ಈಗಿನಂತೆ 9 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
24
Apr
2006
ಪುಟ
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * ! ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,414
’ಸಂಪದ’-ಸಂಕಲ್ಪ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
29
Jan
2010
ಪುಟ

’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,108
ಸರಕಾರದ ಶಾಲೆಯ ಸರದಾರರು
rekhash's picture
ರೇಖಾ ಬಿಜೂರ್ ಹೆರೆಂಜಾಲ್
10
Feb
2012
ಬ್ಲಾಗ್ ಬರಹ

 ಎಲ್ಲಾ ಅದೃಷ್ಟವಂತರೂ ಪ್ರೈವೇಟ್ ಶಾಲೆಗಳಿಗೆ, ಕಾನ್ವೆಂಟ್ ಪ್ರಭಾವಳಿಗೆ ಶರಣಾಗತರಾಗಿ ವರುಷಗಳೇ ಸಂದುಹೋಗಿದ್ದ ಕಾಲದಲ್ಲಿ ಸೃಷ್ಟಿಕರ್ತನೊಬ್ಬನಿಗೇ ತಿಳಿದ ಕಾರಣಗಳಿಂದ...

ಪ್ರತಿಕ್ರಿಯೆಗಳು: 0
ಹಿಟ್ಸ್ : 251
ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)
srikanth's picture
22
May
2006
ಪುಟ
ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ...
ಪ್ರತಿಕ್ರಿಯೆಗಳು: 8
ಹಿಟ್ಸ್ : 2,830
ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!
anilkumar's picture
ಎಚ್.ಎ. ಅನಿಲ್ ಕುಮಾರ್
12
Oct
2006
ಪುಟ
ರೋರಿಕ್ಕೋ ರೋರಿಕ್ಕು: ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,507
ಜಪಾನಿನ ಚಕ್ರವರ್ತಿ ನಾಳೆ ಹುಟ್ಟುವನೇ?
benaka's picture
ಬೆನಕ
05
Sep
2006
ಪುಟ
ಗೆಳೆಯರೇ, ಜಪಾನಿನಲ್ಲಿ ಈಗಿನ ರಾಜಕಾರಣ ರಂಗೇರುತ್ತಿದೆ. ಈಗಿನ ಪ್ರಧಾನ ಮಂತ್ರಿ ಜುನ್‍ಇಚಿರೊ ಕೊಇಜುಮಿ ನಂತರದ ಪ್ರಧಾನಿ ಅಭ್ಯರ್ಥಿಯನ್ನು ಆರಿಸಲು ಆಡಳಿತಾರೂಢ ಜಿಮಿಂತೋ [ಸ್ವತಂತ್ರ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,615
ಸಿಂಹಮುಖಿ - ಕಥೆ
srinivasps's picture
ಶ್ರೀನಿವಾಸ್
01
Apr
2012
ಲೇಖನ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...

ಆರು ಅಡಿ ಎರಡು ಅಂಗುಲ ಎತ್ತರ...
ವಯಸ್ಸು ಐವತ್ತು ದಾಟಿದ್ದರೂ...

ಪ್ರತಿಕ್ರಿಯೆಗಳು: 6
ಹಿಟ್ಸ್ : 381
’ಐ ಆರ್ ಎಜ್ಯುಕೇಷನ್’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೧
anilkumar's picture
ಎಚ್.ಎ. ಅನಿಲ್ ಕುಮಾರ್
28
Jun
2010
ಪುಟ

 

...

ಪ್ರತಿಕ್ರಿಯೆಗಳು: 1
ಹಿಟ್ಸ್ : 877
ಮಳೆ ಬಂದಾಗ ಮಳೆಬಿಲ್ಲೂ ಇರಲಿ
aananda's picture
ಆನಂದ
11
Nov
2009
ಪುಟ

ಯುಕಿ ಉರುಶಿಬಾರ ಬರೆದಿರುವ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,068
ನಾಲ್ಕನೆಯ ದೀಪಾವಳಿ
suchara's picture
26
Jan
2007
ಪುಟ
ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,693

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು? ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ. ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ. ಆಗ, ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು. ಎಷ್ಟೋ ಸಾರಿ ನಿರಾಶೆ ಎಂಬುದು ಅಲೆಗಳಂತೆ ಉಕ್ಕುಕ್ಕಿ ಬರುತ್ತದೆ. ನಿರಂತರವಾಗಿ ಅಪ್ಪಳಿಸುತ್ತದೆ. ಒಂದು ಕ್ಷಣ, ಈ ಅಲೆಗಳು ತೀರವನ್ನೇ ನುಂಗಿ ಹಾಕಿಬಿಡುತ್ತವೇನೋ ಎಂದು ತಲ್ಲಣ ಹುಟ್ಟಿಸುತ್ತವೆ. ಆದರೆ, ಯಾವ ಅಲೆಯೂ ತೀರವನ್ನು ನುಂಗಿ ಹಾಕಿಲ್ಲ. ಅಲೆಗಳು ಸಾವಿರಾರು ಬರಬಹುದು. ನಿರಂತರವಾಗಿ ಅಪ್ಪಳಿಸಬಹುದು. ಆದರೆ, ಮಣ್ಣಿನ ತೀರ ಜಗ್ಗದೇ ನಿಂತಿರುತ್ತದೆ. ಒಂದಿಷ್ಟು ಕೊರೆಯಬಹುದು. ಒಂದಿಷ್ಟು ಕಸಿಯಬಹುದು. ಆದರೆ, ಪೂರ್ತಿಯಾಗಿ ಇಲ್ಲವಾಗಿಸದು. ಯಾವ ಅಲೆಗೂ ತೀರ ನಾಶ ಮಾಡುವ ಶಕ್ತಿಯಿಲ್ಲ. ಬೇಸರ, ಸೋಲು, ನಿರಾಶೆ, ನೋವು- ಇಂಥ ಸಾವಿರಾರು ಅಲೆಗಳು ಬದುಕಿನ ಕಡಲಲ್ಲಿ ಇದ್ದೇ ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸಮಯ ಬರುತ್ತದೆ. ಆಗ ಮುಟ್ಟಿದ್ದೆಲ್ಲ ಮಣ್ಣೇ. ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಹಾಗೆ ನೋಡಿದರೆ, ನಾವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿರುತ್ತೇವೆ. ಆದರೆ, ಗೆಲುವು ಮಾತ್ರ ಮರೀಚಿಕೆಯೇ. ಆಗ ನಿರಾಶೆಯಾಗುವುದು ಸಹಜ. ಇಷ್ಟು ಚೆನ್ನಾಗಿ ಪ್ರಯತ್ನಿಸಿದರೂ ಸಫಲನಾಗಲಿಲ್ಲವಲ್ಲ ಎಂದು ನೋವಾಗುತ್ತದೆ. ನನ್ನ ಪ್ರಯತ್ನದಲ್ಲಿ ದೋಷ ಎಲ್ಲಿತ್ತು ಎಂದು ಮನಸ್ಸು ಪ್ರಶ್ನಿಸುತ್ತದೆ. ಯಾವ ಉತ್ತರವೂ ಹೊಳೆಯುವುದಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಮತ್ತೆ ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪದೆ ಪದೆ ಅನ್ನಿಸತೊಡಗುತ್ತದೆ. ಏನೂ ಮಾಡಬೇಕೆಂದರೂ ಮನಸ್ಸು ತೊಡಗುವುದಿಲ್ಲ. ಖುಷಿಯಿಂದ ಎದ್ದು ನಿಲ್ಲುವುದಿಲ್ಲ. ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ. ಕೆಲವು ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕಿರುತ್ತದೆ. ಇನ್ನು ಕೆಲವಕ್ಕೆ ಸಮಯ ಬೇಕಿರುತ್ತದೆ. ಕೆಲವೊಂದರಲ್ಲಿ ನಾನೇ ಎಡವಿರುತ್ತೇನೆ. ಎಲ್ಲ ಎಳೆಗಳನ್ನೂ ಮತ್ತೆ ಜೋಡಿಸಿದ ನಂತರ ಉತ್ತರ ಸಿದ್ಧವಾಗುತ್ತದೆ. ಮರಳಿ ಯತ್ನವ ಮಾಡಲು ಮನಸ್ಸು ಹುರುಪುಗೊಳ್ಳುತ್ತದೆ. ಮನಸ್ಸೇ ದೊಡ್ಡ ಕಡಲು. ಅಲ್ಲಿ ನಿತ್ಯ ಅಲೆಗಳು ಎದ್ದೇ ಏಳುತ್ತವೆ. ಕೆಲವೊಂದು ಅಲೆಗಳು ಭೀಕರ. ಆದರೆ, ಎಂಥ ಅಲೆಯೇ ಆದರೂ ಅದು ಮತ್ತೆ ಕಡಲಿನಲ್ಲಿ ಲೀನವಾಗಲೇಬೇಕು. ಸ್ವಸ್ಥ ಮನಸ್ಸು ಸೋತ ಮನಸ್ಸನ್ನು ಸಂತೈಸುತ್ತದೆ. ನಿರಾಶೆಯನ್ನು ಭರವಸೆ ಮೈದಡವುತ್ತದೆ. ವಿವೇಕ ಉದ್ರೇಕವನ್ನು ಶಮನ ಮಾಡುತ್ತದೆ. ಮನಸ್ಸೇ ಮಿತ್ರನಂತೆ ಸಂತೈಸಿ ಸ್ವಸ್ಥನನ್ನಾಗಿಸುತ್ತದೆ. ’ಹರ್‌ ತೂಫಾನ್‌ ಕಾ ಕರೂಂಗಿ ಸಾಮನಾ ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ’ ಎಂಬ ಸಿನಿಮಾ ಗೀತೆ ನೆನಪಾಗುತ್ತದೆ. ಮನಸ್ಸು ಮತ್ತೆ ಉಲ್ಲಸಿತವಾಗುತ್ತದೆ. ಹೊಸ ಕನಸಿಗೆ, ಪ್ರಯತ್ನಕ್ಕೆ ಸಿದ್ಧವಾಗಿ ತುಡಿಯತೊಡಗುತ್ತದೆ. - ಚಾಮರಾಜ ಸವಡಿ
No votes yet
687 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
asuhegde's picture
23
Jan
2009
2:30

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...>>ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ. ಇದನ್ನು ನಾನೂ ಒಪ್ಪುತ್ತೇನೆ. ಸಮಸ್ಯೆಗಳು ಎದುರಾದಾಗ ಸಮಸ್ಯೆಯಿಂದ ದೂರನಿಂತು ಸಮಸ್ಯೆಯತ್ತ ನೋಡಿದರೆ ಸಮಸ್ಯೆಯ ಜೊತೆಗೆ ಪರಿಹಾರವೂ ಗೋಚರಿಸಬಹುದು ಎನ್ನುವುದು ನನ್ನ ಅನುಭವ. "if you want to find a solution to a problem, then, don't get your self entangled to the problem itself". >>’ಹರ್‌ ತೂಫಾನ್‌ ಮೈ ಕರೂಂಗಿ ಸಾಮನಾ ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ’ ಇದು ಸರ್ವಕಾಲಿಕ ಹಾಗೂ ಸರ್ವರಿಗೂ ಅನ್ವಯ ಆಗಬಹುದೇನೋ. ಒಳ್ಳೆಯ ಜೊತೆ ಇರುವುದು ಸಮಸ್ಯೆಯ ಹೊರೆಯನ್ನು ಅರ್ಧದಷ್ಟು ಕಡಿಮೆಗೊಳಿಸುತ್ತದೆ.
Chamaraj's picture
24
Jan
2009
7:18

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...ಥ್ಯಾಂಕ್ಸ್‌ ಆಸು ಹೆಗ್ಡೆಯವರೇ.
msudan86's picture
23
Jan
2009
2:51

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...>>>>ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು.. ಹೌದು ಸರ್ ನಾವುಗಳು ಇಂತವರ ಮದ್ಯನೆ ಇರುತೇವೆ ಮತ್ತು ಅದೆನೆಲ್ಲ ದೈರ್ಯವಾಗಿ ಎದುರಿಸಬೇಕು ,ಇಲ್ಲಿ ನನಗೆ ಒಂದು ಮಾತು ಜ್ಣಾಪಕಕ್ಕೆ ಬರುತ್ತೆ "ಈಜಬೇಕು ಇದ್ದು ಜಯಿಸಬೇಕು "ಅನ್ನೋದು .... ಚೆನ್ನಾಗಿದೆ ನಿಮ್ಮ ಲೇಖನ ಸರ್ ,ಹಾಗೆ ಬರೆಯುತ್ತಾ ಇರಿ ನಿಮ್ಮವ ಮಧುಸೂದನ್ ಗೌಡ
Chamaraj's picture
24
Jan
2009
7:18
umeshhubliwala's picture
23
Jan
2009
8:11

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...ಸ್ವಲ್ಪ ತಿದ್ದತೇನಿ ಅದು " ಹರ್ ತೂಫಾನ್ ಕಾ ಕರೂಂಗಿ ಸಾಮನಾ " ನಾನು ಇನ್ನೊಂದು ಸೇರಸ್ತೀನಿ " ದುನಿಯಾಕಿ ಬಗಿಯಾಂ ಐಸಿ ಜಿತನೆ ಕಾಂಟೆ ಫೂಲ್ ಭಿ ಉತನೆ ದಾಮನ್ ಮೆ ಆ ಜಾಯೆಂಗೆ ಜಿನಕಿ ತರಫ್ ತೂ ಹಾಥ್ ಪಸಾರೇ " ಇಂದಿವರ್ ಬರೆದಿದ್ದು,
Chamaraj's picture
24
Jan
2009
7:17

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಧನ್ಯವಾದ ಉಮೇಶ್‌.
Chamaraj's picture
24
Jan
2009
4:12

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...ತಿದ್ದಿದ್ದೇನೆ ನೋಡಿ ಉಮೇಶ್‌. ಥ್ಯಾಂಕ್ಸ್‌.
mowna's picture
24
Jan
2009
12:55

ಉ: ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...ಚಾಮರಾಜ್ ಅವರೆ ಎಂದಿನಂತೆ ತಮ್ಮ ಲೇಖನ ಸೂಪರ್. ಆಶಾವಾದಿಗಳನ್ನು ಮುನ್ನಡೆಸಿ, ನಿರಾಶವಾದಿಗಳನ್ನು ಕೈಹಿಡಿದು ನಡೆಸುವಂತಿದೆ. ಒಂದು ಸಣ್ಣ ದೀಪ ಬಿರುಗಾಳಿಯೊಂದಿಗೆ ಹೋರಾಡಿಯು ಉರಿಯುತ್ತಿರುತ್ತದೆ. ಕಷ್ಟ-ನಷ್ಟಗಳ, ಆಶೆ-ನಿರಾಶೆಗಳ ಗೆದ್ದು ನಿಲ್ಲುವ ಮಾರ್ಗದ ಚೈತನ್ಯದ ನಿಮ್ಮ ನುಡಿಗಳಿಗೆ ಧನ್ಯವಾದಗಳು.