ವಿನೂತನ ಉದ್ಯೋಗ ಯೋಜನೆ: ನಿಧಾನಿ ಪ್ರಶಂಸೆ
(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. Bogaleragale.blogspot.com
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಪೂಜಾ ಕ್ಷೇತ್ರ ಅಥವಾ ಪ್ರಾರ್ಥನಾ ಮಂದಿರಕ್ಕೆ ಗ್ರೆನೇಡ್ ಎಸೆದರೆ 1000 ರೂ. ನೀಡುವ ಈ ಯೋಜನೆಯು ಪಾಕ್ ಪರವಾಗಿರುವ ನಿರುದ್ಯೋಗಿಗಳಲ್ಲಿ ಆಶಾವಾದ ಮೂಡಿಸಿದೆ ಎಂದು ಹೇಳಿದರು.
ಇದುವರೆಗೆ ಈ ದೇಶವಾಳಿದ ಯಾರು ಕೂಡ ಕಂಡುಹಿಡಿಯಲಾಗದ ಈ ಹೊಸ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಿರುವುದಕ್ಕೆ ಯೋಜನೆಯ ಪ್ರವರ್ತಕರಾದ ಉಗ್ರರಿಗೆ ವ್ಯಗ್ರತಾಭಾವದಿಂದ ಧನ್ಯವಾದ ಎಸೆದ ಅವರು, ಇದರಿಂದ ಅಲ್ಪಸಂಖ್ಯಾತರ ಕಲ್ಯಾಣ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ, ಇದೇ ಉದ್ಯೋಗ ನೀತಿಯನ್ನು ಪೂಜಾ ಅಥವಾ ಪ್ರಾರ್ಥನಾ ಮಂದಿರಗಳ ಬದಲು ಶಾಸನಸಭೆಗಳಾದ ಸಂಸತ್ತು/ವಿಧಾನಸಭೆ ಮೇಲೆ ಪ್ರಯೋಗಿಸದಂತೆ ಅವರು ಈ ಸಂದರ್ಭ ಕಳಕಳಿಯ ಸಲಹೆ ನೀಡಿದರು.
ಈಗಾಗಲೇ ಕಟ್ಟಾ ಧಾರ್ಮಿಕತೆಯನ್ನು ಅನುಸರಿಸುತ್ತಾ, ಮಾರಣ ಹೋಮ ಮುಂತಾದ ಯಜ್ಞ-ಯಾಗಾದಿಗಳನ್ನು ನೆರವೇರಿಸುತ್ತಾ, ಪವಿತ್ರ ಯುದ್ಧ (ಜಿಹಾದ್) ನಡೆಸುತ್ತಿರುವ ಪ್ರತ್ಯೇಕತಾವಾದಿ ಮತ್ತು ಹಿಂಸಾವಾದಿ ಸಮಾಜ ನಿರ್ಮಾಣಕ್ಕೆ ಮುಂದಾಗಿರುವವರನ್ನು ಗದ್ಗದಿತರಾಗಿ ತೆಗಳಿದ ಅವರು, ಒಂದಷ್ಟು ಕ್ಯಾಕರಿಸಿ ಪ್ರಶಂಸಿಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ!!!
ಚಿಕ್ಕ ಮಕ್ಕಳು ಮತ್ತು ದೊಡ್ಡ ಮಕ್ಕಳಿಗಾಗಿ ವಿಶೇಷ ವರದಿ ನಾಳೆ ಪ್ರಕಟವಾಗಲಿದೆ.
ನಿಮ್ಮ ಪ್ರತಿ ಕಾದಿರಿಸಬೇಡಿ.
ಸೂಚನೆ: ಈ ವರದಿ ಮೊದಲೇ ಬೇಕಾದವರಿಗೆ ಕ್ರೆಡಿಟ್ ಕಾರ್ಡ್ ಮೂಲಕ ವಿಶೇಷ ವ್ಯವಸ್ಥೆ ಏರ್ಪಡಿಸಲಾಗಿದ್ದು, ಯಾರು ಬೇಕಾದರೂ, ಎಷ್ಟು ಬೇಕಾದರೂ ತೆರಬಹುದು.ಆದರೆ ವರದಿ ಪ್ರಕಟವಾಗಲು ಕನಿಷ್ಠ ಒಂದು ದಿನ ತಗುಲುತ್ತದೆ.
Bogaleragale.blogspot.com

- BogaleRagale ರವರ ಬ್ಲಾಗ್
- Login or register to post comments
- 350 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: