ಈಗಿನಂತೆ 9 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಒಂದು ರೋಗದ ಸಾವಿನ ಸುತ್ತಮುತ್ತ………..
naasomeswara's picture
ನಾ.ಸೋಮೇಶ್ವರ
07
May
2010
ಬ್ಲಾಗ್ ಬರಹ

ಒಂದು ರೋಗದ ಸಾವಿನ ಸುತ್ತಮುತ್ತ………..

ನನ್ನ ಬಾಲ್ಯ ಕಾಲದಲ್ಲಿ ಒಂದು ರೋಗ...

ಪ್ರತಿಕ್ರಿಯೆಗಳು: 14
ಹಿಟ್ಸ್ : 1,078
ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’
pavanaja's picture
03
Aug
2005
ಪುಟ

ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್...

ಪ್ರತಿಕ್ರಿಯೆಗಳು: 4
ಹಿಟ್ಸ್ : 2,082
ಕೊನೆಯಲ್ಲಿ ಎಡವಿದ ಕರ್ನಾಟಕ - ೧
rajeshnaik111's picture
14
Jan
2010
ಬ್ಲಾಗ್ ಬರಹ

ಗೆಳೆಯ ಸುಪ್ರೀತ್ ಮತ್ತು ನನ್ನದು ಯಾವಾಗಲೂ ರಣಜಿ ಟ್ರೋಫಿ ಪಂದ್ಯಗಳ ಬಗ್ಗೆನೇ ಮಾತು. ರಣಜಿ ಟ್ರೋಫಿ ಫೈನಲ್ ಪಂದ್ಯದ ಮುನ್ನಾ ದಿನ ನಾವಿಬ್ಬರು ದೂರವಾಣಿ ಮೂಲಕ ಕೊರೆದೇ...

ಪ್ರತಿಕ್ರಿಯೆಗಳು: 1
ಹಿಟ್ಸ್ : 859
2011 ಶುಭಾಶಯಗಳು
bhaashapriya's picture
bhaashapriya CS
30
Dec
2010
ಲೇಖನ

ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ.
ಎಲ್ಲರಿಗೂ  ನನ್ನ ಶುಭಾಶಯಗಳು
-- ಭಾಷಪ್ರಿಯ

ಪ್ರತಿಕ್ರಿಯೆಗಳು: 7
ಹಿಟ್ಸ್ : 928
ಸಾವಿನ ರಹಸ್ಯ---ಖಲೀಲ್ ಗಿಬ್ರಾನ್ ಕ೦ಡ೦ತೆ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
13
May
2010
ಪುಟ

khalil  gibran

 

ಸಾವಿನ...

ಪ್ರತಿಕ್ರಿಯೆಗಳು: 8
ಹಿಟ್ಸ್ : 1,192
ರಷ್ಯ ಪ್ರವಾಸ ಕಥನ ಭಾಗ ೨: ಯುದ್ಧದ ನೇರಪ್ರಸಾರ, 'ನೇವ' ನದಿಯ ತೇವ!
anilkumar's picture
ಎಚ್.ಎ. ಅನಿಲ್ ಕುಮಾರ್
30
Sep
2006
ಪುಟ
ನೇರ ಪ್ರಸಾರದ ಯುದ್ಧ: ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,938
ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
19
May
2010
ಪುಟ

...

ಪ್ರತಿಕ್ರಿಯೆಗಳು: 5
ಹಿಟ್ಸ್ : 892
ಜೇನುನೊಣಗಳ ವೈಚಿತ್ರ್ಯಗಳು - ೧ - ರಾಣಿ ಜೇನು
mpneerkaje's picture
ಮಹೇಶ ಪ್ರಸಾದ ನೀರ್ಕಜೆ
18
Jul
2010
ಪುಟ

ನನ್ನ ಜೀವನದಲ್ಲಿ ಈವರೆಗೆ ನಾನು ಕಂಡ, ಅನುಭವಿಸಿದ, ಯೋಚಿಸಿದ, ವಿಚಾರಿಸಿದ, ಕಲಿತ ವಿಷಯಗಳಲ್ಲಿ ಅಥವಾ ಸಂಗತಿಗಳಲ್ಲಿ ಅತ್ಯಂತ ವಿಶೇಷವಾದದ್ದೆಂದರೆ ಜೇನುನೊಣಗಳ ಜೊತೆ ಒಡನಾಟ....

ಪ್ರತಿಕ್ರಿಯೆಗಳು: 8
ಹಿಟ್ಸ್ : 1,029
ಕಥೆ : ಶ್ರೀಗಂಧದ ಧೂಪ - ( ದತ್ತ )
partha1059's picture
ಪಾರ್ಥಸಾರಥಿ
18
Dec
2011
ಬ್ಲಾಗ್ ಬರಹ

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ...

ಪ್ರತಿಕ್ರಿಯೆಗಳು: 22
ಹಿಟ್ಸ್ : 298
ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ
Shamala's picture
ಶ್ಯಾಮಲಾಜನಾರ್ದನನ್
02
Jan
2010
ಬ್ಲಾಗ್ ಬರಹ

ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು.  ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು...

ಪ್ರತಿಕ್ರಿಯೆಗಳು: 8
ಹಿಟ್ಸ್ : 1,290

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ದಾಟುವ ಮುನ್ನ ಜಾರುವ ಮನ

ದಾಟುವ ಮುನ್ನ ಜಾರುವ ಮನ

ಬೆಳಗಿನ ಬೆಂಗಳೂರು ಟ್ರಾಫಿಕ್‌ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ. ಎಫ್‌.ಎಂ. ಚಾನೆಲ್‌ಗಳು ಬಂದ ನಂತರ, ಕಾಯುವುದು ಒಂಚೂರಾದರೂ ಸಹನೀಯ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಂತೆ ಸಹಜವಾಗಿ ರೇಡಿಯೋ ಆನ್‌ ಆಗುತ್ತದೆ. ಬೀಗರನ್ನು ಸ್ವಾಗತಿಸಿದಂತೆ, ಅತ್ಯಂತ ಔಪಚಾರಿಕವಾಗಿ ಕಾರ್ಯಕ್ರಮ ನಿರೂಪಿಸುವ ಸರ್ಕಾರಿ ಎಫ್‌.ಎಂ. ರೇನ್‌ಬೋ, ಅರಳು ಹುರಿದಂತೆ ಪಟಪಟ ಮಾತನಾಡುವ ಖಾಸಗಿ ಎಫ್‌.ಎಂ. ರೇಡಿಯೋ ಜಾಕಿಗಳು, ರೇಡಿಯೋದಲ್ಲಿ ಮಾತನಾಡಿದೆವೆಲ್ಲ ಎಂಬ ಸಂಭ್ರಮದಲ್ಲಿ ಬೀಗುವ ಪೆದ್ದು ಗೃಹಿಣಿಯರು, ಮೊದ್ದು ಗಂಡಸರು, ಒಂದು ಹಾಡಿಗಾಗಿ ಖಾಸಗಿ ಬದುಕಿನ ಸೂಕ್ಷ್ಮ ಸಂಗತಿಗಳನ್ನೆಲ್ಲ ಒದರುವ ಅವಿವೇಕಿ ಕೇಳುಗರು, ಇವುಗಳ ನಡುವೆ ಮೂಡಿ ಬರುವ ಸೊಗಸಾದ ಹಾಡುಗಳು, ಜೋಕ್‌ಗಳು- ಕೇಳುತ್ತ ಕೇಳುತ್ತ ಮನಸ್ಸು ಎಲ್ಲೋ ಜಾರುತ್ತ ಹೋಗುತ್ತದೆ. ಸಿಟಿ ಬಸ್‌ನಲ್ಲಿ ಸೀಟ್‌ ಸಿಕ್ಕಿದ್ದರೆ ಈ ಮಜಾ ಇನ್ನೂ ಹೆಚ್ಚು. ಇಯರ್‌ ಫೋನ್‌ ಕಿವಿಗೆ ಸಿಕ್ಕಿಸಿಕೊಂಡು, ಮಜವಾಗಿ ಹಾಡು ಕೇಳುತ್ತಿದ್ದಾಗ, ಅಲ್ಲೆಲ್ಲೂ ದೂರ ಸಿಗ್ನಲ್‌ ಹಸಿರಾಗುತ್ತದೆ. ಹಾಗಂತ ಬಸ್ಸೇನೂ ತಕ್ಷಣ ಚಲಿಸುವುದಿಲ್ಲ. ಭಯಂಕರವಾಗಿ ಆರ್ಭಟಿಸಿ ಹೊಗೆ ಉಗುಳುತ್ತ, ಜಗಳಕ್ಕೆ ಸಿದ್ಧವಾದ ಗೂಳಿಯಂತೆ ಗುಟುರು ಹಾಕುತ್ತ, ಅವಕಾಶ ಸಿಕ್ಕ ಕೂಡಲೇ ಮುಂದೆ ಹೋಗಲು ಸಿದ್ಧವಾಗುತ್ತದೆ. ಎದುರಾ ಬದುರಾ ಇರುವ ಟ್ರಾಫಿ‌ಕ್‌ ಹೋಗಲೋ ಬೇಡವೋ ಎಂಬಂತೆ ನಿಧಾನವಾಗಿ ಚಲಿಸಲು ಪ್ರಾರಂಭಿಸುತ್ತದೆ. ಎರಡನೇ ಗೇರ್‌ ಹಾಕಬೇಕೆನ್ನುವಷ್ಟರಲ್ಲಿ ಮತ್ತೆ ಟ್ರಾಫಿಕ್‌ ಜಾಮ್‌! ನಮ್ಮ ಬಸ್‌ ಹತ್ತು ಹೆಜ್ಜೆ ಮುಂದೆ ಹೋಗಿರುತ್ತದೆ. ಎದುರುಗಡೆಯಿಂದ ಒಂದು ಬಸ್‌ ಹತ್ತು ಹೆಜ್ಜೆ ನಮ್ಮತ್ತ ಬಂದಿರುತ್ತದೆ. ಕಿಟಕಿಗಳ ಪಕ್ಕ ಕಿಟಕಿಗಳು. ನಡುವೆ ಇದೆಯೋ ಇಲ್ಲವೋ ಎಂಬಂಥ ರಸ್ತೆ ವಿಭಜಕ. ಕೈ ಚಾಚಿದರೆ ಆ ಕಡೆಯ ಕಿಟಕಿಯನ್ನು ಸುಲಭವಾಗಿ ತಲುಪಬಹುದು. ಆಗ ಶುರುವಾಗುತ್ತದೆ ನೂರಾರು ಭಾವನೆಗಳ ತಾಕಲಾಟ. ಕಿಟಕಿಯ ಪಕ್ಕ ಕೂತವರಿಗೆ ಇತ್ತ ನೋಡಲು ಮುಜುಗರ. ಅಲ್ಲೆಲ್ಲೋ ಮಧ್ಯವಯಸ್ಕ ಪೋತಲನೊಬ್ಬ ನಮ್ಮ ಬಸ್‌ನಲ್ಲಿ ಕೂತಿದ್ದ ಹುಡುಗಿಯನ್ನು ನುಂಗುವಂತೆ ನೋಡುತ್ತಿರುತ್ತಾನೆ. ಆಂಟಿಗೆ ಜೀನ್ಸ್‌ ಹುಡುಗನ ಮೇಲೆ ಕಣ್ಣು. ಅದುವರೆಗೆ ಕಿಟಕಿಯಾಚೆಗೇ ಕಣ್ಣು ನೆಟ್ಟು ಕೂತಿದ್ದ ಹುಡುಗಿಯರು ಇದ್ದಕ್ಕಿದ್ದಂತೆ ಪ್ರಜ್ವಾವಂತೆಯರಾಗಿದ್ದಾರೆ. ಮೊಬೈಲ್‌ನತ್ತ, ಇಲ್ಲವೇ ಟಿವಿ ಪರದೆ ದಿಟ್ಟಿಸುತ್ತಿದ್ದಾರೋ ಎನ್ನುವಂತೆ ಬಿಟ್ಟ ಕಣ್ಣುಗಳಿಂದ ಎದುರು ಸೀಟ್‌ ನೋಡುವುದರಲ್ಲಿ ನಿರತರಾಗಿದ್ದಾರೆ. ಇದಪ್ಪ ಸೀನ್‌ ಎಂದರೆ! ಪಕ್ಕದ ಬಸ್‌ನ ಕಿಟಕಿಯತ್ತ ಮನಸ್ಸು ಸೆಳೆಯುತ್ತಿದ್ದರೂ ಕಣ್ಣು ಹೊರಳಿಸಲು ಏನೋ ಸಂಕೋಚ. ಎಂಥದೋ ಬಿಗುಮಾನ. ಇದ್ದಕ್ಕಿದ್ದಂತೆ ಪಕ್ಕದ ಬಸ್‌ನಲ್ಲಿ ಗುಮ್ಮ ಬಂದಿದೆಯೇನೋ ಎಂಬಂತೆ ಎಲ್ಲ ಮುಗುಮ್ಮಾಗಿದ್ದಾರೆ. ಅಂಥದೇ ಸಂದಿಗ್ಧ ನಮ್ಮ ಬಸ್‌ನಲ್ಲಿ ಕೂತವರಲ್ಲೂ. ನೋಡಲೂ ಆಗದ, ನೋಡದೇ ಇರಲೂ ಆಗದ ಮನಃಸ್ಥಿತಿ. ಆದರೂ ಆಸೆಬುರುಕ ಮನಸ್ಸು ಕಣ್ಣು ಹೊರಳಿಸುತ್ತದೆ. ಅಲ್ಲೇನಿದೆ? ಮೊಬೈಲ್‌ ಕೈಲಿ ಹಿಡಿದವರು, ಕಾಣದ ಪರದೆ ನೋಡುತ್ತ ಕೂತವರು, ಕೆಕ್ಕರಿಸುವ ಆಂಟಿಯರು, ಶಪಿಸುವ ಅಜ್ಜಿಯರು, ಹೆಣ್ಣೇ ಕಾಣದ ಅಂಕಲ್‌ ಗಾವಿಲರು- ದೇವರೇ, ಬೇಗ ಬಸ್‌ ಚಲಿಸಲಪ್ಪಾ ಎಂದು ಮನಸ್ಸು ಹಾರೈಸುವಾಗ ರೇಡಿಯೋದಲ್ಲಿ ಹಾಡು: ’ಜಿಂಕೆ ಮರೀನಾ, ಜಿಂಕೆ ಮರೀನಾ...’ ಅದನ್ನು ತಾನೂ ಕೇಳಿಸಿಕೊಂಡಿತೇನೋ ಎಂಬಂತೆ ಬಸ್‌ ಜಿಂಕೆ ಮರಿಯಂತೆ ನಡೆಯದಿದ್ದರೂ ಗಜ ಗಮನೆಯಾಗಿ ಚಲಿಸಲು ಪ್ರಾರಂಭಿಸುತ್ತದೆ. ಪಕ್ಕದ ಬಸ್‌ನ ಸಕಲ ಸೌಂದರ್ಯ, ಕುರೂಪ, ವಿಕ್ಷಿಪ್ತಗಳೆಲ್ಲ ನಿಧಾನವಾಗಿ, ಮನದಾಚೆಗೇನೋ ಎಂಬಂತೆ ಸರಿದು ಹೋಗುತ್ತವೆ. ಮತ್ತೆ ಮುಂದಿನ ಸಿಗ್ನಲ್‌ನಲ್ಲಿ ಇಂಥದೇ ಮತ್ತೊಂದು ಸೀನ್‌. ಅಲ್ಲೇನು ’ಜಿಂಕೆ ಮರಿ’ ಸಿಗುತ್ತದೋ, ’ಜಲಜಲ ಜಲಜಾಕ್ಷಿ’ ಸಿಗುತ್ತಾಳೋ, ’ಮಿನ ಮಿನ ಮೀನಾಕ್ಷಿ’ ಕಾಣಿಸುತ್ತಾಳೋ- ಅದು ಟ್ರಾಫಿಕ್‌ ಮಹಾತ್ಮೆಯ ಮರ್ಜಿ. ಆದರೆ, ಬದುಕು ಮಾತ್ರ ಸಿಗ್ನಲ್‌ನಿಂದ ಸಿಗ್ನಲ್‌ಗೆ ಕೆಂಪಾಗುತ್ತ ಹಸಿರಾಗುತ್ತ, ಯಾವುದೋ ಕನಸನ್ನು ಧೇನಿಸುತ್ತ, ಅದು ನನಸಾಗಲಿ ಎಂದು ಹಾರೈಸುತ್ತ ಹೋಗುತ್ತದೆ. ಪ್ರಯಾಣದ ಚಿಕ್ಕ ಅವಧಿಯನ್ನು ಸ್ಮರಣೀಯವಾಗಿಸುತ್ತದೆ. - ಚಾಮರಾಜ ಸವಡಿ
No votes yet
619 ಹಿಟ್ಸ್