ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › BogaleRagale ರವರ ಬ್ಲಾಗ್

ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

January 25, 2007 - 10:34am — BogaleRagale

ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ. (bogaleragale.blogspot.com)

ಚೀನಾದ ಈ ಆಯುಧವು ಹೊಸದಾದ ಆಯುಧ ಸಂಶೋಧನೆಗೆ ಹೇತುವಾಗಿದೆ. ಅದುವೇ ಆಂಟಿ-ಉಪದ್ರವ ಆಯುಧ.

ಹತಾಶ ಮತ್ತು ಪೀಡಿತ ಸಂಶೋಧಕರು ಕಂಡುಹುಡುಕಿರುವ ಆಂಟಿ-ಉಪದ್ರವ (ನಿವಾರಣೆ) ಆಯುಧ (ಆಉಆ)ಕ್ಕೆ ಈಗಾಗಲೇ ಭಾರತದಲ್ಲಿ ಭರ್ಜರಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಮೇಡ್ ಇನ್ ಚೀನಾ ಲೇಬಲ್ ಇರುವ ಈ ಉಪಕರಣ ಯಾವಾಗ ಭಾರತಕ್ಕೆ ಕಾಲಿಡುತ್ತದೆ ಎಂದು ಕುಕ್ಕುರುಗಾಲಿನಲ್ಲಿ ಕೂತು ಕಾಯುತ್ತಿದ್ದಾರೆ.

ಪಕ್ಕದ ಮನೆಯಲ್ಲಿದ್ದುಕೊಂಡು ನಮ್ಮ ಮನೆ ವಿಷಯಗಳಿಗೆ ಮೂಗು ತೂರಿಸುತ್ತಾ ಧರ್ಮಕ್ಷೇತ್ರವಾಗಿರುವ ಮನೆಯನ್ನು ಯುದ್ಧಕ್ಷೇತ್ರವಾಗಿಸುವ ಮಾದರಿಯ ಉಪದ್ರವಗಳನ್ನು ನೀಡುತ್ತಿರುವವರನ್ನು ಹದ್ದುಬಸ್ತಿನಲ್ಲಿರಿಸಲು ಈ ಉಪಕರಣ ಸೂಕ್ತ ಪ್ರಯೋಜನಕ್ಕೆ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಜಾಹೀರಾತು ಪ್ರಕಟಿಸಲು ನಿರ್ಧಸಿರಿಸಿರುವುದು ಚೀನಾಕ್ಕೆ ಹರ್ಷ ತಂದಿದೆ ಎಂದು ಚೀನಾದ ಅಧಿಕಾರಿ ಚಿನ್ ಮಿನ್ ಕುನ್ ಕೈಂಯ್ಯ (ಅಕ್ಷರಗಳನ್ನು ಬರೆಯುವುದು ಇಲ್ಲಿ ಸರಿಯಾಗುತ್ತಿಲ್ಲವಾದುದರಿಂದ ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್‌ಗೆ ಕೈಯಲ್ಲಿ ಪತ್ರ ಬರೆದು ರವಾನಿಸಲಾಗಿದೆ) ಎಂಬವರು ಹೇಳಿದ್ದಾರೆ.

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಆಧುನೀಕರಣದ ಪ್ರಭಾವಕ್ಕೆ ಸಿಲುಕಿಕೊಂಡಿರುವ ಆಂಟಿ-ಉಪದ್ರವಗಳು ಜಾಸ್ತಿಯಾಗುತ್ತಿರುವುದರಿಂದ ಮನೆ ಮನೆಗಳಲ್ಲಿ "ಇಲ್ಲಿ ಆಂಟಿ-ಉಪದ್ರವ ಆಯುಧವಿದೆ, ಎಚ್ಚರಿಕೆ" ಎಂಬ ಬೋರ್ಡ್‌ಗಳನ್ನು ತೂಗುಹಾಕಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿರುವ ಬ್ಯುರೋ ಒದರಿಗಾರರು, ಆ ಬೋರ್ಡನ್ನು ಕದಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಇದರ ಹಿಂದೆ ಉಪದ್ರವ ನೀಡುವವರ ಕೈವಾಡವಿದೆಯೇ ಅಥವಾ ಉಪದ್ರವ ಸಹಿಸಲಾರದೆ ಹೇಗಾದರೂ ಮಾಡಿ ತಮ್ಮ ಮನೆಗೂ ಈ ಬೋರ್ಡ್ ತಗುಲಿಸಬೇಕು ಎಂದುಕೊಂಡಿರುವ ಅವಿವಾಹಿತರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

~.~
  • BogaleRagale ರವರ ಬ್ಲಾಗ್
  • Login or register to post comments
  • 372 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 25, 2007 - 1:41pm — Sunil Jayaprakash

ಕನ್ನಡ ಕಾವ್ಯಗಳಿಂದ ಸ್ಪೂರ್ತಿ ಪಡೆದ ಚೀನಾ

Sunil Jayaprakash's picture

ಬೊಗಳೆ ರಗಳೆ wrote:
ಇದರ ಹಿಂದೆ ಉಪದ್ರವ ನೀಡುವವರ ಕೈವಾಡವಿದೆಯೇ ಅಥವಾ ಉಪದ್ರವ ಸಹಿಸಲಾರದೆ ಹೇಗಾದರೂ ಮಾಡಿ ತಮ್ಮ ಮನೆಗೂ ಈ ಬೋರ್ಡ್ ತಗುಲಿಸಬೇಕು ಎಂದುಕೊಂಡಿರುವ ಅವಿವಾಹಿತರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಚೀನಾದ ಅತ್ಯಾಧುನಿಕ ಆಂಟಿಗಳಿಗೆ ಕನ್ನಡದ ಸುಮ್ಮಾಧುನಿಕ ಮಹಾಕಾವ್ಯಗಳು ಆಧಾರವೆಂಬ ಸತ್ಯವನ್ನೂ ಬೊಗಳೆ ರಗಳೆ ಏಕ ಸದಸ್ಯ ಬ್ಯೂರೋ ಹೊರಗೆಡಹಲಿ. "ಆಂಟಿ ಪ್ರೀತ್ಸೇ, ಕಣ್ಣು ಮುಚ್ಚಿ ನನ್ನ ಪ್ರೀತ್ಸೆ, ಮನಸೂ ಬಿಚ್ಚಿ ನನ್ನ ಪ್ರೀತ್ಸೆ ಎನ್ನುವ ಮಹಾಕಾವ್ಯವು ಅನುದಿನವೂ ಹರಿಯುವ ಕನ್ನಡ ನಾಡಿನಲ್ಲಿ ಇರುವ ಆಂಟಿಗಳು ಚೀನಾದ ಆಂಟಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದರಿಂದಲೇ ಹೀಗಾಗಿರಲಿಕ್ಕೆ ಸಾಕು" ಎಂಬ ಅಂಶದ ಹೆಚ್ಚು ಬೆಳಕು ಚೆಲ್ಲಲಿ. ಹಾಗೆಯೇ, ರಾಜನಳಿಯರಾಮ ಎಂಬುವರು, ಡಯ್ಯಾನಾ ಡಯ್ಯಾನಾ ಎವರ್ ಗ್ರೀನ್ ಯೌವನ, ಆಂಟೀ ಆಂಟೀ ಎಂಬ ಕಾವ್ಯಕ್ಕೆ ನೃತ್ಯಗೈದಿದ್ದಾರೆ. ಬಹುಶಃ ಚಿನ್ ಮಿನ್ ಕುನ್ ಕೈಂಯ್ಯ ಈ ಮಹಾಕಾವ್ಯ, ನೃತ್ಯಗಳಿಂದ ಸ್ಫೂರ್ತಿ ಪಡೆದು ಚೀನಾದ ಆಂಟೀಗಳೂ ಕನ್ನಡದ ಆಂಟಿಗಳಿಗಿಂತ ಪ್ರಬಲವಾಗಿರಲಿ ಎಂದು ಯೋಚಿಸಿದ್ದರೆ ಆಶ್ಚರ್ಯವೇನಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಕ್ಕುಬಿಡಿ
  • ಮಾತು ಮದಿರೆಯೇ ಮಾನಿನಿಯರಿಗೆ ?
  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
  • ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ
  • ಅತ್ಯಾಚಾರಕ್ಕೆ ಕಾರಣ ಸಂಶೋಧನೆ
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 528 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator