ವಿಷದ ಗಿಡ
ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು
ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ
ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ
ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು
ಮೂಲ: ವಿಲಿಯಂ ಬ್ಲೇಕ್
ಭಾವಾನುವಾದ: ಚಾಮರಾಜ ಸವಡಿ
- Chamaraj's blog
- Login or register to post comments
- 295 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ವಿಷದ ಗಿಡ
ಚೆನ್ನಿದೆ....
ನನಗೊಂದು ಸಂದೇಹ ಕವನದ ಕುರಿತಾಗಿ ಅಲ್ಲ... ಹಾವಿನ ಹಲ್ಲಿನಲ್ಲಿರುವ ವಿಶ, ಮಾನವನೊಳಗಿರುವ ದ್ವೇಷ ಎರೆಡೂ ಒಂದೇ ಸ್ವಭಾವದ್ದಾ ಅಂತ?
ಉ: ವಿಷದ ಗಿಡ
ಮಂಜುನಾಥ್, ಮನುಷ್ಯನ ದ್ವೇಷದ ವಿಷ ಹಾವಿನ ವಿಷಕ್ಕಿಂತ ತೀವ್ರ ಹಾಗೂ ಅಪಾಯಕಾರಿ. ಅದು ಕಚ್ಚಿದವನನ್ನಷ್ಟೇ ಅಲ್ಲ, ಕಚ್ಚುವವನನ್ನೂ ನಾಶ ಮಾಡುತ್ತದೆ.
ಉ: ವಿಷದ ಗಿಡ
ಆತ್ಮೀಯ
ಈ ಪದ್ಯ ನಮಗೆ ಒ೦ಭತ್ತನೇ ಕ್ಲಾಸಿನಲ್ಲೋ ಇಲ್ಲ ಹತ್ತನೇ ಕ್ಲಾಸಿನಲ್ಲೋ ಇತ್ತಲ್ವಾ? ಹರಿ
ಉ: ವಿಷದ ಗಿಡ
ಹರೀಶ್, ನಾನು ಈ ಪದ್ಯವನ್ನು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೋಧಿಸಿದ್ದೆ.
ಉ: ವಿಷದ ಗಿಡ
ಈ ಕವನವನ್ನ ಓದಿದಾಗ ನೆನಪಾದ ಸುಭಾಷಿತವೊಂದನ್ನ http://sampada.net/b... ಇಲ್ಲಿ ಹಾಕಿರುವೆ.
ಉ: ವಿಷದ ಗಿಡ
ನಿಜ ರಾಮಪ್ರಸಾದ್, ಈ ಸುಭಾಷಿತವನ್ನು ಹೈಸ್ಕೂಲಿನಲ್ಲಿದ್ದಾಗ ಓದಿದ್ದ ನೆನಪು.
ಉ: ವಿಷದ ಗಿಡ
ಆತ್ಮೀಯ
ಕರೆಕ್ಟ್ ಸರ್ ಮರ್ತುಬಿಟ್ಟಿದ್ದೆ ನಾನು ಪಿ ಯು ಓದಿದ್ದು ಶಿವಮೊಗ್ಗದಲ್ಲಿ (ಸೇಕ್ರೆಡ್ ಹಾರ್ಟ್) ಡೇವಿಡ್ ಸರ್ ನಮಗೆ ಇ೦ಗ್ಲಿಷ್ ಲಕ್ಚರರ್ ಸಖತ್ತಾಗಿ ಪಾಠ ಮಾಡೋರು ನೆನಪಿಸಿದ್ದಕ್ಕೆ ಥಾ೦ಕ್ಸ್
ಹರಿ