ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › ChaitraHosmane ರವರ ಬ್ಲಾಗ್

ಗ್ರಾಹಕರೇ, ನಿಮಗಿದು ಗೊತ್ತೇ..?

June 27, 2008 - 3:14pm — ChaitraHosmane

ಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳು ಅನೇಕ.. ವಿಧವಿಧದ ಜಾಹಿರಾತುಗಳು ಪ್ರತಿದಿನ ನಮ್ಮ ಕಣ್ಣು ಸೆಳೆಯುತ್ತಲೇ ಇರುತ್ತದೆ. ಆದರೆ ಯಾವುದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು..? ಯಾವುದನ್ನು ನಾವು ತೆಗೆದುಕೊಳ್ಳಬಾರದು ಎಂದು ನಮಗೆ ಗೊತ್ತಾಗುವುದಾದರೂ ಹೇಗೆ..? ಗ್ರಾಹಕರಿಗೆ ಇದನ್ನು ತಿಳುಸುವವರಾದರೂ ಯಾರು..?

ಇಂತಹ ಒಂದು ನಿಟ್ಟಿನಲ್ಲಿ ಹುಟ್ಟಿದ ಸಂಸ್ಥೆ CERC (ಕನ್ಸ್ಯೂಮರ್ ಎಜುಕೇಶನ್ ಎಂಡ್ ರಿಸರ್ಚ್ ಸೆಂಟರ್) . ೧೯೭೮ ರಲ್ಲಿ ಈ ವಿಭಿನ್ನ ಆಲೋಚನೆ ಬಂದಿದ್ದು ಐ ಐ ಎಂ ನ ಪ್ರೊಫೆಸರ್ ಆಗಿದ್ದ ಮನುಭಾಯಿ ಶಾ ಅವರಿಗೆ. ಬರಿ ನಾಲ್ಕು ಜನರಿಂದ ೨೫೦ ರೂ ಒಂದಿಗೆ ಒಂದು ರಿಜಿಸ್ಟರ್ ಮಾಡಿಸಿದ್ದ ಈ ಕಂಪನಿಯ ಆದಾಯ ಈಗ ೧೫ ಕೋಟಿ ರೂಗಳು. ಮನುಭಾಯಿ ಶಾ ಅವರ ಮೇಲಿನ ನಂತರದ ವಿವಾದ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಒಟ್ಟಾರೆ ಸಂಸ್ಥೆಯ ಸಾಧನೆ ನಿಜಕ್ಕೂ ಪ್ರಶಂಸನೀಯ. ಪ್ರತಿಷ್ಟಿತ ಕಾರು ಕಂಪನಿಯಾದ ಜನೆರಲ್ ಮೋಟರ್ಸ್ ಗೆ ಕಾರುಗಳಲ್ಲಿನ ಪ್ಯಾಸೆಂಜರ್ ಸೇಫ್ಟಿಯ ಬಗ್ಗೆ ಪ್ರಶ್ನಿಸಿ ಅದಕ್ಕೆ ಸೂಕ್ತ ಸಲಹೆ ನೀಡಿದ ಹೆಮ್ಮೆ ಈ ಗುಜರಾತ್ ನ ಪುಟ್ಟ ಸಂಸ್ಥೆಯದು. ಇಡಿ ಏಷ್ಯಾದಲ್ಲೇ ಈ ಬಗೆಯ ಪ್ರಯತ್ನ ಮೊದಲನೆಯದು ಎಂದು ಹೇಳಲಾಗಿದೆ.

ಈ ಸಂಸ್ಥೆಯಿಂದ ಪ್ರಕಟವಾಗುವ ದ್ವೈ ಮಾಸಿಕ ಪತ್ರಿಕೆ ' ಇನ್ಸೈಟ್ '. ಮಾರುಕಟ್ಟೆಯಲ್ಲಿ ಬರುವ ಯಾವ ವಸ್ತುಗಳೇ ಇರಲಿ ಅದನ್ನು ಸಂಪೂರ್ಣವಾಗಿ ಪರೀಕ್ಷಿಸಿ, ಸಂಶೋಧನೆ ನಡೆಸಿ ಅದರ ಬಗ್ಗೆ ಪೂರ್ತಿ ವಿವರಗಳನ್ನು, ಪರೀಕ್ಷೆಯ ಪೂರ್ಣ ಫಲಿತಾಂಶಗಳನ್ನು, ಗ್ರಾಹಕರಿಗೆ ತಿಳಿಸಲಾಗುತ್ತದೆ. ಬಗೆಬಗೆಯ ಶ್ಯಾಂಪು , ಸೋಪುಗಳಾಗಲಿ , ಯಾವುದೇ ಇಲೆಕ್ಟ್ರಾನಿಕ್ ಸಲಕರಣೆಗಳಾದ ಕುಕ್ಕರ್, ಮಿಕ್ಸರ್, ತಂಗಳು ಪೆಟ್ಟಿಗೆ, ಬಟ್ಟೆ ತೊಳೆಯುವ ಮೆಶಿನ್ ಆಗಿರಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಅಷ್ಟೆ ಅಲ್ಲ.. ಯಾವ ಇನ್ಸೂರೆನ್ಸ್ , ಮ್ಯುಚುಅಲ್ ಫಂಡ್ಸ್, ಟ್ರಸ್ಟ್ ಏಜನ್ಸಿ ಗಳ ಬಗ್ಗೆ ಆಗಲೀ ಅದರ ಬಗ್ಗೆ ಎಲ್ಲ ವಿವರಗಳನ್ನು ಕಲೆ ಹಾಕಿ ಜನರಿಗೆ ತಿಳಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವವರಿಗೆ ಹೆಚ್ಚಾಗಿ ಕೊಡುವ ಇಂಜೆಕ್ಷನ್ ಆದ IV ಯಲ್ಲಿರುವ ಲಿಕ್ವಿಡ್ ನಲ್ಲಿ ಕೂಡ ಕಂಟ್ಯಾಮಿನೇಶನ್ ಇರುವುದು ತಿಳಿದುಬಂದಿದ್ದು ಅದಕ್ಕೆ ಸೂಕ್ತ ಮಾಹಿತಿ ಮತ್ತೆ ತಯಾರಕರ ಮೇಲೆ ದೂರು ಕೊಡಲಾಗಿದೆ.

ನಮ್ಮ ಕರ್ನಾಟಕದಲ್ಲೂ ಈ ರೀತಿಯ ಪ್ರಯತ್ನ ಸ್ವಲ್ಪ ಅಲ್ಲಿ ಇಲ್ಲಿ ನಡೆದಿದ್ದರೂ ಅಷ್ಟಾಗಿ ಬೆಳಕಿಗೆ ಬಂದಿಲ್ಲ ಎಂದೇ ಹೇಳಬಹುದು. ಆದರೂ ವಸ್ತುವನ್ನು ತೆಗೆದುಕೊಂಡು ಆಮೇಲೆ, ಅಯ್ಯೋ ಎಂದು ಪೇಚಾಡುವುದಕ್ಕಿಂತ, ಅನೇಕ ಜಾಹಿರಾತುಗಳಿಗೆ ಮಾರುಹೋಗಿ ಮೋಸಹೋಗುವುದಕ್ಕಿಂತ ಈ ರೀತಿ ತಿಳಿಸುವವರಿದ್ದರೆ ಚನ್ನಾಗಿರುತ್ತೆ ಅಲ್ಲ್ವೇ ?

  • chintana-mantana
~.~
  • ChaitraHosmane ರವರ ಬ್ಲಾಗ್
  • Login or register to post comments
  • 271 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2008 - 6:50pm — vikashegde

ಉ: ಗ್ರಾಹಕರೇ, ನಿಮಗಿದು ಗೊತ್ತೇ..?

vikashegde's picture

ಆ ಇನ್ಸೈಟಿಂದು ವೆಬ್ ಅಡ್ರೆಸ್ಸು, ಅಥವಾ ಅಂಚೆ ವಿಳಾಸ ಇದ್ರೆ ಹೇಳಿ.

ಪುಸ್ತಕದಂಗಡಿಗಳಲ್ಲೆಲ್ಲಾ ಸಿಗತ್ತಾ ಅದು?

**************************
http://vikasavada.blogspot.com/
**************************

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 8:22pm — Rajeshwari

ಉ: ಗ್ರಾಹಕರೇ, ನಿಮಗಿದು ಗೊತ್ತೇ..?

Rajeshwari's picture

ನಿಮ್ಮ ವಿವರಣೆಗಳಿಗೆ, ಒಳ್ಳೆ ಲೇಖನಕ್ಕೆ ದನ್ಯವಾದಗಳು.

ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು http://www.cercindia.org/ ಇಲ್ಲಿ ಸಂಗ್ರಹಿಸಬಹುದು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 9:52am — lgnandan

ಉ: ಗ್ರಾಹಕರೇ, ನಿಮಗಿದು ಗೊತ್ತೇ..?

lgnandan's picture

ಆಹಾರ ಪದಾರ್ಥಗಳ ಬಗ್ಗೆ ಸಂಶೋದನೆ ಕ್ಯೆಗೊಳ್ಳಲು ಮ್ಯೆಸೂರಿನಲ್ಲಿರುವ CFTRI ಕೊಡ ಒಳ್ಳೆಯ ಕೆಲಸ ಮಾಡುತಿದೆ ಎಂದು ತಿಳಿದೆ. ಯಾವುದೇ ಹೊಸ ಫ಼ುಡ್ ಉತ್ಪನ್ನ ಮಾರುಕಟ್ಟೆಗೆ ಬಂದರೆ ಅದನ್ನು ಸಂಶೋದನೆಗೆ ಒಳಪಡಿಸಿ ಗುಣಮಟ್ಟವನ್ನು ಗುರುತಿಸುತ್ತದೆ. ನಿಮ್ಮ ಮಾಹಿತಿ ಸಮಯೋಚಿತವಾಗಿದೆ.
ದನ್ಯವಾದಗಳು...

ನಂದನ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 30, 2008 - 3:38pm — shashikannada

ಉ: ಗ್ರಾಹಕರೇ, ನಿಮಗಿದು ಗೊತ್ತೇ..?

shashikannada's picture

ಪ್ರಿಯರೇ,

ನಮಸ್ಕಾರ. ನಿಮ್ಮ ಲೇಖನ ತುಂಬಾ ಉಪಯುಕ್ತವಾಗಿದ್ದು, ಚೆನ್ನಾಗಿ ಮೂಡಿಬಂದಿದೆ. ನೀವು ಹೆಚ್ಚು ಹೆಚ್ಚು ಬರೆಯಬೇಕೆಂದು ಕೇಳಿಕೊಳ್ಳುತ್ತೇನೆ. ನಿಮಗೆ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
Mobile: 9886484937
Personal Blog: http://sampada.net/user/shashikannada
Personal Website: http://vishwamanava.mywebdunia.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • (Technical article ಭಾಗ - ೧) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
  • ಇಂಟರ್ನೆಟ್ ತಂತ್ರಜ್ಞಾನ....
  • ದುನಿಯಾ ವಿಜಯ್ ಗೆ ಯಾಕೆ ಹೀಗೆ- ರಘೋತ್ತಮ್ ಕೊಪ್ಪರ
  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ
  • ನಾನು ಏನೂ ಹೇಳಲಾರೆ..
Syndicate content

ಲೇಖಕರು

ChaitraHosmane's picture

ಪೂರ್ಣ ಹೆಸರು
ಚೈತ್ರ

ಪರಿಚಯ

ನಮಸ್ತೆ... ಹೆಸರು ಚೈತ್ರಾ. ಹುಟ್ಟಿದ್ದು ಬೆಳೆದದ್ದು ಮಲೆನಾಡು.
ಈಗ ಬೆಂಗಳೂರಿನಲ್ಲಿ ವಾಸ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಸಂಗೀತದಲ್ಲಿ ಆಸಕ್ತಿ... ಓದುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ನಾವು ಅದೆಷ್ಟು ಬಡವರು!
    January 10, 2009 - 8:25am
  • manjunath s reddy
    ಉ: ಯಾವುದು ಬೇಕು?
    January 10, 2009 - 8:20am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 182 ಅತಿಥಿಗಳು ಆನ್ಲೈನ್ ಇರುವರು.


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator