಬಹುದು ನಿಜ. ಆದರೆ ಪ್ರೀತಿಯ ವಿಚಾರ ಬಂದಾಗ ಶ್ರಮದ ಮಾತೆಲ್ಲಿ, ಅಲ್ಲವೇ?

ನಿಮಗೇನನ್ನಿಸಿತು ಅಂತ ಹೇಳುತ್ತೀರಾ? ಕೊಂಚ ಶ್ರಮವಾದರೂ ಪರವಾಗಿಲ್ಲ, ಎರಡು ಸಾಲು ಕನ್ನಡದಲ್ಲಿ ಗೀಚೀಪ್ಪಾ! Smile

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು
  • ಅಂತರ್ಜಾಲದಲ್ಲಿ ಕನ್ನಡ ರೇಡಿಯೋ
  • ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’
  • 'ಪ್ಲಾನೆಟ್ ಕನ್ನಡ' (Planet Kannada)
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೨
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator