26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ನಾಡು ಕನ್ನಡಿಗರಧ್ಹೆ ???

February 18, 2009 - 8:55pm
chaitu78
ಕನ್ನಡಿಗರೇ, ಏಳಿ ಎದ್ದೇಳಿ , ನಮ್ಮ ನಾಡನ್ನು ಉಳಿಸಿ.... ವಲಸೆಗಾರರಿಂದ ತುಂಬಿ ತುಳುಕುತ್ಚಿರುವ ಮಹಾನಗರ ತನ್ನ ಮೂಲ ಸಂಸ್ಕೃತಿ ,ಸಜ್ಜನಿಕೆ ಮುಂತಾದ ಮುಲ್ಯಾ ಭರಿತ ನಡುವಳಿಕೆಗಳಿಗೆ ಎಳ್ಳು ನೀರು ಬಿಡ್ತಾ ಇದೆ . ತಮಿಳು ತೆಲುಗು,ರಾಜಸ್ಥಾನಿ ,ಬಂಗಾಳಿ ,ಗುಜರಾತಿಗಳ ಅಧಿಪತ್ಯ ಹೆಚ್ಚಾಗುಥ್ಹ ಬಂದಿದ್ಧು ಕನ್ನಡಿಗರು ಮೂಲೆ ಗುಂಪಾಗಿ ಹೋಗಿದಾರೆ .ಕನ್ನಡ ವಾತಾವರಣ ಅಂತು ಮಂಗಮಾಯ . ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲಾದರು ವ್ಯವಹರಿಸಬಹುದೆಂಬ ಭಾವನೆ ವಲಸಿಗರಲ್ಲಿ ಬೇರೂರಿದೆ. ಕನ್ನಡ ಬಾರಧೆ ಕರ್ನಾಟಕ ರಾಜಧಾನಿಯಲ್ಲಿ ಒಂದು ದಿನವೂ ಕಳೆಯಲಾರೆ ಎಂಬ ಭಾವನೆಯನ್ನು ವಲಸಿಗರಲ್ಲಿ ಸರ್ಕಾರ ಹುಟ್ಟುಹಾಕಬೇಕಾಗಿಥ್ಹು. ಅನ್ಯ ರಾಜ್ಯದವರಿಗೆ ಕನ್ನಡಿಗರೆಂದರೆ ಒಂಥರಾ ಮೈಎಲ್ಲ ಉರಿ , ತಾತ್ಸಾರ ... ನಮ್ಮವರೂ ಹಾಗೆ ಇಧ್ಹಾರೆ ಎನ್ನಿ.ತಮ್ಮವರನ್ನೇ ಸೇರಿಸಿಕೊಂಡು ಸಂಘ ಸಂಸ್ಥೆಗಳನ್ನು ಸ್ತಾಪಿಸ್ತಾರೆ .. ಅಕ್ಕ ಪಕ್ಕದ ಕನ್ನಡಿಗರನ್ನು ಯಾವೂರು ದಾಸಯ್ಯ ಅಂತಾನು ಕೇಳಲ್ಲ ... ವಲಸಿಗರು ತಮ್ಮ ಭಾಷೆ ಬಿಟ್ಟು ಇಲ್ಲಿಯ ಭಾಷೆಯನ್ನೂ ಅವರಮ್ಮನ್ನಾನೆಗೂ ಮಾತಾಡೋಲ್ಲ ಬಿಡಿ..ನಮ್ಮವರು ಸಹ ಹಲ್ಲುಗಿಂಜಿಕೊಂಡು ಅವರ ಭಾಷೆಯಲ್ಲೇ ಮಾತನಾದಿಯಾರು .. ಇವರೇ ಹರುಕು ಮುರುಕು ಭಾಷೆಯಲ್ಲಿ ಅವರೊಂದಿಗೆ ಸಂಭಾಷಣೆ ನಡೆಸುವರು. ಒಟ್ಟ್ನಲ್ಲಿ ೩೦-೪೦ ವರ್ಷಗಳಿಂದ ಈ ನೆಲದಲ್ಲಿ ಠಿಕಾಣಿ ಹಾಕಿಧ್ಹರೂ ಇಲ್ಲಿಯ ಭಾಷೆ ಕಲಿಯಧ್ಹೆ ,ಇಲ್ಲಿಯವರೊಂಧಿಗೆ ಸ್ನೇಹಾ ಭಾವವನ್ನು ಇಟ್ಟು ಇರಲಾರಧೆ ತಮ್ಮದೇ ಆದ ಸಾಮ್ರಾಜ್ಯ ವನ್ನು ತುಂಬಾ ಜನಗಳು ಇದ್ಧಾರೆ ಸ್ವಾಮಿ... ಇನ್ನೊಂಧು ವಿಷಯ ಏನಂದರೆ ಬೆಂಗಳೂರಿನ ಸುಥ್ಹಾ ಮುಥ್ಹಾ ಇರುವ ಜಮೀನು, ನಿವೇಶನಗಳು ಮುಕ್ಕಾಲು ಪಾಲು ಅನ್ಯ ರಾಜ್ಯದವರಧ್ಹು ..ರಾಜಕೀಯ ವ್ಯಕ್ತಿಗಳು ಭೂಮಿ ಕೊಂಡಿದ್ಧರೆ ,ಕೆಲವರು ನಿವೇಶನಗಳನ್ನು ತಕೊಂದಿದಾರೆ ..ಸರ್ಕಾರವೇ ಹೊರಗಿನವರಿಗೆ ಕರೆಧು ನಿವೇಶನಗಳು ಈ ಹಿಂಧೆ ಕೊಟ್ಟಿದೆ .ಇದನ್ನೆಲ್ಲಾ ಕನ್ನಡಿಗರು ಸಹಿಸಿಕೊಂಡು ಬಂಧಿದ್ಧಾರೆ ... ಕನ್ನಡಿಗರು ಗಂಡಸರೇ ??? ಎಂಬದನ್ನು ನಮಗೆ ನಾವೇ ಒಮ್ಮೆ ಪರಿಶೀಲಿಸಬೇಕಾಗಿಧೆ ... ಸ್ನೇಹಿತರೇ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಇದ್ದರೆ ದಯವಿಟ್ಟು ಈ ಕನ್ನಡಿಗನಿಗೆ , ಎಲ್ಲ ಓದ್ಹುಗರಿಗೂ ತಿಳಿಸಿ. ಇಂತೀ ನಿಮ್ಮ, ಚೈತನ್ಯ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vagdevi on
ಕನ್ನಡಿಗರು ಗಂಡಸರಲ್ಲ ಎಂಬ ಭಾವನೆ ನಿಮಗೆ ಏಕೆ ಬಂದಿತೆಂದು ತಿಳಿಯಬಹುದೇ? ನಾವು ಕನ್ನಡಿಗರು, ನಮ್ಮ ಕನ್ನಡ ಎಲ್ಲಾ ಕಡೆಯೂ ರಾರಾಜಿಸಬೇಕೆಂದರೆ ನಾವು ಅದನ್ನು ಉಪಯೋಗಿಸಬೇಕು. ಅದು ಬಿಟ್ಟು ಇವ ತಮಿಳ, ಅವ ಮಲೆಯಾಳಿ, ಇನ್ನೊಬ್ಬ ತೆಲುಗು ಎಂದು ಅವರನ್ನು ತೆಗಳಿ ನಾವು ಮುಂದೆ ಬರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಇದು ಹೇಗಿದೆಯೆಂದರೆ ನಾವು ಮೇಲೆ ಬರಲು ಇನ್ನೊಬ್ಬರ ಕಾಲು ಹಿಡಿದು ಎಳೆದು ಅವರನ್ನು ತುಳಿದು ಮೇಲೆ ಬಂದಂತೆ. ನಾವು ಕನ್ನಡಿಗರೆಂಬ ಅಭಿಮಾನ ನಮಗಿರಬೇಕು. ನಮ್ಮವರೇ ನಮ್ಮನ್ನು ತೆಗಳಿದರೆ ನಾವು ಹೇಗೆ ಮುಂದೆ ಬರಬಹುದು. ಇನ್ನೊಂದು ಮಾತು, ನೀವು ಕನ್ನಡದ ಮೇಲೆ ಅಭಿಮಾನ ಇಟ್ಟುಕೊಂಡಿದ್ದಾಗ ವ್ಯಾಕರಣ ದೋಷವಿಲ್ಲದೆ, ಅಕ್ಷರ ದೋಷಗಳಿಲ್ಲದೆ ಬರೆದರೆ ನಮಗೆಲ್ಲರಿಗೂ ಓದಲು ಖುಷಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಅದೇ ಮೊದಲಿಗೆ ಕನ್ನಡಕ್ಕೆ ನಾವು ಕೊಡುವ ಮರ್ಯಾದೆಯಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ನೀವು ಏನು ಹೇಳ ಬಯಸಿದ್ದೀರಿ ಅನ್ನುವುದನ್ನು ಶುದ್ಧ ಕನ್ನಡದಲ್ಲಿ ಹೇಳಿದರೆ ನಮಗೂ ನಿಮ್ಮ ಮೇಲೆ ಮತ್ತು ನಿಮ್ಮ ಆ ಕನ್ನಡದ ಮೇಲೆ ಅಭಿಮಾನ ಮೂಡೀತು. ಇಲ್ಲವಾದರೆ, ನಿಮ್ಮ ಈ ಕೂಗು ಕೂಡ ಇತ್ತೀಚೆಗೆ ಹಗಲೆಲ್ಲಾ ಕೇಳಿಬರುತ್ತಿರುವ ವಿವಿಧ ಸಂಘ ಸಂಸ್ಥೆಗಳ ಕೂಗುಗಗಳಂತೆ ಅರ್ಥಹೀನವಾದೀತು. ನಾನು ಅನ್ಯರಿಂದ ಏನನ್ನಾದರೂ ಬಯಸುತ್ತೇನಾದರೆ, ಅದನ್ನು ನಾನು ಎಷ್ಟರಮಟ್ಟಿಗೆ ಮಾಡಿ ತೋರಿಸುತ್ತಿದ್ದೇನೆ ಅನ್ನುವುದು ಮುಖ್ಯ. ಇಲ್ಲವಾದರೆ, ಇದು ರಾಜಕೀಯ ನಾಯಕರುಗಳ ಘೋಷಣೆಗಳಂತಾದೀತು. >>ಕನ್ನಡಿಗರು ಗಂಡಸರೇ? ಹಾಗೆಂದರೇನು? ಗಂಡಸರು ಮಾತ್ರ ಹೋರಾಟ ಮಾಡುವವರು ಅಂತ ಅರ್ಥಾನೇ? ಒಂದೇ ಒಂದು ಹೆಣ್ಣು ಹೋರಾಟಗಾರ್ತಿಯ ಹೆಸರು ನಿಮ್ಮ ನೆನಪಿಗೆ ಬರುತ್ತಿಲ್ಲವೇ? ಇದುವರೆಗೆ ಈ ನಾಡಿನಲ್ಲಿ ಹೋರಾಟ ಮಾಡಿದ ವೀರ ರಮಣಿಯರೇನು ಗಂಡಸರಾಗಿದ್ದರೇ? ನಿಮ್ಮ ಮಾತು ಹೆಂಗಸರನ್ನು ಮತ್ತು ಬೆಳೆಯುತ್ತಿರುವ ಮೂರನೇ ಜಾತಿಯವರನ್ನು ಹೀಗಳೆದಂತೆ ಅಲ್ಲವೇ? ಕನ್ನಡಿಗರು ಬರೇ ಕನ್ನಡಿಗರು. ಅವರಲ್ಲಿ ಈ ರೀತಿ ಲಿಂಗ ಬೇಧ ಭಾವ ಯಾಕೆ ಬೇಕು? ತಮ್ಮಲ್ಲಿ ನನ್ನ ಒಂದು ವಿನಂತಿ: ಕನ್ನಡವನ್ನು ಬಳಸಿ, ಕನ್ನಡವನ್ನು ಕಲಿಸಿ, ಕನ್ನಡವನ್ನು ಬೆಳೆಸಿ, ಕನ್ನಡವನ್ನು ಉಳಿಸಿ. ತಾವು ಮಾಡದ್ದನ್ನು ಬೇರೆಯವರಿಂದ ಹೇಗೆ ನಿರೀಕ್ಷಿಸುತ್ತಿರುವಿರಿ ತಾವು? ತಾವು ಬರೆದಿರುವುದನ್ನು ತಾಳ್ಮೆಯಿಂದ ಓದಿ ನೋಡಿ. ಕನ್ನಡಿಗರೇ ಏಳಿ, ಎದ್ದೇಳಿ ಅನ್ನುವ ನೀವು, ಎಷ್ಟು ಎಚ್ಚರದಿಂದ ಬರೆದಿದ್ದೀರಿ ಅನ್ನುವುದನ್ನು ಮನವರಿಕೆ ಮಾಡಿಕೊಳ್ಳಿ ಒಮ್ಮೆ. ದಯವಿಟ್ಟು ಕನ್ನಡದ ಮೇಲೆ ಈ ರೀತಿ ಅತ್ಯಾಚಾರ ಮಾಡದಿರಿ. ಸಂಪದದಲ್ಲಿ ತಾವು ಬರೆದಿರುವುದನ್ನು ಪುನಃ ಬದಲಾಯಿಸುವ ಅವಕಾಶ ಇದೆ. ಆ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಇನ್ನಾದರೂ ಇಲ್ಲಿರುವ ತಪ್ಪುಗಳನ್ನು ಸರಿಮಾಡಿ ನೋಡಿ. ನಿಮ್ಮ ಮೇಲೆ ಎಲ್ಲಾ ಸಂಪದಿಗರಿಗೂ ಹೆಮ್ಮೆ ಮೂಡುವಂತೆ ಮಾಡಿ. ನಿಮ್ಮ ಈ ಕಳಕಳಿಯ ಕೂಗಿನ ಹಿಂದೆ ಏನೋ ಅರ್ಥ ಇದೆ ಅನ್ನುವುದು ಎಲ್ಲರಿಗೂ ಮನವರಿಕೆಯಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by chaitu78 on
ಅತ್ರಾಡಿ ಯವರೇ , ನಿಮ್ಮ ಮಾತು ನಿಜ , ಆದರೆ ನೀವು ಹೇಳಿದ ಹಾಗೆ ನಾನು ಲಿಂಗ ಬೇಧ ಭಾವದ ಬಗ್ಗೆ ಹೇಳ್ತಾ ಇಲ್ಲ .."ಗಂಡಸರೇ" ಅಂದ್ರೆ ಅದು ಒಂದು ಅರ್ಥ ಕೊಡುತ್ತದೆ .. ಉಧಾಹರಣೆಗೆ : ಈ ದೇಶದ ರಾಷ್ಟ್ರಪತಿ ಯಾರು ಅಂದ್ರೆ ಪ್ರತಿಭಾ ಪಾಟೀಲ್ ಅಂತೀವಿ , ಅವರು ಒಬ್ಭ ಹೆಂಗಸು ಅಂದ ಮಾತ್ರಕ್ಕೆ "ರಾಷ್ಟ್ರಪತ್ನಿ " ಅನ್ನೋಲ್ಲ ಅಲ್ವೇ?? ಯಾಕಂದ್ರೆ "ರಾಷ್ಟ್ರಪತಿ" ಅನ್ನೋ ಪದಕ್ಕೆ ಅದಕ್ಕೆ ಆದ ಅರ್ಥ ಇರುತ್ತೆ . ಇನ್ನೊಂದು ಉಧಾಹರಣೆ ; ನಮ್ಮೂರ ಚೇರ್ಮನ್ ಶ್ರೀಮತಿ ಕಲ್ಪನ ಅನ್ನೋ ಬದಲು ನಮ್ಮೂರ ಚೇರ್" ವೊಮೆನ್" ಅಂಥ ಯಾಕೆ ಕರೆಯೋಲ್ಲ ??? ಏನೋ ನನಗೆ ತಿಳಿದದ್ದು ನಾನು ಬರೆದಿದ್ದೀನಿ ... ಅಂದ ಹಾಗೆ ನೆನ್ನೆ ನಾನು ಬರೆದ ಬ್ಲಾಗ್ ನ ವ್ಯಾಕರಣ ದೋಷ ಕ್ಕೆ ಕ್ಷಮೆ ಇರಲಿ ಯಾಕಂದ್ರೆ ಗೂಗಲ್ convertor ಕನ್ನಡ ಸರಿಯಾಗಿ ಗೊತ್ತಿದ್ರೂ ತಪ್ಪು ಮಾಡ್ಬಿಟ್ಟೆ .. ಅದಕ್ಕೆ ದಯವಿಟ್ಟು ಅತ್ಯಾಚಾರ ಅನ್ನಬೇಡಿ . ನಿಮ್ಮ ವಿಮರ್ಶೆ ನಾನು ಸ್ವಾಗತಿಸುತ್ತೇನೆ . ಚೈತನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ಪ್ರತಿಭಾ ಪಾಟೀಲರನ್ನು ರಾಷ್ಟ್ರಾಧ್ಯಕ್ಷೆ ಅನ್ನಬಹುದು. ಚೇರ್ ಮಾನ್ ಸ್ಥಾನದಲ್ಲಿ ಹೆಂಗಸು ಇದ್ದರೆ ಅಧ್ಯಕ್ಷೆ ಅನ್ನಬಹುದು ಅಥವಾ ಚೇರ್ ಪರ್ಸನ್ ಅನ್ನಬಹುದು. ಚೇರ್ ವುಮನ್ ಅಂದರೆ ಸರಿಯಾದ ಪ್ರಯೋಗವೇ. ಆದರೆ ಚೇರ್ ಮಾನ್ ಅನ್ನುವುದು ತಪ್ಪು ಪ್ರಯೋಗ. ತಪ್ಪು ಆದರೆ ಚಿಂತಿಲ್ಲ. ಆದರೆ ತಪ್ಪು ಮಾಡಬಾರದು ಮತ್ತು ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಉಳಿಯಬಾರದು. ನನ್ನ ಪ್ರತಿಕ್ರಿಯೆಗಳು ಮುಕ್ತಮನಸ್ಸಿನವುಗಳು. ಯಾವುದೇ ಪೂರ್ವಗ್ರಹಪೀಡಿತನಾಗಿ ಬರೆದುದಲ್ಲ. ನೀವು ನನ್ನ ಪ್ರತಿಕ್ರಿಯೆಗಳಿಗೆ ಸ್ಪಂದಿಸಿದ್ದು ಸಂತಸ ನೀಡಿದೆ ನನಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸೋಮಾರಿ ಕಟ್ಟೆ on
ರೀ ಅಯ್ನೋರೇ ನಿಮ್ಗಾ ಒಂದ್ ವಿಸ್ಯಾ ಯೋಳ್ತಿನಿ ಕೇಳಿ, ಕನ್ನಡ ಉಳ್ಸೋಕೆ ಅದೇನೋ ನೀವ್ ಯೋಳ್ತಿರೆಲ್ಲಾ ಸಜ್ಜನ್ಕೆ, ಸಂಸ್ಕೃತಿ ಅಂತಾವ, ಅಂಗಂದ್ರೆ ಏನು ಗೊತ್ತಯ್ತಾ, ಸುಮ್ಕ ಒಂದಿಷ್ಟು ಗೀಚಿ ನಾನು ಕನ್ನಡ್ದೋನೇಯಾ ಅನ್ಕೊಳ್ಳಕ್ಕೆ ಯಾರ್ ಬೇಕಾದ್ರೂ ಆಯ್ತದಾ, ಅದೇನ್ ದೊಡ್ಡ್ ವಿಸ್ಯ ಅಲ್ಲ್ ಬುಡು, ಆದ್ರ ನೀವ್ ಬರೀಬೇಕಾದ್ರ್ ಒಸಿ ಸುತ್ತ್ ಮುತ್ತ್ ನೋಡಪೋ, ಯಾಕಂದ್ರಾ ನಿನ್ ಸುತ್ತ್ ಮುತ್ತ್ಲಾಗೆ ಏಟು ಮಂದಿ ನಿನ್ ಗೆಳೆಯರ್ ಕೂಟ ನಿನ್ ಕನ್ನಡ ಮಾತಾಡ್ತಿಯಂತಾವ, ಅದೇನ್ ಎಂಎನ್ ಸ್ಯಿ ಕೇಮೇ ಮಾಡ್ತೀರಲ್ಲ ನೀವ್ ಮಂದಿ, ನಿಮ್ಕ್ ಗೊತ್ತಿದ್ದಂಗೆ ಕನ್ನಡ್ದೋವ್ರು ಅಂತಾ ಏಟು ಜನ ತಕಾ ನೀಯೇ ಕನ್ನಡ್ ಮಾತಾಡ್ತಿ ಅಂತಾವ, ನಮ್ಮೂರ್ನಾಗ್ ಅಂಗಿಲ್ಲಪ್ಪೋ, ನಾವ್ ನಿಮ್ಮಂಗ್ ಕನ್ನಡ ಅಂತ್ ಬೋರ್ಡ ಏನ್ ಆಕೊಂಡಿಲ್ಲ, ಯಾವಾನ್ ಏನ ಕನ್ನಡ ಬುಟ್ಟು ಬೇರೆ ಮಾತಾಡುದ್ರಾ ಕನ್ನಡ ಬತ್ತದಾ ಅಂತೀವಿ, ಅವ ನಂಕ್ ಗೊತ್ತಿಲ್ಲ ಅಂದ್ರ ನೀ ಯೋಳಾದ್ ನಂಕು ಗೊತ್ತಿಲ್ಲ ಒಗ್ ಒಗ್ ಅಂತೀವಿ, ಆದ್ರೂವ ಒಂದೊದ್ಸಾರಿ ಅನ್ನುಸ್ತದಾ, ಯಾಕ್ ಈ ಮಂದಿ ಕನ್ನಡದಾಗ ಮಾತಾಡಕಿಲ್ಲ ಅಂತಾವ, ನಾವ್ ಕನ್ನಡ ಬುಟ್ಟು ಬೇರೆ ಮಾತಾಡಕಿಲ್ಲ ಅಂತಾದ್ರೆ, ಅವ್ನ್ ಯಾವನಾರ ಆಗ್ಲಿ ಕನ್ನಡ ಕಲಿಯೋವ್ನೇಯಾ ಬ್ಯಾಸರ ಬೇಡ್ ತಮ್ಮಾ, ಒಸಿ ನಿಮ್ಮಾಫಿಸ್ನಾಗ ಎಲ್ಲರ ಕುಟ ಕನ್ನಡ ಮಾತಾಡ್ನೋಡು ಇವತ್ತಿಂದಾವ, ಆಟೆ ಸಾಕು ಈ ಚಳುವಳಿ, ಮಣ್ಣು ಮಸಿ ಅಂತಾ ಬಾವುಟ ಇಡ್ಕೊಂಡ್ ಕುಂತ್ರೆ ಕನ್ನಡವ್ವ ಯೋನ್ ಎದ್ದು ಬಂದ್ ಸರಿ ಮಾಡ್ತಾಳ, ಎಲ್ಲ ನಮ್ ತಕೆ ಐತೆ, ನಾವಾ ಸರಿಗ್ ತಿಳ್ಕೊಂಡಿಲ್ಲ್ ಬುಡು ಸೋಮಾರಿಕಟ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಇಷ್ಟೊಂದೆಲ್ಲಾ ತಿಳ್ಕೊಂಡಿದಿರಲ್ಲ ಸೋಮಾರಿಯವರೇ. ನೀವ್ಯಾಕೆ ಗ್ರಾಮ್ಯ ಭಾಷೆ ಬಿಟ್ಟು ಶುದ್ಧ ಕನ್ನಡದಲ್ಲಿ ಮಾತಾಡಬಾರದು :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on
ಗ್ರಾಮ್ಯ ಭಾಷೆ ಶುದ್ಧ ಅಲ್ಲವೇ ? 'ಶುದ್ಧ' ಕನ್ನಡ ಅಂದ್ರೆ ಯಾವ್ದು ಅಂತರ ಹೇಳ್ತೀರಾ ಹಾಗಾದ್ರೆ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on
ಕನ್ನಡದ ಮನೋಧರ್ಮವ ತಿಳಿದು ವ್ಯವಹರಿಸುವನ್ತಹುದೇ ಶುದ್ಧ ಕನ್ನಡ. ಪರಭಾಷೆಯ ಒರೆಗಳಿದ್ದರೂ ಚಿನ್ತೆಯಿಲ್ಲ. ಮನೋಧರ್ಮವೆನ್ದರೆ , http://sampada.net/b... ವಿಭಕ್ತಿಗಳು ಸೇರಬೇಕಾದೆಡೆಯೇ ಸೇರಬೇಕು. ವ್ಯಂಜನಾನ್ತ ಪದಕ್ಕೆ ಕೃತಕವಾಗಿ ವಿಭಕ್ತಿಗಳ ಸೇರಿಸಿ ಬರೆದರೆ ಅದು ಶುದ್ಧ ಕನ್ನಡವಲ್ಲ. ಉಚ್ಚಾರದಲ್ಲಿ ಅಲ್ಪಪ್ರಾಣ, ಮಹಾಪ್ರಾಣ ತಪ್ಪಿದರೆ ಭಾಷೆಯ ಶುದ್ಧತೆಗೆ ಕೊರತೆಯಾಗದು. ಆದರೆ ಯಾವುದು ಮನೋಧರ್ಮ, ಯಾವುದು ತಪ್ಪು ಎಂಬುದರ ಕುರಿತು ತಿಳಿವಳಿಕೆಯಿರಬೇಕು. ಅ, ಇ, ಉ, ಎ, ಒ ಮುನ್ತಾದ ಸ್ವರಗಳು ಎಲ್ಲಿ, ಹೇಗೆ ಮತ್ತು ಯಾಕೆ ಸೇರುತ್ತವೆ ಎಂಬುದರ ಕುರಿತೂ ಗೊತ್ತಿರಬೇಕು. ಇವಿಷ್ಟನ್ನು ತಿಳಿದುಕೊಳ್ಳಬಲ್ಲ ಕನ್ನಡವಾವುದೋ ಅದೇ 'ಶುದ್ಧ ಕನ್ನಡ'.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on
'ಗ್ರಾಮ್ಯ ಭಾಷೆ ', 'ಶುದ್ಧ' ಕನ್ನಡ ಅಂತೀರಲ್ರೀ ಹಳ್ಳೀಮಾತು , ಅಚ್ಛ/ಚೊಕ್ಕಕನ್ನಡ ಅನ್ಬಾರ್ದೇನ್ರಿ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on
ಅಚ್ಛ ಕನ್ನಡವೆನ್ದರೆ ಅಚ್ಛಾ, ಬಚ್ಚಾ ಮುನ್ತಾದ ಶಬ್ದಗಳಿನ್ದ ಕೂಡಿದ ಕನ್ನಡವೇ? ;) 'ಶುದ್ಧ ಕನ್ನಡವೆನ್ದರೆ ಏನು' ಎಂಬ ಪ್ರಶ್ನೆಗೆ ಉತ್ತರ ಅದು. ಇನ್ನು 'ಅಚ್ಛ ಕನ್ನಡವೆನ್ದರೆ ಏನು' ಎನ್ದಿರುತ್ತಿದ್ದರೂ ನನ್ನ ಉತ್ತರ ಅದೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harsha Vardhan on
ಅಣ್ಣ, ಸರಿಯಾಗಿ ಹೇಳ್ದ್ರಿ, ನಮ್ಮ್ ಗ್ರಾಮೀಣ ಸೊಗಡು ಅವ್ರ್ಗೆ ಏನು ಗೊತ್ತು, ನಾವಿಲ್ದೆ ಅವರಿಲ್ಲ ಅಂಥ ಹೇಳ್ರಲಾ!!! "ಕನ್ನಡವೆಂಬುದು ಬರಿ ಮಾತಲ್ಲ, ಅದು ನಮ್ಮ ಅಂತರಂಗದ ಮಾತು, ಕರ್ನಾಟಕವೆಂಬುದು ಬರಿ ನಾಡಲ್ಲ, ನಮ್ಮ ಸಂಕ್ಸೃತಿಯ ಬೀಡು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸೋಮಾರಿ ಕಟ್ಟೆ on
ಯಣ್ಣಾ ಹರ್ಷಣ್ಣ ಅದು ಸಂಕ್ಸೃತಿ ಅಲ್ಲಪ್ಪೋ, ಸಂಸ್ಕೃತಿ ಅಂತ ಸರಿ ಮಾಡ್ಕೋ ಮತ್ತೀಗಾ ಸೋಮಾರಿಕಟ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harsha Vardhan on
ಅಯ್ತಣ್ಣ, ಸಂಕ್ಸೃತಿ ಅಲ್ಲಪ್ಪೋ, ಸಂಸ್ಕೃತಿ!!!...ಇನ್ಮೇಲೆ ಇದೆ ನಂ ಕೃತಿ ಅಣ್ಣ. ಹರ್ಷ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.