ಲೇಖನ: ಕಿಲಾರದ ಕಿಲಾಡಿ ಜಲಯೋಧರು
೬ ಋತುಗಳು ಮತ್ತು ೧೨ ಮಾಸಗಳ ವಿವರ
೬ ಋತುಗಳು ಮತ್ತು ೧೨ ಮಾಸಗಳ ವಿವರ
೧. ವಸಂತ - ಚೈತ್ರ - ವೈಶಾಖ
೨. ಗ್ರೀಷ್ಮ - ಜ್ಯೇಷ್ಠ - ಆಷಾಢ
೩. ವರ್ಷ - ಶ್ರಾವಣ - ಭಾದ್ರಪದ
೪. ಶರತ್ - ಆಶ್ವಯುಜ - ಕಾರ್ತೀಕ
೫. ಹೇಮಂತ - ಮಾರ್ಗಶಿರ - ಪುಷ್ಯ
೬. ಶಿಶಿರ - ಮಾಘ - ಫಾಲ್ಗುಣ

- bhcsb ರವರ ಬ್ಲಾಗ್
- Login or register to post comments
- 539 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ನಮ್ಮನೆಲಕ್ಕೆ ಹೊಂದದ: ೬ ಋತುಗಳು
ಈ ಆರು ರುತುಗಳು ನಮ್ಮ ತೆಂಕಲು ನಾಡುಗಳಿಗೆ ಹೊಂದುವುದಿಲ್ಲ.
ಈ ಆರು ರುತುಗಳು ಪೂರ ನಿಕ್ಕುವ-ತಿಳಿಯಾಗಿ, ಬರಿ ಬಡಗಣ( ವಿಂದ್ಯೆಯಿಂದ ಬಡಗು ) ನೆಲದಲ್ಲಿ ಕಾಣವುವು.
ನಮ್ಮ ನಾಡಿನಲ್ಲಿ ( ನಾವು ಹಬೆ-ಮಳೆ-ಚಳಿಗಳನ್ನು ಪಡುವಂತೆ )
ಬೇಸಿಗೆಗಾಲ - ಚೈತ್ರ ವೈಶಾಖ ( ವೈಶಾಖ => ಬೇಸಿಗೆ ಅಂತೆ, ಇದು ತಪ್ಪು ಅಂತವೂ ಇದೆ ). ಅದಕ್ಕೆ ರಾಮನವಮಿಯಂದು ಪಾನಕಪೂಜೆ.
ಮಳೆಗಾಲವು "ಜೇಷ್ಠ"ಕ್ಕೆ ಮಳೆ ಸುರು. ಮಳೆ ದೀವಳಿಗೆ ( ಕಾರ್ತಿಕ ) ವರೆಗೂ ಬರುವುದು . ( ಮುಂಗಾರು, ಮಳೆ, ಹಿಂಗಾರು).
ಆದರೆ ಬಡಗಣದಲ್ಲಿ ಮಳೆ ಇನ್ನೂ ಮೆಲ್ಲಗೆ ಸುರುವಾಗುವುದು. ಮಾನ್ಸೂನ್ ಮೊದಲು ನಮಗೆ, ಬಳಿಕ ಅವರಿಗೆ. ನಮ್ಮಲ್ಲಿ ಬಡಗಿಗಿಂತ ಮಳೆಗಾಲ ಉದ್ದ.
ಚಳಿಗಾಲವು "ಕಾರ್ತಿಕದ ಕೊನೆ/ಮೃಗಶಿರ ತುದಿ"ದಿಂದ "ಶಿವರಾತ್ರಿ"( ಮಾಘ )ದ ವರೆಗೆ. ಇವೊತ್ತಿಗೂ ನಾವು ಶಿವರಾತ್ರಿಯೇ ಚಳಿಗಾಲದ ಕೊನೆಯ ಹಗಲೆಂದು ನಂಬಿರುವುದು.
ಒಟ್ಟಿನಲ್ಲಿ ಈ ಆರು ರುತುಗಳನ್ನು ನಮ್ಮ ತೆಂಕಣ ನೆಲವನ್ನು ಗುರಿ ಇಟ್ಟುಕೊಂಡು ಮಾಡಿಲ್ಲ. ಇದನ್ನು ಬಡಗಣದವರು, ಅವರ ಮಳೆ-ಗಾಳಿಗಳಂತೆ ಮಾಡಿಕೊಂಡಿರುವುದು. ಅದನ್ನು ಹಾಗೆ ನಮ್ಮ ನಾಡಿಗೂ ಒಪ್ಪಿಸುವುದು ಹೆಚ್ಚು ಸರಿಯಲ್ಲ.
======================================
Re: ೬ ಋತುಗಳು ಮತ್ತು ೧೨ ಮಾಸಗಳ ವಿವರ
ಮಾಸಗಳ ಬಗ್ಗೆ ವಿಕಿಪಿಡಿಯಾದಲ್ಲಿ ಮಾಹಿತಿ ಉಂಟು. ಋತುಗಳ ಬಗ್ಗೆ ಇನ್ನೂ ಯಾರು ಬರೆದಿಲ್ಲ. ನಿಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದರೆ, ವಿಕಿಪಿಡಿಯಾ ಶ್ರೀಮಂತಗೊಳಿಸಿ.
-----
ಶಶಿಧರ
ಉ: Re: ೬ ಋತುಗಳು ಮತ್ತು ೧೨ ಮಾಸಗಳ ವಿವರ
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?
ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.
ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
ವೈಶಾಖ= ವಿಶಾಖನಕ್ಷತ್ರದಲ್ಲಿ ಪ್ರವೇಶ
ಹಾಗೆಯೇ ಜ್ಯೇಷ್ಠ=ಜ್ಯೇಷ್ಠಾ ನಕ್ಷತ್ರ, ಆಷಾಢ=ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ=ಶ್ರವಣ ನಕ್ಷತ್ರದಲ್ಲಿ ಚಂದ್ರನ ಪ್ರವೇಶ
ಮಾರ್ಗಶಿರ=ಮೃಗಶಿರಾನಕ್ಷತ್ರ, ಪೌಷ=ಪುಷ್ಯಾ, ಮಾಘ್ಹ=ಮಘಾನಕ್ಷತ್ರ, ಫಾಲ್ಗುಣ= ಪೂರ್ವಾ/ಉತ್ತರಾ ಫಲ್ಗುಣಿಯಲ್ಲಿ ಸರಿಸುಮಾರಾಗಿ ಹುಣ್ಣಿಮೆಯ ದಿನ ಚಂದ್ರ ನಕ್ಷತ್ರದಲ್ಲಿ ಪ್ರವೇಶ ಮಾಡುವುದಱಿಂದ ಆಯಾ ನಕ್ಷತ್ರಗಳಿಂದಲೇ ತಿಂಗಳುಗಳನ್ನು ಕರೆಯುತ್ತಾರೆ. ಇಲ್ಲೂ ಕೂಡ ತಿಂಗಳೇ(ಚಂದ್ರ) ತಿಂಗಳಿಗಳಿಗೆ (ಮಾಸ) ಕಾರಣನಾಗಿದ್ದಾನೆ.