ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ ...
ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ ಯಾವ ಕೀ-ಬೋರ್ಡ್ ಲೇ-ಔಟ್ ಅಥವಾ ಯಾವ transliteration ಸಾಫ್ಟ್-ವೇರ್ ಸೂಕ್ತ?
ಉದಾ: ನಿಕೊಲಾಸ್ ಶ್ಯಾಂಕ್ಸ್-ನ ಕೀ-ಬೋರ್ಡ್ ಲೇ-ಔಟ್ (Mac OS X/ KGP) ಉಪಯೋಗಿಸಿದರೆ 'teekshNa'-ವು ಈ ರೀತಿಯಲ್ಲಿ ಕುಟ್ಟಲ್ಪಡುತ್ತದೆ: ತೀಕ್ಷ್ಣ , (samskrutha) ಸಂಸ್ಕೃತ, .. ಇತ್ಯಾದಿ. ನಿರ್ದಿಷ್ಟವಾಗಿ, ಈ ಪದಗಳು ಚೆನ್ನಾಗಿ ಮೂಡಿಬಂದಿಲ್ಲ.
ಹೀಗೆ ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ (ಕುಟ್ಟುವ) ಯಾವ ವಿಧಾನವನ್ನು ಉಪಯೋಗಿಸಬೇಕು?

- bhatpp ರವರ ಬ್ಲಾಗ್
- Login or register to post comments
- 551 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಒತ್ತಕ್ಷರದ ಸಮಸ್ಯೆ
ಈ ಸಮಸ್ಯೆಯಿಂದಲೆ ಮಲಯಾಳದ ಹೊಸ ಬರೆವಣಿಗೆ ರೂಪುಗೊಂಡಿತು.
ಅದರಲ್ಲಿ ಈಗ, ಕನ್ನಡ ರೀತ್ಯಾ ಒಂದು ಅಕ್ಷರದ ಕೆಳಗೆ ಮತ್ತೊಂದು ಅಕ್ಷರವನ್ನು ಬರೆದು ಸಂಯುಕ್ತಾಕ್ಷರವನ್ನು ಮಾಡುವ ಬದಲು ತಮಿಳಿನ ಹಾಗೆ ಅರ್ಧಾಕ್ಷರವನ್ನು ಪಕ್ಕದಲ್ಲಿ ಬರೆದು ಸಂಯುಕ್ತಾಕ್ಷರವನ್ನು ಮಾಡುವರು. ಉದಾ: ಭಟ್ಟ = ಭಟ್ ಟ
ಆದರೆ ಮಲಯಾಳದ ಅಕ್ಷರಗಳು, ಕನ್ನಡಾಕ್ಷರಗಳಿಗಿಂತ ವಿಭಿನ್ನವು, ಕ್ಲಿಷ್ಟವಾಗಿವೆ.
ಅಲ್ಲದೆ ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒತ್ತಕ್ಷರಗಳಿರುವ ಪದಗಳು ಬಹಳ ವಿರಳವಾದವು.
ಇದಕ್ಕೆ ಪರಿಹಾರವೆಂದರೆ ಅಕ್ಷರಚಿತ್ರಿಕೆಯನ್ನು(Renderer, ಅಕ್ಷರವನ್ನು ಚಿತ್ರಿಸುವುವುದು) ಸರಿಪಡಿಸುವುದು. ನಾವೆಲ್ಲರು ಸೇರಿ ಸೂಕ್ಷ್ಮತಂತ್ರ(Microsoft)ಕ್ಕೆ
ಬರೆಯಬಹುದು.
ಮಧ್ಯಮ ಮಾರ್ಗ
ಮಲೆಯಾಳದ ಹೊಸ ಬರೆವಣಿಗೆ ರೂಪುಗೊಂಡದ್ದಕ್ಕೆ ಟೈಪ್ ರೈಟರ್ ನ ಒತ್ತಡವಿತ್ತು. ಕನ್ನಡ ಟೈಪ್ ರೈಟರ್ ನ ಒತ್ತಡವನ್ನು ಹೇಗೋ ನಿವಾರಿಸಿಕೊಂಡಿತು. ಇಲ್ಲಿ ಇನ್ನೊಂದು ವಿಷಯವೂ ಇದೆ. ಕನ್ನಡವನ್ನು ಬಳಸುವವರು ತಮಿಳಿನವರಷ್ಟು ಗಟ್ಟಿಗರೂ ಅಲ್ಲ. ಮಲೆಯಾಳಿಗಳಂತೆ ಕ್ಷಿಪ್ರ ಬದಲಾವಣೆಗಳಿಗೆ ಸಿದ್ಧರಾಗಿರುವವರೂ ಅಲ್ಲ. ವಾಸ್ತವದಲ್ಲಿ ಇದು ಒಂದು ಧನಾತ್ಮಕ ಗುಣವಾಗಿರಬೇಕಿತ್ತು. ದುರಂತವೆಂದರೆ ಈ ಮಧ್ಯಮ ಮಾರ್ಗವೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗಿದೆ.
ವೈತಸಿ ವೃತ್ತಿ
ಮೇಲಿನ ತರಹದ ಮಾತುಗಳನ್ನು ಕೇಳಿದರೆ ನನಗೆ "ರಘು ವಂಶ"ದ ಒಂದು ನುಡಿಗಟ್ಟು ನೆನಪಿಗೆ ಬರುವುದು. ಅದು "ವೈತಸಿವೃತ್ತಿ"ಯೆಂದು. ಅಂದರೆ ರಭಸವಾಗಿ ಹರಿಯುವ ನದಿಯಲ್ಲಿ ಬೆಳೆದ ಜೊಂಡು ಹುಲ್ಲು ಬೇರಿನಿಂದ ಬಲವಾಗಿದ್ದರು, ನದಿಯ ರಭಸಕ್ಕೆ ಅಡ್ಡಮಾಡದೆ ಬಳುಕುತ್ತಾ ಇರುವುದು. ಹೇಗೆ ಅದು ನದಿಗೆ ವಿರುದ್ಧವಾಗಿಯೂ ಇರದೆ, ಅಥವಾ ನದಿಯ ರಭಸಕ್ಕೆ ಕೊಚ್ಚಿಹೋಗದೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು.
ಉ: ವೈತಸಿ ವೃತ್ತಿ
ಚೆನ್ನಾಗಿದೆ ನೀವು ಕೊಟ್ಟ ಉದಾಹರಣೆ. ಇದು ಕಾಳಿದಾಸನ ರಘುವಂಶವೆ?
ಕಾಳಿದಾಸನ ರಘು ವಂಶ
ಹೌದು. ಇದನ್ನು ನಾನು ಮೊದಲನೆಯ ಪದವಿ ಪೂರ್‍ವ ತರಗತಿಯಲ್ಲಿ ಓದಿದ್ದು.