ಆಡಳಿತ ಭಾಷೆ vs ರಾಷ್ಟ್ರಭಾಷೆ
ಗಣರಾಜ್ಯೋತ್ಸವದ ದಿನ ದೂರದರ್ಶನ ನೋಡುತ್ತಿರುವಾಗ ಯಾವುದೋ ಹಾಡಿನಲ್ಲಿ "ಹಿಂದಿ" ಅನ್ನೋ ಪದದ ಬಳಕೆಯಾಯಿತು. ನಾನು ಆ ಪದದ ಬಳಕೆ, ಆ ಹಾಡಿನಲ್ಲಿ, ತಪ್ಪು ಅಂತ ಆಕ್ಷೇಪಿಸಿದೆ. ನನ್ನ ಮತ್ತು ನನ್ನ ಸಂಬಂಧಿಯ ನಡುವೆ ನಡೆದ ವಾದ ಇಂತಿದೆ :
ಸಂಬಂಧಿ: " ಸರಿಯಾಗಿದೆ ಇಲ್ಲಿ ಹಿಂದಿನೇ ಬರಬೇಕು "
ನಾನು: " ಇಲ್ಲ ಈ ಹಾಡಿನಲ್ಲಿ ಹಿಂದಿ ಶಬ್ಧದ ಬಳಕೆ ತಪ್ಪು "
ಸಂಬಂಧಿ: " ಹಿಂದಿ ನಮ್ಮ ರಾಷ್ಟ್ರಭಾಷೆ ಹಾಗಾಗಿ ಸರಿಯಿದೆ"
ನಾನು: " ಅಯ್ಯೋ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ . ಭಾರತ ಸಂವಿಧಾನದಲ್ಲಿ ಆಡಳಿತ ಭಾಷೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಂಗಡಿಸಿದ್ದಾರೆ. ಹಿಂದಿ ಬರೀ ನಮ್ಮ ಯೂನಿಯನ್ನಿನ ಆಡಳಿತ ಭಾಷೆ"
ಸಂಬಂಧಿ: " ನೀವು ಸೌತ್ ಇಂಡಿಯನ್ಸ್ ಗೆ ಹಿಂದಿ ಅಂದ್ರೆ ಇಷ್ಟ ಇಲ್ಲ ಅದಿಕ್ಕೆ ಇಲ್ಲದೆ ಇರೋ ತಕರಾರು ತೆಗಿತ್ತೀರ. ಹಿಂದಿ ಹೆಚ್ಚು ಜನಕ್ಕೆ ಮಾತಾಡೋದಿಕ್ಕೆ ಬರತ್ತೆ ಹಾಗೇನೇ ಅರ್ಥಾನು ಆಗತ್ತೆ." (ಇವರು ೨೦-೩೦ ವರ್ಷದಿಂದ ಉತ್ತರ ಭಾರತದಲ್ಲೇ ಇದ್ದರು)
ನನಗೂ ರೆಗೋಗಿತ್ತು.....
ನಾನು: " ಅದ್ಯಾಕೆ ಹಾಗಂತ್ತೀರಾ, ನೀವೇ ಭಾರತಾನಾ ಈ ರೀತಿ ವಿಭಜನೆ ಮಾಡ್ತ್ತಿದ್ದಿರ. ದಕ್ಷಿಣದವರಿಗೆ ಹಿಂದಿ ಅರ್ಥಾನು ಆಗತ್ತೆ ಮಾತಾಡೊದಿಕ್ಕೂ ಬರತ್ತೆ ಅದೊಂದೇ ಅಲ್ಲ ಇನ್ನಿತ್ತರ ಭಾಷೆಗಳನ್ನು ಸ್ಪಷ್ಟವಾಗಿ ಮತಾಡುತ್ತೇವೆ. ಎಷ್ಟು ಜನ ಉತ್ತರ ಭಾರತದವರು ದಕ್ಷಿಣ ಭಾರತದ ಭಾಷೆಗಳನ್ನು ಮಾತಾಡಬಲ್ಲರು? (ಇದಕ್ಕೆ ಅಪವಾದವೆಂಬಂತೆ ನನ್ನ ಮ್ಯಾನೇಜರ್ ಉತ್ತರ ಭಾರತದವರು. ಅವರು ಕನ್ನಡ ಕಲಿಯುತ್ತಿದ್ದಾರೆ :-) . ) ಹಲವರಿಗೆ ದಕ್ಷಿಣ ಭಾರತದವರು ಅಂದ್ರೆ ಮದ್ರಾಸಿ ಅಷ್ಟೇನೆ. ಹೆಚ್ಚು ಜನಕ್ಕೆ ಅರ್ಥಾ ಆಗೊ ಭಾಷೆ ಅಂದ್ರಲ್ಲಾ ಹಾಗಾದ್ರೆ ಆಂಗ್ಲ ಭಾಷೆ ಇನ್ನೂ ಹೆಚ್ಚು ಜನಕ್ಕೆ ಅರ್ಥಾ ಆಗತ್ತೆ, ಹಾಗಂದ ಮಾತ್ರಕ್ಕೆ ಆಂಗ್ಲ ಭಾಷೇನ ರಾಷ್ಟ್ರ ಭಾಷೆ ಮಾಡುವುದಕ್ಕೆ ಸಾಧ್ಯಾನಾ?ಈ ಕಾರಣಕ್ಕೆ ಹಿಂದಿ ರಾಷ್ಟ್ರ ಭಾಷೆ ಹೇಗಾಗತ್ತೆ? "
ಸಂಬಂಧಿ: " ನೀನು ಏನೇ ಹೇಳು ನಂಗೆ ಗೊತ್ತು ನೀವು ಹೀಗೇನೆ. ಹಿಂದಿನೇ ರಾಷ್ಟ್ರ ಭಾಷೆ"
ಅವರು ತಮ್ಮ ಮಿತ್ರವ್ರುಂದಕ್ಕೆ ಕರೆ ಮಾಡಿ ಅವರೂ ಹಾಗೆ ಹೇಳ್ತಿದ್ದಾರೆ ಅಂದ್ರು. ಅವರಿಗೆ ನಮ್ಮ ಅಂತರ್ಜಾಲದಿಂದ ಕೆಲವೊಂದು ತಾಣಗಳನ್ನೂ ತೋರಿಸಿ ಅರ್ಥ ಮಾಡಿಸಿದೆ. ಹಾಗೇನೇ ನಿಮ್ಮ ಮಿತ್ರರಿಗೂ ತಿಳಿಸಿ ಅಂದೆ. ಅವರು ತಮ್ಮ ತಪ್ಪನ್ನು ತಿದ್ದಿಕೊಂಡರು.ನಮ್ಮ ಭಾಷೆಯ ಬಗ್ಗೆ ನಮ್ಮವರಿಗೆ ಸಾಕ್ಷಿ ತೋರಿಸಬೇಕಾಗಿರುವುದು ಎಂಥಹ ದುರ್ದೈವದ ಸಂಗತಿ ಅಲ್ವ :-(
ಹೀಗೆ ನಮಲ್ಲಿ ಇಂತಹ ಬೇಕಾದಷ್ಟು ಜನರಿದ್ದಾರೆ. ಅದ್ಯಾಕೋ ನಮ್ಮ ಮಾತೃಭಾಷೆ ಬಿಟ್ಟು ಅವರಿಗೆ ಹಿಂದಿ ಮೇಲೇ ಒಲವು ಜಾಸ್ತಿ. ನಾವು ಯಾವ ಭಾಷೆ ದೊಡ್ಡದು ಅಥವಾ ಸಣ್ಣದು ಅಂತ ವಾದ ಮಾಡ್ತಿಲ್ಲ ಹಾಗೇನೇ ನಮ್ಮ ಭಾಷೆ ಬಗ್ಗೆ ಕೀಳರಿಮೇನೂ ಬೇಡ.
ಒಂದು ಚರ್ಚಾ ಸ್ಪರ್ಧೆಯಲ್ಲಿ ಒಬ್ಬ ಸ್ಪರ್ಧಿ ಹೇಳಿದ್ದು ನನಗಿನ್ನು ಜ್ಞಾಪಕವಿದೆ " ನಮ್ಮ ಮಾತೃಭಾಷೆಗೆ ಸಲ್ಲಬೇಕಾದ ಸಕಲ ಗೌರವ ಸಲ್ಲಲಿ. ಅವಳಿಗೆ ಅಗ್ರ ಸ್ಥಾನ ಸಿಗಲಿ.ಹಾಗೇನೇ ಇನ್ನಿತರ ಭಾಷೆಗಳು ಅವಳ ದಾಸಿಯಾಗದೆ ಸಖಿಯರಂತೆ ಜೊತೆಗಿರಲಿ"
- chandana's blog
- Login or register to post comments
- 702 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
ಚಂದನ, ಅವರೆ ಒಳ್ಳೆಯ ಕೆಲಸ ಮಾಡಿದಿರಿ. ಇಲ್ಲೇ ಸಂಪದದಲ್ಲಿಯೇ ಕೆಲವೊಂದು ದಿನಗಳ ಹಿಂದೆ, ಹಿಂದಿಯ ಬಗ್ಗೆ ವೀರಾವೇಷದಿಂದ ಕೂಡಿದ ಮಾತುಕತೆಗಳಾಗಿದ್ದವು. ಒಂದು ಕೆಲಸ ಮಾಡಿ, ನೀವು ನಿಮ್ಮ ಸಂಬಂಧಿಕರಿಗೆ ತೋರಿಸಿದ ಆ ಕೊಂಡಿಗಳನ್ನು ಸಂಪದಿಗರೊಡನೆ ಹಂಚಿಕೊಳ್ಳಿ. ನಿಜ ಎಲ್ಲರಿಗೂ ತಿಳಿಸಿದಂತಾಗುವುದು.
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
ಹಿಂದಿ ಪ್ರೇಮ ರಾಷ್ಟ್ರ ಪ್ರೇಮವಲ್ಲ.
ರಾಷ್ಟ್ರ ಪ್ರೇಮವೆಂದರೆ ನನ್ನ ಭಾಷೆ, ಸಂಸ್ಕೃತಿ ಯನ್ನು ಹೊಸಕಿ ಹಾಕುವುದಲ್ಲ. ನನ್ನ ಭಾಷೆ, ನನ್ನ ಮಣ್ಣಿನ ಸಂಸ್ಕೃತಿ ನನ್ನಲ್ಲಿದ್ದಷ್ಟೂ ನಾನು ಗಟ್ಟಿಗ. ಅದು ಬಿಟ್ಟರೆ ನಾನು ಟೊಳ್ಳು. ನಾನು ಗಟ್ಟಿಗನಾಗುವುದರ ಮೂಲಕ ರಾಷ್ಟ್ರವನ್ನು ಗಟ್ಟಿ ಮಾಡುತ್ತೇನೆ. ಅದೇ ನನ್ನ ರಾಷ್ಟ್ರ ಪ್ರೇಮ.
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
ಚಂದನ ಅವರೇ, "ಅವರಿಗೆ ನಮ್ಮ ಅಂತರ್ಜಾಲದಿಂದ ಕೆಲವೊಂದು ತಾಣಗಳನ್ನೂ ತೋರಿಸಿ ಅರ್ಥ ಮಾಡಿಸಿದೆ."
ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸುವಿರಾ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
ಪ್ರಿಯ ಸಂಪದ ಸಮುದಾಯದ ಮಿತ್ರರೇ,
ಸುಮಾರು ಹನ್ನೆರಡು ವರ್ಷಗಳ ಹಿಂದೆ ತನ್ನ ಡಾಕ್ಟರೇಟ್ ಪದವಿಗಾಗಿ "ಭಾರತದಲ್ಲಿ ರಾಷ್ಟ್ರಭಾಷೆಯ ಬೇಕು ಬೇಡ" ಗಳ ಬಗ್ಗೆ ಅಧ್ಯಯನ ಮಾಡಿದ ಅಮೇರಿಕದ ೨೨ ವರ್ಷ(ಆಗ) ವಯಸ್ಸಿನ ಜೇಸನ್ ಬಾಲ್ಡ್‍ರಿಡ್ಜ್ ಎಂಬುವರ ಲೇಖನ ಓದಿದ್ದು ನೆನೆಪಿಗೆ ಬಂತು. ಟೊಲೆಡೋ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿ ಬರೆದ ಲೇಖನ ಓದುವುದರಿಂದ ನಮಗೆ ನಮ್ಮ ರಾಷ್ಟ್ರದ ಭಾಷಾ ಸಮಸ್ಯೆಯ ಬಗ್ಗೆ ಅಪೂರ್ವ ಮಾಹಿತಿ ಸಿಗುತ್ತೆ. ಅಮೇರಿಕದ ಹುಡುಗ ನಮಗೇನು ತಾನೆ ಹೇಳಿಕೊಡಬಲ್ಲ ಅಂತ ತಾತ್ಸಾರ ಮಾಡಬೇಡಿ. ಓದಿ ನೋಡಿ. ಆತ ಬಹಳ ಶ್ರಮ ವಹಿಸಿ ತಯಾರಿಸಿದ ಲೇಖನ ಇಂಗ್ಲೀಷ್‍ನಲ್ಲಿದೆ. ಇಷ್ಟವಾದರೆ ಸಂತೋಷ.
ಕೊಂಡಿ ಈ ಕೆಳಗಿದೆ.
http://www.ling.upen...
ನಮಸ್ಕಾರ,
ನವರತ್ನ ಸುಧೀರ್
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
Ennares ರವರು ಹೇಳಿದ ಆ ಕೊಂಡಿಯಿಂದಲೂ ನಾನು ಮಾಹಿತಿ ಸಂಗ್ರಹಿಸಿದೆ. ಇನ್ನೂ ಕೆಲವು ಕೊಂಡಿಗಳು:
http://en.wikipedia....
http://en.wikipedia....
http://india.gov.in/...
ಮೇಲಿನ ಕೊಂಡಿಯಲ್ಲಿ ಹೀಗಿದೆ:
Languages: 22 National Languages have been recognized by the Constitution of India, of which Hindi is the Official Union Language. Besides these, there are 844 different dialects that are practiced in various parts of the Country.
ಈ ಕೆಳಗಿನ ಕೊಂಡಿ ನಮ್ಮ ಸಂವಿಧಾನದಲ್ಲಿರುವ ಆಡಳಿತ ಭಾಷೆಗಳ ಮಾಹಿತಿ ನೀಡುತ್ತದೆ.
http://www.constitut...
ಇಷ್ಟೇಲ್ಲಾ ಮಾಹಿತಿ ನೀಡಿದರೂ ಸಹ ಏಷ್ಟೋ ಜನ ನನಗೊಡ್ಡಿದ ಪ್ರಶ್ನೆ " ಇಲ್ಲೇಲ್ಲಾ ಕೊಟ್ಟಿರೋ ಮಾಹಿತಿ ನಿಜ ಅಂತ ಹೇಗೆ ನಂಬೋದು?" :-( ಕರ್ಮ ಕರ್ಮ
ಚಂದನ
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ
ಉ: ಆಡಳಿತ ಭಾಷೆ vs ರಾಷ್ಟ್ರಭಾಷೆ
ಚಂದನರೇ..
ಒಳ್ಳೇ ಕೆಲಸಗೈದಿರಿ..
ನನ್ನಿ!! ಹಿಂದಿ ಒಂದು ಪ್ರಾಂತೀಯ ನುಡಿ ಅಶ್ಟೆ.. ಮಳಯಾಳಂ ತೆರ!