ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › Chetan.Jeeral ರವರ ಬ್ಲಾಗ್

ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

September 26, 2008 - 2:26pm — Chetan.Jeeral

ನಮಸ್ಕಾರ ಗೆಳೆಯರೇ,

ನಿನ್ನೆ ವಿಜಯ ಕರ್ನಾಟಕ ಪತ್ರಿಕೆಯ ಒಂದು ಅಂಕಣ ಓದುತ್ತಿದ್ದೆ, ಕನ್ನಡದಲ್ಲಿರುವ ಬ್ಲಾಗ್ ಗಳ ಬಗ್ಗೆ ಒಂದು ವರದಿ ಬಂದಿತ್ತು, ಕನ್ನಡದಲ್ಲಿರುವ ಬ್ಲಾಗ್ ಗಳ ಸ್ಥಿತಿ ಗತಿಯ ಬಗ್ಗೆ ಒಂದು ಸ್ಥೂಲ ಚಿತ್ರಣ ಅದರಲ್ಲಿ ಕೊಟ್ಟಿದ್ರು. ನಿಜಕ್ಕೂ ಸಂತೋಷ ಪಡಬೇಕಾದ ವಿಷಯ ಏನೆಂದರೆ ಕನ್ನಡದಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ಬ್ಲಾಗ್ ಗಳಿವೆ, ಸಂತೋಷ. ಹಾಗೇನೇ ಇನ್ನೊಂದು ವಿಷಯ ಅವರು ಹೇಳೋದು ಏನೆಂದರೆ productive ಅನ್ನುವಂತಹ ಕೆಲಸಗಳು ಬ್ಲಾಗ್ ಗಳಲ್ಲಿ ಬರ್ತಿಲ್ಲ ಅನ್ನುವ ದೂರು. ಕೇವಲ ಕವನ, ಕಥೆ, ಹರಟೆ ಹೀಗೆ ಎಲ್ಲ ತಮ್ಮ ಪರಿಮಿತಿಯೋಳಗಿರುವ ವಸ್ತುಗಳನ್ನೇ ತೆಗೆದುಕೊಂಡು ಅಲ್ಲಲ್ಲಿ ಚರ್ಚೆ ಆಗುತ್ತೆ ಅನ್ನೋದು.
ಇದು ಸರಿ ಅನ್ನಿಸೋಲ್ವ ನಿಮಗೆ?

ಒಂದು ಬ್ಲಾಗ್ ಒಬ್ಬ ವ್ಯಕ್ತಿ ಬರಿತಾನೆ ಅಂದ್ರೆ ಮತ್ತು ಜನ ಅದನ್ನ ಓದುತ್ತಾರೆ ಅಂದ್ರೆ ಇದರ ಅರ್ಥ ಅವನಲ್ಲಿ ಏನೋ stuff ಇರಬೇಕು ಅಂತ ಅರ್ಥ. ಆದ್ರೆ ಅದು ಕೇವಲ ಕಥೆಗಳನ್ನ, ಕವನಗಳನ್ನ ಬರೆಯೋದರಲ್ಲೇ ಖರ್ಚು ಮಾಡಿದ್ರೆ ನಮ್ಮ ಕರ್ನಾಟಕದ ಏಳಿಗೆಗೆ ಅವನ ಪಾತ್ರ ಏನು.
ಸರಿ ನಾನು ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನ ಅಂಬೆಗಾಲು ಇಡ್ತಿದಿನಿ ಅದಕ್ಕೆ ಈ ಬ್ಲಾಗ್ ಒಂದು ವೇದಿಕೆ ಅಂತ ಹೇಳಬಹುದು. ಅದು ೧೦೦% ನಿಜ. ಆದ್ರೆ ಒಮ್ಮೆ ಎಲ್ಲ ಸಾಹಿತಿಗಳನ್ನ ಕೇಳಿ ನೋಡಿ ಅವರಲ್ಲಿರುವುದು ಅಪಾರ ಜ್ನ್ಯಾನ ಭಂಡಾರ ಅದರ ಜೊತೆಗೇನೆ ಒಂದು ದೇಶ ಮತ್ತು ರಾಜ್ಯ ಉಧ್ಧಾರ ಆಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಚಿಂತನೆ ಗಳು. ಕೇವಲ ನಾನು ಮತ್ತು ನನ್ನ ಸಾಹಿತ್ಯ ಅನ್ನೋನು ಬೆಲಿಯೋಕೆ ಸಾಧ್ಯಾನ ಯೋಚನೆ ಮಾಡಿ.

ನಿಮಗೆ ಒಂದು ಉದಾಹರಣೆ ಕೊಡ್ತೀನಿ:
ನಮ್ಮ ಕರ್ನಾಟಕದಲ್ಲಿ ಯಾವುದೇ ಘಟನೆ ನಡೆಯಿತು ಅಂತ ಅಂದ್ರೆ ನಮ್ಮ media ಟಾರ್ಗೆಟ್ ಮಾಡೋದು ಒಂದು ರಾಜಕಾರಣಿಗಳನ್ನ ಮತ್ತು ಸಾಹಿತಿಗಳನ್ನ. ಕಾರಣ ಅವರಲ್ಲಿರುವ ಸಾಮಾಜಿಕ ಕಳಕಳಿ. ಇದು ನಮ್ಮ ಯುವ ಕವಿ ಮತ್ತು ಕವಯತ್ರಿಯರಲ್ಲು ಇರಬೇಕು ಅಂತ ನಿಮಗೆ ಅನ್ನಿಸೋಲ್ವ, ನಮ್ಮದೇ ಉದಾಹರಣೆ ತೊಗೊಳ್ಳೋಣ ನಾವು ಸಾಹಿತ್ಯ ಓದ್ತಿವಿ, ಬರಿತಿವಿ ಕೂಡ. ಆದ್ರೆ ಅಷ್ಟೇನಾ ನಮ್ಮ ಹೊಣೆಗಾರಿಕೆ, ನಮ್ಮ ನಾಡಿಗೆ ನಾವು ಇಟ್ಟು ಕೊಳ್ಳಬೇಕಾದ commitment?
ಇವತ್ತು ಒಂದು ಅನ್ಯಾಯ ನಡೀತಿದೆ ಅಂದ್ರೆ ನಮ್ಮಲ್ಲಿ ಎಷ್ಟು ಜನ ಅದನ್ನ ಪ್ರತಿಭಟಿಸೋಕೆ ತಯಾರಗ್ತಾರೆ?
ಹಾಗೇನೇ ಬ್ಲಾಗ್ಗ್ ಗಳ ವಿಷಯಕ್ಕೆ ಬರೋಣ, ಇವತ್ತು ನಾನು ಓದೋದು ಕೆಲವೇ ಬ್ಲಾಗ್ ಗಳನ್ನ. ಅದರಲ್ಲಿ ಸಂಪದ ಕೂಡ ಒಂದು. ನಿಜಕ್ಕೂ ಸಂಪದ ಸಂಪತ್ಭರಿತವಾಗಿದೆ. ಇಲ್ಲಿ ವೈವಿಧ್ಯಮಯ ವಿಷಯಗಳು ಕಾಣಸಿಗುತ್ತಿವೆ, ಸಂತೋಷ. ಇಲ್ಲಿ ನಿಜಕ್ಕೂ ಕೆಲವು ಒಳ್ಳೆಯ ಸಾಹಿತ್ಯ ಬರೆಯುವವರಿದ್ದಾರೆ. ಆದ್ರೆ ಕರ್ನಾಟಕ, ಕನ್ನಡಕ್ಕೆ ಸಂಭಂದಿಸಿದಂತೆ ಇಲ್ಲಿ ಯಾವತ್ತು ಒಂದು ಬಿಸಿಯಾದ ಅಥವಾ ಸತ್ವಯುತ ಚರ್ಚೆಯನ್ನು ನಾನು ಸಂಪದ ಓದಲು ಶುರು ಮಾಡಿದಾಗಿನಿಂದಲೂ ನಡೆದಿಲ್ಲ.

ನನ್ನ ಅನಿಸಿಕೆ ಪ್ರಕಾರ ಸಂಪದದಲ್ಲಿ ಸುಮಾರು ೩೦೦೦ ಕ್ಕೂ ಮಿಕ್ಕಿದ ಜನರು ಇಲ್ಲಿ ಇದ್ದರೆ. ಇಷ್ಟು ಜನ ಇದ್ರೂ ನಮ್ಮ ನಾಡು ಕಟ್ಟಲು ಸಹಾಯಕ ವಾಗುವಂತಹ ಯಾವುದೇ ನಡೆಗಳಿಲ್ಲ ಅಂದ್ರೆ ಮನಸ್ಸಿಗೆ ಬೇಜಾರಾಗುತ್ತೆ. ಇರ್ಲಿ ನಾವೇನು ಇಲ್ಲಿರುವವರೆಲ್ಲ ಪಂಡಿತರಾಗಿರಬೇಕಿಲ್ಲ ಒಂದು ವಿಷಯ ಮತ್ತು ಅದರ ಬಗ್ಗೆ ಚರ್ಚಿಸಲು ಸಾಮಾನ್ಯ ಜ್ಞಾನ ಇದ್ರೆ ಸಾಕು ಅಂದೊಕೊತಿನಿ.
ನಿಜಕ್ಕೂ ಒಳ್ಳೆಯ ಬರಹಗಾರರು ಇಲ್ಲಿ ನಮಗೆ ಕಾಣ ಸಿಗುತ್ತಾರೆ ಆದ್ರೆ ಅದನ್ನ ತಮ್ಮ ಶಕ್ತಿಯನ್ನು ಚಿಂತನೆ ಮತ್ತು ಜಿಜ್ಞಾಸೆಗೆ ಹಚ್ಚಿದರೆ ಇನ್ನು ಹೆಚ್ಚಿನ ಒಳ್ಳೆಯ ವಿಷಯಗಳು ಸಿಗಬಹುದು. ನಾಡು ಕಟ್ಟಲು ಸಹಾಯಕವಾಗಬಹುದು.

ನೀವೆನಂತಿರಾ???????? Smiling

~.~
  • Chetan.Jeeral ರವರ ಬ್ಲಾಗ್
  • Login or register to post comments
  • 415 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 26, 2008 - 4:42pm — gurubaliga

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

gurubaliga's picture

ಸಾಹಿತ್ಯ ಕತೆ ಕವನವೂ ಕೂಡ ಬರಹಗಾರನ ಒಳತೋಟಿಯ ಅಭಿವ್ಯಕ್ತಿಯಲ್ಲವೇ. ಆ ಒಳತೋಟಿ ಅವನ ವೈಯಕ್ತಿಕ ಸಮಸ್ಯೆಗಳದ್ದಿರಬಹುದು, ಸಾರ್ವಜನಿಕ ಸಮಸ್ಯೆಗಳದ್ದೂ ಇರಬಹುದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 4:51pm — ASHOKKUMAR

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

ASHOKKUMAR's picture

ಸಂಪದ ಬ್ಲಾಗ್? ಯಾವುದಕ್ಕೆ ಸಂಪದ ಎನ್ನುತ್ತಿದ್ದೀರಿ?
ಸಂಪದದಲ್ಲಿ ಸಾವಿರಾರು ಬ್ಲಾಗುಗಳಿವೆ.

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 4:59pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ಒಟ್ಟಾರೆಯಾಗಿ ನಾವೆಲ್ಲರೂ ಇದರಲ್ಲಿ ಭಾಗಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:01pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ನೀವು ಹೇಳೋದು ನಿಜ ಆದ್ರೆ ಅಂತಹ ಅಭಿವ್ಯಕ್ತಿಯನ್ನು ಹೊರಹೊಮ್ಮುವ ಕಾದಂಬರಿ ಇತ್ತೀಚಿಗೆ ಬಂದಿಲ್ಲ ಅಂತಾನೆ ಹೇಳಬಹುದು. ಅದೆಲ್ಲ ನವ್ಯ ಕಾವ್ಯ ಅಂತ ನಾವೇನು ಕರೆಯುತ್ತೇವೆಯೋ ಅಲ್ಲೇ ಸೀಮಿತವೈತು ಅನ್ನಿಸುತ್ತೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:13pm — ASHOKKUMAR

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

ASHOKKUMAR's picture

>>ನೀವು ಹೇಳೋದು ನಿಜ ಆದ್ರೆ ಅಂತಹ ಅಭಿವ್ಯಕ್ತಿಯನ್ನು ಹೊರಹೊಮ್ಮುವ ಕಾದಂಬರಿ ಇತ್ತೀಚಿಗೆ ಬಂದಿಲ್ಲ ಅಂತಾನೆ ಹೇಳಬಹುದು. ಅದೆಲ್ಲ ನವ್ಯ ಕಾವ್ಯ ಅಂತ ನಾವೇನು ಕರೆಯುತ್ತೇವೆಯೋ ಅಲ್ಲೇ ಸೀಮಿತವೈತು ಅನ್ನಿಸುತ್ತೆ.

