"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಡೈರಿಯ ಕೆಲವು ಹಾಳೆಗಳು - ಭಾಗ ೩

ದಿನಾಂಕ: ೧೭-ಜನವರಿ
ಅವನು: ಇವತ್ತು ನಾನು ಬಸ್ಸು ಹತ್ತಿದಾಕ್ಷಣ ನನ್ನ ಕಣ್ಣುಗಳು ಅವಳನ್ನೇ ನೋಡಿದವು, ಅವಳು ನನ್ನನ್ನ ನೋಡಿ ನಕ್ಕಳು. ಅವಳು ಸೀರಿಯಸ್ ಆಗಿದ್ಲಾ? ನನಗೆ ಗೊತ್ತಿಲ್ಲ. ಬಹುಶಃ ಅವಳು ನನ್ನ ಬಗ್ಗೆ ಅವಳ ಸ್ನೇಹಿತರ ಹತ್ತಿರ ಹೇಳಿರಬೇಕು ಮತ್ತು ಅವ್ರು ನನ್ನ ಬಗ್ಗೆ ಹಾಸ್ಯ ಮಾಡಿರಬೇಕು, ಅದಕ್ಕೆ ನಾನು ಬಸ್ಸು ಹತ್ತಿದ ತಕ್ಷಣ ಅದನ್ನ ನೆನೆಸಿಕೊಂಡು ನಕ್ಕಿರಬೇಕು, ನಾನೇ ಅದನ್ನ ನಗು ಅಂತ ತಪ್ಪಾಗಿ ತಿಳಿದುಕೊಂಡೆ. ನಾನೆಂತಹ ಮೂರ್ಖ, ಅವಳ ಗೆಳತಿಯರು ನನ್ನ ಬಗ್ಗೆ ಹಾಸ್ಯ ಮಾಡ್ತಾ ಮಜಾ ತಗೊತಿರಬೇಕು. ಛೆ!!!

ಅವಳು: ಇವತ್ತು ಅವ್ನು ಬಸ್ಸು ಹತ್ತಿದ ತಕ್ಷಣ, ನಾನು ಅವನನ್ನ ನೋಡಿ ನಕ್ಕೆ. ಅವನು ಸಂತೋಷಿಸುವುದಕ್ಕಿಂತ ಗೊಂದಲಕ್ಕೊಳಗಾದ ಅಂತ ಅನ್ನಿಸ್ತು. ಅವನಿಗೆ ನಿಜವಾಗಲೂ ನನ್ನ ಜೊತೆ ಗೆಳೆತನ ಮಾದಬೇಕಂತಿದೆಯಾ? ನನಗೆ ಗೊತ್ತಾಗುತ್ತಿಲ್ಲ. ಛೆ ನಾನ್ಯಾಕೆ ಅವನ ಬಗ್ಗೆ ಅಷ್ಟು ಯೋಚನೆ ಮಾಡ್ತಿದೀನಿ? ನಾನು ಅವನನ್ನು ಇಷ್ಟ ಪಡುತ್ತಿದ್ದೇನಾ? ಅಥವಾ ಇದು ಕೂಡ ನಾವು ನಮ್ಮ ಹವ್ಯಾಸಕ್ಕೆ ಒಗ್ಗಿಕೊಂಡಂತೆ ಇದಕ್ಕೂ ಅಂಟಿಕೊಂಡಿದ್ದೇನಾ. ಆಮೇಲೆ ಕ್ರಮೇಣ ಅದನ್ನ ಇಷ್ಟ ಪಡುತ್ತೆವಲ್ಲ? ನನಗನ್ನಿಸುತ್ತೆ ಇದು ಎರಡನೆಯದು ಇರಬೇಕು ಅಂತ. ದೇವರೇ ಪ್ಲೀಸ್ ಅವನು ಒಳ್ಳೆಯ ಹುಡುಗನೇ ಆಗಿರಲಿ. ನನ್ನ ಒಳ ಮನಸ್ಸು ಹೇಳುತ್ತಿದೆ ಅವನು ಒಳ್ಳೆಯ ಹುಡುಗ ಅಂತ.
ನನಗನ್ನಿಸುತ್ತೆ ನನ್ನ ನಗು ಅವನನ್ನ ಗೊಂದಲಕ್ಕೆ ಕೆಡವಿದೆ ಅಂತ. ಅದು ನನ್ನ ತಪ್ಪಲ್ಲ, ನಾನು ಅವನ ಜೊತೆ ಗೆಳೆತನ ಮಾಡೋಕೆ ಸಿದ್ಧ ಅಂತ ಹೇಳಿದ್ದೇನೆ. ಇವಾಗ ಉಳಿದಿದ್ದೆಲ್ಲ ಅವನಿಗೆ ಬಿಟ್ಟಿದ್ದು. Now the ball lies in his court. ಅವ್ನು ನನ್ನ ಮಾತನಾಡಿಸೋ ಧೈರ್ಯ ಮಾಡ್ತಾನ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

Sunil Jayaprakash's picture

ಈ ದಿನ, ದೇವ್ರು ಏನು ಮಾಡ್ದ ? ಅವನ ಕೊರಲು ಇಲ್ಲವಲ್ಲ.

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

savithasr's picture

ಮುಂದೇನಾಯ್ತು...?!!
-ಸವಿತ

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

Chetan.Jeeral's picture

ತಾಳ್ಮೆ ಇರಲಿ

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

roshan_netla's picture

ಕನ್ನಡ ಟಿ.ವಿ ದಾರವಾಹಿಯವರು ನಿಮ್ಮ ಡೈರಿ ಕದಿಯಬಹುದು ಹುಷಾರ್.... ಅಂದ ಹಾಗೆ ನಿಮ್ಮ ಡೈರಿಯಲ್ಲಿ ಏಸ್ಟು ಹಾಳೆಗಳಿವೆ?

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

gurubaliga's picture

ನಿಮ್ಮ ಡೈರಿ ನೋಡಿ ಹಳೆಯ ಒಂದು ಕತೆ ನೆನಪಾಯಿತು.
ವಿಜ್ಞಾನಿಗಳು ಒಂದು "ಧರಿಸಿದರೆ ಎದುರಿದ್ದವರ ಮನಸ್ಸನ್ನು ಓದುವ" ಶಕ್ತಿಯಿರುವಂತಹ ಟೊಪ್ಪಿಯನ್ನು ಕಂಡು ಹುಡುಕುತ್ತಾರೆ. ಅದನ್ನು ಪ್ರಯೋಗಾರ್ಥವಾಗಿ ಒಬ್ಬನಿಗೆ ಕೊಟ್ಟು ಧರಿಸಿ ಒಂದು ರೌಂಡ್ ಹೋಗಿ ಬಾ ಅಂತಾರೆ. ಅವನು ಬಸ್ ಹತ್ತಿದಾಗ ಒಂದೆ ಸೀಟು ಖಾಲಿ ಇರತ್ತೆ ಅದೂ ಹುಡುಗಿ ಹತ್ತಿರ. ಇವನು ಸೀಟಿನಲ್ಲಿ ಕುಳಿತು ಕೊಲ್ಲದೆ ಸುಮ್ಮನೆ ನಿಂತಿರುತ್ತಾನೆ ಆಗ ಅವನಿಗೆ ಆ ಹುಡುಗಿ ಆಲೋಚನೆ ಗೊತ್ತಾಗತ್ತೆ. "ಎಷ್ಟು ಚೆನ್ನಾಗಿದ್ದಾನೆ. ನನ್ನ ಹತ್ರ ಕೂರ ಬಾರದ?" ಅಂತ ಅವಳು ಅಂದ್ಕೊತಿರ್ತಾಳೆ. ಇವನಿಗೆ ಖುಷಿಯಾಗತ್ತೆ. ಕೂರ್ತಾನೆ. ಅವಳು ಸಿಡುಕು ಮೂತಿ ಮಾಡಿ ಆ ಕಡೆಗೆ ನೋಡ್ತಾಳೆ. ಅವನಿಗೆ ಅವಳ ವರ್ತನೆಯಿಂದ ಅಚ್ಚರಿ ಯಾಗುತ್ತೆ. ಸುಮ್ಮನೆ ಕುಳಿತುಕೊತಾನೆ.
ಮತ್ತೆ ಅವಳು ಅಂದ್ಕೊತಾಳೆ "ಈ ಹುಡುಗರಿಗೆ ಸೂಕ್ಷ್ಮ ಗೊತ್ತಾಗಲ್ಲ. ನಾನೇನೋ ಜನರಿಗೆ ಗೊತ್ತಾಗದಿರಲಿ ಅಂತ ನಾಟ್ಕ ಆಡಿದ್ರೆ ಇವನು ಅಷ್ಟು ದೂರ ಸೀಟ ಅಂಚಲ್ಲೋಗಿ ಕೂತಿದ್ದಾನೆ. ಸ್ವಲ್ಪ ತಾಗಿ ಕೂರ್ಬಾರ್ದ?" ಅಂತ.
ಅವನಿಗೆ ಮತ್ತೆ ಖುಷಿಯಾಗತ್ತೆ. ಸರಿ, ಅವಳಿಗೆ ಒತ್ತಿ ಕೂರ್ತಾನೆ. ಅವಳು ಸಿಟ್ಟು ತೋರ್ಸಿ "ಏನ್ರಿ ಕೊಂಚ ಸರಿ ಕೂರಿ " ಅಂತಾಳೆ. ಅವನಿಗೆ ಅವಮಾನ ಅದನ್ಗಾಗ್ತದೆ. ಆದರು ತೋರಿಸ್ಕೊಡದೆ ಸರಿಯಾಗಿ ಕೂರ್ತಾನೆ. ಅವಳು ಮತ್ತೆ ಅಂದ್ಕೊತಲೇ. "ಪಾಪ ಮೂತಿ ನೋಡು. ಹೆಂಗಾಯ್ತು. ಹುಡುಗ್ರು ಒಂಚೂರು ಪೋಲಿ ಅದ್ರೆನೆ ಚೆನ್ನ. ನಾವು ಹುಡುಗೀರು ಹೀಗೆ ಸ್ಟ್ರಿಕ್ಟ್ ಅದ್ರೆನೆ ಚೆನ್ನ. ಅವನು ಹಂಗೆ ಕೂರ್ತಿದ್ರೆ ನಾನೇನು ಗಲಾಟೆ ಮಾಡ್ತಿಡ್ನ" ಅಂತ. ಅಷ್ಟರಲ್ಲಿ ಅವಳು ಇಳಿಯೋ ಜಾಗ ಬಂದಿರತ್ತೆ. ಅವಳು ಇಳೀತಾ ಅಂದ್ಕೊತಾಳೆ. "ಅರೆ! ಅವನೂ ಇಳಿಯೋ ಹಂಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು. ಮನೆ ತನಕ ಜೊತೆ ಜೊತೆ ಯಾಗಿ ಹೋಗ್ಬೋದಿತ್ತು" ಅಂತ. ಅವನು ಕೂಡ್ಲೇ ಇಳಿದು ಅವಳ ಹತ್ರ ಬರ್ತಾನೆ. ಅವಳು ಹೆದರಿದವಳ ಹಾಗೆ ಬಿರಿಬಿರಿ ಹೆಜ್ಜೆ ಹಾಕಿ ಮುಂದಕ್ಕೊಗ್ತಾಳೆ. ಅವನು ನಿಧಾನ ಮಾಡ್ತಾನೆ. ಅವಳು ಅಂದ್ಕೊತಾಳೆ "ಏನು ಹುಡುಗ ಅಪ್ಪ ಇವನೂ. ಒಂಚೂರು ರೋಮಾನ್ಸ್ ಇಲ್ಲ. ಬೇಗ ಬೇಗ ನಡೆದು ನನ್ನತ್ರ ಬರಬಾರದ?" ಅಂತ ಅವನು ಹಂಗೆ ಬರೂ ಅಷ್ಟರಲ್ಲಿ ಅವಳು ಬಗ್ಗಿ ಕಾಲ ಚಪ್ಪಲಿ ಬಿಚ್ಚಿ ಇವನತ್ತ ತಿರುಗಿ "ಏನ್ರಿ ಅವಾಗಿಂದ ನೋಡ್ತಾ ಇದ್ದೀನಿ. ಬಸ್ಸಲ್ಲೂ ಹಂಗೆ.. ಯಾಕೆ ಫಾಲೋ ಮಾಡ್ತಾ ಇದ್ದೀರಾ? ಮನೆ ಅಕ್ಕ ತಂಗಿ ಯಾರು ಇಲ್ವಾ?"
ಇವನ ಟೋಟಲ್ ಅನುಭವದ ಪ್ರಕಾರ ವಿಜ್ಞಾನಿಗಳು ಥೀಸಿಸ್ ಬರೀತಾರೆ. "ಯಾರು ಏನು ಆಲೋಚನೆ ಮಾಡ್ತಾ ಇದ್ದರೆ ಅನ್ನುವುದು ಮುಖ್ಯವಲ್ಲ. ಅವರು ಹೇಗೆ ವರ್ತಿಸ್ತಾರೆ ಎನ್ನುವುದು ಮುಖ್ಯ. ಆದುದರಿಂದ ಈ ತೋಪ್ಪಿಯಿಂದ ಲೋಕ ಕಲ್ಯಾಣ ವಾಗುವುದು ಎನ್ನುವುದರಲ್ಲಿ ನಮಗೆ ನಂಬಿಕೆ ಇಲ್ಲ" ಅಂತ.

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

Chetan.Jeeral's picture

ತುಂಬ ಚೆನ್ನಾಗಿದೆ ಸರ್, ಇನ್ನೊಂದು ಅರ್ಥಾನು ಕೊಡಬಹುದು ಈ ಕಥೆಗೆ. ಹುಡುಗಿಯರ ಮನಸನ್ನ ಅರ್ಥ ಮಾಡಿಕೊಳ್ಳೋಕೆ ಯಾರಿಂದನು ಸಾಧ್ಯವಿಲ್ಲ.

ಉ: ಡೈರಿಯ ಕೆಲವು ಹಾಳೆಗಳು - ಭಾಗ ೩

kssathishmail@gmail.com's picture

ನಿಜವಾಗಿಯೂ ನಿಜ