ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › chandana ರವರ ಬ್ಲಾಗ್

ಆತ್ಮಹತ್ಯೆ

January 18, 2008 - 11:39am — chandana

ಮೊನ್ನೆ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಂಚು ಧಾರವಾಹಿಯಲ್ಲಿ ಶಂಕರ ದಾಸ್ ಯಾವುದೋ ಆತ್ಮಹತ್ಯೆಯ ಬಗ್ಗೆ ಮಾತಾಡುತ್ತಾರೆ. ಅಂದೇ ಅವರ ಅಳಿಯ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಧಾರವಾಹಿ ಅಲ್ಲವೇ ಸುಖಾಂತ್ಯವಾಯಿತು. ಆದರೆ ನಿಜ ಜೀವನದಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗೋದಿಲ್ಲ.
ಕೆಲವರು ಪರೀಕ್ಷೆಯಲ್ಲಿ ಫೇಲ್ ಆದೆ ಅಂತ, ಇನ್ನು ಕೆಲವರು ಭಗ್ನ ಪ್ರೇಮದಿಂದ ಇಲ್ಲ ಯಾರೋ ಏನೋ ಹೇಳಿದರು ಅಂತ (ನನ್ನ ಸ್ನೇಹಿತೆಯ ಸಹೋದರಿ ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು Sad ), ಇಲ್ಲಾ ಸಾಲ ಜಾಸ್ತಿಯಾಯ್ತು ಅಂತ , ಹೀಗೆ ನಾನ ಕಾರಣದಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. SSLC, PUC results ಬಂದ ಮೇಲೆ ವೃತ್ತ ಪತ್ರಿಕೆ ತುಂಬಾ ಇಂತಹ ಸುದ್ದಿನೇ ಇರತ್ತೆ.ದುರ್ದೈವ ಅಂದರೆ ಈಗಂತೂ ಆತ್ಮಹತ್ಯೆ ಎಷ್ಟೊಂದು ಸುಲಭದ ಆಯ್ಕೆ ಆಗೋಗಿದೆ Sad. ಕಷ್ಟ ಮನುಷ್ಯನಿಗಲ್ಲದೇ ಮರಕ್ಕೇ ಬರತ್ತಾ ಅನ್ನೋದು ಉಂಟು ( ಮರಕ್ಕೆ ಯಾವ ಕಷ್ಟ ಬರತ್ತೆ ಅಂತ ನಮಗೇನು ಗೊತ್ತು, ಅಷ್ಟೆಲ್ಲಾ ಅರ್ಥ ಮಾಡಿಕೊಳ್ಳು ಸಾಮರ್ಥ್ಯ ಇದ್ದಿದಿದ್ರೆ ಇನ್ನೇನಿತ್ತು ಬಿಡಿ). ಎಲ್ಲಾ ಆತ್ಮಹತ್ಯೆಯ ಕಾರಣಗಳನ್ನು ನೋಡಿದರೆ ಒಂದಲ್ಲಾ ಒಂದು ರೀತಿಯಲ್ಲಿ 'ನಾನು' ಅನ್ನೋ ಅಹಂಗೆ ದಕ್ಕೆ ತಂದಿರೋದೇ.....ನಾನು ಫೇಲ್ ಆದ್ನಾ, ನನ್ನ ಅವಳು/ಅವನು ಬೇಡ ಅಂದ್ರಾ, ನನ್ನ ಮಾತು ನಡೀಲಿಲ್ವಾ, ನನಗೆ ಅವಮಾನವಾಯಿತಾ, ಹೀಗೆ, ನಮ್ಮ ತಪ್ಪಿನಿಂದಾ ಅಥವಾ ಬೇರೆಯವರ ತಪ್ಪಿನಿಂದಲೂ, ಅಹಂಗೆ ದಕ್ಕೆ ಬಂದಿರುತ್ತದೆ.ವಿಪರ್ಯಾಸವೆಂದರೆ 'ನಾನು' ಅನ್ನೋದಕ್ಕೆ ದಕ್ಕೆ ಬಂತು ಅಂತ ಮನುಷ್ಯ ಅವನನ್ನೇ ಕೊಂದುಕೊಲ್ಲುತ್ತಾನೆ!!
ಈ ಆತ್ಮಹತ್ಯಾ ಯೋಚನೆಯನ್ನು Suicidal Ideation ಅಂತಾರೆ. ಇಂತಹಾ ಅವಸ್ಥೆಯಲ್ಲಿ ಮನಃಶಾಸ್ತ್ರಜ್ಞರಿಂದ ಸಲಹೆ ಸಿಕ್ಕರೆ ಯೋಚನೆಯನ್ನು ಅನಾಹುತಕ್ಕೆ ಮುಂಚೆಯೇ ಚಿವುಟಬಹುದು.
ಇನ್ನೂ ಕೆಲವು ಸಲ ಆತ್ಮಹತ್ಯಾ ಪ್ರಯತ್ನ ನಡೆಯುತ್ತದೆ ಆದರೆ ಸಫಲವಾಗೋದಿಲ್ಲ (ಪಾಪಿ ಸಮುದ್ರಕ್ಕೆ ಹೋದರು ಮೊಣಕಾಲುದ್ದ ನೀರು Eye-wink ) ಇದನ್ನು Parasuicide ಎಂದು ಕರೆಯುತ್ತಾರೆ. ಒಂದು ಅಧ್ಯಯನದ ಪ್ರಕಾರ, ಇಂತಹ ವ್ಯಕ್ತಿಗಳ ಆತ್ಮಹತ್ಯೆ , ೨೩ ಪಟ್ಟು ಮಿಕ್ಕವರಿಗಿಂತ ಹೆಚ್ಚು!!USA ನಲ್ಲಿ, ಸಾವಿಗೆ , ಆತ್ಮಹತ್ಯೆ ೧೧ನೇ ಸಾಮಾನ್ಯ ಕಾರಣ!
ಸಾಯೋದಕ್ಕೂ ಅದರಲ್ಲೂ ಆತ್ಮಹತ್ಯೆ ಮಾಡಿ ಕೊಳ್ಳುವುದಕ್ಕೆ ಧೈರ್ಯಬೇಕ್ರಿ , ನಿಜ ತುಂಬಾನೇ ಧೈರ್ಯ ಬೇಕು. ಈ ಧೈರ್ಯನ ಬದುಕೋದಕ್ಕೆ ಯಾಕೆ ಉಪಯೋಗಿಸುವುದಿಲ್ಲವೋ ಗೊತ್ತಿಲ್ಲ. ಮನೆಯವರು,ಸ್ನೇಹಿತರು ಇಂತಹ ಯೋಚನೆಯಲ್ಲಿರೋರಿಗೆ ನೆರವು ನೀಡಿದರೆ, ಎಷ್ಟೋ ಆತ್ಮಹತ್ಹ್ಯೆಗಳನ್ನು ತಪ್ಪಿಸಬಹುದು. ಜೀವನದಲ್ಲಿ ಸಾಧಿಸೋದು ಬೇಕಾದಷ್ಟಿದೆ ಹಾಗೇನೇ ಅವಕ್ಕೆ ಅಡೆತಡೆ ಬರುತ್ತಾನೆ ಇರತ್ತೆ. ಹಾಗಂತ ಯಾವತ್ತು ಸೋಲ್ಲೋಪ್ಪ ಬಾರದು. ಸಾಧಿಸೋ ಛಲ ಬಿಡಬಾರದು. ದುರ್ಗುಣ, ದ್ವೇಷ, ಕ್ರೋಧ, ಮಾತ್ಸರ್ಯ....... ಮುಂತಾದವುಗಳ ಹತ್ಯೆಯಾಗಲಿ ಆತ್ಮಹತ್ಹ್ಯೇಯಲ್ಲ.

~.~
  • chandana ರವರ ಬ್ಲಾಗ್
  • Login or register to post comments
  • 207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
  • ನಿತ್ಯ ಆತ್ಮ ಹತ್ಯೆ
  • ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ
  • ಆತ್ಮಹತ್ಯೆ
  • ಅನ್ನದಾತರ ಕುರಿತು
Syndicate content

ಲೇಖಕರು

chandana's picture

ಪೂರ್ಣ ಹೆಸರು
chandana

ಪರಿಚಯ

software engineer,saMgeeta prEmi, naaTakada huchchu irO hasanmukhi Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator