ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

ಮೂಡನಂಬಿಕೆ

May 24, 2007 - 8:13pm — betala

ಮೂಡನಂಬಿಕೆ
೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ .
೨. ನೀವು ಮನೆಯಿಂದ  ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .
೩. ಬೆಕ್ಕು ಅಡ್ಡ ಬಂದರೆ, ನಿಂ ಕೆಲಸ ಎಡವಟ್ಟು.
೪. ಎಡ (ಬಲ) ಗಣ್ಣು ರೆಪ್ಪೆ ಬಡಿದರೆ, ಏನೊ ಆಪತ್ತು.
೫. ನೀವು ಎನೋ ಯೋಚನೆ ಮಾಡ್ತ ಇರ್ ಬೇಕಾದ್ರೆ , ಹಲ್ಲಿ ಕೂಗಿದರೆ ಅದು ಸತ್ಯ.... ಖಚಿತವಾಗಿ ನಡಿಯುತ್ತೆ !!
೬. ನಾಯಿ ಅತ್ತರೆ, ಯಾರಾದ್ರು ನೆಗೆದು ಬಿದ್ದು ನೆಲ್ಲಿಕಾಯಿ ಆಗ್ತರೆ.
೭. ಬೆಳಿಗ್ಗೆ ಎಡಗಡೆ ಎದ್ದರೆ , ಏಟು ತಿಂತಿಯಾ

 

~.~
  • betala ರವರ ಬ್ಲಾಗ್
  • Login or register to post comments
  • 399 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 24, 2007 - 11:46pm — ASHOKKUMAR

ಉ: ಮೂಡನಂಬಿಕೆ

ASHOKKUMAR's picture

ಮೂಢ ನಂಬಿಕೆಗೆ ಪ್ರಚಾರವೇ? ಇದರಿಂದ ಲಾಭವಾಗುತ್ತದೆ ಎನ್ನುವ ಮೂಢನಂಬಿಕೆಯೂ ಇರಬಹುದು. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 12:20pm — Sunil Jayaprakash

ಉ: ಮೂಡನಂಬಿಕೆ

Sunil Jayaprakash's picture

ನನಗೆ ಮೇಲಿನ ೩ನೇ ಪಾಯಿಂಟು ಎಷ್ಟು ನಗು ತರಿಸುತ್ತೆ ಅಂದರೆ ಯಪ್ಪಾ, ನೀವು ಕೂಡ ತುಂಬಾ ನಗುತ್ತೀರಿ. ಕಟದ, ಕಟದ, ಕಟದ.

ನಾನು ಸಣ್ಣವನಿದ್ದಾಗ, ತಪ್ಪದೇ ಚಂದಮಾಮ ಓದುತ್ತಿದ್ದೆ. ಯಪ್ಪಾ ಅದೇನು ಹುಚ್ಚು ಅಂತೀರಿ. ಈಗಲೂ ಕೂಡ ಬೇರೆಊರಿಗೆ ಹೋಗಬೇಕಾದರೆ ನಮ್ಮ ಗುಂಪಿನಲ್ಲಿ ಯಾರಾದರೂ ಚಿಕ್ಕಮಕ್ಕಳಿದ್ದರೆ ಅವರಿಗೆ ಚಂದಮಾಮ ಕೊಡಿಸಿ ನಂತರ ನಾನೂ ಓದುತ್ತೇನೆ. ತುಂಬಾ ತುಂಬಾ ಹಿಂದೆ, ಬಹುಶಃ ೧೩-೧೪ ವರ್ಷಕ್ಕೂ ಹಿಂದೆ ಇರಬಹುದು ಮಹಾಭಾರತಕ್ಕೆ ನಂಟಾದ ಒಂದು ಕತೆಯನ್ನು ಓದಿದ್ದೆ ಅದರಲ್ಲಿ. ನನಗೆ ಸರಿಯಾಗಿ ನೆನಪಿಲ್ಲ. ಏನಾದರೂ ತಪ್ಪಿದ್ದರೆ ಸರಿಯಾದ ವರ್ಷನ್ ಹಾಕಿ. ಯಾರೋ ಸತ್ತಿರುತ್ತಾರೆ (ಕೃಷ್ಣ ಇರಬೇಕು). ಆಗ ನಕುಲ ಸಹದೇವರಿಗೆ ಹೆಣವನ್ನು ಕಾಯಲು ಹೇಳಿ ಮಿಕ್ಕ ಮೂವರು ಪಾಂಡವರು ಎಲ್ಲಿಗೋ ಹೋಗುತ್ತಾರೆ. ಆಗ ನಕುಲ ಮತ್ತು ಸಹದೇವ, ಕೃಷ್ಣನ ಕಿರುಬೆರಳನ್ನು ಕಿತ್ತು(ಅಥವಾ ಹೆಬ್ಬೆರಳೋ ಗೊತ್ತಿಲ್ಲ) ತಿಂದುಬಿಡುತ್ತಾರೆ. ಆ ಕಿರುಬೆರಳಲ್ಲಿ "ಮುಂದೇನಾಗುತ್ತದೆ ಎಂದು ತಿಳಿಯುವ ಶಕ್ತಿ" ಇರುತ್ತಂತೆ. ಆ ಕತೆಯಲ್ಲಿ ಒಂದು ಬೆಕ್ಕು ಬರುತ್ತೆ. ಕತೆಯಲ್ಲಿ ಇನ್ನೂ ಏನೇನೋ ಆಗುತ್ತೆ. ನನಗೆ ಸರಿಯಾಗಿ ನೆನಪಿಲ್ಲ. ಆದರೆ ಕತೆ ಹೀಗೆ ಕೊನೆಗೊಂಡಿತ್ತು. ದಾರಿಯಲ್ಲಿ ಎಲ್ಲಾದರೂ ಬೆಕ್ಕನ್ನು ಕಂಡರೆ, "ಮಂಗಳಂ ಕೃಷ್ಣ ಮಾರ್ಜಾಲಂ" ಎಂಬ ಮಹಾಮಂತ್ರವನ್ನು ಹೇಳಬೇಕು ಎಂಬುದಾಗಿ. ಇದಾವುದೋ ಸೂಪರ್ ಸುಪ್ರೀಂ ( Eye-wink ಸಿಲ್ಲಿ ಲಲ್ಲಿ ಪ್ರಭಾವ) ಮಂತ್ರ ಅಂತ ತಿಳಿದಿದ್ದೆ. ಈ ಸಾಲು ಎಷ್ಟು ಅಚ್ಚುಒತ್ತಿತ್ತು ಎಂದರೆ ನೋಡಿ, ಈಗಲೂ ಕತೆ ನೆನಪಿನಲ್ಲಿದಿದ್ದರೂ ಈ ಕೊನೆಯ ಮಾತು ನೆನಪಿದೆ. ಮುಂದೆ ಎಷ್ಟೋ ವರ್ಷಗಳಾದ ಮೇಲೆ ಹೈಸ್ಕೂಲಿನಲ್ಲಿ, ಇದರ ಅರ್ಥ ತಿಳಿದ ಮೇಲೆ, ಹಾಯ್, ಇಷ್ಟೇನಾ ಇದು ಅನಿಸುತ್ತು.

ನೋಡಿ ಆ ಮಂತ್ರ, ಮಂಗಳಂ - ಒಳ್ಳೆಯದು, ಕೃಷ್ಣ - ಕಪ್ಪು, ಮಾರ್ಜಾಲಂ - ಬೆಕ್ಕು.

ಇದಾಗಿ ಹಲವು ವರ್ಷಗಳ ನಂತರ, ಒಮ್ಮೆ ನಾನು ಮತ್ತು ನಮ್ಮ ಮಾವ ಎಲ್ಲಿಗೋ ಹೋಗುತ್ತಿದ್ದಾಗ, ಒಂದು ಬೆಕ್ಕು ಅಡ್ಡಬರಲಾಗಿ ಅವರು ಏನುಮಾಡುವುದೆಂದು ಪರಿತಪಿಸುತ್ತಿದ್ದಾಗ, ಅವರಿಗೆ "ಕಪ್ಪು ಬೆಕ್ಕು ಒಳ್ಳೆಯದು" ಅಂತ ಅಂದುಕೊಂಡು ಮುಂದೆ ನಡೀರಿ ಎಂದೆ. ಆದರೆ ಅವರಿಗೆ ಸಮಸ್ಯೆ ಪರಿಹಾರವಾಗಲೇ ಇಲ್ಲ. "ತಲೆಹರಟೆ, ಮನೆಗೆ ವಾಪಸ್ ಹೋಗಿ ಅಥವಾ ಇಲ್ಲಿಯೇ ಎಲ್ಲಿಯಾದರೂ ಕೂತ ಹಾಗೆ ಮಾಡಿ ಮುಂದೆಹೋಗೋಣ" ಎಂದರು. ಆಗ ನಾನು, ನಮ್ಮ ಮಾವನಿಗೆ, ನಾನು ಹಿಂದೆ ಮಂತ್ರವೊಂದನ್ನು ಓದಿರುವುದಾಗಿಯೂ, ಬೆಕ್ಕು ಅಡ್ಡಬಂದಾಗ ಇದನ್ನು ಹೇಳಬೇಕೆಂದೂ, ಅವರಿಗೆ "ಮಂಗಳಂ ಕೃಷ್ಣ ಮಾರ್ಜಾಲಂ" ಹೇಳಿಕೊಟ್ಟೆ. ಆಗ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ತುಂಬಾ ಸಂತೋಷಗೊಂಡು ಎಲ್ಲಿಯೂ ನಿಲ್ಲದೆ ಮುಂದುವರಿದೆವು.

ನೋಡಿ, ಸಂಸ್ಕೃತದಲ್ಲಿ "ಮಂಗಳಂ ಕೃಷ್ಣ ಮಾರ್ಜಾಲಂ" ಎಂದರೆ ದಿವ್ಯವಾದ ಮಂತ್ರ, ಕನ್ನಡದಲ್ಲಿ ಅದನ್ನೇ "ಕಪ್ಪು ಬೆಕ್ಕು ಒಳ್ಳೆಯದು" ಎಂದು ಹೇಳಿದರೆ ತಲೆಹರಟೆ Laughing out loud ನನಗಂತೂ ಕಟದ ನಗು ಬರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 1:48pm — veena

ಉ: ಮೂಡನಂಬಿಕೆ

veena's picture

veena.

ಬೆಕ್ಕು ಕಪ್ಪಗಿದ್ದರೆ ನೀವು ಹೇಳಿದ್ದು ಸರಿ, ಆದರೆ ಬೆಕ್ಕು ಬಿಳಿ ಅಥವಾ ಕೆಂಬಣ್ಣದ್ದಾಗಿದ್ದರೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 2:14pm — mahesha

ಉ: ಮೂಡನಂಬಿಕೆ

mahesha's picture

ಆಗ ಅದು ಅರ್ದಂಬರ್ದ ಅಪಸಕುನ.... Smiling ಅದನ್ನು ಬೇಕಾದರೆ round up ಮಾಡ್ಕೋಬೋದು, ಇಲ್ಲ ಬಿಡಬೋದು Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 2:43pm — Sunil Jayaprakash

ಉ: ಮೂಡನಂಬಿಕೆ

Sunil Jayaprakash's picture

ತುಂಬಾ ಸಿಂಪಲ್, "ಬಿಳಿ ಬೆಕ್ಕು ಒಳ್ಳೆಯದು", "ಕಂದು ಬೆಕ್ಕು ಒಳ್ಳೆಯದು". ಹಾಗೆಯೇ "ಬೂದಿ ಗೂಬೆ ಒಳ್ಳೆಯದು", "ಕಪ್ಪು ಕಾಗೆ ಒಳ್ಳೆಯದು", "ಒಂಟಿ ಸೀನು ಒಳ್ಳೆಯದು" @#@!@#!@#@!#

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 2:38pm — mahesha

ಉ: ಮೂಡನಂಬಿಕೆ

mahesha's picture

ಹಾಗೇ ಈ ಮಂತ್ರ ಕೇಳಿದ್ದೀಯಾ?

"ಊಧ್ವಾತ್ ಖಗಪಾತಿತಂ ಮಹಾಶ್ರೇಯಂ" Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 1:54pm — ಸಂಗನಗೌಡ

ಉ: ಮೂಡನಂಬಿಕೆ

ಸಂಗನಗೌಡ's picture

ಇನ್ನೂ ಕೆಲವು ಕುರುಡು ನಂಬಿಕೆಗಳು,

೧) ಹೊರಗಡೆ ಹೊರಟಾಗ ತುಂಬಿದ ಕೊಡ ಬಂದರೆ, ಹೊಂಟ ಕೆಲಸ ಗ್ಯಾರಂಟಿ ಸಕ್ಸಸ್.
೨) ಹಾಗೆ, ನಮಗೆ ಕಾಣುವ ಮೊದಲ ಕಾಗೆ, ಬಲಕ್ಕೆ ಹೋದರೆ ಕೆಲಸ ಆಗುತ್ತೆ, ಎಡಕ್ಕೆ ಹೋದರೆ ಆಗಲ್ಲ.
೩) ಮನೆಯಲ್ಲಿ ಬೆಕ್ಕುಗಳು ಜಗಳವಾಡಿದರೆ, ಮನೆಯಲ್ಲಿ ಜಗಳ ಆಗುತ್ತೆ.
೪) ಮನೆ ಮೇಲೆ ಕಾಗೆ ಕಾವ್ ಕಾವ್ ಅಂದರೆ, ನೆಂಟರು ಬರ್ತಾರೆ.
೫) ಮನೆಯ ಹೊರಸಲಿನ ಮೇಲೆ ಸೀನಬಾರದು.
೬) ನೀರು ನೆತ್ತಿಗೇರಿದರೆ ಯಾರಾದ್ರು ನಮ್ಮನ್ನು ನೆನೆಸ್ಕೊತಿರುತ್ತಾರೆ.
೭) ಹೊರಗಡೆ ಹೊಂಟಾಗ ಮುತ್ತೈದೆ ಎದುರು ಬಂದರೆ ಒಳ್ಳೇದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 2:15pm — mahesha

ಉ: ಮೂಡನಂಬಿಕೆ

mahesha's picture

ನಮ್ಗೇನೋ ಹೊರಗಡೆ ಹೊಂಟಾಗ ಸಕ್ಕತ್ ಹುಡುಗಿ ಅಲ್ಲ ಬೆಡಗಿ ಬಂದ್ರೆ ಒಳ್ಳೇದು Smiling

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಕ್ಷರಗಳಿಂದ ದೂರ
  • ನೀನಿಲ್ಲದೆ...
  • ’ಸಿನಿಮಾ ಇನ್ನೂ ಮುಗಿದಿಲ್ಲ !’
  • IT - ಸಿಂಪ್ಟಮ್ಸ
  • ಮನಸ್ಸು
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator