ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

ತಾಯಿ .,
ಕನಸಿನ ಗೋಪುರ ಕಟ್ಟಿಸಿ .,
ಅವುಗಳ ಜೊತೆಗಿದ್ದು ನನಸಾಗಿಸಿಬಿಟ್ಟೆ.,
ಪ್ರತಿ ಹೆಜ್ಜೆಯಲ್ಲೂ ನೀತಿ ಪಾಠ ಹೇಳಿ
ಗದರಿಸಿ,ಬೆದರಿಸಿ .,
ತಿದ್ದಿ , ತೀಡಿ.,
ಸಮಾಜದಲ್ಲಿ ನೆಲೆ ಕಲ್ಪಿಸಿಕೊಟ್ಟೆ.,
ಸಮಾಜದಲ್ಲಿನ ಗೌರವ ,ಗಳಿಸಿದ ಹೆಸರು
ಎಲ್ಲವನ್ನ ನಿನಗರ್ಪಿಸಿ ಬಿಡಬೇಕು
ಎನ್ನುವಸ್ಟರಲ್ಲಿ ನೀ
ನಮ್ಮನ್ನ ಅಗಲಿಬಿಟ್ಟೆ.,
ತಾಯಿ
ನೀ ನನ್ನ ಕೂಗುತ್ತಿದ್ದ ಪರಿ
ಇನ್ನ ಕಿವಿಯಲ್ಲಿ ಗುಯೆಂನುತ್ತಿದ್ದೆ .,
"ಲೇ ಕರಿಯ ಏಳೂ ಸಾಕು ".,
ಎನ್ನುವ ಮಾತೆ.,
ನನ್ನನ್ನ ಈ ಮಟ್ಟಕ್ಕೆ ಎಳೆದು ತಂದಿದೆ .,
ತಾಯಿ
ಎಲ್ಲರನ್ನ ಸಾಲಾಗಿ ಕೂರಿಸಿ
ನೀ ಮಾಡಿ ಬಡಿಸುತ್ತಿದ್ದ
ರಾಗಿ /ಗೋದಿ ಮುದ್ದೆ
ಮೇಲೆ ಗುಂಡಿ ಮಾಡಿ ನೀ
ಹೊಯ್ಯುತ್ತಿದ್ದ ತುಪ್ಪ,ಜೊತೆಗೆ
ಬಡಿಸುತ್ತಿದ್ದ ಹುಣಸೆಹುಳಿ ಸಾರು
ನಾ ಇನ್ನಾ ಮರೆತಿಲ್ಲ .,
ಅದೇಕೋ ಅವೆಲ್ಲವನ್ನ ಈಗ
ನನ್ನಮ್ಮ ಮಾಡಿಬಡಿಸಿದರೆ
ತಿನ್ನುವ ಮನಸಿಲ್ಲ .,
ತಾಯಿ
ನಿನ್ನ ಪ್ರತಿ ಹೆಜ್ಜೆ
ನಿನ್ನ ದೃಷ್ಟಿ ಕೋನ
ನೀ ಕಂಡ ಕನಸುಗಳು
ನೀ ನನ್ನಿಂದ ಬಯಸುತ್ತಿದ್ದ
ಕೆಲ ನಡೆ ನುಡಿಗಳು
ಇನ್ನ ಕಣ್ಣ ಕಟ್ಟಿವೆ .,
ಅದಕ್ಕೆ ಏನೋ ನನ್ನ ಮನಸ್ಸು ಇನ್ನ
"ಸಾಧನೆಯ" ಹಾದಿಯಲ್ಲಿದೆ .,
ತಾಯಿ
ಬದುಕಿಗೆ ರೂಪರೇಷೆ ತೋರಿಸಿ .,
ನನ್ನ ಪ್ರತಿ ದಾರಿಗೆ ದೀಪವಾಗಿ
ಎಲ್ಲಿಯು ಏನು ಕೊರೆತೆಯಾಗಿಸದೆ
ನನ್ನ ಮನಸೆಲ್ಲ ತುಂಬಿ ಕೊಂಡು ಬಿಟ್ಟೆ
ನಾ ನಿನ್ನ ಎಂದೂ ಮರೆಯದಿರಲೆಂದು ?
ನಿನ್ನ ಸಾವ ನೀನೆ ತಂದು ಕೊಂಡು ಬಿಟ್ಟೆ ?
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

asuhegde's picture

ಶ್ರೀಧರ್,

ಕವನ ಮನವ ಕದಡಿತು....

>>ನಿನ್ನ ಸಾವ ನೀನೆ ತಂದು ಕೊಂಡು ಬಿಟ್ಟೆ ? <<
ಯಾಕೆ ಹೀಗೆ...? ಆತ್ಮಹತ್ಯೆಯೇ...?
:(

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Charlie's picture

ಹೆಗ್ಡೆ ಸರ್ ,
ಧನ್ಯವಾದ .,

ಹೌದು ಸರ್ ...
ಗಟ್ಟಿಯಾಗಿ ಹೇಳುವ ಮನಸಿಲ್ಲ ., ಆದರೂ ಹೇಳದೆ ವಿಧಿಯಿಲ್ಲ ...

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

asuhegde's picture

ಬೇಜಾರಾಯ್ತು...ಕೇಳಿ.
ಅವರ ಆತ್ಮಕ್ಕೆ ಶಾಂತಿಯನ್ನೂ ನಿಮಗೆ ಅಗಲಿಕೆಯ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನೂ ಭಗವಂತನು ಕರುಣಿಸಲಿ.

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Charlie's picture

ಥ್ಯಾಂಕ್ಸ್ ಸರ್ ..,

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Aravind M.S's picture

ಶ್ರೀಧರ್,

ಆ ನಿಮ್ಮ ತಾಯಿ ಮುಂದೆ ನಿಮ್ಮ ಮಗುವಾಗಿ ಬರುವರು. ಚಿಂತಿಸಬೇಡಿ. ಅವರಾತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

- ಅರವಿಂದ

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Charlie's picture

ನಿಮ್ಮ ಅಕ್ಕರೆಗೆ ನಾ ಸದಾ ಚಿರಋಣಿ , ಅರವಿಂದ್ ... ಥ್ಯಾಂಕ್ಸ್

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Aravind M.S's picture

ಶ್ರೀಧರ್,

ನಿಮಗೂ ಈ ನೋವ ತಡೆಯುವ ಶಕ್ತಿ ಸಿಗಲಿ.

- ಅರವಿಂದ

ಉ: ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

Charlie's picture

ಥ್ಯಾಂಕ್ಸ್ ಅರವಿಂದ್ .,

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