ಓ ನನ್ನ ಚೇತನಾ! ಕುವೆಂಪು
ಕುವೆಂಪು ಅವರು ನಿಧನರಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದುಹೋಗುತ್ತವೆ. ಆ ಕುವೆಂಪುವನ್ನೇ ಸೃಜಿಸಿದ ಬೃಹತ್ತು ಹಾಗೂ ಮಹತ್ತಾದ ಸಾಹಿತ್ಯ ರಾಶಿಯಿಂದಾಗಿ ಇಂದಿಗೂ, ಎಂದಿಗೂ ಕುವೆಂಪು ಜನಮಾನಸದಿಂದ ದೂರವಾಗುವುದಿಲ್ಲ. ಅವರ ಸಮಗ್ರ ಸಾಹಿತ್ಯದ ಸಾರಭೂತದಂತೆ ರೂಪಗೊಂಡಿದ್ದು ವಿಶ್ವಮಾನವ ಸಂದೇಶ. ತನ್ನ ಎಲ್ಲಾ ಸಾಹಿತ್ಯವನ್ನು ಜನ ಮರೆತರೂ ಚಿಂತೆಯಿಲ್ಲ; ವಿಶ್ವಮಾನವ ಸಂದೇಶವೊಂದನ್ನು ಸ್ವೀಕರಿಸಿದರೆ ಸಾಕು ಎಂಬುದು ಸ್ವತಃ ಕುವೆಂಪು ಅವರ ಅಭಿಪ್ರಾಯವಾಗಿತ್ತು. ಅಂತಹ ವಿಶ್ವಮಾನವ ಸಂದೇಶದ ಭಾಗವಾದ "ವಿಶ್ವಮಾನವಗೀತೆ - ಅನಿಕೇತನ" ಗೀತೆಯನ್ನು ಓದುತ್ತಾ ಕೇಳುತ್ತಾ ಆ ಚೇತನಕ್ಕೆ ನಾವು ನಮ್ಮ ನಮನಗಳನ್ನು ಸಲ್ಲಿಸೋಣ.

ವಿಶ್ವಮಾನಗೀತೆ - ಅನಿಕೇತನ
ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
(ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)
<
ಶ್ರೀ ವಿ.ಕೆ.ಗೋಕಾಕ್ ಅವರ ಇಂಗ್ಲಿಷ್ ಅನುವಾದ
The Unhoused Consciousness Be unhoused, O my soul! Only the Infinite is your goal. Leave those myriad forms behind. Leave the million names that bind. A flash will pierce your heart and mind. And unhouse you my soul! Winnow the chaff of a hundred creeds. Beyond the systems, hollow as reeds, Turn unhorizoned where Truth leads, To be unhoused my soul! Stop not on the unending way. Never build a house of clay. The quest is endless. Night and day, There can be no end to your play When you are unhoused, O my soul! The infinite’s Yoga knows no end. Endless the quest you apprehend. You’ll grow infinite and ascend When you are unhoused, O my soul! (ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)
http://www.kuvempu.com/ ತಾಣದಲ್ಲಿರುವ ಇಂಗ್ಲಿಷ್ ಅನುವಾದ
O my spirit…
set roots nowhere… O my spirit
Grow beyond the myriad forms…
Go beyond the countless names…
From a heart overfull, inspiration bursts forth…
O my spirit…
set roots nowhere… O my spirit
Winnow the chaff of a hundred creeds…
Stretch beyond the stifling philosophies…
Rise, immense and endless as the cosmos…
O my spirit…
set roots nowhere… O my spirit
Rest nowhere on the unending road…
Build never a binding nest…
Touch never the boundary…
O remain infinite and boundless…
O my spirit…
set roots nowhere… O my spirit
Infinity's Yoga has no end…
Endless is the quest you apprehend…
You are that infinity…
become that boundless…
Ascend, ascend, ascend, ascend!
O my spirit…
set roots nowhere… O my spirit
(ಕೃಪೆ: http://www.kuvempu.com/ )
"ವಿಶ್ವಮಾನ ಸಂದೇಶ"ದ ಪೂರ್ಣಪಾಠ - ಪಂಚಮಂತ್ರ ಮತ್ತು ಸಪ್ತಸೂತ್ರ - http://www.kuvempu.com/ ವೆಬ್ ತಾಣದಲ್ಲಿ ದೊರೆಯುತ್ತದೆ.

- BRS's blog
- Login or register to post comments
- 339 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಓ ನನ್ನ ಚೇತನಾ! ಕುವೆಂಪು
ಡಾ. ಸತ್ಯ,
ಕುವೆಂಪು ಅವರು ನಮ್ಮನ್ನು ಅಗಲಿ ಆಗಲೇ ಹದಿನೈದು ವರ್ಷಗಳಾಯಿತೇ? ಅವರ ಕೃತಿಗಳಿಂದ ಅವರು ಇನ್ನೂ ಜೀವಂತವಾಗಿದ್ದಾರೆಂದು ನನ್ನ ಭಾವನೆ..
ಅಂದಹಾಗೆ, ವಿಶ್ವಮಾನವಗೀತೆಗೆ ಮತ್ತೊಮ್ಮೆ ಧನ್ಯವಾದಗಳು..
-ಅನಿಲ್
ಉ: ಓ ನನ್ನ ಚೇತನಾ! ಕುವೆಂಪು
ಕುವೆಂಪು ಅವರ ಹೆಸರಿಟ್ಟಿರುವ ನಮ್ಮ ವಿಶ್ವ ವಿಧ್ಯಾನಿಲಯದಲ್ಲಿ ಸದ್ದೆ ಇಲ್ಲಾ...
