ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › BogaleRagale ರವರ ಬ್ಲಾಗ್

20K ಒದೆತಗಳ ಸಂ-ಕ್ರಾಂತಿ

January 15, 2007 - 10:57am — BogaleRagale

ಕನ್ನಡ ಕುಲ ಕೋಟಿಗೆ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಾಂತಿಯ ಶುಭಾಶಯಗಳು. (bogaleragale.blogspot.com)

ಓದುಗರ ಪ್ರೀತಿಯ ಒದೆತಗಳಿಂದಾಗಿ 2006 ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಬೊಗಳೆಯು ಆಗಸ್ಟ್ ಅಂತ್ಯದ ವೇಳೆಗೆ 10 ಸಾವಿರ ಒದೆತಗಳನ್ನು ತಾಳಿಕೊಂಡಿದ್ದು, ಇದೀಗ ಬೊಗಳೆ ರಗಳೆ ಬ್ಯುರೋದ ಅರಿವಿಗೆ ಬಾರದೆ ನಮ್ಮ (ಚಪಾತಿ) ಹಿಟ್ಟಿನ ಕೌಂಟರ್ 20K ದಾಟಿಬಿಟ್ಟಿದೆ. ಇದೇ ವೇಳೆ ಲೇಖನಗಳ ಸಂಖ್ಯೆಯೂ ದ್ವಿಶತಕ ದಾಟಿದೆ.

ಇದಕ್ಕೆ ನಿಜವಾಗಿಯೂ ಕನ್ನಡ ನೆಟ್ಟೋದುಗರ ಮತ್ತು ಅನಿವಾರ್ಯ ಕಾರಣಗಳಿಗಾಗಿ "ಕನ್ನಡನಾಡು ಬಿಟ್ಟೋಡುಗರು" ಆಗಿರುವವರ ಸವಿಮನಸಿನ ನೆಟ್ಟೊದೆತಗಳೇ ಕಾರಣ.

ಆದರೆ ಕ್ರಿಸ್ಮಸ್ ರಜೆಯಿಂದಾರಭ್ಯ ಹೊಸ ವರ್ಷ ಬಂದು ಸಂಕ್ರಾಂತಿ ಬಂದೇಬಿಟ್ಟಿದ್ದರೂ, ಇತ್ತೀಚೆಗೆ ಸರಿಯಾಗಿ ಕಚೇರಿಗೆ ಹಾಜರಾಗದೆ, ಮೈಗಳ್ಳನಂತಾಗಿಬಿಟ್ಟಿರುವ ನಮ್ಮ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರ ಸಮೂಹದಲ್ಲೊಬ್ಬನಾಗಿ ತೂರಿಕೊಂಡಿರುವ ಅಸತ್ಯಾನ್ವೇಷಿಯು ಬೊಗಳೆ ಬಿಟ್ಟು ರಗಳೆ ಮಾಡುತ್ತಿದ್ದಾನೆ ಎಂದು ಓದುಗರು ದೂರಿರುವ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಆತ ಬ್ಯುರೋಗೆ ಬೆದರಿಕೆ ಹಾಕಿದ್ದಾನೆ.

ಯಾರು ಉಗುಳಲಿ ಎಂದು
ನಾನು ಬೊಗಳುವುದಿಲ್ಲ
(ಸಂ-ಪಾದ-ಕರು ಸಂ-ಬಳ ಮಾತ್ರ ಕೊಡುವುದರಿಂದ)
ಬೊಗಳುವುದು ಅನಿವಾರ್ಯ ಕರ್ಮ ನನಗೆ !!

ಎಂದು ಆತ ಕವಿವರ್ಯರ ಕ್ಷಮೆ ಕೋರಿ ಸೂಚ್ಯವಾಗಿ ಬೆದರಿಕೆಯೊಡ್ಡಿರುವುದರಿಂದ ಅವನ ವೇತನವನ್ನು ಒಂದು ಪೈಸೆಗೆ ಏರಿಸಲಾಗಿದೆ ಎಂದು ತಿಳಿಸಲು ಬ್ಯುರೋ ವಿಷಾದಿಸುತ್ತದೆ.

ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ (ಸಭ್ಯತೆಯ ಮಿತಿಯಲ್ಲಿ) ಉಗುಳಬಹುದು ಎಂಬ ಅಲಿಖಿತ ನಿಯಮ ಅಳವಡಿಸಲಾಗಿದ್ದರೂ, ಇದುವರೆಗಿನ ಉಗುಳುವಿಕೆ ಅಥವಾ ಬೊಗಳುವಿಕೆಯಲ್ಲಿ ಯಾವುದು ಇಷ್ಟವಾಗಲಿಲ್ಲ ಎಂಬುದನ್ನು ನೆಟ್ಟೋದುಗರು ನಮ್ಮ ಬ್ಯುರೋದಲ್ಲಿ ಅಳವಡಿಸಲಾಗಿರುವ ಪ್ರಥಮಚಿಕಿತ್ಸೆ ಪೆಟ್ಟಿಗೆ (comment box)ಯಲ್ಲಿ ಚೀಟಿ ಬರೆದು ಹಾಕಲು ಕೋರಲಾಗಿದೆ. -ಸಂ

~.~
  • BogaleRagale ರವರ ಬ್ಲಾಗ್
  • Login or register to post comments
  • 349 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 15, 2007 - 11:48am — Sunil Jayaprakash

ಒಂಚೂರು: 20K ಒದೆತಗಳ ಸಂ-ಕ್ರಾಂತಿ

Sunil Jayaprakash's picture

ಅಸತ್ಯಾನ್ವೇಷಿ wrote:
ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ (ಸಭ್ಯತೆಯ ಮಿತಿಯಲ್ಲಿ) ಉಗುಳಬಹುದು ಎಂಬ ಅಲಿಖಿತ ನಿಯಮ ಅಳವಡಿಸಲಾಗಿದ್ದರೂ, ಇದುವರೆಗಿನ ಉಗುಳುವಿಕೆ ಅಥವಾ ಬೊಗಳುವಿಕೆಯಲ್ಲಿ ಯಾವುದು ಇಷ್ಟವಾಗಲಿಲ್ಲ...

ಅಯ್ಯೋ ಯಾಕೆ ಕೇಳ್ತೀರಾ, ನಾವೂ ಬೊಗಳೋಣ ಅಂತ ಇದ್ದೆವು. Eye-wink ಆದರೇನು ಮಾಡುವುದು. ಯಾರೋ(ನಮ್ಮ ಗುಂಪಿನದೋ ಅಥವಾ ನಿಮ್ಮ ಪೈಕಿಯದೋ ತಿಳಿಯದು) ಎಲ್ಲೋ ಯಾರನ್ನೋ ತಿಂದು ತೇಗಿಬಿಟ್ಟಿದ್ದಾರೆ ಎಂಬ ಕಾರಣಕ್ಕೆ ನಮ್ಮನ್ನೆಲ್ಲ ಬಂಧಿಸಿ ದಳವಾಯಿಯ ಬಳಿಗೆ ಕರೆದೊಯ್ದಿದ್ದಾರೆ, ಆರಕ್ಷಕರು. Sad ಹಾಗಾಗಿ ಬೊಗಳಲು ಬಿಡುವೇ ಆಗುತ್ತಿಲ್ಲ. ಬರಲೇ, ಲಾಯರ್ರನ್ನು ಹುಡುಕಬೇಕಿದೆ. Puzzled

ಅಂದ ಹಾಗೆ,

ಅಸತ್ಯಾನ್ವೇಷಿ wrote:
ಯಾರು ಉಗುಳಲಿ ಎಂದು
ನಾನು ಬೊಗಳುವುದಿಲ್ಲ
ಬೊಗಳುವುದು ಅನಿವಾರ್ಯ ಕರ್ಮ ನನಗೆ !!

ಎಂದು ನೀವು ಹೇಳಿದರೂ, ಪೋಲೀಸ್ ರೆಕಾರ್ಡಿನಲ್ಲಿ ಏನಂತ ಇದೆ ಗೊತ್ತೇ.
ತೆಗಳೋದೇ ಇವ್ನ ವೀಕ್ನೆಸ್ಸು
ಆದರೆ ನ್ಯಾಯಕೆ(ನಾಯಿಗೆ ಅಲ್ಲ ಸ್ವಾಮೀ) ಬೊಗಳೋದೇ ಇವ್ನ ಬಿಸಿನೆಸ್ಸು. Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2007 - 11:52am — BogaleRagale

Re: ಒಂಚೂರು: 20K ಒದೆತಗಳ ಸಂ-ಕ್ರಾಂತಿ

BogaleRagale's picture

ಸುನಿಲರೇ, ನಮಸ್ಕಾರ,
ಬೊಗಳೋದೇ ಬಿಸಿನೆಸ್ಸು ಆಗಿದ್ದರೂ ಮತ್ತು ತೆಗಳೋದೇ ವೀಕ್ನೆಸ್ ಆಗಿದ್ದರೂ, ರೆಕಾರ್ಡ್ ಬರೆದ ಪೊಲೀಸಪ್ನಿಗೆ ಮಾತ್ರ ತಗೊಳ್ಳೋದೇ ಬಿಸಿನೆಸ್ Smiling
- ಅಸತ್ಯ ಅನ್ವೇಷಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2007 - 12:28pm — Shyam Kishore

ನಂದೂ ಒಂಚೂರು: 20K ಒದೆತಗಳ ಸಂ-ಕ್ರಾಂತಿ

Shyam Kishore's picture

ನಾನೊಬ್ಬ "ಕನ್ನಡನಾಡು ಬಿಟ್ಟೋಡುಗ"; ಆದರೆ ಸ್ವಲ್ಪ ಸಮಯಕ್ಕೆ ಮಾತ್ರ Smile 

ಪರವಾಗಿಲ್ಲ ಸ್ವಾಮೀ, ಚೆನ್ನಾಗಿ ಒದೆಸಿಕೊಂಡು ಸುಖ ಅನುಭವಿಸಿದ್ದೀರಿ. ಇದೂ ಒಂದು ರೀತಿಯ ಸುಖ ಅಲ್ಲವೇ? ಇರಲಿ, ಒದ್ಸಿಕೊಳ್ಳಲು ಜನ ಸಿದ್ಧರಿರುವಾಗ, ಅದೂ ಈ ಕಾಲದಲ್ಲಿ, ಒದೆಯಲು ನಮಗೇನು ಕಷ್ಟ? Wink ಬೇಗ ಸೆಂಚ್-ಸೆಂಚುರಿ (ಅಂದ್ರೆ ೧೦೦೦ ಅಂತ) ಬಾರಿಸಿ (ನಿಮ್ಮ ರಗಳೆಗಳ ಮೂಲಕ) ಅಂತ ಸೂರ್ಯ ಲೈನ್ ಕ್ರಾಸ್ ಮಾಡ್ತಾಯಿರೋ ಈ ಶುಭ ಸಂದರ್ಭದಲ್ಲಿ ನಾನೊಮ್ಮೆ ಒದೆಯೋದರ ಮೂಲಕ ಹಾರೈಸುತ್ತೀನಿ.

(ಡಿ.ವಿ.ಜಿ.ಯವರೇ ಎಲ್ಲೇ ಇದ್ದರೂ ದಯವಿಟ್ಟು ಕ್ಷಮಿಸಿ)

ಒದೆಯುವುದು ಸಹಜದ ಧರ್ಮ, ಒದೆಸಿಕೊಳ್ಳುವುದು ಪರಧರ್ಮ|

ಒದೆಸಿಕೊಂಡೂ ನಗುತಲಿರುವುದು ಅತಿಶಯದ ಧರ್ಮ||

ಪರರನ್ನೂ ಒದ್ದು, ಒದೆಸಿಕೊಳ್ಳುತ್ತ, ಸುಖದಿಂದಿರುವ ವರವ

ಬೇಡಿಕೊಳೊ ಆ ದೇವರನು - ಬೊಗಳೆರಗಳೇಶ||

ಕೊನೆ ಹನಿ: ಪರವಾಗಿಲ್ಲ ಹಿತವಾಗಿ "ಬೊಗಳುವ" ಕಲೆ ನಿಮಗೆ ಸಿದ್ಧಿಸಿದೆ ಅಂತ ಅನ್ನಿಸುತ್ತೆ. ಇಲ್ಲ ಅಂದ್ರೆ ಇಷ್ಟು ಹೊತ್ತಿಗೆ ಯಾರಾದರೂ ನಿಮ್ಮನ್ನು "ಕಚ್ಚಿರೋರು" ಬಿಡಿ (no offense intended!)

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 9:56am — BogaleRagale

Re: ನಂದೂ ಒಂಚೂರು: 20K ಒದೆತಗಳ ಸಂ-ಕ್ರಾಂತಿ

BogaleRagale's picture

ಶ್ಯಾಮ್ ಕಿಶೋರ್ ಅವರೆ,
ನಿಮ್ಮ ಒದೆತ ಜೋರಾಗಿ ಬಿದ್ದದ್ದರಿಂದಾಗಿಯೇ ನಾನಿವತ್ತು ಬೇಗನೇ ಏಳಬೇಕಾಯಿತು. ಹೀಗೇ ಒದೀತಾ ಇರಿ.
ಮಂಕುತಿಮ್ಮನನ್ನು ತಿರುಚಿ ಬೊಗಳೆರಗಳೇಶನಾಗಿಸಿದ ನಿಮಗೆ ಶರಣು ಶರಣು )
-ಅಸತ್ಯ ಅನ್ವೇಷಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 10:34am — Shyam Kishore

ತಿದ್ದುಪಡಿ: ನಂದೂ ಒಂಚೂರು: 20K ಒದೆತಗಳ ಸಂ-ಕ್ರಾಂತಿ

Shyam Kishore's picture

ಪಾಪ "ಒದೆಸಿಕೊಂಡು" ಸುಸ್ತಾಗಿ ಮಲಗಿದ್ರೀ ಅನ್ನಿಸುತ್ತೆ, ಬೇಗ ಎಬ್ಬಿಸಿದ್ದಕ್ಕೆ ಕ್ಷಮಿಸಿ ಶಿವಾ....

ಬೊಗಳೆರಗಳೇಶನ ಪದ್ಯದಲ್ಲಿ ಒಂದು ಸಣ್ಣ "ಮಿಸ್ಟೀಕು" ಇಣುಕಿತ್ತು, ಸರಿಪಡಿಸಿ ಹಾಕಿದ್ದೀನಿ. ಏನೋ ನೀವು ಒದೆಸಿಕೊಳ್ತಾ ತಣ್ಣಗಿದ್ದರೆ ಅಷ್ಟೇ ಸಾಕು Smile ಆದ್ರೆ ಒಂದು ಮಾತು: ಬೇರೆಯವರಿಗೂ ಆಗಾಗ ಒದೀತಾ ಇರಿ ಗುರುವೇ, ಬರೀ ಒದೆಸಿಕೊಂಡ್ರೆ ಸಾಲ್ದು Wink

ಒದೆಯುವುದು ಸಹಜದ ಧರ್ಮ, ಒದೆಸಿಕೊಳ್ಳುವುದು ಪರಧರ್ಮ|

ಒದೆಸಿಕೊಂಡೂ ನಗುತಲಿರುವುದು ಅತಿಶಯದ ಧರ್ಮ||

ಪರರನ್ನೂ ಒದ್ದು, ಒದೆಸಿಕೊಳ್ಳುತ್ತ, ಸುಖದಿಂದಿರುವ ವರವ

ಬೇಡಿಕೊಳೊ ಆ ದೇವರಲಿ - ಬೊಗಳೆರಗಳೇಶ||

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • OBC ಸರ್ಟಿಫಿಕೆಟ್ ಬಿಕರಿ
  • ಮಾತು ಮದಿರೆಯೇ ಮಾನಿನಿಯರಿಗೆ ?
  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
  • ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ
  • ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:39am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:36am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator