ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ವಿಧಿ(fate)) ಅನ್ದ್ರೆ ಯಾರು ?
ವಿಧಿ(fate)) ಅನ್ದ್ರೆ ಯಾರು ?
ಈ ವಿಧಿ ಅನ್ದ್ರೆ ಯಾರು ? ನಾವು ಏನೋ ಅಂದುಕೊಳ್ಳುತ್ತಿವಿ, ಇನ್ನೊಂದು ಆಗುತ್ತೆ ? ಆಗ ಬರೊ ಕಾಮೆಂಟುಗಳು .....
೧. ಎಲ್ಲ ವಿಧಿ ಆಟನಪ್ಪ ಅಂತಾರೆ !!!
೨. ತಾನೊಂದು ಬಗೆದರೆ, ದೈವವೊಂದು ಬಗೆಯುವುದು ?
೩. ಎಲ್ಲ ವಿಧಿ ನಿಯಮ ?
ಈ ರೀತಿ ಅನ್ನಿಸೋಕೆ ಕಾರಣವೇನು ? ನಮ್ಮಲ್ಲಿ ಕಾಂಫ಼ಿಡೆನ್ಸ ಇಲ್ಲದಿರುವುದೇ ? ಅಥ್ವ ಪ್ಲಾನಿಂಗ್ ಇಲ್ಲದಿರುವುದೇ ? ಅಥ್ವ ಮುಂದೇನು ಅನ್ನೊದನ visualize ಮಾಡೋಕೆ ಬರದಿರುವುದೆ ? ಅಥ್ವ ಗುರಿಇಲ್ಲದ ಜೀವನ ನಡಿಸುವುದೇ ?
ನಿಮ್ಗೆ ಏನು ಅನ್ಸುತ್ತೆ ?

- betala ರವರ ಬ್ಲಾಗ್
- Login or register to post comments
- 424 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ವಿಧಿ(fate)) ಅನ್ದ್ರೆ ಯಾರು ?
ಜೀವನಕ್ಕೆ ಗುರಿ ಯಿರೋದು ಅ೦ದರೇನು ? ಜೀವನ ಅನ೦ತವಾದದ್ದು , ಅಲ್ಲಿ ನಾವೆಲ್ಲಾ ಕುರಿ ಮರಿಗಳ೦ತೆ ಬಾಳುತಿರುವವರು.
ಮೊನ್ನೆ ಹಿ೦ದೂ ನಲ್ಲಿ ಒ೦ದು ಲೇಖನ ಬರೆದಿದ್ದೆ. ಅಲ್ಲಿ ನನ್ನ ಅಸಹಾಯಕತೆಯನ್ನು ತೋಡಿದ್ದೇನೆ.
http://www.hindu.com/mp/2007/05/29/stories/2007052950390400.htm
ಇ೦ತಹ ಪರಿಸ್ಥಿತಿಯಲ್ಲಿ ನಾವು "ಎಲ್ಲಾ ಕಾಲದ ಮಹಿಮೆ ಅನ್ನುವುದು." ನಮ್ಮ ಕೈಯಲ್ಲಿ ಏನೂ ಆಗೋದಿಲ್ಲಾ ಅನ್ನುವ ಭಾವ ಮತ್ತು ಪರಿಸ್ಥಿತಿ ಬ೦ದಾಗ ವಿಧಿ ವಶರಾಗುವೆವು. ಇದಕ್ಕೆ ಕಾರಣ ಯಾವುದು ಅ೦ದರೆ ನಮ್ಮನ್ನು ನಾವು ಯಾರು ಎ೦ದು ತಿಳಿಯದರ ಫಲವಾಗಿ "Fate and Destiny " ಬಗ್ಗೆ ಚರ್ಚೆ ಮಾಡ್ತೀವಿ. ನಮ್ಮನ್ನು ನಾವು ತಿಳಿದರೆ "Fate and Destiny " ಎರಡನ್ನು ಮೀರುವವರಾಗ್ತೀವಿ - ರಮಣ ಮಹರ್ಷಿ. ಮಹರ್ಷಿಗಳು ಇದರ ಬಗ್ಗೆ ಒ೦ದು ಒಳ್ಳೆ ಚರ್ಚೆ ಮಾಡಿದ್ದಾರೆ. ಯಾವಾಗಾದರೂ ಟೈಪ್ ಮಾಡ್ತೀನಿ.
ಉ: ವಿಧಿ(fate)) ಅನ್ದ್ರೆ ಯಾರು ?
ಕನ್ನಡಿಗರಿಗೆ ವಿಧಿ ಎಲ್ಲಿಹುದು ಅಂತ ಅ.ರಾ.ಸೇ ಉದ್ಗರಿಸಿದ್ದಾರೆ !
...
..
..
ನಮ್ಮ ಪಾಲಿಗೆ ಬಿದ :)ಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ವಿಧಿ(fate)) ಅನ್ದ್ರೆ ಯಾರು ?
ಬಿದಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ವಿಧಿ(fate)) ಅನ್ದ್ರೆ ಯಾರು ?
ಹೌದಾಲ್ವಾ.... ಪುರಾಣಗಳಲ್ಲಿ ಈ ವಿಧಿ ಯ ಪಾತ್ರ ವೇನು? ಈ ವಿಧಿ ಪೌರಾಣಿಕ ವ್ಯಕ್ತಿಯೇ?
ನಾವು ವಿಧಿ-ವಿಧಾನ ಅಂತ ಬಳಸುತ್ತೇವೆ. ಇವೆರಡರ ಸಂಬಂದ science ಮತ್ತು technology ಪದಗಳಿಗಿರುವ ಸಂಬಂಧದ ರೀತಿಯೇ ಇದೆ.
ಈ ವಿಧಿ ಪದಕ್ಕೂ "ವಿದ್" ಎಂಬ ಧಾತುವಿಗೂ ಏನು ಸಂಬಂಧ ? ಸಕ್ಕದ ವನ್ನು ಚೆನ್ನಾಗಿ ತಿಳಿದವರು ದಯವಿಟ್ಟು ಬರೆಯಿರಿ.
ವಿಧಿ = ಸರ್ವಜ್ಞ ( ಪರಮಾತ್ಮನ ಒಂದು ಗುಣ) ಅಂತ ಅಂದುಕೋಬಹುದೆ?
ಕೆಲವೊಮ್ಮೆ ಅದರ ಕೆಲಸ ಬ್ರಹ್ಮನ ಕೆಲಸಕ್ಕೆ ಸಮಾನವಾಗಿ ಬಳಕೆಯಾಗಿದೆ. ಕೆಲವೊಮ್ಮೆ ಅದು "ಪರಮಾತ್ಮ" ( highest God) ಅನ್ನುವ ರೀತಿಯಲ್ಲಿ ಬಳಕೆಯಾಗಿದೆ.
ಅತ್ವ ಈ ವಿಧಿ ಯಾವುದೋ ಕಾಣೆಯಾದ / ಈಗಿರುವ ಮತಗಳೊಳಗೆ ವಿಲೀನವಾದ ಒಂದು ಮಾರ್ಗದ / ಮತದ ದೈವವೋ? ಕೆಲವೊಮ್ಮೆ ಈ ವಿಧಿ ಅತಿ ದೊಡ್ಡ ದೈವಗಳಾದ ಬ್ರಹ್ಮ , ವಿಷ್ಣು , ಮಹೇಶರಿಗೆ ಸಮಾನವಾಗಿ, ಬಳಕೆಯಾಗಿದೆ. ಕೆಲವೊಮ್ಮೆ ಈ ವಿಧಿ ಈ ಮೂವರ ಅಣತಿಯನ್ತೆ ( ಹೆಚ್ಚು ಕಡಿಮೆ ಬ್ರಹ್ಮನ ರೀತಿ!) ಕೆಲಸ ಮಾಡುವವನನ್ತೆ ವರ್ಣನೆಯಾಗಿದೆ.
ಉ: ವಿಧಿ(fate)) ಅನ್ದ್ರೆ ಯಾರು ?
ಯಂ ಶೈವಾ: ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನ:
ಬೌದ್ದ್ದಾಃ ಬುದ್ಧ ಇತಿ ಪ್ರಮಾಣಪಟವ: ಕರ್ತೇತಿ ನೈಯಾಯಿಕಾಃ
ಅರ್ಹನ್ ಇತ್ಯಥ ಜೈನಶಾಸನ ರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ವಿಭು:
ಈ ಶ್ಲೋಕದ ರೀತಿಯೇ .. ಯಾವ ಮತ ( ಮೂಲದಲ್ಲಿ) ಕ್ಕೆ ವಿಧಿ highest God? ...
ನನಗೆ ಗೊತ್ತಿಲ್ಲ. ನಾನು ತಿಳಿದುಕೊಳ್ಳಬೇಕೆನ್ದು ಬರೆದೀದ್ದೇನೆ. ಯಾರೂ ತಪ್ಪಾಗಿ ಅರ್ಥ ಮಡಿಕೊಳ್ಳಲ್ಲ ಅಂತ ಅಂದುಕೊಂಡಿದ್ದೇನೆ.