ಸಂಪದ ಬ್ಲಾಗ್ಸ್
ಮಾ
May 12, 2008 - 7:49am — kalpanaಇಲ್ಲಿ ಅಮೇರಿಕದಲ್ಲಿ ಮೇ ೧೧ ಅಮ್ಮನ ದಿನವೆಂದು ಆಚರಿಸಲಾಗುತ್ತೆ. ನನಗಂತೂ ಇದು ನನ್ನ ತಾಯ್ತನವನ್ನು ಸಂಭಮಿಸುವ ದಿನವೆಂದು ಬಹಳ ಇಷ್ಟ. ಮಕ್ಕಳಿಗೆ ಅಪ್ಪುಗೆ, ಮುತ್ತುಗಳನ್ನು ಒಂದಷ್ಟು ಹೆಚ್ಚಾಗಿ ಈ ದಿನ ಕೊಡುತ್ತೇನೆ, ಜೊತೆಗೆ ಬಯ್ಯದೆ, ಹೊಡೆಯದೆ ಹುಶಾರಾಗಿ ದಿನವನ್ನು ಕಳೆಯುತ್ತೇನೆ
ಮನೆಯಲ್ಲಿನ ಅಪ್ಪ ಇಂದು ನನ್ನನ್ನು ಆಚೆ ಊಟಕ್ಕೆ ಕೊಂಡೊಯ್ಯಲೇ ಬೇಕು. ಮುಂದೆ ಓದಿ »

- kalpana ರವರ ಬ್ಲಾಗ್
- Login or register to post comments
- 1 read
- Email this blog



ಅಡುಗೆಯ ಸಂಭ್ರಮ
May 12, 2008 - 5:44am — hpnಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ, ಜೊತೆಗೆ ಸೋಮಾರಿತನ ಎಂದೆಲ್ಲ (ಎಲ್ಲದಕ್ಕಿಂತ ಮಿಗಿಲಾಗಿ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ ಅನ್ನೋದು). ಆದರೆ ಈ ಬಾರಿ ಧೈರ್ಯ ಮಾಡಿ ಒಂದು ಗ್ಯಾಸ್ ಸ್ಟೌ ತಂದೇ ಬಿಟ್ಟೆ. ಅಣ್ಣನ ಮನೆಗೆ ಹೋಗಬೇಕಿಲ್ಲದೆ ನಾನೇ ಅಡುಗೆ ಮಾಡಿಕೊಳ್ಳಬಹುದೆಂದು ಸಂತಸದಿಂದ ಬೀಗಿದೆ. ಆದರೆ ಆ ಸ್ಟೌನಲ್ಲಿ ಮೊದಲ ಬಾರಿ ಅಡುಗೆ ಮಾಡಿ ಅದು ಏನೇನೋ ಆದಾಗ ಸಂಭ್ರಮ ಎಲ್ಲ ಕರಗಿ ಹೋಯ್ತು.
ಒಂದೆರಡು ದಿನಗಳಲ್ಲಿ ಮುಂಚಿನಂತೆ at least ತಿನ್ನಲು ಯೋಗ್ಯವಾದ ಅಡುಗೆ ಮಾಡುವಷ್ಟು progress ಸಾಧಿಸಿದೆ. ಕೆಲಸಗಳ ಬ್ಯಾಕ್ ಲಾಗ್ ಉಳಿದವು. ನಿತ್ಯ ಸುಮಾರು ಹೊತ್ತು ಅಡುಗೆ ಮಾಡೋಕೆ ಕಳೆಯೋ ಹಾಗಾಯ್ತು. ಸ್ವಲ್ಪ ದಿನಗಳಲ್ಲಿ ಅಡುಗೆ ಮಾಡುವ ಸ್ಪೀಡು ಉತ್ತಮವಾಯ್ತು. ಹಾಗೆಯೇ ತಿಂಡಿ ಅಮ್ಮ ಮಾಡುವಂತೆಯೇ ಮಾಡಲು ಪ್ರಯತ್ನಿಸಿದೆ. ಸಿಕ್ಕಾಪಟ್ಟೆ ಬೋರು ಹೊಡೆಸಿತು ಸರಿಯಾಗಿ ಬರದೆ. ಒಂದೊಂದು ಸಾರಿ ಮಾಡಿದ ಅಡುಗೆ ತಿನ್ನಲೂ ಬಾರದಂತಾಗಿ ಹೋಟೆಲಿಗೇ ಹೋಗಬೇಕಾಯ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಮ್ಮ ಮಾಡುವಂತೆಯೇ ಶಾವಿಗೆ ಉಪ್ಪಿಟು ಸುಮಾರು ೮ನೇ ಸಲ ಪ್ರಯತ್ನಿಸಿದೆ. ಜ್ಯಾಕ್ ಪಾಟ್! ಅಮ್ಮ ಮಾಡುವ ಹಾಗೆಯೇ ಬಂದಿತ್ತು! ಸಂಭ್ರಮ ಹೇಳತೀರದು!
ಇಷ್ಟು ದಿನ ಬರದದ್ದು ಈಗೇನು ಅಮ್ಮ ಮಾಡುವಂತೆಯೇ ರುಚಿಯಾಗಿ ಆದದ್ದು? ಕೆಳಗೆ ಅಣ್ಣನ ಮನೆಯಲ್ಲಿ ಅಮ್ಮ ಉಪ್ಪಿಟ್ಟಿಗೆಂದು ರೆಡಿ ಮಾಡಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಪುಡಿಯೊಂದನ್ನು ತಂದು ಚಿಟುಕಿಸಿದ್ದು, ಅಷ್ಟೇ!

- hpn ರವರ ಬ್ಲಾಗ್
- Login or register to post comments
- 27 hits
- Email this blog



ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
May 11, 2008 - 9:22pm — ವೈಭವ
ಇದೇ 'ತರಂಗ'ಕನ್ನಡ ವಾರದೋಲೆಯ ಏಪ್ರಿಲ್ ೧೭, ೨೦೦೮ ಪುಟ ೫೪, ೫೫ (ಜಾಗೃತಿ ಅಂಕಣ) ಇದರಲ್ಲಿ ಕೊಂಡಗೂಳಿ ಕೇಶಿರಾಜನ ಬಗ್ಗೆ ಬರಹದಲ್ಲಿ ಕೆಲ ತಪ್ಪುಗಳು ನುಸುಳಿವೆ. ಸಂಪದದಲ್ಲಿರುವ ತರಂಗ ಓದುಗರ ಗಮನಕ್ಕೆ. ತಡವಾಗಿ ಇಲ್ಲೆ ಹಾಕುತ್ತಿದ್ದೇನೆ,ಮನ್ನಿಸಿ.
ವೀರಶಯ್ವ ಕೊಂಡಗೂಳಿ ಕೇಶಿರಾಜನೇ ಬೇರೆ. ಇವನು ಶಬ್ದಮಣಿದರ್ಪಣವನ್ನು ಬರೆದಿಲ್ಲ. ಮುಂದೆ ಓದಿ »

- ವೈಭವ ರವರ ಬ್ಲಾಗ್
- Login or register to post comments
- 37 hits
- Email this blog



ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
May 11, 2008 - 8:04pm — omshivaprakashಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ.
Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ್ಲಿ ಕಂಡಂತೆ ನಿಮಗೊಂದು ವಿಂಡೋ ನಿಮ್ಮ ಪರದೆಯ ಮೇಲೆ ಕಾಣಿಸ್ತದೆ. ಮುಂದೆ ಓದಿ »

- omshivaprakash ರವರ ಬ್ಲಾಗ್
- Login or register to post comments
- 56 hits
- Email this blog



lifestyle exhibition ನಲ್ಲಿ ಲಿನಕ್ಸು !!!
May 10, 2008 - 6:20pm — raghavaಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...


RSS: