Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

August 14, 2007 - 7:14pm — betala

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

"ದುಡಿಮೆಗೆ ಗುರಿಯಿರಲಿ" ಸರ್. ಎಂ.ವಿ ಅವರ ಅನುಭವಾಮೃತ. ದೇಶವನ್ನು ದುಡಿಮೆಯಿಂದ ಹೇಗೆ ಪ್ರಗತಿಯ ಪಥದಲ್ಲಿ ನಡೆಸಬಹುದು ಎಂದು ತೋರಿಸಿಕೊಟ್ಟವರು.

ಇವರು ಮತ್ತು ಗಾಂಧಿಜಿ ಅವರ ಚಿಂತನೆಯಲ್ಲಿ ಬಹಳ ವ್ಯತ್ಯಾಸವಿದೆ. ಸರ್.ಎಂ.ವಿ ಅವರು ಆರ್ಥಿಕ ದೃಷ್ಟಿಯಿಂದ ದೇಶಕ್ಕೆ ಸ್ವಾತಂತ್ರ ದೊರಕಿಸಲು ನೋಡಿದರು. ಗಾಂಧಿಜಿ "ರಾಜಕೀಯ" ದೃಷ್ಟಿಯಿಂದ. "ಗುರಿ" ಒಂದೇ, ಆದರೆ "ದಾರಿ" ಬೇರೆ ಅಷ್ಟೆ. !!!

ಸರ್.ಎಂ.ವಿ ಅವರ ಮೂಲ ಮಂತ್ರ :  Industrialize or Perish , ಗಾಂಧಿಜಿಯವರದು   Industrialize and Perish.

ಇವತ್ತಿನಿ ಭಾರತವನ್ನು ನೋಡುಲು ಈ ಇಬ್ಬರು ಮಹನೀಯರು ಇಲ್ಲ. ಆದರೆ ಅವರ ಹಾಕಿಕೊಟ್ಟ ಮಾರ್ಗಗಳು, ಸಂದೇಶಗಳು, ಅನುಭವಾಮೃತಗಳು ಸದಾ ಬೆಳಕನ್ನು ತೋರಿಸುತ್ತಿವೆ.

ಇದರ ಆಯ್ಕೆ ನಮ್ಮ ಕೈಯಲ್ಲಿದೆ.

ವಿ.ಸೂ : ಹೆಚ್ಚಿನ ವಿಷಯಗಳಿಗೆ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದಿರುವಂತ  ಅವರು "ಸರ್.ಎಂ ವಿಶ್ವೇಶ್ವರಯ್ಯ" ಎಂಬ ಪುಸ್ತಕವನ್ನು ಓದಿ.

Ornamental seperator
  • betala ರವರ ಬ್ಲಾಗ್
  • Login or register to post comments
  • 428 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2007 - 11:02am — mahesha

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

mahesha's picture

ಬೇತಾಳಯ್ಯ!!

ನಂಮ ನಾಡಿನಾಗೇ ಅಡಿಮೆಯೇ ದುಡಿಮೆ. ನಾವು ದುಡಿದರೂ ಒಬ್ಬರ ಕೆಳಗೆ ದುಡಿಯಬೇಕು..
ಆದ್ರೆ ಬರೀ ದುಡಿಮೆಯೇ ಗುರಿಯಾಗಿರದೇ, ಹಿರಿಮೆಯೇ ಗುರಿಯಾಗಬೇಕು, ಇದರ ಬಗ್ಗೆ ಎಚ್ಚರವಿರಬೇಕು...
ನಾನು, ನಂನ ಬಳಗ, ನಂನ ನಾಡು ಎಲ್ಲರೂ ದುಡ್ಡು, ಅರಿವು, ನೆಮ್ಮದಿಯಲ್ಲಿ ಇವಲ್ಲಿ ಹಿರಿಹಿರಿದು ಹಿಗ್ಗುತ್ತಿರಬೇಕು

ಕೊಳಂಬೆ ಪುಟ್ಣಣಗೌಡರ "ನುಡಿಗನ್ನಡ ತಿಳಿವಣಿಗಳು" ಇದರಲ್ಲಿ ಒಳ್ಳೆಯ ’ಅಂತೆ’ಗಳಿವೆ. ಇಲ್ಲೇ ಮಿಂಬಲೆಯಲ್ಲಿ ಸಿಗ್ತದೆ.

ಹೊನ್ನಿನ ಮಳೆ ಬಂದು ನಚ್ಚಿನಿಂ ಕೆಚ್ಚಿನಿಂ
ಕನ್ನಡ ನಾಡೊಮ್ಮೆ ಮೆರೆದಿರ್ದುದಂತೆ
ಮನೆಯೆಲ್ಲ ಬೆಲೆವಣಿ ಹೊನ್ನ ತೊಟ್ಟಿಲ ನನ್ನಿ
ಮಗು ಕಡಲಣುಗಿಗೆ ಮೆಚ್ಚಾದುದಂತೆ

ಬೆಳ್ಳಿಯಿಂ ಮನೆಯಾಯ್ತೆ ಕುರುಡಕಾಣುವನೆಲ್ಲ
ಹೊನ್ನುಂಟೆ ಕಳ್ಳಂಗೆ ನೂರು ಕಣ್ಣಂತೆ
ಬೆಲ್ಲದ ಬೆಟ್ಟದೊಳಿರುವೆಯೊಸಗೆಯಿದಂ
ನಾಡರಸುಗಳೆಲ್ಲ ಮರೆತಿದ್ದರಂತೆ

ಕುಣಿತ ಕುಡಿತ ಕೂಟ ಹೆಂಗಳೊಡನೆ ಬೇಟ
ಬಳಗದೊಡನೆ ಹೋಗಿ ಕಚ್ಚಾಟವಂತೆ
ಕೊನೆಗೊಮ್ಮೆ ಹಗೆಗಳಂ ಕರೆತಂದು ಕಾಣ್ಕೆಯಿಂ
ನಮ್ಮಾಳ್ಕೆ ನಿಮಗೆಂದು ಬಿರ್ದಿತ್ತರಂತೆ

ಬೆಳ್ಳಿ ಬೆಟ್ಟವ ಕಾಯೆ ಮುಕ್ಕಣ್ಣನಿಹನಿಂತೆ
ಹೊಂಬೆಟ್ಟ ಕಾವನಾರ್‍ ಮೈಗಣ್ಣನಂತೆ
ಮೇಲ್ನೆಲಮಂ ಕಾಯೆ ಬಿಡುಗಣ್ಣರಿಹರಂತೆ
ಗುಟ್ಟೇನು? ಆಳ್ಕೆಗೆಚ್ಚರ ಬೇಳ್ಪುದಂತೆ

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 6:49pm — betala

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

betala's picture

ಮಾಯ್ಸಣ್ಣ ...

೧. ಅವರು ಹೇಳಿರೋದು " ದುಡಿಮೆಗೆ ಗುರಿಯಿರಲಿ " ಅಂತ, " ದುಡಿಮೆಯೆ ಗುರಿಯಾಗಲಿ " ಅಂತ ಅಲ್ಲ Smiling . ನಾವು ಮಾಡೊ ಕೆಲ್ಸದಲ್ಲಿ ಒಂದು ಗುರಿಯಿಟ್ಟಕೋಂಡು ಮಾಡಿ .

೨. ಡಿ.ವಿ.ಜಿ ಅವರ ಈ ಹಾಡು ನೋಡಿ ಹೇಗಿದೆ, ಗುರಿ ಬಗ್ಗೆ :-

ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯು ಸುರಿಯೆ.

.......

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 7:19pm — mahesha

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

mahesha's picture

ಬೇತಾಳಪ್ಪ..

ನೀವ್ ಹೇಳೋದು ಸರಿ... !!

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 7:26pm — betala

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

betala's picture

"ಸರಿ" ಅಂತ ಸುಮ್ಮನಾಗಿಬಿಟ್ಟರೆ .... ಇದರ ಬಗ್ಗೆ ಚರ್ಚೆ ಬೇಡ ಎಂದು ಅರ್ಥವೇ ? Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
August 15, 2007 - 9:20pm — mahesha

ಉ: ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

mahesha's picture

Smiling

ಬಂಬಿಡದ ಬಂಬೇತಾಳಣ್ಣ..!!!

ಈಗ ನಂನ ಒಳನಿಸಿಕೆಯಲ್ಲಿ ಈ ಕನ್ನಡಿಗನಿಗೆ ಸ್ವತಂತ್ರ ಸಿಕ್ಕಿಲ್ಲ.!! ನನಗೆ ಎಂದು ಸಂಪೂರ್ಣ ಸ್ವಾತಂತ್ರ್‍ಯ ಸಿಕ್ಕುವುದು ಅಂದ್ರೆ?
ಎಂದು
೧) ನನಗೆ passport ಕನ್ನಡದಲ್ಲಿ ಕೊಡ್ತಾರೆ.
೨) ನಾನು ಎಂದು ಗಳಿಕೆ-ತೆರಿಗೆಯನ್ನು ಕನ್ನಡದಲ್ಲಿ ಅರ್ಜಿತುಂಬಿ ಕೊಡ್ತೀನಿ
೩) ಎಂದು ಒಬ್ಬ ಕನ್ನಡೊನು/ಳು ಕನ್ನಡದಲ್ಲಿ ಆಣೆ ( ಪ್ರಮಾಣವಚನ ) ಮಾಡಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಆಗ್ತಾನೆ/ಳೆ
೪) ಎಂದು ಇಂಡಿಯಾ ದೇಶವು ಯುರೊಪಿಯನ್ ಯುನಿಯನ್ ಅಂತ, ಮಲೇಸಿಯದಂತೆ, ಸಿಂಗಾಪುರದಂತೆ, ತೆಂಕಣಾಪ್ರಿಕದಂತೆ, ಅಮೇರಿಕದಂತೆ ಕನ್ನಡದಲ್ಲೂ ಕೇಂದ್ರ ಸರಕಾದ ಕಡತಗಳ ( ಕಡಮೆ ಅಂದರೆ ನಮ್ಮ ದೇಸದ ಎಲ್ಲ ಮಂದಿಗೆ, ಕನ್ನಡಿಗರಿಗೆ ನಂಟಾದವು ) ಬಂದ ನಾಳು.

ನಮ್ಮ ಕನ್ನಡ ಸಿನಿಮಗಳಿಗೆ censor ceritificate ಯಾಕೆ ಇಂಗಲೀಸಲ್ಲಿ? ಕನ್ನಡದಾಗೇ ಇದು ಮಕ್ಕಳ ಸಿನಿಮ, ಇದು ಕುಟುಂಬದ ಸಿನಿಮ, ಇದು ದೊಡ್ಡೊರ ಸಿನಿಮ, ಇದು ಪೋಲಿ ಸಿಮಿಮ ಅಂನಕ್ಕೆ ಏನ್ ದಾಡಿ.
೫) ಕನ್ನಡದಲ್ಲಿ ಏನು ಬೇಕಾದರೂ ಓದಬಹುದು.

ನನಗೆ ಇನ್ನು ಸಂಪೂರ್ಣ ಸ್ವತಂತ್ರವಿಲ್ಗ. ನಾನು ಈ ದೇಸದ ಎರಡನೇ ದರ್ಜೆಯ ಸೀಮಿತ ಸ್ವಾತಂತ್ರ್‍ಯವುಳ್ಳ, lingually, enthnically neglected minority citizen.

ಹೊಟ್ಟೆಯುರಿತದೆ. ಡೆಲ್ಲಿಯಿಂದ ಚಿಕಾಗೋಗೆ ಹೋಗೋವಾಗ, ನಮ್ಮ ದೇಸದ immigration officer ನಂಗೆ ಸರಿಯಾಗಿ ಹಿಂದಿ ಬರಲ್ಲ ಅಂತ ಸಿಟ್ಟು ಮಾಡಿಕೊಂಡು ಕಡೆಗಣ್ಣಿನಿಂದ ನೋಡಿದಾಗ. ಏನು ನಂಗೆ ನನ್ನ ತಾಯ್ನುಡಿ ಕನ್ನಡ ಬರಲ್ವಾ? ನಮ್ಮವ್ವನ ಮಾತು ಕನ್ನಡ ಆದವೊತ್ತಿಗೆ ನಾವು ಕಡಮೆಯಾ?

ಹೊಟ್ಟೆಯುರಿತದೆ, ಯಾವಾಗ ನಾನು, ನನ್ನ ಗೆಳೆಯರು ೫೦ ಸಾವಿರ, ೨ ಲಕುಸ ಗಳಿಕೆ-ತರಿಕೆ ಕಟ್ಟುವಾಗ ಇಂಗಲೀಸು ಇಲ್ಲ ಹಿಂದಿಯಾಗೆ ಅರ್ಜಿತುಂಬಬೇಕಂತೆ. ಕನ್ನಡದಲ್ಲಿ ಯಾಕೆ ನಮಗೆ ಅರ್ಜಿತುಂಬಕ್ಕೆ ಅವಕಾಶವಿಲ್ಲ? ನಮ್ಮ ರೊಕ್ಕ ಬೇಕು, ನಮ್ಮ ನೆಲ ಬೇಕು, ನಮ್ಮ ದುಡಿಮೆ ಬೇಕು, ಆದ್ರೆ ನಮ್ಮ ನುಡಿಬೇಡ್ವಾ?

ಕರುಳು ಕಿವುಚ್ತದೆ, ಯಾವಾಗ ಕನ್ನಡನಾಡಿನ ಒಬ್ಬ ಪ್ರಧಾನಿ ಆದರೂ, ಅವನಿಗೆ ಹಿಂದಿ ಬರಲ್ಲ, ಅಂತ national media ಹೀಗಳೆದಾಗ. ಅವನಿಗೆ ಯಾಕೆ ಹಿಂದಿ ಬರಬೇಕು? ಅವನಿಗೆ ಯಾಕೆ ಇಂಗ್ಲೀಸ್ ಬರಬೇಕು? ನಾವು ಅವನಿಗೆ vote ಹಾಕಿತಾನೆ ಕಳಿಸಿದ್ದು? ನಮ್ಮ vote ಉತ್ತರ ಪ್ರದೇಶ, ಬಿಹಾರದೊರ ಓಟಿಗಿಂತ ಕೀಳೇ, ಕಡಮೆಯೇ?

ನಮ್ಮಾಳು ಲಾಲೂ ಮುಂತಾದವರಿಂತ ಯಾವುದರಲ್ಲಿ ಕಡಮೆ, ಇವರೇನು ಓದಿಲ್ವಾ? ಮಂದಿ ಮೆಚ್ಚು ಪಡೆದಿಲ್ವಾ? ಹಿಂದಿ ಬರದೇ ಇರೋದೇ ಒಂದು ಕೊರತೆಯಂತೆ ಉತ್ತರದ ಗದ್ದುಗೆಗೆ!!

ಈ ಎಲ್ಲ ಸಂಕಟದಿಂದಲೇ ಬೇತಾಳಯ್ಯ ನಾವು ಸುಮಾರು ೪೦-೫೦ ಮಂದಿ ಗೆಳೆಯರು ಸುಮಾರು ಏಡುಗಳಿಂದ ಈ ಯಾವ ಸ್ವತಂತ್ರ ದಿನಕ್ಕೂ, ಗಣತಂತ್ರ ದಿನಕ್ಕೂ ಸಂಭ್ರಮ ಪಡಲ್ಲ. ಇದು ನಮಗೆ ವಿಶೇಷವೂ ಅಲ್ಲ. ನಮ್ಮ ಸ್ವತಂತ್ರ ಶ್ರೀಮಂತ ಸುಸಂಸ್ಕೃತ ಮೈಸೂರು ಕನ್ನಡ ರಾಷ್ಟ್ರ ತನ್ನ ಸ್ವಾತಂತ್ರ್‍ಯ ಕಳೆದುಕೊಂಡ ದಿನ. [ ನಮ್ಮ ತಾತನಂತೋ ಪ್ರತೀ ಸ್ವತಂತ್ರದಿನಾಚರಣೆಯಂದೂ ಈ ಶಂಖ ಊದದೇ, ನಮ್ಮ ಮೈಸೂರು ಸಂಸ್ಥಾನ ಅಂತ ಕೊರಗದೇ ಇದ್ದದ್ದು ನೋಡಿಲ್ಲ ನಾನು ] ( ಈಗಿರುವ ಕರ್ನಾಟಕಪೂರ್ತಿ ಮೈಸೂರು ಕನ್ನಡ ದೇಶವೇ ಆಗಿತ್ತು, 1799ರಲ್ಗಿ ಬ್ರಿಟೀಶರು ನಮ್ಮ ಮೈಸೂರು ಕನ್ನಡ ರಾಷ್ಟ್ರವನ್ನು ಆಕ್ರಮಿಸಿ, ಟಿಪ್ಪಿವನ್ನು ಸೋಲಿಸಿ, ಮರಾಠರು, ನಿಜಾಮರು, ಮತ್ತು ಬ್ರಿಟೀಶರು ಹಂಚಿಕೊಂಡರು, ಏಕೀಕರಣದಿಂದ ಕನ್ನಡದೇಶಕ್ಕೆ ಯಾವ ಹೊಸ ಜಾಗ ಬರಲಿಲ್ಲ, ಕಳೆದು ಹೋದವು ಬಂದವಷ್ಟೇ )

ಇವೊತ್ತು ಏನ್ಗುರುನಲ್ಲೂ ಇದೇ ಬಂದೈತೆ( ನಾನು ಏನ್ಗುರುನಾಗೆ ಬರೆಯಲ್ಲ. ಇದು ದಿಟ ).

ಅದಕ್ಕೆ ನಾನು ಕೊಳಂಬೆಯವರ ಪದ್ಯವನ್ನು ಮಾರ್ಮಿಕವಾಗಿ ಹಾಕಿ ಸುಮ್ಮನಾದೆ. ನನಗೆ ಈ ಪೊಳ್ಳು, ಎರಡನೇ ದರ್ಜೆ ಪ್ರಜೆಪಟ್ಟಕ್ಕೆ , ನನ್ನ ನುಡಿಗೆ ಎರಡನೇ ದರ್ಜೆಯ ಪಟ್ಟಕ್ಕೆ ದುಃಖ, ಬೇಸರ, ಸಿಟ್ಟು, ರೋಸು ಎಲ್ಲವೂ ಇದೆ. ಆದರೆ ಈ ಪ್ರಜೆಪಟ್ಟ ಬೇಕಿಲ್ಲ ಅನ್ನಕ್ಕೆ ಆಗಲ್ಲ, ನಮ್ಮ ದೇಶ ಅಂತ ನಂಟು ಇದ್ದೇ ಇದೆಯಲ್ಲ.

ಆದ್ರೂ ನಮ್ಮ ದೇಶವನ್ನು ಬೈಯೋದು ತಪ್ಪು, ನಮ್ಮ ದೇಶಕ್ಕೆ ಮೋಸ ಮಾಡೋದು ತಪ್ಪು ಅಂತಲೂ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜಕೀಯ
  • ನನ್ನ ಕಾವ್ಯ
  • ಕನ್ನಡದಲ್ಲಿ ಸೈನ್ಸ್ ಫಿಕ್ಷನ್
  • "ವಿಧಿ"
  • "ಪ್ರೀತಿಯ ಗೆಳೆಯ"
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator