ಡೈರಿಯ ಕೆಲವು ಹಾಳೆಗಳು - ಭಾಗ ೭
ದಿನಾಂಕ: ೨೭-ಜನವರಿ
ಅವಳು:
ಇವತ್ತು ಅವ್ನು ಯೋಚನೆಯಲ್ಲಿ ಕಳೆದು ಹೋಗಿದ್ದ. ಅವ್ನು ಬಸ್ಸು ಹತ್ತಿದ ಮೇಲೆ ನನ್ನ ಕಡೆ ತಿರುಗಿಯೂ ಕೂಡ ನೋಡಲಿಲ್ಲ. ಅವ್ನು ಸೀದಾ ಹೋಗಿ ಕೊನೆಯ ಸೀಟಿನಲ್ಲಿ ಕುಳಿತು ಕಾದಂಬರಿ ಓದಲು ಶುರು ಮಾಡಿದ. ಅವನ ಕಡೆ ನೋಡಲು ಒಂದೆರಡು ಬಾರಿ ಪ್ರಯತ್ನ ಪಟ್ಟೆ ಆದ್ರೆ ಅವ್ನು ತಲೇನೆ ಎತ್ತಲಿಲ್ಲ. ಅವ್ನು ನಿಜಕ್ಕೂ ಘಾಸಿಗೊಂಡಿದ್ದಾನೆ. ನನಗೆ ನಿಜಕ್ಕೂ ದುಃಖ ಆಗ್ತಿದೆ. ಆದ್ರೆ ನಾನೇನು ಮಾಡೋಕೆ ಸಾಧ್ಯ? ಇವತ್ತು ಆಫೀಸಿನ ಹತ್ತಿರ ಇಳಿದಾಗ ನಾನು ಬೇಕಂತಲೇ ಗೇಟಿನ ಹತ್ತಿರ ಅವನನ್ನ ಮಾತಾಡಿಸೋಣ ಅಂತ ಬಹಳ ಹೊತ್ತು ಕಾದೆ. ಆದ್ರೆ ಅವ್ನು ಆ ಜನ ಜಂಗುಳಿಯಲ್ಲಿ ಕಾಣಲೇ ಇಲ್ಲ. ನಿರು ಸಾರೀ ಕಣೋ, ನೀನು ಮೊದಲಿನ ಹಾಗೆ ಇರೋ ಪ್ಲೀಸ್.....
ದಿನಾಂಕ: ೨೮-ಜನವರಿ
ಅವಳು: ಇವತ್ತು ಅವನನ್ನ ಫುಡ್ ಕೋರ್ಟಿನಲ್ಲಿ ನೋಡಿದೆ. ಅವ್ನು ಇಬ್ಬರು ಹುಡುಗಿಯರ ಜೊತೆ ನಗುತ್ತ, ಹರಟುತ್ತ, ಜೋಕೆ ಹೇಳುತ್ತಾ ಕುಳಿತುಕೊಂಡಿದ್ದ. ಅವರ ಜೊತೆ ಇರೋಕೆ ಅವನಿಗೆ ಇಷ್ಟ ಅಂತ ಕಾಣಿಸುತ್ತೆ. ಅವ್ನು ಕೂಡ ಬೇರೆ ಹುಡುಗರ ತರಹ ಬಹಳ ಹುಡುಗಿಯರೂ ನನ್ನ ಜೊತೆ ಇರಬೇಕು ಅನ್ನೋ ಮನೋಭಾವ ಇರೋನ?
ಅವ್ನು ಕೂಡ ಒಬ್ಬ ಫ್ಲರ್ಟ ಇರ್ಬೋದಾ? ಅವ್ನು ನನ್ನನ ಕೂಡ ಆ ಗುಂಪಿನ ಜೊತೆ ಸೇರ್ಕೊಳ್ಳೋಕೇ ಹೀಗೆ ಮಾಡ್ತಿದಾನ?
ಬಹುಷಃ ಈ ಇಬ್ಬರು ಹುಡುಗಿಯರೂ ಅವನ ಒಳ್ಳೆಯ ಸ್ನೇಹಿತರಿರಬೇಕು. ಕನಿಷ್ಠ ನಾನು ಹಾಗೆ ಭಾವಿಸ್ತೀನಿ.
ದೇವ್ರೇ ಆ ಇಬ್ಬರು ಅವನ ಅಕ್ಕಂದಿರೋ/ತಂಗಿಯಂದಿರೋ ಅಥವಾ ಬರಿಯ ಸ್ನೇಹಿತರೇ ಆಗಿರುವಂತೆ ಮಾಡು ಪ್ಲೀಸ್, ಅಷ್ಟೆ ಸಾಕು ಮತ್ತೇನು ಬೇಡ.

- Chetan.Jeeral ರವರ ಬ್ಲಾಗ್
- Login or register to post comments
- 268 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
>>ದೇವ್ರೇ ಆ ಇಬ್ಬರು ಅವನ ಅಕ್ಕಂದಿರೋ/ತಂಗಿಯಂದಿರೋ ಅಥವಾ ಬರಿಯ ಸ್ನೇಹಿತರೇ ಆಗಿರುವಂತೆ ಮಾಡು ಪ್ಲೀಸ್...
ದೇವ್ರು ಏನು ಮಾಡಿದ?!? ಈಗ ಟರ್ನಿಂಗ್ ಪಾಯಿಂಟಾ ಚೇತನ್ ?
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ವಿಲನ್ ಪ್ರವೇಶ ಇಲ್ವೇ?
*ಅಶೋಕ್
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ಇದು ಸಿನಿಮಾ ಅಲ್ಲ ಅಶೋಕ್. ಅದ್ರು ನಿರೀಕ್ಷೆ ಇರಲಿ,
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ಟರ್ನಿಂಗ್ ಪಾಯಿಂಟ್ ಇದೆ.
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ಯಾವಾಗ?
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ನಿರೀಕ್ಷಿಸಿ...
ಇನ್ನು ಮೂರುಭಾಗಗಳಲ್ಲಿ ಗೊತ್ತಾಗುತ್ತೆ... ಯಾಕೆ ಈ ಆತುರ... ತಾಳ್ಮೆ ಇರಲಿ...
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ದಿನಾಂಕ: ೨೮ ಜನವರಿ
ನಾನು:
ಈ ಚಪ್ಪಟೆ ಹುಡುಗಂದೂ ಆ ಬಿಸಿಬೇಳೆ ಹುಡುಗಿದೂ ಏನೋ ನಡೀತಾ ಇದೆ. ನಾನೂ ಸುಮಾರು ದಿನದಿಂದ ನೋಡ್ತಾನೆ ಇದ್ದೀನಿ. ಇವರಿಬ್ರೂ ಯಾರಿಗೂ ಗೊತ್ತಾಗಲ್ಲ ಅಂದ್ಕೊಂಡಿದಾರೆ. ಈ ವಯ್ಯ ಅಳುಮುಂಜಿ, ಹುಡುಗಿ ಕೊಂಚ ಧೈರ್ಯಸ್ಥೆ ಆದರೂ ಆಟ ಜೋರಾಗಿದೆ. ನಂಗೂ ಟೈಮ್ ಪಾಸ್. ನಡೀಲಿ ನಡೀಲಿ.
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
veena.
ಇನ್ನೂ ಮೂರು ದಿವಸ ಕಾಯಿಸುವ ಬದಲು, ಗಂಟೆಗೆ ಒಂದೊಂದು ಭಾಗದಂತೆ ಹಾಕಿಬಿಡಿಪ್ಪಾ ಪ್ಲೀಸ್.
ನನಗೆ ಕಾಯುವುದಕ್ಕೆ ಆಗುತ್ತಿಲ್ಲ.
ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
ತಾಳ್ಮೆ ಇರಲಿ...