24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಕ್ಕಳೇ ನಿಮಗೆ ಈ ಹಾಡು

January 21, 2009 - 12:40pm
bhavanilokesh mandya
ಬಾರೋ ಅಣ್ಣ ನೋಡಿ ಬರೋಣ ಕನಸಲ್ ತಾರಾಲೋಕ ಚಂದಮಾಮ ಸೂರ್ಯನ್ ಹಾಗೆ ಇರೋಲ್ವಂತೆ ಶಾಖ ಬಾರೋ ಅಣ್ಣ ಹತ್ತಿ ಬಿಡೋಣ ಬಿಳಿಬಿಳಿ ಚಂದ್ರನ್ ಮೇಲೆ ಅಲ್ಲೇ ನಿಂತು ನೋಡೋಣಂತೆ ಕಾಣ್ಸುತ್ತೆ ನಮ್ ಶಾಲೆ ಬಾರೋ ಅಣ್ಣ ಮುಟ್ಟಿ ಬರೋಣ ಮಿನು ಮಿನುಗೋ ನಕ್ಷತ್ರ ಟಾಮ್ ಅಂಡ್ ಜೆರ್ರಿ ಕತೆ ಹೇಳ್ಕೊಂಡು ನಗ್ಬೇಕ್ ಅವುಗಳ ಹತ್ರ ಅರ್ಧ ಚಂದ್ರನ್ ಮೇಲಾಡೋಣ ಜಾರೋ ಬಂಡೆ ಜಾರಿ ಆಡ್ತಾ ಆಡ್ತಾ ಬೀಳಿಸ್ಬಿಟ್ರೆ ಹೊಡಿಬೇಡಣ್ಣ ಸಾರಿ ಎಚ್ಚರಾಗೋಯ್ತು ಕಣ್ ಬಿಟ್ಬಿಟ್ಟೆ ಎದುರಿಗೆ ಅಮ್ಮಾ ಇದ್ಲು ಹೇಳ್ತಾ ಇದ್ಲು ಸ್ಕೂಲ್ ಹೊತ್ತಾಯ್ತು ಏಳೇ ಕಂದಾ ಮೊದ್ಲು. ( ಹೇಗಿದೆ ಪುಟ್ಟ ಪುಟ್ಟಾಣಿ ಪದ್ಯ ?)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Shribgm on
ಚೆನ್ನಾಗಿದೆರಿ.....! ಪತ್ರಿಕೆಗಳಲ್ಲೂ ಇದನ್ನು ಪ್ರಕಟಿಸಲು ಪ್ರಯತ್ನಿಸಿ...... ISRO ದವರಿಂದ ಚಂದ್ರನ ಮೇಲೆ ಶಾಲೆ ಕಟ್ಟೊ ದಿನ ದೂರ ಇಲ್ಲಾ ಹೀಗಾಗಿ ಚಂದ್ರನಲ್ಲೇ ಶಾಲೆಗೆ ಹೋಗ್ಬೌದು...... ಏನಂತಿರಿ :) ಶ್ರೀನಿವಾಸ www.compuinkannada.c...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಧನ್ಯವಾದಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by msudan86 on
ಚೆನ್ನಾಗಿದೆ ಹಾಗೆ ಬರೆಯುತ್ತಾ ಇರಿ ಭವಾನಿಯವರೆ ನಿಮ್ಮವ ಮಧುಸೂದನ್ ಗೌಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಧನ್ಯವಾದ ಕಣ್ರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಛೆ ............! ಕನಸೇನ್ರಿ ನಾನು ನಿಜಕ್ಕೂ ಹಾಗೆ ಆಡ್ತಾ ಹಾಡ್ತಾಯಿದ್ದಿದ್ರೆ ಎಷ್ಟು ಚೆನ್ನಾಗಿತ್ತು ಅಲ್ವಾ. :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಛೇ ! ಮೊದ್ಲೆ ಗೊತ್ತಿದ್ರೆ ಅದು ಕನಸಲ್ಲ ಅಂತ ಬರೀತಿದ್ದೆ.

Submitted by rasikathe on
ಚೆನ್ನಾಗಿದೆ, ಕವನ. ನಾನೂ ಒಂದು ಚಂದ್ರನ ಮೇಲೆ ಬರೆದಿದ್ದಿದೆ. ಸಾಧ್ಯವಾದಾಗ ಹಾಕುತ್ತೀನಿ. ~ಮೀನಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಖಂಡಿತಾ ಹಾಕಿ ಮೀನಾ ಮೇಡಂ.. ನಾನೂ ಸಾಕಷ್ಟು ಕವನಗಳನ್ನ ಚಂದ್ರನ ಬಗ್ಗೆ ಬರೆದಿದ್ದೇನೆ.ಅದೆಲ್ಲಾ ನನ್ನ ಕವನ ಸಂಕಲನದಲ್ಲಿ ಹಾಕಿದೀನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಭವಾನಿ ಲೋಕೇಶ್, ಅರ್ಧ ಚಂದ್ರನ ಮೇಲೆ ಜಾರೋಬಂಡಿ ಆಟ.. ನಿಮ್ಮ ಕನಸು,ಕವನ ಚೆನ್ನಾಗಿದೆ. ಮೀನಾ ಮೇಡಂ- ಚಂದ್ರನ ಮೇಲೆ ಬರೆದ ಮೊದಲ ಮಹಿಳೆ :) ತಮಾಷೆಗೆ, ಸಿಟ್ಟಾಗಬೇಡಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಕೋಪ ಬರೋ ಮಾತಿಗೆ ಸಿಟ್ಯಾಕೆ ಬಿಡಿ ಗಣೇಶ, :) ಇದೂ ತಮಾಷೆಗೆ! ಹಹ್ಹಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on
ಗಣೇಶ್ ಮತ್ತು ಭವಾನಿಯವರೆ, ನಗುವು ಸಹಜದ ಧರ್ಮ, (ಸಿಟ್ಟು ಅಸಹಜದ ಕರ್ಮ) ನಗಿಸುವುದು ಗಣೇಶರ ಧರ್ಮ ನಗುವ ಕೇಳುತ ನಗುತಲಿರುವುದು ಅತಿಶಯದ ಕಾಂಟೇಜಿಯಸ್ ಧರ್ಮ ನಗುತ, ನಗಿಸುತ, ಎಲ್ಲರೊಳು ಲಾಫಿಂಗ್ ಗ್ಯಾಸ್ ಹಾಕುವುದು ಹಾಸ್ಯಬ್ರಹ್ಮನ ಧರ್ಮ, ಕರ್ಮವೂ ಹೌದೋ ಮಂಕುತಿಮ್ಮಾ! ~ಧನ್ಯವಾದ, ಮೀನಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಮೀನಾ ಮೇಡಂ, ನಗುವ ನಗಿಸುವದದುವೆ ಕಲೆಯು ಇರದು ಎಲ್ಲರ ಬಳಿಯಲು ನಗುವೆ ಸಾಧನ , ನಗುವೆ ಜೀವನ ಎಲ್ಲ ದುಃಖವ ಕಳೆಯಲು :) ಯಾವತ್ತೋ ಬರ್ದಿದ್ದು ನಿಮ್ಮಿಂದ ನೆನಪಾಯ್ತು. ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಡಾಕ್ಟ್ರೇ, >>>ನಗಿಸುವುದು ಧರ್ಮ-ಕಾಂಟೇಜಿಯಸ್ ಧರ್ಮ ಈ ಧರ್ಮ,ಕರ್ಮ ಶಬ್ದ ಉಪಯೋಗಿಸುವುದು ಡೇಂಜರ್ -ಗೊತ್ತಿಲ್ವಾ ಮೇಡಂ. ಮಂಕುತಿಮ್ಮಾ ಓ.ಕೆ. ಎಲ್ಲರನ್ನು ಭಯಬೀಳಿಸುವಂತಹ ಒಂದು ಹಾರರ್ ಕತೆ ಬರೆಯಬೇಕೆಂದಿದ್ದೆ. ಡಾಕ್ಟ್ರು ಹೇಳಿದ ನಿಯಮ ಪಾಲಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತಾರೆ. ಹಾರರ್ ಕತೆ ಬಿಟ್ಟು ಮಂಗಳನ ಮೇಲೆ ಕವನ ಬರೆಯಲು ಹೊರಟಿದ್ದೇನೆ. ಓವರ್ ಟು ಇಸ್ರೋ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ತುಂಬಾ ಚೆನ್ನಾಗಿದೆ. ಇಂತದೇ ಪದ್ಯಗಳನ್ನು ಬರೆಯಿರಿ. ಮಕ್ಕಳು ಹಾಡುತ್ತಾ ನಲಿಯಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಧನ್ಯವಾದಗಳು ಶ್ರೀಧರ್ ರವರೇ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.