ಕುವೆಂಪು ಇಲ್ಲಿ ಕುಯೆಂಪು ಆಗುತಿದ್ದಾರೆ :(
ಸಂದೀಪ
ಉ: ಓ ನನ್ನ ಚೇತನಾ! ಕುವೆಂಪು
ಈ ವಿಚಾರ ಮರೆತೇ ಹೋಗಿತ್ತು :( ವಾರದ ಹಿಂದಷ್ಟೇ 'ಉದಯರವಿ' ಗೆ ಹೋಗಿ ಬಂದಿದ್ದೆ....
ಕುವೆಂಪುರವರು ತೀರಿಕೊಂಡ ದಿನ ಮನದಲ್ಲಿನ್ನೂ ಅಚ್ಚಗಿದೆ.... ೯ನೆಯ ತರಗತಿಯಲ್ಲಿ ಓದುತ್ತಿದ್ದ ನಮಗೆ ಆ ದಿನ ರಜೆ ನೀಡಲಾಗಿತ್ತು.... ನಮ್ಮ ಶಾಲೆಯ ಅಧ್ಯಾಪಕರೊಬ್ಬರು 'ಶ್ರೀ ರಾಮಾಯಣ ದರ್ಶನ" ದ ಕೆಲ ಸಾಲುಗಳನ್ನು ವಾಚಿಸಿದ್ದರು.... 'ಮಲೆಗಳಲ್ಲಿ ಮದುಮಗಳು' ಕೃತಿಯ ಬಗ್ಗೆ ಮತ್ತೊಬ್ಬರು ಮಾತನಾಡಿದ್ದರು....
ಕನ್ನಡ ಕುಲದ ದೈವವಾಗಿ 'ಕುವೆಂಪು' ರವರು ಸದಾ ನಮ್ಮೊಂದಿಗಿರುತ್ತಾರೆ .... ಅವರ ಕವಿತೆ, ಕತೆ, ಕಾದಂಬರಿ, ಹಾಗೂ ಲೇಖನಗಳ ಮೂಲಕ....
ಧನ್ಯವಾದಗಳು ಸತ್ಯನಾರಾಯಣ್ ರವರೆ.
ರೋಹಿತ್
'ಉದಯರವಿ'
ರಾಷ್ಟ್ರಕವಿ ಕುವೆಂಪುರವರು ಬಾಳಿದ್ದ ಮನೆ
http://www.facebook....
ಉ: ಓ ನನ್ನ ಚೇತನಾ! ಕುವೆಂಪು
ಡಾ. ಸತ್ಯ,
ವಿಶ್ವಮಾನವಗೀತೆಯ ಸಾಹಿತ್ಯಕ್ಕೆ ಧನ್ಯವಾದಗಳು.
ಕಮಲ
ಉ: ಓ ನನ್ನ ಚೇತನಾ! ಕುವೆಂಪು
ಕಾಲವೆಷ್ಟು ಬೇಗ ಉರುಳುತಿದೆ! ನಾವಿನ್ನೂ ಆಗ ಪ್ರೈಮರಿ ಸ್ಕೂಲ್. ಅಂತ್ಯಸಂಸ್ಕಾರಕ್ಕೆ ಕುಪ್ಪಳ್ಳಿಗೆ ಕರೆದೊಯ್ಯುವ ಮುನ್ನ ಸರ್ಕಾರಿ ಹೈಸ್ಕೂಲಿನ ಆವರಣದಲ್ಲಿ ಕೆಲಕಾಲ ಅಂತಿಮದರ್ಶನಕ್ಕಾಗಿ ಕುವೆಂಪುರವರನ್ನು ಇರಿಸಲಾಗಿತ್ತು. ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಬಂದಿದ್ದರು. ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಯೊಬ್ಬರು ತೀರಿಕೊಂಡಿದ್ದಾರೆ ಅಂದಷ್ಟೇ ಅರಿವು ಆಗ. ಆ ಅರಿವಿನ ಮಿತಿಯಲ್ಲಿ, ಕುವೆಂಪುರವರಿಗಿಂತ ಹೆಲಿಕಾಪ್ಟರ್ ಕುತೂಹಲವೆನಿಸಿ ಅದನ್ನು ನೋಡಲು ಹೋಗಿದ್ದೆವು! ಇಂದಿಗೂ ಆ ವಿಶ್ವಮಾನವನನ್ನು ಅರಿಯುವ ಪ್ರಯತ್ನ ಸಾಗಿದೆ...
ಉ: ಓ ನನ್ನ ಚೇತನಾ! ಕುವೆಂಪು
ವಿಶ್ವ ಮಾನವತ್ವ ಸಾರಿದ "ಕುವೆಂಪು"ರವರು ನಿಧನರಾಗಿ ಹದಿನೈದು ವರುಷಗಳಾದುವೆಂದರೆ ನಂಬಲಾಗುತ್ತಿಲ್ಲ! ಏಕೆಂದರೆ ಪ್ರತಿದಿನ ಮೈಸೂರು ಅನಂತಸ್ವಾಮಿಯವರ ಕಂಠದಲ್ಲಿ ಅವರ " ಓ ನನ್ನ ಚೇತನಾ" ಹಾಡನ್ನು ನನ್ನ ಕಾರಿನಲ್ಲಿ ಕೇಳುತ್ತಾ ನನ್ನ ದಿನಚರಿ ಆರಂಭವಾಗುತ್ತದೆ. ಕುವೆಂಪರವರು ರಸಋಷಿಯಾಗಿ ಈಗಲೂ ನಮ್ಮ ಮಧ್ಯೆ ಇದ್ದಾರೆ ಎಂದೇ ಭಾಸವಾಗುತ್ತದೆ. ಆ ದಿವ್ಯ ಚೇತನಕ್ಕೆ ಅನಂತ ನಮನಗಳು.