September 9, 2010 - 11:22am
ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಮಾದ್ಯಮಗಳೂ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟವು. ಸುವರ್ಣ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಎಲ್. ಹನುಮಂತಯ್ಯನವರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ಅಸ್ಪೃಷ್ಯತೆಯ ನಿರ್ಮೂಲನೆಗೆ ಇರುವ ಎಡರು ತೊಡರುಗಳನ್ನು ಗುರುತಿಸಿದರೆ, ಗೀತಾ ರಾಮಾನುಜಂ ಅವರು ಕೇವಲ ಮೇಲ್ವರ್ಗದವರು ಪ್ರಯತ್ನ ಪಟ್ಟರೆ ಸಾಲದು; ಅಸ್ಪೃಷ್ಯರೂ ಸಹಕರಿಸಬೇಕು. ಅಸ್ಪೃಷ್ಯತೆಯ ನಿವಾರಣೆಗಾಗಿ ನಾವು (ಮೇಲ್ವರ್ಗ?) ಏನೂ ಮಾಡಲು ಸಿದ್ಧರಿದ್ದೇವೆ. Read more about 2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
September 3, 2010 - 10:50am
ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ಸಆರ್ವಭೌಮ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು ಕೊಟ್ಟರು. ಅವರನ್ನು ಬೀಳ್ಕೊಟ್ಟ ತಕ್ಷಣ ನಾನು ಕೆಲವು ಕಥೆಗಳ ಮೇಲೆ ಕಣ್ಣಾಡಿಸಿದೆ. ಅದರ ಹಲವಾರು ಕಥೆಗಳು ಒಂದೇ ಬಾರಿಗೆ ನನ್ನಿಂದ ಓದಿಸಿಕೊಂಡವು. ಒಂದೇ ಒಂದು ಪದ ಆಚೀಚೆಯಾಗದಂತೆ ಬರೆಯುವ ಅವರ ಕಲೆಗಾರಿಕೆ ನನಗೆ ಇಷ್ಟವಾಯಿತು. ಒಂದು ಕಥೆಯಾದ ಮೇಲೆ ಅದರ ಬಗ್ಗೆ ನನಗನ್ನಿಸಿದ್ದನ್ನು ಆಗಲೇ ಟೈಪಿಸಿಬಿಡುತ್ತಿದ್ದೆ. ಅಂತಹ ಅನಿಸಿಕೆಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ. ಆ ಸಂಕಲನದ ಇನ್ನುಳಿದ ಕಥೆಗಳನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ. Read more about ಗೋಪಿನಾಥ ರಾವ್ ಅವರ ’ಸಾರ್ವಭೌಮ’ದ ಕೆಲವು ಕಥೆಗಳು: ಸ್ವಗತ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: