ವಿಜ್ಣಾನ ,ತಂತ್ರಜ್ಣಾನದ ಬೆಳವಣಿಗೆಯ ಭರಾಟೆಯಲ್ಲಿ ಆಧುನಿಕ ಜಗತ್ತಿನ ಅದರಲ್ಲೂ ಪಟ್ಟಣದ ಜನ ಜೀವನ ಎಷ್ಟೊಂದು ಕೃತಕವಾಗಿದೆಯೆಂದರೆ ಕುಡಿಯುವ ನೀರು,ತಿನ್ನುವ ಆಹಾರ,ಸೇವಿಸುವ ಗಾಳಿ,ಜೀವನ ವಿಧಾನ ಎಲ್ಲದರಲ್ಲೂ ಕೃತಕತೆ ಕಾಣಬಹುದು.ನಮ್ಮ ಹಳ್ಳಿಯ ಹಾಗೆ ಹುಣ್ಣಿಮೆಯ ಚಂದಿರನ ಆಹ್ಲಾದಕರ ಬೆಳದಿಂಗಳು,ಅಮವಾಸ್ಯೆಯ ರಾತ್ರಿಯ ಕತ್ತಲಲ್ಲಿ ಬಾನಲ್ಲಿ ಹೊಳೆಯುವ ನಕ್ಷತ್ರಗಳನ್ನು ನೋಡುವ ಭಾಗ್ಯ ಪಟ್ಟಣದವರಿಗಿಲ್ಲ.ಇದ್ದರೂ ಅದನ್ನೆಲ್ಲಾ ನೋಡುವ ಪುರುಸೊತ್ತಿಲ್ಲ.ಅದಕ್ಕೆಂದೇ ತಮ್ಮ ಕೊಠಡಿಯ ಒಳ ಛಾವಣಿಗೆ ಅಂಟಿಸಲು ಆಕಾಶದ ಮಿನುಗುವ ನಕ್ಷತ್ರಗಳನ್ನು ಹೋಲುವ ಸ್ಟಿಕರ್ ಗಳು ಲಭ್ಯ.ಪ್ರೀತಿ,ಪ್ರೇಮ,ಪ್ರಣಯ ಎಲ್ಲಾ ಕೃತಕಮಯ.ಮನುಷ್ಯಾಕೃತಿಯನ್ನು ಹೋಲುವ, ಅಪ್ಪಿಕೊಂಡು ಮಲಗಲು ಕೃತಕ ದಿಂಬುಗಳು(ಚಿತ್ರ ನೋಡಿ).ಈ ಪಟ್ಟಣಗಳಲ್ಲಿ ಡುಡ್ಡು ಕೊಟ್ಟರೆ ಎಲ್ಲಾನೂ ಸಿಗುತ್ತೆ.ಇಲ್ಲಿ ದೇಹ ಬೆಳೆಸೋಕು ದುಡ್ಡು,ಬೆಳೆಸಿದ ದೇಹ ಕರಗಿಸೋಕು ದುಡ್ಡು. ನಮ್ಮ ಹಳ್ಳಿಯ ಹಾಗೆ ಝುಳುಝುಳು ಹರಿಯುವ ನದಿ,ಮುಂಜಾವಿನ ಹಕ್ಕಿಗಳ ಕಲರವ,ಕೋಳಿಯ ಕೂಗು,ಮನಕ್ಕೆ ಮುದ ನೀಡುವ ಹಸಿರು ಸಾಲು ಮರಗಳು,ಅಜ್ಜಿಯ ಕತೆ,ಮಕ್ಕಳ ಸಡಗರ,ಅಮ್ಮನ ಹಳ್ಳಿಯ ಹಾಡುಗಳು,ಬೀಸು ಕಲ್ಲಿನ ಪದಗಳು,ಹಳ್ಳಿಯ ಆಟಗಳು,ಗೆಳೆಯರ ಕಟ್ಟೆಯ ಹರಟೆ,ಹೆಂಗಸರ ಪಿಸುಮಾತುಗಳು,ಅಳುವ ಕಂದನ ದನಿ,ಶಾಲೆ ಬಿಟ್ಟು ಮನಗೆ ಕಡೆಗೆ ಓಡುವ ಮಕ್ಕಳ ಕಿರುಚಾಟ,ದನಕರುಗಳ ಅಂಬಾ ಎನ್ನುವ ಧ್ವನಿ,ಇದಾವುದೂ ಪಟ್ಟಣದಲ್ಲಿ ಸಿಗುವುದಿಲ್ಲ. ಇಲ್ಲಿ ಬರೀ ಕಿವಿ ಗಡಚಿಕ್ಕುವ ವಾಹನಗಳ ಸದ್ದು,ಎತ್ತರವಾದ ಕಟ್ಟಡಗಳು,ಪರಿಸರ ಮಾಲಿನ್ಯ ಅಷ್ಟೆ.

- bheemappa ರವರ ಬ್ಲಾಗ್
- Login or register to post comments
- 173 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಭೀಮಪ್ಪ ಬಂದಿಕೇರಿ
ಪರಿಚಯ
ನಾನು ಒಬ್ಬ ಕೇಂದ್ರ ಸರ್ಕಾರಿ ಉದ್ಯೋಗಿ. ನನಗೆ ಚಿಕ್ಕಂದಿನಿಂದಲೂ ಕವನಗಳನ್ನು ಬರೆಯುವುದು ಅಂದ್ರೆ ತುಂಬಾ ಇಷ್ಟ.
ನಾನು ಹುಟ್ಟಿ ಬೆಳೆದ ಊರು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ
ಹವ್ಯಾಸ: ಓದುವದು,ಕವನಗಳು,ಚುಟುಕುಗಳು ಅಂದ್ರೆ ತುಂಬಾ ಇಷ್ಟ.ದುಂಡಿ ನಾಗರಾಜ ಅವರ ಚುಟುಕುಗಳು ಅಂದ್ರೆ ತುಂಬಾನೇ ಇಷ್ಟ...
ಇತ್ತೀಚಿನ ಬ್ಲಾಗ್ ಬರಹಗಳು
- ಓದಿದ್ದು ಕೇಳಿದ್ದು ನೋಡಿದ್ದು-296 ಎರಡೂವರೆ ದಶಲಕ್ಷ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಿ!
- ಮನಸ್ಸೆಂಬ ಗೆಳೆಯ, ಮನಸ್ಸೆಂಬ ಶತ್ರು
- ನನಗ್ಯಾಕೆ ಒಂದು ಹೊಸ ವಿಚಾರ ಸ್ಫುರಿಸಬಾರದು?
- ಕಾಡತಾವಾ ನೆನಪುಗಳು ಯಾಕೆ ?
- ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,
- ಎರಡು ಘಟನೆಗಳು
- ನನ್ನ ಪ್ರಿಯತಮೆ
- ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?
- ಜೀವನ ಎಂಬುದು ಒಂಬತ್ತರ ಮಗ್ಗಿಯಂತೆ ...
- ಚಂದವಳ್ಳಿ ಕೆರೆಯ ಚಿತ್ರಗಳು
ಇತ್ತೀಚಿನ ಪ್ರತಿಕ್ರಿಯೆಗಳು
- Chamarajಉ: ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?July 5, 2009 - 7:34am
- hariharapurasridharಉ: ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?July 5, 2009 - 6:45am
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am




RSS: