ಅಂತರಾಳ
ಬದುಕ ಬಗೆದು, ಬದುಕ ಬಿತ್ತಿ, ಬದುಕ ಬೆಳೆವ ದಾರಿಯಲ್ಲಿನ ನನ್ನ ಅನುಭವಗಳು ....
ಸ್ವಾಭಿಮಾನ
ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..
ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..
ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...
ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..
ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..
ಇನ್ನಾದರೂ ಬಿಡುವೆಯ ನನ್ನ..
ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು...
ಇನ್ನಾದರೂ ಸೋಲು ನೀ ಮನವೇ..
ಇಷ್ಟೆಲ್ಲಾ.. ಆದ ಮೇಲೂ..

- bvatsa ರವರ ಬ್ಲಾಗ್
- Login or register to post comments
- 216 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: