24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಿದ್ಧರ ಬೆಟ್ಟಕ್ಕೆ ಲಗ್ಗೆ !

May 24, 2009 - 1:47pm
Chamaraj
’ಐದೂವರೆಗೆ ಅನಿಲ್‌ ಬಂದು ನಿಮ್ಮನ್ನು ಪಿಕ್‌ ಮಾಡುತ್ತಾರೆ’ ಎಂದು ಹರಿ ಹೇಳಿದ್ದು ಹಿಂದಿನ ದಿನ ರಾತ್ರಿ ಹನ್ನೆರಡು ಗಂಟೆಗೆ. ’ನೀವು ಎಷ್ಟು ಗಂಟೆಗೆ ಏಳುತ್ತೀರಿ?’ ಎಂದು ಅಪನಂಬಿಕೆಯಿಂದ ಕೇಳಿದ್ದೆ. ’ನೀವೇ ಎಬ್ಬಿಸಿ. ನಾಲ್ಕೂವರೆಗಾದರೆ ಉತ್ತಮ’ ಅಂದಿದ್ರು ಹರಿ. ಸರಿ, ಸಿದ್ಧರಬೆಟ್ಟಕ್ಕೆ ಇವರೆಲ್ಲ ಹೋದ ಹಾಗೆ ಎಂದು ಅಂದುಕೊಂಡೆ. ಹರಿಯ ಧ್ವನಿಯಲ್ಲಿ ನಿದ್ದೆಯ ಲವಲೇಶವೂ ಇಲ್ಲ. ಈಗಾಗಲೇ ಮಧ್ಯರಾತ್ರಿ. ಇನ್ನು ಹರಿ ಮಲಗಿಕೊಳ್ಳುವುದು ಯಾವ ಜಾವಕ್ಕೋ. ಇಷ್ಟೆಲ್ಲ ನಿದ್ದೆಗೆಟ್ಟ ನಂತರವೂ ನಸುಕಿನಲ್ಲಿ ಎದ್ದಾರೆಯೇ ಎಂಬ ಪ್ರಶ್ನೆ ಕಾಡಿತು. ’ನಾನು ಬರಲ್ಲ. ನೀವೆಲ್ಲ ಹೋಗಿ ಬನ್ನಿ. ನನಗೆ ಕೆಲಸವಿದೆ’ ಎಂದು ನುಣುಚಿಕೊಳ್ಳಲು ನೋಡಿದೆ. ಹರಿ ಬಿಡಲಿಲ್ಲ. ’ಒಂದ್ಸಾರಿ ಬನ್ನಿ. ಹೇಗಿದ್ರೂ ರೇಖಾಜಿ ಊರಿಗೆ ಹೋಗಿದ್ದಾರಲ್ಲ’ ಎಂದು ಆಸೆ ಹುಟ್ಟಿಸಿದರು. ರೇಖಾಜಿ ಎಂದರೆ ನನ್ನ ಹೆಂಡತಿ. ಮಧ್ಯರಾತ್ರಿಯಲ್ಲಿ ವಾದ ಮಾಡುವುದೆ? ಅದೂ ಹರಿಯ ಜೊತೆಗೆ? ಸುಮ್ಮನೇ ಹ್ಞೂಂ ಅಂದು ಮತ್ತೆ ಓದುತ್ತ ಕೂತೆ. ಅಲಾರಾಂ ನಾಲ್ಕೂವರೆಗೆ ಇಡೋದನ್ನು ಮಾತ್ರ ಮರೆಯಲಿಲ್ಲ. ನಾನು ಮಲಗಿದ್ದು ರಾತ್ರಿ ಎರಡು ಗಂಟೆಗೆ. ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಅಲಾರಾಂ ಬಾಯಿ ಬಡಿದುಕೊಳ್ಳತೊಡಗಿತ್ತು. ನಿದ್ದೆಗಣ್ಣಿನಲ್ಲೇ ಅದರ ಕತ್ತು ಅದುಮಿ, ಹರಿಗೆ ಫೋನ್‌ ಮಾಡಿದೆ. ನಾಲ್ಕನೇ ರಿಂಗಿಗೆ ಎದ್ದರಲ್ಲ! ರೆಡಿ ಆದ್ರೇನ್ರೀ? ಅಂದ್ರು ನಿದ್ದೆಗಣ್ಣಲ್ಲೇ. ಬರಲ್ಲ ಎಂಬ ವರಾತ ನನ್ನದು. ಯಥಾಪ್ರಕಾರ ಗೆದ್ದಿದ್ದು ಹರಿಯೇ. ಇನ್ನು ಮಲಗಿದರೆ ನಿದ್ದೆಯಲ್ಲ, ಫೋನ್‌ಗಳು ಬರ್ತವೆ ಎಂಬ ಪ್ರಜ್ಞೆಯಿಂದ ಎದ್ದು ಕೂತೆ. ಯಾವ ಸಿದ್ಧರ ಬೆಟ್ಟವೋ, ಈ ಕೆಟ್ಟ ಬಿಸಿಲಿನಲ್ಲಿ ಅಲ್ಲಿ ಹೋಗುವ ಐಡಿಯಾ ಕೊಟ್ಟ ಪುಣ್ಯಾತ್ಮರಾರೋ ಎಂಬ ಅಸಮಾಧಾನದಿಂದಲೇ ಬೆಳಗಿನ ವಿಧಿಗಳನ್ನು ಮುಗಿಸಿದೆ. ಅನಿಲ್‌ ಎದ್ದು ಬಂದು, ನನ್ನನ್ನು ಹೇರಿಕೊಂಡು ಹರಿಯ ಮನೆಗೆ ಹೋಗುವಷ್ಟರಲ್ಲಿ ಸಿದ್ಧಪುರುಷರೇ ಬೆಟ್ಟ ಇಳಿದು ಬರುತ್ತಾರೆ ಎಂದು ಅಂದುಕೊಳ್ಳುವಾಗ, ಮತ್ತೆ ಹರಿಯ ಫೋನ್‌. ’ಅನಿಲ್‌ ಬಂದ್ರಾ?’ ಎಂಬ ಪ್ರಶ್ನೆ. ಇಲ್ಲ ಎನ್ನುತ್ತಲೇ, ನೀವು ರೆಡಿಯಾಗಿರಿ. ನಾನು ಅನಿಲ್‌ಗೆ ಫೋನ್‌ ಮಾಡ್ತೇನೆ ಎಂದರು ಹರಿ. ಮತ್ತೆ ಅರ್ಧ ಗಂಟೆ ಕಳೆಯುತ್ತಲೇ ಮತ್ತೆ ಫೋನ್‌ ರಿಂಗ್‌. ಶಿವು ಬರ್ತಿದ್ದಾರೆ. ಅವರೇ ಅನಿಲನ್ನ ಪಿಕಪ್‌ ಮಾಡ್ಕೊಂಡು ಚಂದ್ರಾಲೇಔಟ್‌ಗೆ ಬರ್ತಾರೆ. ರೆಡಿಯಾಗಿರಿ ಎಂದು ಆದೇಶಿಸಿದರು. ಸಿದ್ಧರ ಬೆಟ್ಟ ಏಕೋ ಹೆದರಿಸತೊಡಗಿತು. ರೆಡಿಯಾಗಿದ್ದೆನಲ್ಲ! ಪೇಪರ್‌ ಓದುತ್ತ ಶಿವು-ಅನಿಲ್‌ ಜೋಡಿಯ ದಾರಿ ಕಾಯುತ್ತ ಕೂತೆ. ಚುನಾವಣೆ ಸಮಯದಲ್ಲಿ ಕದ್ದಿದ್ದ ಒಂದು ಅಪರೂಪದ ವೀಕ್ಲಿ ಆಫ್‌ ಸಿದ್ಧರ ಪಾಲಾಯ್ತಲ್ಲ ಎಂದು ಹಳಹಳಿಸುತ್ತ ಪೇಪರ್‌ ತಿರುವಿದೆ. ಕೆಳಗೆ ಕಾರಿನ ಹಾರ್ನ್‌. ನೋಡಿದರೆ, ಅನಿಲ್‌-ಶಿವು ಎಂಬ ಸಿದ್ಧದ್ವಯರು ಫ್ರೆಶ್ಯಾಗಿ ಕೈ ಬೀಸುತ್ತಿದ್ದಾರೆ. ಬೀಗ ತಿರುವಿ ಕಾರು ಸೇರಿಕೊಂಡವನ ಕಿವಿಗೆ ಬಿದ್ದಿದ್ದು ಭಾವಗೀತೆಯ ಝಲಕ್‌. ಕಾರು ಹರಿಯ ಮನೆ ಸೇರುವಷ್ಟರಲ್ಲಿ ಮತ್ತೈದು ಬಾರಿ ಫೋನ್‌ ಮಾಡಿಯಾಗಿತ್ತು. ’ಹರಿ ಬಂದ್ರೆ ಮುಂದಿನ ಸೀಟಲ್ಲೇ ಕೂಡೋದು’ ಎಂದು ಗೊಣಗುತ್ತ ಅನಿಲ್‌ ಎದ್ದು ಹಿಂದೆ ಬಂದರು. ಗುಡ್‌ ಅನ್ನುತ್ತ ಹರಿ ಆಸೀನರಾದಾಗ ಏಳೂವರೆ. ’ಈಗ್ಯಾವ ಬೆಟ್ಟಕ್ಕೆ ಹೋಗ್ತೀರೀ? ಎಲ್ಲಾದ್ರೂ ನೀರಿರೋ ಕಡೆ ಹೋಗಿ ಬರೋಣ’ ಎಂಬ ಡಿಮ್ಯಾಂಡಿಟ್ಟೆ. ನಿರೀಕ್ಷಿಸಿದಂತೆ ಹರಿ ಅದನ್ನು ವಿಟೊ ಮಾಡಿ ಬೀಸಾಕಿದರು. ಕಾರು ಹೊರಳಿದ್ದು ನೈಸ್‌ ರಸ್ತೆಯತ್ತ. ದಾರಿಯಲ್ಲಿದ್ದ ಸುಂಕದ ಬಾಗಿಲು(ಟೋಲ್‌ ಗೇಟ್‌)ಗಳಲ್ಲಿ ಕಂದಾಯ ಕಟ್ಟುತ್ತ ತುಮಕೂರು ರಸ್ತೆಯತ್ತ ಕಾರು ನುಗ್ಗತೊಡಗಿದಾಗ ಎಲ್ಲರಲ್ಲೂ ಫೊಟೊ ತೆಗೆವ ಉಮ್ಮೇದು. ನೆಲಮಂಗಲದ ಹತ್ತಿರದಲ್ಲೆಲ್ಲೋ ಒಂದು ಸೇತುವೆ ಕಾಣಿಸಿತು. ಅದರಾಚೆ ಸುಂದರಿಯ ಸ್ತನದಂಥ ಕಲ್ಲು ಬೆಟ್ಟ. ಫೊಟೊ ತೆಗೆಯಲು ಇಳಿದ ಸಿದ್ಧರೆಲ್ಲ ಫುಲ್‌ ಖುಷ್‌. ಬೆಳಗಿನ ಮಸುಕು ಮಂಜಿನಂಥ ಹಿನ್ನೆಲೆಯಲ್ಲಿ, ರವಿಕೆಯಿಲ್ಲದ ಒದ್ದೆ ಬಟ್ಟೆಯೊಳಗಿನ ರೂಪಕದಂತಿತ್ತು ಬೆಟ್ಟ. ಫೊಟೊ ತೆಗೆಯುತ್ತಿದ್ದವರ ಫೊಟೊಗಳನ್ನು ತೆಗೆಯಲು ಹರಿ ಓಡಾಡುತ್ತಿದ್ದರು. ಅಷ್ಟೊತ್ತಿಗೆ ಒಂದೆರಡು ಲಾರಿಗಳು ಸೇತುವೆ ಮೇಲೆ ರಭಸದಿಂದ ಹೋಗುತ್ತಲೇ ಸೇತುವೆ ಕಂಪಿಸಿತು. ಆಗ ಹರಿ ಫುಲ್‌ ಗಾಬರಿ. ’ರೀ, ಈ ಬ್ರಿಜ್‌ ಬೀಳ್ತಿರೋ ಹಂಗೆ ಕಾಣ್ತಿದೆಯಲ್ರೀ’ ಎನ್ನುತ್ತ ಹತ್ತಿರವಿದ್ದವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರು ಮಾಡಿದರು. ಅವರನ್ನು ಗೇಲಿ ಮಾಡುತ್ತ, ಫೊಟೊ ತೆಗೆದು ಕಾರು ಹತ್ತಿದಾಗ, ಎಲ್ಲರ ಹೊಟ್ಟೆಗಳೂ ಚುರ್‌ ಅನ್ನುತ್ತಿದ್ದವು. ತುಮಕೂರಿನಲ್ಲಿ ತಿಂಡಿ ತಿಂದು ಮುಂದೆ ಹೋಗೋಣ ಎಂದು ನಿರ್ಧರಿಸಿದಾಗ, ಅರ್ಧ ಹೊಟ್ಟೆ ತುಂಬಿದಂತಾಯ್ತು. ನನಗೇಕೋ ಬೆಟ್ಟದ ಮೋಹಕ ದೃಶ್ಯವೇ ಕಣ್ಮುಂದೆ. ಇವನ್ನೆಲ್ಲ ಬೆಟ್ಟವೆಂದವರಾರು? ಬಟ್ಟ ಬಯಲಲ್ಲಿಟ್ಟ ಅಟ್ಟದಂತಿರುವ ಈ ಕಲ್ಲು ಬೆಟ್ಟಗಳ ಸೊಗಸಾದ ಸಂಗಮವೇ ಸಿದ್ಧರಬೆಟ್ಟ ಅಂತ ಅನ್ನಿಸಿತು. ಪರವಾಗಿಲ್ಲ, ಒಳ್ಳೇ ಜಾಗಕ್ಕೇ ಹೊರಟಿದ್ದೇವೆ ಎಂಬ ಸಮಾಧಾನದಲ್ಲಿ ಭಾವಗೀತೆಗೆ ಕಿವಿಗೊಟ್ಟು ಕಣ್ಮುಚ್ಚಿ ಕೂತೆ. ಮುಚ್ಚಿದ ಕಣ್ಣ ಪರದೆ ಎದುರು ಸಿದ್ಧರ ಬೆಟ್ಟ ಕದಲತೊಡಗಿತು. (ಮುಗಿದಿಲ್ಲ) - ಚಾಮರಾಜ ಸವಡಿ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vinideso on
ಏನ್ ಸರ್ ಅದೇ ಲೇಕನ ಹಾಕಿದಿರಿ , ಚಿತ್ರ ಮಾತ್ರ ಬದಲಾಗಿವೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ನಿಜ. ಅದೇ ಲೇಖನ, ಅಲ್ಲಲ್ಲಿ ಕೊಂಚ ಬದಲಾಗಿದೆ. ಜೊತೆಗೆ ಚಿತ್ರ ಮತ್ತು ಶೀರ್ಷಿಕೆ. ಅದಕ್ಕೆಂದೇ ಹಳೆಯ ಲೇಖನ ಕಿತ್ಹಾಕಿದೆ. ಮನ್ನಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravinda on
ಮುಂಚೆ ಬರೆದಿದ್ದು ಓದಿರ್ಲಿಲ್ಲ... ಚೆನ್ನಾಗಿದೆ ಬರೆದಿದ್ದು... ನಿಮ್ಮ ಫೋಟೋನೂ ಹಾಕಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
> ಮುಂದಿನ ಕಂತುಗಳಲ್ಲಿ ಬರ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on
ಇದನ್ನೆಲ್ಲೋ ಓದಿದೀನಲ್ಲಾ.... :) ಹೆಹೆ.. ಫೋಟೋದಲ್ಲಿರೋರು ಸಕತ್ "ಪಾಶ್..." ಇದ್ದಾಗಿದೆ... :D "ನನ್ನ ಸ್ಟೈಲು ಬೇರೇನೇ..... ನನ್ನ ಲುಕ್ ಬೇರೇನೆ...." :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಪಾಶ್ ಅಂತೇನಿಲ್ಲ. ಬಿಸಿಲಿಗೆ ಕನ್ನಡಕ. ಆ ದಿನ ನಾನು ತಗಲು ಹಾಕಿಕೊಂಡು ಹೋಗಿದ್ದ ಪ್ಯಾಂಟು ಶರ್ಟು ಕಾಣುವುದಿಲ್ಲ ಈ ಫೋಟೋದಲ್ಲಿ. ಯಾರೋ "ಹಳ್ಳಿ ಮೇಷ್ಟರ ಥರಾ" ಕಾಣ್ತಿದೀರ ಅಂದ್ರು ಕಳೆದ ವಾರ ಆ ಫೋಟೋ ಆಲ್ಬಮ್ ಹಂಚಿಕೊಂಡಾಗ. ನನಗೂ ಹಾಗೇ ಸಿಂಪಲ್ ಆಗಿ ಇದ್ದರೆ ಚೆನ್ನ ಅಂತ ಖುಷಿಯಾಯ್ತು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
>>"ಹಳ್ಳಿ ಮೇಷ್ಟರ ಥರಾ" ರವಿಚಂದ್ರನ್ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ತುಮಕೂರು ನಮಗೂ ಹತ್ತಿರಾ ರೀ ಫೋನಾಯ್ಸಿದ್ದರೆ ನಮ್ದೂ ಒಂದು ಕಾರ್ ಆ ಕಡೆ ತಿರುಗಬಹುದಿತ್ತಲ್ವಾ? ಅಂತೂ ಬೆಂಗಳೂರನ್ನು ತಿಂಗಳಲ್ಲಿ ಒಂದೆರಡು ಭಾರಿಯಾದರೂ ಮರೆತು ಹೊರ ಬನ್ನಿ, ಹಾಗೆಯೇ ಹಾಸನದ ಕಡೆಗೂ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ಮುಂದಿನ ಸಾರಿ ಹಾಸನಕ್ಕೇ ಬರ್ತೀವಿ ಸರ್‌. ಆಗ ಚಾರಣ ಮಾಲೆ ನೀವೇ ಬರೀಬಹುದು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಹೊರಟಿದ್ದೇನೋ ಚೆನ್ನಾಗಿತ್ತು, ಹೋಗೇನ್ಮಾಡಿದ್ರಿ ಅನ್ನೋದನ್ನ ಓದೋಕೆ ಮುಂದಿನ ಭಾಗದ ನಿರೀಕ್ಷೆಯಲ್ಲಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ನಿರೀಕ್ಷಿಸಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghava on
ಶಿವಣ್ಣಾ ಅಲ್ಲಿಗೂ ತಮ್ಹೆಂಡ್ತಿನಾ* ಹೊತ್ಕೊಂಡ್ಬಂದಿದ್ರಾ ಏನ್ಕತೇ!? ;) *(ಅವ್ರ ಲ್ಯಾಪ್ಟಾಪು) /* ಸಿವಣ್ಣಾ, ಚಮ್ಸ್ಬುಡಿ, ಸುಮ್ತಮಾಸಿಗ್ಕೇಳ್ದೆ! :D */
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
>>ಶಿವಣ್ಣಾ ಅಲ್ಲಿಗೂ ತಮ್ಹೆಂಡ್ತಿನಾ* ಹೊತ್ಕೊಂಡ್ಬಂದಿದ್ರಾ ಏನ್ಕತೇ!? ಹೆಂಡ್ತೀನಾ (ಲ್ಯಾಪ್ ಟಾಪ್) ಬೆಟ್ಟದ್ ಮೇಲೆ ಹೊತ್ಕೊಂಡ್ ಹೋಗೋಕೆ ಶಿವು ಏನ್ ಮುಂಗಾರು ಮಳೆ ಗಣೇಶಾನಾ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಬ್ಯಾಗ್ ಹೊತ್ಕೊಂಡಿರೋದ್ ಕಾಣಲ್ವೇನಪ್ಪಾ... ;) ಅದರಲ್ಲಿ ಯಾರಿದ್ರು ಅಂತ ಈಗ್ಲೇ ಹೇಳಲ್ಲ... ನಮ್ಮವಳು ಸಿಕ್ಕಾಗ ಕೋಪಿಸಿಕೊಂಡಾಳು.. ಈಗಾಗಲೇ ಸವತಿಯರಿಹರೆಂದು :P ಸೊ.. ಇದೆಲ್ಲಾ ಮೈಲ್ ಮಾಡಿ ಇನ್ಮುಂದೆ.. ಹ್ಹ ಹ್ಹ ಹ್ಹ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ನಮ್ಮಳ್ಳೀ ಬಾಸೆ ಮಾತಾಡಾಕೆ ನಮ್ ಪರ್ಮಿಸನ್ ಬೇಕಣ್ಣ. ಸುಮ್ತಮಾಸಿಗೆ ಅಂದ್ರೆ ಆಗಾಕ್ಕಿಲ್ಲ. ಸುಮ್ಕೆ ತಮಾಸಿಗೆ ಅಂತಾ ಏಳ್ಬೇಕು. ಈ ಪರ್ತಿಕ್ರಿಯೆ ರಾಘವಣ್ಣಂಗೆ, ಬ್ಯಾರೇ ಯಾರ್ಯಾರೋ ಓದ್ಬುಟ್ಟು ತಲೆಕೆಡ್ಸಕಳ್ಬ್ಯಾಡಿ ಅಂತಾ ನನ್ ಪಿರಾರ್ಥನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamalap09 on
ಚಾಮರಾಜ್ ಅವರೇ, ದಿಢೀರ್ ಅಂತ ಪ್ಲಾನ್ ಮಾಡಿ ಹೊರಡೋದ್ರಲ್ಲಿ ಎಷ್ಟು ಮಜ ಇರತ್ತೆ ಅಲ್ವ. ಹೇಗೆ ಹೋದ್ರಿ ಅನ್ನೋದನ್ನ ಚೆನ್ನಾಗಿ ವರ್ಣಿಸಿದ್ದೀರಾ. ನಾವು ಹೋದ ಜುಲೈನಲ್ಲಿ ಸಿದ್ದರಬೆಟ್ಟಕ್ಕೆ ಹೋಗಿದ್ವಿ (ಹೀಗೆ ದಿಢೀರ್ ಅಂತ). ತುಂಬಾ ಚೆನ್ನಾಗಿದೆ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ಫಟಾಫಟ್‌ ಚಾರಣ :) ಅದರ ಮಜಾನೇ ಬೇರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malathi shimoga on
ಅಂತು ಇಂತು ಹೋದ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಮುಟ್ಟಿದ್ದಕ್ಕೆ ಮೂರು ಸಲ "ಅಂತು ಇಂತು ಹೋದ್ರಿ" ಅಂತ ಹೇಳಿದ್ದೀರಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
:D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by malathi shimoga on
D :-D :lol: :ಹಹಾ:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಚಾಮರಾಜರು ಇದನ್ನು ಪೋಸ್ಟ್ ಮಾಡಿದ ದಿನ ಬರೇ ಓಡಾಟದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಏನೂ ಪ್ರತಿಕ್ರಿಯೆ ಬರೆಯಲಾಗಲಿಲ್ಲ. ನಿನ್ನೆ ಇವತ್ತು ಕೆಲಸದ ಭರಾಟೆ. ಚಾಮರಾಜ್, ಹೀಗೆಲ್ಲ ನೀವು ಸನ್ ಗ್ಲಾಸಸ್ ಹಾಕಿರೋ ಫೋಟೋ ಹಾಕಿದ್ರೆ ನಮ್ಮನ್ನ ಸ್ಟೈಲ್ ಹುಡುಗರು ಅಂದುಕೊಂಡುಬಿಡ್ತಾರೆ ಕಣ್ರಿ. ನಾನು ಬಿಸಿಲು ತಡೆಯಲಾಗದೆ ಕನ್ನಡಕ ಹಾಕಿಕೊಂಡದ್ದು! ಎಷ್ಟು ಬಿಸಿಲಿತ್ತು ಅವತ್ತು! :-) ಸಿದ್ಧರಬೆಟ್ಟಕ್ಕೆ ಹೋಗಿ ಬಂದ ಆ ದಿನದ ಅನುಭವಕ್ಕೆ ನಿಮ್ಮ ಬರವಣಿಗೆ ಹೆಚ್ಚಿನ ಬಣ್ಣ ಕೊಟ್ಟಿರುವುದಂತೂ ಹೌದು. ಇನ್ನು ಮುಂದಿನ ಕಂತುಗಳು ಬರುವಷ್ಟರಲ್ಲಿ ಎಲ್ಲರೂ "ನಮ್ಮನ್ನು ಕರೆಯಲಿಲ್ಲ ಯಾಕೆ?" ಎಂದು ಸಿಟ್ಟಾದಾರು. :) ಮುಂದಿನ ಭಾಗಕ್ಕಾಗಿ ಕಾಯುವೆ. (btw, ಸೇತುವೆ ಅಲುಗಾಡುತ್ತಿದ್ದದ್ದು ನೋಡಿ ಏನೋ ತಮಾಷೆ ಮಾಡಿದ್ದು ಅಷ್ಟೆ! ಅಷ್ಟೊಂದು ಪುಕ್ಕಲ ಏನಲ್ಲ) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ಸನ್‌ ಗ್ಲಾಸ್‌ ನಿಮಗೆ ಚೆನ್ನಾಗಿ ಕಾಣ್ತಿತ್ತು ಹರಿ. ಹೀಗಾಗಿ ಆ ಫೊಟೊವನ್ನೇ ಬಳಸಿದೆ. :) > ಈಗಾಗಲೇ ಹರಿಹರಪುರ ಶ್ರೀಧರ್‌ ಅವರು ಸಿಟ್ಟಾಗಿದ್ದಾರೆ. ಮುಂದಿನ ಸಾರಿ ಲಿಸ್ಟ್‌ನಲ್ಲಿ ಅವರ ಹೆಸರೂ ಇರಬೇಕಾಗುತ್ತೆ. > ನಿಜ. ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ನಾನ್ ನಿನ್ ಹತ್ರ ಮಾತಾಡುಲ್ಲಾ ಹೋಗು ಅಂತಾ ಮುದ್ದಿನ ಕಂದ ಅವರಮ್ಮನ ಹತ್ರ ಹೇಳುತ್ತಲ್ಲಾ, ಅಂತಾ ಸಿಟ್ಟು ಚಾಮರಾಜ್, ಪ್ರೀತಿಯ ಸಾತ್ವಿಕ ಸಿಟ್ಟು.ಮುದ್ದಿನ ಕಂದನಿಗೆ ನನ್ನನ್ನು ಹೋಲಿಸಿಕೊಂಡಿಲ್ಲ, ಅದರ ಮುನಿಸಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ಮುಂದಿನ ಸಾರಿ ಎಲ್ಲಾ ಒಟ್ಟಾಗಿ ಹಾಸನಕ್ಕೇ ಬರ್ತೀವಿ ಸರ್‌. ಖಂಡಿತ. ಅಲ್ಲಿ ಯಾವ ಊರಿಗೆ ಹೋಗಬೇಕೆಂಬುದನ್ನು ನೀವೇ ನಿರ್ಧರಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಖಂಡಿತಾ ಬನ್ನಿ.ಜೂನ್ ೧೩,೧೪ ಮಾತ್ರ ಊರಲ್ಲಿರುವುದಿಲ್ಲ.ನಂತರ ಯಾವಾಗಲಾದರೂ ಸರಿ.ಚಾರಣದ ಮಾತಿರಲಿ, ಸಂಪದ ಸ್ನೇಹ ಮಿಲನ? ಸಾಮಾನ್ಯವಾಗಿ ಪ್ರತೀ ತಿಂಗಳ ಮೊದಲ ಭಾನುವಾರ ಹಾಸನದಲ್ಲಿ ಮನೆ ಮನೆ ಕವಿಗೋಷ್ಟಿ ನಡೆಯುತ್ತೆ, ಹಾಗೆಯೇ ಗಮಕ ಗೋಷ್ಟಿ ಕೂಡ ನಡೆಯುತ್ತೆ. ಹಾಸನಕ್ಕೆ ನೀವೆಲ್ಲಾ ಬರೋದಾದರೆ ಹಾಸನದ ಸಾಹಿತ್ಯಾಸಕ್ತರನ್ನು ಸೇರಿಸಿ ಕವಿಗೋಷ್ಟಿ ಏರ್ಪಡಿಸುವೆ.ಹಾಸನದ ಸಾಹಿತಿ ಮಿತ್ರರಿಗೆ ಸಂಪದಿಗರ ಪರಿಚಯವೂ ಆಗಲಿ. ಊಟ ಇದ್ದೇ ಇರುತ್ತೆ.ಏನಂತೀರಾ? ಚಾರಣ ಬೇರೆ ಸಂಪದ ಸ್ನೇಹಮಿಲನ ಬೇರೆ. ಯಾವುದಿರಲಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ಖಂಡಿತ ಬರ್ತೀವಿ ಸರ್‌. ಮುಂದಿನ ನೀರ ನಿಶ್ಚಿಂತೆ ಕಾರ್ಯಕ್ರಮವನ್ನು ಹಾಸನದಲ್ಲಿ ಇಟ್ಟುಕೊಂಡರೆ ಹೇಗೆ? ಅಲ್ಲೇ ಮಿನಿ ಸಂಪದ ಸ್ನೇಹಮಿಲನವೂ ಆಗಿಬಿಡಲಿ. ಯಾವುದಕ್ಕೂ ಹರಿಗೆ ಒಂದ್ಮಾತು ಕೇಳೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಚಾಮರಾಜ್, ಏನು ತಯಾರಿ ಆಗ್ಬೇಕೂ ಅಂತಾ ಎರಡುವಾರ ಮುಂಚೆ ತಿಳಿಸಿದರೆ ಒಳ್ಳೇದು ಅಂತಾ ಕಾಣುತ್ತೆ. ಒಂದು ಹತ್ತು ಕಂಪ್ಯೂಟರ್ ಇರೋ ಜಾಗಾ ಅಗ್ಬೇಕಲ್ವಾ? ಊಟ-ತಿಂಡಿ ಹೊಣೆ ನನ್ನದು. ಚೆನ್ನಾಗಿಯೇ ಮಾಡೋಣ.ಏನೇನ್ ತಯಾರಿ ಆಗ್ಬೇಕೂಂತಾ ಹೇಳಿ, ಒಂದು ಕಂಪ್ಯೂಟರ್ ಸೆಂಟರ್ ನೋರ ಸಹಕಾರವನ್ನೇ ಪಡೆಯೋಣವಂತೆ. ಹೆಚ್ಚು ವಿಶಾಲವಾದ ಸ್ಠಳ ಬೇಕಾದ್ರೆ ಇಲ್ಲಿನ ಇಂಜಿನೀರಿಂಗ್ ಕಾಲೇಜಿನಲ್ಲಿ ಮಾಡಿದರಾಯ್ತು.ಎಲ್ಲಾಕಡೆ ಸ್ನೇಹಿತರಿದ್ದಾರೆ. ಹರಿಯನ್ನೊಮ್ಮೆ ಕೇಳಿ ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chamaraj on
ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ಕಂಪ್ಯೂಟರ್‌ ಸೆಂಟರ್‌ ಏನೂ ಬೇಕಾಗಲ್ಲ ಸರ್‌. ಲ್ಯಾಪ್‌ಟಾಪ್‌ ಹರಿ ಮತ್ತು ಮಿತ್ರರೇ ತರ್ತಾರೆ. ಓವರ್‌ ಹೆಡ್‌ ಪ್ರೊಜೆಕ್ಟರ್‌ ಹಾಗೂ ಕೂಡಲು ಒಂದು ಚಿಕ್ಕ ಸಭಾಂಗಣವಾದರೆ ಸಾಕು ಅನಿಸುತ್ತದೆ. ಆಸಕ್ತರಿಗೆ ಬರಲು ಅನುಕೂಲವಾದ ದಿನ, ಸಾಮಾನ್ಯವಾಗಿ ಭಾನುವಾರ, ಕಾರ್ಯಕ್ರಮ ಇಟ್ಟುಕೊಳ್ಳಬಹುದು. ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿರಬೇಕು ಮತ್ತು ಅವರಿಗೆ ವಿಷಯದ ಬಗ್ಗೆ ಆಸಕ್ತಿ ಇರಬೇಕು. ಹರಿ ಜೊತೆ ಮಾತಾಡುತ್ತೇನೆ. ಖಂಡಿತ ಹಾಸನದಲ್ಲಿ ಏನಾದರೂ ಕಾರ್ಯಕ್ರಮ ಮಾಡೋಣವಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಚಾಮರಾಜ್, ನೀರ ನಿಶ್ಚಿಂತೆ ಕಾರ್ಯಕ್ರಮ ಹೇಗಿರಬೇಕು, ಅನ್ನೋ ವಿಚಾರವಾಗಿ ಸ್ವಲ್ಪಾ ತಿಳಿಸ್ತೀರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಹರಿ, ನಾನು ಎಲ್ಲಾದರೂ ಸುತ್ತಾಡುವಾಗ ನನ್ನ ವೇಷ ನೋಡ್ಬೇಕು, ಬಿಸಲಿಗೆ ಕನ್ನಡಕದ ಬದಲು ಒಂದು ಟವಲ್, ಸೆಕೆಜಾಸ್ತಿ ಇದ್ದರೆ ಪಂಚೆ-ಬನಿಯನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ಹಾಗಾದರೆ ಹಾಸನದ ಕನ್ನಡ ಸಾಹಿತ್ಯಪರಿಷತ್ ಸಭಾಂಗಣದಲ್ಲಿ ಸಾಹಿತ್ಯಪರಿಷತ್ ಸಹಕಾರದೊಡನೆಯೇ ಮಾಡೋಣ. ಎಷ್ಟು ಗಂಟೆ ಅವಧಿಯ ಕಾರ್ಯಕ್ರಮ, ಅದರ ವಿಷಯ ಏನು? ಎಲ್ಲಾ ವಿವರ ಮುಂಚಿತವಾಗಿ ತಿಳಿಸಿದರೆ ನನಗೆ ಪ್ರಚಾರ ಮಾಡಲು ಅನುಕೂಲ. ಎಲ್ಲಕ್ಕೂ ವಿವರವಾಗಿ ನನಗೊಂದು ಮೇಲ್ ಮಾಡಿದರೆ ಅನುಕೂಲ. hariharapurasridhar2...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathvik N V on
ಶ್ರೀಧರ್ ಸರ್ ಹಾಸನದ ಸ್ನೇಹ ಮಿಲನಕ್ಕೆ ನನಗೊಂದು ಓಲೆ ಉಂಟಲ್ಲಾ.. ನಾನು ಮಂಗಳೂರಿನಿಂದ ಬರಬೇಕಾದ ಕಾರಣ ತುಸು ಮೊದಲು ತಿಳಿಸಿದರೆ ಒಳಿತು. ಧನ್ಯವಾದಗಳೊಂದಿಗೆ ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on
ನೀವ್ ಬರಲೇ ಬೇಕು, ಮೊದಲು ಹರಿ ಒಪ್ಪಿಗೆ ಕೊಟ್ಟು ಕಾರ್ಯಕ್ರಮ ಫಿಕ್ಸ್ ಆಗಬೇಕು.ನಿಮ್ಮ ಈಮೇಲ್ ವಿಳಾಸ ಕೊಡ್ತೀರಿ ಅಲ್ವಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.