26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

BRS ರವರ ಬ್ಲಾಗ್

ರೈತನಾಗುವ ಹಾದಿಯಲ್ಲಿ ಸಂಪಾದನೆ : ಆಹ್ಲಾದಕರ ಅನುಭವ

January 25, 2011 - 11:34am
BRS
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರೈತನಾಗುವ ಹಾದಿಯಲ್ಲಿ

January 14, 2011 - 11:07am
BRS

ಮಿತ್ರರೇ,

ನಾನು ಸಂಪಾದಿಸಿರುವ, ಶ್ರೀ ಮಧುಸೂದನ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಕೃತಿಯು ದಿನಾಂಕ 25.1.2011 ಮಂಗಳವಾರ ಸಂಜೆ 5.30ಕ್ಕೆ ಕನ್ನಡ ಭವನದ 'ನಯನ' ಸಭಾಂಗಣದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ, ನಾಡಿನ ಹಿರಿಯ ಸಜ್ಜನ ರೈತರೊಬ್ಬರನ್ನು ಸನ್ಮಾನಿಸಲು ತೀರ್ಮಾನಿಸಿಲಾಗಿದೆ. ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ ಪತ್ರಿಕೆ ಕಳುಹಿಸಲಾಗಿವುದು. ದಯಮಾಡಿ ಬನ್ನಿ. ನಾಡಿನ ರೈತಸುಮುದಾಯಕ್ಕೆ ಅರ್ಪಣೆಯಾಗಿರುವ ಈ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವೂ ರೈತರ ಜೊತೆ ನಿಲ್ಲೋಣ. ಕಥೆಗಾರ ಅಬ್ದುಲ್ ರಷೀದ್ ಅವರ ಮುನ್ನುಡಿ ಪುಸ್ತಕಕ್ಕಿದೆ. ಶ್ರೀ ಜಿ.ಎಸ್.ಎಸ್.ರಾವ್ ಅವರು ಬೆನ್ನುಡಿಯನ್ನು ಬರೆದಿದ್ದಾರೆ.

ಪೆಜತ್ತಾಯ ಅವರನ್ನು ಬಲ್ಲವರು, ಬಂಧು-ಮಿತ್ರರು, ಅವರ ಬರಹಗಳ ಓದುಗರು, ಅಭಿಮಾನಿಗಳು, ಬ್ಲಾಗ್ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಾರ್ಥನೆ. Read more about ರೈತನಾಗುವ ಹಾದಿಯಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕುವೆಂಪು ಜನ್ಮ ದಿನ (ಡಿಸೆಂಬರ್ 29) : ಒಂದಷ್ಟು ಕವಿತೆಗಳ ಮೆಲುಕು

December 28, 2010 - 12:29pm
BRS

ಕುವೆಂಪು

ಹಕ್ಕಿಯುಲಿಗಳುಕ್ಕುವಿಂಪು
ಸುಗ್ಗಿದಳಿರ ಸಗ್ಗಸೊಂಪು
ಹೊಸಹೊಂಗೆಯ ನೆಳಲ ತಣ್ಪು
ಚಿಂಗೆನ್ನೆಯ ಚೆಲುವು ನುಣ್ಪು
ಸುರಹೊನ್ನೆಯ ಗೊಟ್ಟಿಗಂಪು
ಉಸಯಾಸ್ತದ ಬೈಗುಗೆಂಪು
ನಿರ್ಝರಿಣಿಯ ನೆರೆಯ ತಿಣ್ಪು
ಗಿರಿಶೃಂಗದ ಬರ್ದಿಲ ಬಿಣ್ಪು
ಗಡಿಕಾಣದ ಕಡಲ ಗುಣ್ಪು
ಉಡು ರವಿ ಶಶಿ ನಭದ ಪೆಂಪು
ಆದಿ ಆತ್ಮದ ಸಿರಿ ಅಲಂಪು
ಎಲ್ಲವೊಂದುಗೂಡಲೆಂದು
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ಇರ್ದುಮಿಲ್ಲದೀ ಕುವೆಂಪು!

ಶ್ರೀ ರಾಮಾಯಣ ದರ್ಶನಂ Read more about ಕುವೆಂಪು ಜನ್ಮ ದಿನ (ಡಿಸೆಂಬರ್ 29) : ಒಂದಷ್ಟು ಕವಿತೆಗಳ ಮೆಲುಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

November 10, 2010 - 2:25pm
BRS

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ ಎಫಿಗ್ರಾಫಿಯಾ ಕರ್ನಾಟಿಕ ಸಂಪುಟ ೫ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ನಾನು ಮೇಳೆ ಕೊಟ್ಟಿರುವ ಶೀರ್ಷಿಕೆಗೆ ಅನುಗುಣವಾಗಿ ಕೆಳಗಿನ ಪಟ್ಟಿಯನ್ನು ನೀಡಿದ್ದೇನೆ. ಒಮ್ಮೆ ನೋಡಿ!

ಅದಕ್ಕೆ ಮೊದಲು ಆ ಚೂರ್ಣಿಕೆಯನ್ನು ಸಿದ್ಧಪಡಿಸಿದ ಕಲಾವಿದನ ಪರಿಚಯ ಮಾಡಿಕೊಂಡುಬಿಡಿ.

ಸಾರಿಗೆ ಚೆನ್ನಬಸಪ್ಪನ ಮೊಮ್ಮಗ, ಚಿತ್ರದ ರಾಮಪ್ಪನ ಮಗ, ಶಿಲ್ಪ ವಿಭಾಗದ ಅಧಿಕಾರಿಯಾಗಿದ್ದ ಚಿತ್ರಗಾರ ತಿಪ್ಪಣ್ಣ ಚೂರ್ಣಿಕೆಯನ್ನು ಸಿದ್ಧಪಡಿಸಿದ್ದು. Read more about ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

November 10, 2010 - 2:13pm
BRS

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ! Read more about ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - BRS ರವರ ಬ್ಲಾಗ್