ಕನ್ನಡ ಜನಪದ - ನೃಪತುಂಗ
ಪುಸ್ತಕದಿಂದ ಬರೆದುಕೊಂಡಿದ್ದ ಒಂದು ವಿಳಾಸ ಹುಡುಕುತ್ತಿದ್ದಾಗ `ಕನ್ನಡ ಜನಪದ' ಪದ್ಯ ಸಿಕ್ಕಿತು. ಯಾವ ಪುಸ್ತಕದಿಂದ ಬರೆದುಕೊಂಡಿದ್ದೆ ತಿಳಿದಿಲ್ಲ. ಅದನ್ನು ಯಥಾವತ್ತಾಗಿ ಟೈಪಿಸಿದ್ದೇನೆ. ತಪ್ಪುಗಳಿದ್ದರೆ ತಿಳಿಸಿ.
ಚಂದ್ರು
೨೪.೦೪.೨೦೦೭
ಕನ್ನಡ ಜನಪದ - ನೃಪತುಂಗ
ಕಾವೇರಿಯಿಂದೆಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ...
ಅದರೊಳಗಂ ಕುಸುವೊಳಿಲಾ
ವಿದಿತ ಮಹಾಕೊಪಣ ನಗರದಾ ಪುಲಗೆರೇಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್
ಪದನರೀದು ನುಡಿಯಲುಂ ನುಡಿ
ದುದನರೀದಾರಯಲು ಮಾರ್ವರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೊ
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್
ಸುಭದರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ
ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್
- ನೃಪತುಂಗ

- bhcsb ರವರ ಬ್ಲಾಗ್
- Login or register to post comments
- 466 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡ ಜನಪದ - ನೃಪತುಂಗ
ಇವುಗಳು ಕನ್ನಡದಲ್ಲಿ ಈವರೆಗೆ ಸಿಕ್ಕಿರುವ ಕಾವ್ಯಗಳಲ್ಲಿ ಹಳೆಯದಾದ ಕವಿರಾಜಮಾರ್ಗದ್ದು. ಇದರ ಕರ್ತೃ ನೃಪತುಂಗನೋ ಶ್ರೀವಿಜಯನೋ ಎಂಬುದಾಗಿ ಅನೇಕ ಚರ್ಚೆಗಳಾಗಿ ಈಗ ಸದ್ಯಕ್ಕೆ ಅನೇಕೆ ಪಂಡಿತರು ಶ್ರೀವಿಜಯ ಎಂಬುವನು ಇದರ ಕರ್ತೃ ಎಂಬುದನ್ನು ಒಪ್ಪಿದ್ದಾರೆ.
ಕವಿರಾಜಮಾರ್ಗದ ಬಗ್ಗೆ ಕನ್ನಡ ವಿಕಿಪೀಡಿಯಾದಲ್ಲಿ
ಕವಿರಾಜಮಾರ್ಗದ ಬಗ್ಗೆ ಇಂಗ್ಲೀಷ್ ವಿಕಿಪೀಡಿಯಾದಲ್ಲಿ
ಈ ಕವಿರಾಜಮಾರ್ಗದ ಪದ್ಯಗಳನ್ನು ಉದ್ಧರಿಸಿ ಸಂಪದದಲ್ಲಿಯೇ ತುಂಬಾ ಚರ್ಚೆಗಳಾಗಿವೆ. ಸಂಪದದ ಗೂಗಲ್ ಸರ್ಚಿನಲ್ಲಿ ಕವಿರಾಜಮಾರ್ಗವನ್ನು ಹುಡುಕಿದಾಗ ಸಿಕ್ಕ ಪುಟವನ್ನು ನೋಡಿ.
ಉ:
ಪದ್ಯಗಳನ್ನು ಟೈಪುವಾಗ ಹಲತಪ್ಪುಗಳಾಗಿವೆ.
======================================
"ಕಾವೇರಿಯಿಂದಂ ಆ ಗೋದಾವರಿ ವರಂ ಇರ್ದ"
ಕನ್ನಡ ದೇಸವು ಕಾವೇರಿಯಿಂದ ಗೋದಾವರಿಯ ಗಂಟ( ತನಕ ) ನ್ರುಪತುಂಗನ ಹೊತ್ತಿನಲ್ಲಿ ಇತ್ತಂತೆ.
ಪುಲಿಕೇಶಿ ಅದನ್ನು ನರ್ಮದೆಯ ವರೆಗೂ ಬೆಳೆಸಿದ್ದನಂತೆ.
ಇಂದಿನ ಕೊಪ್ಪಳ, ಬೆಳಗಾವಿ ಸುತ್ತಮುತ್ತದ ಜಾಗವೇ "ತಿರುಳ್ಗನ್ನಡ" ಅಚ್ಚಗನ್ನಡದ ನೆಲವಾಗಿತ್ತು ಅಂತ.!!
ಈಗ
"ಕಾವೇರಿಯಿಂದಂ ಆ ಕೃಷ್ಣೆ ವರಂ ಇರ್ಪುದು"
ಉ:
ಮಾನ್ಯರೆ, `ಕನ್ನಡ ಜನಪದ' ಇದಕ್ಕೆ ಬರೆದ ನಿಮ್ಮ ಪ್ರತಿಕ್ರಿಯೆ ಓದಿದೆ. ತಪ್ಪಾಗಿ ಟೈಪಿಸಿರುವುದನ್ನು ತಿಳಿಸಿದ್ದೀರಿ. ಅದರ ಪೂರ್ಣ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
ನಿಮ್ಮ ಪತ್ರ ನಿರೀಕ್ಷೆಯಲ್ಲಿ,
ಚಂದ್ರಶೇಖರ.
ಉ:
======================================
ಹೊತ್ತಗೆ ಹೆಸರು : ಶ್ರೀವಿಜಯ ಕೃತ "ಕವಿರಾಜಮಾರ್ಗಂ"
ಬರಹಗಾರ : ಸೀತಾರಾಮಯ್ಯ
ಹೊರತಂದವರು : ಕಸಾಪ ( 1965? )
ಹೊರಹೊದಿಕೆ : ನೀಲಿ ಬಣ್ಣದ್ದು.
ಈ ಹೊತ್ತಗೆಯನ್ನು ನೋಡಿರಿ.. ಚನ್ನಾಗಿದೆ.
ಇಡೀ ಕರಾಮಾ ಇದೆ. ಪದ್ಯಗಳನ್ನು ಬಿಡಿಸಿ ಹೇಳಿದ್ದಾರೆ!
ಉ: ಕನ್ನಡ ಜನಪದ - ನೃಪತುಂಗ
ಈ ಪದ್ಯದ ಅರ್ಥವನ್ನು ಇಲ್ಲಿ ನೋಡಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡ ಜನಪದ - ನೃಪತುಂಗ
ಈ ಪದ್ಯದ ಅರ್ಥವನ್ನು ಇಲ್ಲಿ ನೋಡಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"