ತಾವು ಬರೆಯುತ್ತಿರುವುದು ಯಾವುದರ ಬಗೆಗೆ?

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:17pm — gurubaliga

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

gurubaliga's picture

ನಾವು ಮಾತಾಡ್ತಾ ಇರೋದು ಕನ್ನಡದ ಬ್ಲಾಗುಗಳ ವಿಷಯವಲ್ಲವೇ?

ಕುಂಟಿನಿಯ "ನದಿ ಮಾತನಾಡಲಿಲ್ಲ" ಕತೆ ಓದಿ. ಇದು ಅಲ್ಲಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಡೆಯೋ ವಿಷಯ. ಪೇಟೆಯಲ್ಲಿ ಮಾತ್ರ ಆಗುವ ವಿಷಯ ಕತೆಯಲ್ಲಿ ಬರೆದರಷ್ಟೇ ಅದು ಚರ್ಚೆಯಲ್ಲ. ಹಳ್ಳಿಗಳ ಎಷ್ಟೋ ಸಮಸ್ಯೆಗಳು ಕನ್ನಡಿಗರಿಗೆ ಕತೆ ಓದಿಯೇ ಗೊತ್ತಾಗೋದು. http://kuntini.blogspot.com/

ನಿಮ್ಮ ತುಡಿತ ಸರಿ. ಬರಹಗಾರರು ಮಾತನಾಡಬೇಕು. ಮತ್ತೆ ಹೇಳ್ಬೇಡಿ ಇವನ್ಯಾರೋ ಅರುಂಧತಿ ರಾಯ್ ಕದೆಯೋನು ಬಂದ ಅಂತ. ಬರಹಗಾರರು ಕತೆ ಕವನ ಬರಿಲಿ ಬಿಡಿ. ಸುಮ್ಮನೆ ಯಾಕೆ!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 4:53pm — srinivasps

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

srinivasps's picture

> . ಆದ್ರೆ ಕರ್ನಾಟಕ, ಕನ್ನಡಕ್ಕೆ ಸಂಭಂದಿಸಿದಂತೆ ಇಲ್ಲಿ ಯಾವತ್ತು ಒಂದು ಬಿಸಿಯಾದ ಅಥವಾ ಸತ್ವಯುತ ಚರ್ಚೆಯನ್ನು ನಾನು ಸಂಪದ ಓದಲು
> ಶುರು ಮಾಡಿದಾಗಿನಿಂದಲೂ ನಡೆದಿಲ್ಲ.

ನಮ್ಮ ನಮ್ಮಲ್ಲೆ ಬಿಸಿ ಮಾತೇಕೆ? ಬಿಸಿ ತಾಕಬೇಕಾದವರಿಗೆ ತಾಕಿದರೆ ಸಾಕು...

--ಶ್ರೀ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:04pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ಆದ್ರೆ ನಮ್ಮನಮ್ಮಲ್ಲಿ ಅದು ಚರ್ಚೆ ಆದ್ರೆ ಒಂದು ಸರಿಯಾದ ದಾರಿಯನ್ನ ನಮಗೆ ತೋರಿಸುತ್ತೆ ಅಂತ ತಿಳ್ಕೊಬಹುದಲ್ವ್ ಸರ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:13pm — hpn

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

hpn's picture

ಸಂಪದ ಬ್ಲಾಗ್ ಅಲ್ಲ. ಸಂಪದ ಒಂದು ಸಮುದಾಯ. ಇದರಲ್ಲಿ ಹಲವು ಬ್ಲಾಗುಗಳಿವೆ.

ವಿ.ಕ.ದಲ್ಲಿ ಬಂದ ಲೇಖನವನ್ನು ನಿಮ್ಮಂತೆಯೇ ಒಬ್ಬರು ನನಗೂ ತೋರಿಸಿದರು. ನಾನೂ ಓದಿದೆ. ಅದರ ಲೇಖಕರು blogspot ನಿಂದ ಹೊರಗೆ ಇರುವ ಯಾವುದೇ ವೆಬ್ಸೈಟಾಗಲಿ, ಬ್ಲಾಗುಗಳನ್ನಾಗಲಿ ನೋಡಿರಲಿಕ್ಕಿಲ್ಲ. ಅವರು ಖಂಡಿತ ಸಂಪದ ನೋಡಿರಲಿಕ್ಕಿಲ್ಲ.

"ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?" - ಎಂದು ಇರುವ ಶೀರ್ಷಿಕೆಯೇ Gray ಅನ್ನಿಸುತ್ತಿದೆ. ಸಂಪದಕ್ಕೆ ಎಷ್ಟು ದಿನಗಳಿಂದ ಭೇಟಿಕೊಡುತ್ತಿದ್ದೀರ? ಹೀಗ್ಯಾಕೆ ಬರೆದಿರಿ? ನಿಮ್ಮ ಉದ್ದೇಶ ಏನು?

(ನಿಮ್ಮ ಪ್ರೊಫೈಲ್ ನೋಡಿದರೆ ಉದ್ದಕ್ಕೂ ಇದೇ ರೀತಿಯ ಲೇಖನಗಳನ್ನು ಬರೆದ ಹಾಗಿದೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:41pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ನಮಸ್ಕಾರ ನನ್ನ ಉದ್ದೇಶ ಇಲ್ಲಿರುವ ಯಾರ ಮನಸ್ಸಿಗಾಗಲಿ ಅಥವ ಇನ್ನಾರಿಗೋ pinpoint ಮಾಡಿ ಬರೆದಿದ್ದಲ್ಲ. ನನ್ನ ಉದ್ದೇಶ ಇಸ್ಟೇ ; ನಮ್ಮ ಕನ್ನಡತನ, ನಮ್ಮ ಕರ್ನಾಟಕ, ನಾನು ಕನ್ನಡಿಗ ಅನ್ನುವ ಭಾವನೆ ಎಲ್ಲ ಕನ್ನಡಿಗರಲ್ಲೂ ಮೂಡಬೇಕು ಅನ್ನುವುದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:49pm — hpn

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

hpn's picture

ಚೇತನ್ ಆ ಭಾವನೆ *ಮೂಡಬೇಕಿಲ್ಲ*. ಅದು ಪ್ರತಿಯೊಬ್ಬ ಕನ್ನಡಿಗನಲ್ಲೂ ಹುಟ್ಟಿನಿಂದಲೇ ಇರುತ್ತದೆ. ಎಲ್ಲರಿಗೂ ಕಾಣುವಂತೆ ತೋರಿಸಿಕೊಳ್ಳದಿದ್ದ ಮಾತ್ರಕ್ಕೆ ಆ ಭಾವನೆ ಇಲ್ಲವೆಂದು ಎಣಿಸುವುದು ತಪ್ಪು.
ಈಗಲಾದರೂ ಈ ಶೀರ್ಷಿಕೆ ಬದಲಾಯಿಸಬಾರದೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:01pm — madhava_hs

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

madhava_hs's picture

>>ನಮ್ಮ ಕನ್ನಡತನ, ನಮ್ಮ ಕರ್ನಾಟಕ, ನಾನು ಕನ್ನಡಿಗ ಅನ್ನುವ ಭಾವನೆ ಎಲ್ಲ ಕನ್ನಡಿಗರಲ್ಲೂ ಮೂಡಬೇಕು ಅನ್ನುವುದು.

ಇಲ್ಲಿ ಕನ್ನಡದಲ್ಲಿ ಓದಿ, ಕನ್ನಡದಲ್ಲಿ ಬರೆಯಬೇಕು ಎಂದು ಬರುವವರಿಗಾಗಲೇ ನಮ್ಮ ಭಾಷೆ, ನಾಡು, ಕನ್ನಡತನದ ಬಗ್ಗೆ ಅಭಿಮಾನವಿದ್ದೇ ಇರುತ್ತದೆ ಎಂದು ಭಾವಿಸುತ್ತೇನೆ. ಹಾಗಾಗಿ ಅವರು ಅದಕ್ಕಿಂತ ಹೆಚ್ಚಿನದನ್ನು ಚರ್ಚಿಸಲು ಇಲ್ಲಿ ಬರುತ್ತಾರೆ. ಇನ್ನು ಇಂತಹ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನುಪಯೋಗ ಅಂದಿರಿ. ಕನ್ನಡ ಓದಿ, ಬರೆದು, ಚರ್ಚಿಸಿದರೆ ಕನ್ನಡಕ್ಕೆ ಒಳಿತೇ ಅಲ್ಲವೇ?

ಬರೀ ಭಾಷೆ ಉದ್ದೇಶಕ್ಕೆ ಹುಟ್ಟಿಕೊಂಡ ಬ್ಲಾಗುದಾಣಗಳು ಬಹಳಷ್ಟಿವೆ. ಹಾಗಾಗಿ ಬರೀ ಭಾಷೆ ಬಗ್ಗೆ ಮಾತನಾಡುವವರು ಅಲ್ಲಿ ಹೋಗುತ್ತಾರೆ. ಈ ಸಂಪದ ಕೆಲವರಿಗೆ stress buster, ಕೆಲವರಿಗೆ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಲು, ಕೆಲವರಿಗೆ ಪ್ರಸ್ತುತ ವಿಧ್ಯಮಾನಗಳನ್ನು ಮುಕ್ತವಾಗಿ ಚರ್ಚಿಸಲು ಹೀಗೆ ಬಹಳ ತರಹೇವಾರಿ ವಿಷಯಗಳಿವೆ.

ನಾಡಭಕ್ತಿ, ಭಾಶೆ ಭಕ್ತಿ, ಧರ್ಮ ಭಕ್ತಿ ಹೀಗೆ ಯಾವುದೇ ಕೆಲವು ವಿಷಯಗಳಿಗೆ Narrow ಆಗಿಬಿಟ್ಟರೆ ಏಕತಾನತೆ ಬಂದುಬಿಡುತ್ತದೆ. ಇಲ್ಲಿ ಚಲನ ಚಿತ್ರ, ಸಾಕಿದ ಬೆಕ್ಕಿನಿಂದ ಹಿಡಿದು ತಂತ್ರಜ್ಞಾನದ ವರೆಗಿನ ಚರ್ಚೆಗಳೆಲ್ಲಾ ನಡೆಯುತ್ತವೆ. ಹೀಗೆ ವೈವಿಧ್ಯತೆ ಇದ್ದರೇ ಚೆನ್ನ ಅಲ್ವೇ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:30pm — harshab

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

harshab's picture

ಬ್ಲಾಗ ಬರೆಯೋದು, ಅವರವರ ಹವ್ಯಾಸ, ಇಶ್ಟದ ಸಂಗತಿ. ಬರೆಯೋರು ಏನಾರ ಬರ್ಕಬೌದು.....

ಇನ್ನು "ಸಂಪದ" ದಲ್ಲಿ ಬರಿಯೋದು-ಓದೋದರಿಂದ ಏಶ್ಟೋ ವಿಶ್ಯಗಳನ್ನ ಹಂಚ್ಕಬೌದು, ತಿಳ್ಕಾಬೌದು ಅಂತ ನನ್ನ ಅನಿಸಿಕೆ.. (ಇಂತದು ನನಗಿನ್ನೊಂದು ಗೊತ್ತಿಲ್ಲಾ....)

ಎಲ್ಲಾ ಕೆಲ್ಸದಾಗ ಉಪಯೋಗ ಹುಡುಕೋದು ದಡ್ಡತನ...

"ಇಷ್ಟು ಜನ ಇದ್ರೂ ನಮ್ಮ ನಾಡು ಕಟ್ಟಲು ಸಹಾಯಕ ವಾಗುವಂತಹ ಯಾವುದೇ ನಡೆಗಳಿಲ್ಲ ಅಂದ್ರೆ ಮನಸ್ಸಿಗೆ ಬೇಜಾರಾಗುತ್ತೆ."

ಹೇಳ್ರೀ, ನಾಡು ಕಟ್ಟಲು ತಾವು ಎಲ್ಲೆಲ್ಲಿ - ಎಶ್ಟೆಟ್ಟು, ತಮ್ಮ ರಕ್ತ-ಬೆವರು ಅದು-ಇದು ಸುರಿಸ್ತಾ ಇದೀರಿ ಅಂತಾ..?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:45pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ನೀವು ಹೇಳೋದು ಸರಿ, ನಾನೇನು ಅ. ನ. ಕೃ ಅಥವ ಮ. ರಾಮಮೂರ್ತಿ ಅಥವ ಇನ್ನೊಬರಹಾಗೆ ಸೇವೆ ಮಾಡದೆ ಇರಬಹುದು. ಅದ್ರು ನನ್ನ ಪರಿಮಿತಿಯೊಳಗೆ ಏನು ಮಾಡಲು ಸಾಧ್ಯವೋ ಅದನ್ನ ಮಾಡುತ್ತಿದ್ದೀನಿ. ಹನಿ ಹನಿ ಕೂಡಿದರೆ ಹಳ್ಳ ಅನ್ನೋ ಹಾಗೆ ಎಲ್ಲರು ಕೈ ಹಿಡಿದು ಮುಂದೆ ಸಾಗಿದಾಗ ಮಾತ್ರ ಒಂದು ಹೊಸ ಹುಟ್ಟು ಪಡೆಯಲು ಸಾಧ್ಯ ಅನ್ನೋ ಮಾತು ಸರಿ ಅಲ್ವ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:41pm — sprasad

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

sprasad's picture

ಚೇತನ್,
ಬಹುಷಃ ನೀವು ಇತ್ತೀಚಿಗೆ ನಡೆದ ಗ್ನೂ/ಲಿನಕ್ಸ್ ಹಬ್ಬದ ಯಶಸ್ಸಿನ ಬಗ್ಗೆ ಕೇಳಿರಬಹುದು. ಇದು ಸಾಧ್ಯವಾಗಿದ್ದು ಕೇವಲ ಸಂಪದ ಎಂಬ ಈ ಸಮುದಾಯದಿಂದಲೆ ಹಾಗು ಇದರ ಹೆಚ್ಚಿನ ಪ್ರಯೋಜನ ಪಡೆದವರು ಕನ್ನಡದವರು. ಗಣಕದಲ್ಲಿ ಕನ್ನಡವನ್ನು ಹೇಗೆ ಬಳಸಬೇಕು ಮತ್ತು ಅಲ್ಲಿ ಎದುರಾಗುವ ತೊಂದರೆಗಳಿಗೆ ಪರಿಹಾರ ಹೇಗೆ ಹುಡುಕಬೇಕು ಎಂಬೆಲ್ಲಾ ಪ್ರಶ್ನೆಗೆ ಈ ಹಬ್ಬದ ಮಂದಿ ಉತ್ತರ ಒದಗಿಸಿದ್ದಾರೆ. ಕೇಳಿದವರಿಗೆಲ್ಲ ಉಚಿತವಾಗಿ ಲಿನಕ್ಸಿನ ಸೀಡಿಯನ್ನು ಒದಗಿಸಿದ್ದಾರೆ. ಬಹುಷಃ ಸಂಪದಂತಹ ವೇದಿಕೆ ಇಲ್ಲದೆ ಹೋಗಿದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲವೇನೋ!.
ಅಶೋಕ್ ಅವರು ಬರೆಯುವ ತಂತ್ರಜ್ಞಾನ ಸಂಬಂಧಿ ಲೇಖನಗಳಿಂದ, ಓಂ ಶಿವು, ಅರವಿಂದರ ಓಪನ್‌ಸೋರ್ಸ್ ತಂತ್ರಾಂಶ ಸಂಬಂಧಿತ ಲೇಖನಗಳಿಂದಅಲ್ಲದೆ ಸದ್ಯದಲ್ಲೆ ಆರಂಭಗೊಳ್ಳಲಿರುವ ಟೆಕ್‌ಸಂಪದದಿಂದ ಕನ್ನಡಿಗರಿಗೆ ತಾನೆ ಪ್ರಯೋಜನವಾಗುವುದು!?
ಇಂಗ್ಲೀಷಿನಲ್ಲಿದ್ದ ಫೈರ್ಫಾರ್ಕ್ಸ್, ಲಿನಕ್ಸಿನಂತಹ ಓಪನ್ ಸೋರ್ಸ್ ತಂತ್ರಾಂಶಗಳು ಕನ್ನಡಕ್ಕೆ ಅನುವಾದಗೊಳ್ಳಲೂ ಸಹ ಸಂಪದದ ಕಾಣಿಕೆ ಇದೆ.
ಬ್ಲಾಗುಗಳು ನಮ್ಮ ಒಳಗಿನ ಭಾವನೆಗಳನ್ನು ಅಭಿವ್ಯಕ್ತಿಗಳ ಹೊರ ಹರಿವಿಗೆ ಮಾರ್ಗವಾಗಿದೆ ಅಷ್ಟೆ. ಅದು ಒಂದು ಮನರಂಜನೆಯ ವಿಧ ಅಷ್ಟೆ.
ಅಂದ ಹಾಗೆ ನೀವು ಹೇಳುವಂತೆ ಕೇವಲ ಕಿಡಿಯುಗುಳುವ ಚರ್ಚೆಗಳಿಂದ ಏನೂ ಸಹ ಆಗುವುದಿಲ್ಲ. ಬದಲಿಗೆ ಸರಿಯಾದ ದಿಕ್ಕಿನಲ್ಲಿ ಎಲ್ಲರೂ ಒಟ್ಟಿಗೆ ಕಾರ್ಯಪ್ರವೃತ್ತರಾಗಬೇಕಿಷ್ಟೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:48pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ಗೊತ್ತು ಪ್ರಸಾದ್
ನಾನು ಕೂಡ ಹಬ್ಬದಲ್ಲಿ ಪಾಲ್ಗೊಂಡಿದ್ದೆ, ನನ್ನ ಮಾತು ಯಾರನ್ನು ನೋಯಿಸೋಕೆ ಬರೆದಿದ್ದಲ್ಲ ನೀವು ಹೇಳೋ ಹಾಗೆ ಸರಿಯಾದ ದಾರಿ ಹುಡುಕಲು ಒಂದು ಚರ್ಚೆ ಬೇಡ ಅಂತ ಹೇಳ್ತಿರ. ನನ್ನ ಉದ್ದೇಶ ಇದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:06pm — sprasad

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

sprasad's picture

ಚೇತನ್,
ನಾನು ಸಹ ನೊಂದು ಬರೆದಿರಲಿಲ್ಲ. ಈ ನಿಮ್ಮ ಲೇಖನವನ್ನು ಓದುವವರಿಗೆ ಸರಿಯಾದ ಮಾಹಿತಿ ತಿಳಿದಿರಲಿ ಎಂದು ಬರೆದನಷ್ಟೆ. ಕನ್ನಡದ ಪರ ಘೋಷಣೆ ಕೂಗುವವರು, ಮಾತನವಾಡುವವರು ಮಾತ್ರ ನಿಜವಾದ ನಾಡ ಪ್ರೇಮಿಗಳು ಎಂದು ಬಿಂಬಿಸಲಾಗುತ್ತದೆ, ಹಾಗಲ್ಲ ಈ ಬಗೆಯ ಕೆಲಸಗಳಿಂದಲೂ ಕನ್ನಡನಾಡಿಗೆ, ಕನ್ನಡ ನುಡಿಗೆ ಹಾಗು ಕನ್ನಡಿಗರಿಗೆ ಒಳಿತಾಗುತ್ತದೆ ಎಂದು ತಿಳಿಸಲು ಬರೆದೆ ಅಷ್ಟೆ. ಚರ್ಚ ಬೇಡೆವೆಂದೇನೂ ನಾನು ಹೇಳಿಲ್ಲ, ಆರೋಗ್ಯ ಪೂರ್ಣ ಸತ್ವಯುತ ಚರ್ಚೆಗಳು ಎಂದಿಗೂ ಸ್ವಾಗತಾರ್ಹವೆ. ಆದರೆ ಚರ್ಚೆಗಳು ಉಪ್ಪಿನಕಾಯಿಯಾಗಬೇಕೆ ಹೊರತು ಊಟವಾಗಬಾರದು ನನ್ನ ಉದ್ದೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:07pm — Chetan.Jeeral

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chetan.Jeeral's picture

ನಿಮ್ಮ ಮಾತು ನಾನು ಸಹ ಒಪ್ಪುತ್ತೇನೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 5:59pm — ASHOKKUMAR

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

ASHOKKUMAR's picture

ಸಂಪದದಿಂದ ಆಗಿರುವ ಉಪಯೋಗವನ್ನು ಅಳೆಯುವುದೇ ಕಷ್ಟ.
ನಾನು ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಗೂಗಲ್ ನ್ಯೂಸಿನಲ್ಲಿ ನೋಡುತ್ತಿರುತ್ತೇನೆ. ಆದರೂ ಗೂಗಲ್ ಕ್ರೋಮಿನ ಬಿಡುಗಡೆ, ಕನ್ನಡ ಫೈರ್‌ಪಾಕ್ಸ್, ಲಿನಕ್ಸ್ ಮತ್ತು ಕನ್ನಡ,ವರ್ಚುವಲ್ ಬಾಕ್ಸ್ ಎಂಬ vmwareಗೆ ಸರಿ ಸಮಾನ ಪ್ಯಾಕೇಜ್, ವೈಫಿ ಸುಭದ್ರಗೊಳಿಸುವಿಕೆ ಬಗ್ಗೆ, ಕನ್ನಡ ವಿಕಿಪೀಡಿಯ ಚಟುವಟಿಕೆ ಬಗ್ಗೆ, ಬಂಬು ಡಿಜಿಟೈಸರ್ ಪೆನ್‌ಗಳ ಬಗ್ಗೆ.... ಹೀಗೆ ಉಪಯುಕ್ತ, ದೈನಂದಿನ ಜೀವನದಲ್ಲಿ ಬೇಕಾಗುವ ಸುದ್ದಿ ಸಮಾಚಾರಗಳು ತಿಳಿದದ್ದು ಸಂಪದದ ಸಹವಾಸದಿಂದ! (ಇತ್ತೀಚೆಗಿನ ಕೆಲವನ್ನು ಮಾತ್ರಾ ಉಲ್ಲೇಖಿಸಿದ್ದೇನೆ)
ಅಂದಹಾಗೆ ಫೈರ್‌ಪಾಕ್ಸಿನಲ್ಲಿ ಇಂಟರ್ನೆಟ್ ಟ್ಯಾಬ್ ಆಪ್ಷನ್, ವೈನ್ ಬಳಸಿ ವಿಂಡೋಸ್ ತಂತ್ರಾಂಶವನ್ನು ಲಿನಕ್ಸಿನಲ್ಲಿ ಬಳಸುವುದು ಇಲ್ಲಿಂದಲೇ ನನ್ನ ಗಮನಕ್ಕೆ ಬಂತು.
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:02pm — mahesha

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

mahesha's picture

"Sampada was started at the end of July, 2005 to promote usage of Kannada on the Internet. Back then, there were not many Kannada Websites in Unicode. Most of those that were present, were in ASCII either using Baraha or Nudi. Only few of us were blogging in Kannada using Unicode back then."

ಇದು ಸಂಪದದ ಬಗ್ಗೆ ಅದು ಹೇಳಿಕೊಳ್ಳೋದು...............

ಸಂಪದ ಇರೋದು ಇಂಟರ್‍ ನೆಟ್ಟಲ್ಲಿ ಕನ್ನಡದ ಬಳಕೆ ಹೆಚ್ಚಿಸಲು.....

ಈಗ ನೀವೇ ಹೇಳಿ ಇಂಟರ್‍ ನೆಟ್ಟಲ್ಲಿ ಕನ್ನಡದ ಕನ್ನಡಲಿಪಿಯ ಬಳಕೆ ಹೆಚ್ಚಿಸಿ ಏನು ಉಪಯೋಗ/ಬಾಳಿಕೆ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:13pm — gurubaliga

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

gurubaliga's picture

ನಂದೂ ಅದೇ ಮಹೇಶ್

ಕನ್ನಡದಲ್ಲಿ ಕತೆ ಬರೆದಾಗ ನನ್ನ ಕಸಿನ್ ಹೇಳ್ತಾ ಇದ್ದ. ಈ ಇಂಟರ್ನೆಟ್ ಯುಗದಲ್ಲಿ ಇನ್ನು ಕನ್ನಡ ಓದುವವರು ಕಡಿಮೆ ಆಗ್ತಾರೆ ಅಂತ. ಸಂಪದ ಅವನ ಮಾತನ್ನು ಸುಳ್ಳು ಮಾಡಿದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 7:06pm — Chamaraj

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

Chamaraj's picture

ಚೇತನ್‌, ನಿಮ್ಮ ಉದ್ದೇಶ ಒಳ್ಳೆಯದಿದೆ, ಆದರೆ ಅಭಿವ್ಯಕ್ತಿ ಎಡವಿದೆ.

ಹರಿ ಹೇಳಿದಂತೆ ಸಂಪದ ಒಂದು ಬ್ಲಾಗ್‌ ಅಲ್ಲ. ಅದು ಸಮುದಾಯ ತಾಣ. ನಾವೆಲ್ಲ ಇಲ್ಲಿ ಬಂದು, ನಮ್ಮ ನಮ್ಮ ಇಷ್ಟಾನಿಷ್ಟಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂಥ ಒಂದು ಕೂಟ. ಅದನ್ನು ಹಾಗೆ ನೋಡಿದರೇ ಚೆನ್ನ.

ಸಾಹಿತ್ಯಕ್ಕೆ ಇರುವ ಒತ್ತು ಇತರ ಕ್ಷೇತ್ರಗಳಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ ಎಂಬುದರ ಬಗ್ಗೆ ನನ್ನ ಸಹಮತವಿದೆ. ಆದರೆ, ಕನ್ನಡಿಗನ ಮೂಲ ಆಸಕ್ತಿಯೇ ಸಾಹಿತ್ಯ. ಹೀಗಾಗಿ, ಮೊದಲ ಅಭಿವ್ಯಕ್ತಿ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಆದರೆ, ಅದು ಅಲ್ಲಿಯೇ ಸುತ್ತದಂತೆ ಮಾಡಲು ಹಲವಾರು ಪ್ರಯತ್ನಗಳು ನಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಟೆಕ್‌ ಸಂಪದ, ಕೃಷಿ ಸಂಪದ, ಆರೋಗ್ಯ ಸಂಪದ- ಇವೆಲ್ಲ ಇರುವುದು ಏತಕ್ಕೆಂದು ಭಾವಿಸಿದ್ದೀರಿ?

ಅಲ್ಲದೇ, ಪ್ರತಿಯೊಬ್ಬ ಸಂಪದಿಗನೂ ತನ್ನದೇ ವ್ಯಾಪ್ತಿಯಲ್ಲಿ ಸಾಕಷ್ಟು ಆಸಕ್ತಿಕರ, ಸಾಹಿತ್ಯೇತರ ವಿಷಯಗಳನ್ನು ಪ್ರಸ್ತುತಪಡಿಸುತ್ತಲೇ ಬಂದಿದ್ದಾನೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ, ಪ್ರಚಲಿತ ವಿಷಯಗಳು- ಹೀಗೆ ಹಲವಾರು ಮಜಲುಗಳು ಇಲ್ಲಿ ಕವಲೊಡೆದು ಸಮೃದ್ಧವಾಗಿ ಹರಡಿರುವುದುನ್ನು ತಾವು ನೋಡಬಹುದು. ನಿಜ, ಇಲ್ಲಿ ಸಣ್ಣ ವಿಷಯಗಳ ಬಗ್ಗೆ ದೊಡ್ಡ ಚರ್ಚೆಗಳು, ವ್ಯರ್ಥ ಮಾತುಗಾರಿಕೆ ನಡೆಯುತ್ತದೆ. ಆದರೆ, ಅದು ಸಹಜ ಕೂಡ. ದೊಡ್ಡ ಕೂಟದಲ್ಲಿ ಎಲ್ಲ ರೀತಿಯ ಜನ ಇರುತ್ತಾರೆ. ಕ್ರಮೇಣ ಅವರು ಪರಸ್ಪರ ಸಹವಾಸದಿಂದ ತಮ್ಮಲ್ಲಿರುವ ಉತ್ತಮಾಂಶಗಳನ್ನು ಹೊರಹಾಕುತ್ತ ಹೋಗುತ್ತಾರೆ. ಇದು ನಿಧಾನ ಪ್ರಕ್ರಿಯೆ.

ನಿಮ್ಮ ಆಶಯವನ್ನು ನಾನು ಅಲ್ಲಗಳೆಯುತ್ತಿಲ್ಲ. ನಿಮ್ಮ ಕಾಳಜಿ ಅರ್ಥವಾಗುತ್ತದೆ. ಆದರೆ, ಸಂಪದವನ್ನು ಬ್ಲಾಗ್‌ ಎಂದು ಕರೆಯಬೇಡಿ. ಹಾಗೇ, ಇಲ್ಲಿ ಉಪಯುಕ್ತವಾದುದು ಕಡಿಮೆ ಎಂದೂ ಭಾವಿಸಬೇಡಿ. ಇವೆರಡು ವಿಷಯಗಳ ಬಗ್ಗೆ ಈಗಾಗಲೇ ಬಹಳಷ್ಟು ಸಂಪದಿಗರು ಉಪಯುಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ನಾನು ಹೆಚ್ಚು ಸೇರಿಸಲು ಹೋಗುವುದಿಲ್ಲ.

ಕೊನೆಯದಾಗಿ, ಇಂಥದೊಂದು ಉಪಯುಕ್ತ ವಿಷಯವನ್ನು ತಂದು ನಮ್ಮ ನಡುವೆ ಇಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಗಳು. ನೀವೂ ಬರೆಯಿರಿ. ನಿಮ್ಮ ಆಶಯ ನಿಮ್ಮ ಬರವಣಿಗೆಗಳಲ್ಲೂ ವ್ಯಕ್ತವಾಗಲಿ.

- ಚಾಮರಾಜ ಸವಡಿ
http://chamarajsavadi@blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 9:38pm — vasant.shetty

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

vasant.shetty's picture

ನಮಸ್ಕಾರ ಚೇತನ್,

ನಿಮ್ಮ ಬರಹದಲ್ಲಿ ನಾನು ಕಂಡಿದ್ದು, ಸಂಪದದಲ್ಲಿರುವ ಕನ್ನಡದ ಯುವ ಶಕ್ತಿ ಕಲೆ, ಸಾಹಿತ್ಯದ ಜೊತೆ ನಾಡಿನ ಅಭಿವ್ರುದ್ಧಿಯಲ್ಲಿ ಇನ್ನಷ್ಟು ಕೆಲಸ ಮಾಡಬೇಕು ಅನ್ನೊ ಭಾವನೆ. ತಪ್ಪಿಲ್ಲ. ಸಮಾಜದಲ್ಲಿ ಬುದ್ಧಿವಂತರು, ದೇಶ ವಿದೇಶ ಸುತ್ತಿರೊರು ಅನ್ನಿಸ್ಕೊಂಡಿರೊ ಕನ್ನಡಿಗರು ಸಂಪದದಲ್ಲಿ ತುಂಬಾ ಜನ ಇದ್ದಾರೆ, ಅವರಿಂದ ಸಾಹಿತ್ಯ, ಸಂಗೀತದ ಜೊತೆ ಈ ನಾಡು ಸಾಗಬೇಕಾದ ಹಾದಿಲಿ ಇನ್ನಷ್ಟು ಇನವಾಲ್ವ್ ಆಗಬೇಕು ಅನ್ನೊದು ನಿಮ್ಮ ಅನಿಸಿಕೆ ಅಂತ ನನಗನಿಸಿತು.

ಸಂಪದ ದಲ್ಲಿ ಆಗ್ತಿರೋ ಕೆಲ್ಸದ ಬಗ್ಗೆನೂ ಇಲ್ಲಿ ಹೇಳಲೇಬೇಕು. ಮೊದಲಿಗೆ,, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚೊಕ್ಕೆ ಸಂಪದದ ಕೊಡುಗೆ ಕಮ್ಮಿ ಇಲ್ಲ. ಅದು ವಿಕಿಪಿಡಿಯಾ ಇರಲಿ, ಗೂಗಲ್, ಫೈರಫಾಕ್ಸ್ ಬ್ರೌಸರ್ ಕನ್ನಡದಲ್ಲಿ ತಂದಿದ್ದು ಇರಲಿ,, ಇಲ್ಲ ಲಿನಕ್ಸ್, ಲಿನಕ್ಸ್ ನಲ್ಲಿ ಕನ್ನಡದ ಬಳಕೆ ಬಗ್ಗೆ ಜಾಗ್ರುತಿ ತರೋದು ಇರಲಿ,, ಸಂಪದ ಮುಂಚುಣಿಯಲ್ಲಿ ನಿಂತು ಕೆಲ್ಸ ಮಾಡಿದೆ. ಇಲ್ಲಿರುವ ಉತ್ಸಾಹಿ ಟೆಕ್ಕಿಗಳಿಂದಲೇ ನಾಳೆ ದಿನ ಕನ್ನಡ ಒಂದು ಅನ್ನ ಕೊಡೊ ಭಾಷೆ ಆಗಿ ಬದಲಾಗೋ ದಿನ ಬರಬಹುದು.

ಚರ್ಚೆ, ಲೇಖನ, ಬ್ಲಾಗ್ ಹೀಗೆ ಪ್ರತಿಯೊಂದನ್ನು ಒಂದೇ ಸೂರಿನಡಿ ಕೊಡೊ ಮುಲಕ ಸಂಪದ ಮಾಡಿರೋ ಕೆಲ್ಸ ತುಂಬಾ ದೊಡ್ಡ ಕೆಲ್ಸ ಅನ್ನೋದ್ರ ಬಗ್ಗೆ ಯಾವ ಸಂಶಯಾನು ಇಲ್ಲ. ಅಕ್ಷರದಿಂದ ವಿಮುಖನಾಗ್ತಿದ್ದ ಐ.ಟಿ ಕನ್ನಡಿಗನಿಗೆ ಮತ್ತೆ ಕನ್ನಡ ಓದೋ, ಬರೆಯೋ ಗೀಳು ಹಚ್ಚಿರೋದ್ರಲ್ಲಿ ಸಂಪದದ ಕೊಡುಗೆಯು ತುಂಬಾ ಇದೆ.

ಸಂಪದ ಹೀಗೆ ಮುಂದುವರಿಲಿ,, ಉತ್ಸಾಹಿ, ಸ್ವಾಭಿಮಾನಿ ಕನ್ನಡಿಗರು ಇನ್ನಷ್ಟು ಇಲ್ಲಿ ಬರಲಿ,, ಎಲ್ಲ ಸೇರಿ ಕನ್ನಡ ಒಂದು ಅನ್ನ ಕೊಡೊ ಭಾಷೆಯತ್ತ ಕೆಲ್ಸ ಮಾಡೋಣ.

ನನ್ನಿ
-
ವಸಂತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 10:38pm — hamsanandi

ಉ: ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

hamsanandi's picture

ಈ ವಿಕ ದ ಈ ವರದಿಯನ್ನು ಯಾರಾದರೂ ಹಾಕುವಿರಾ ಇಲ್ಲಿ ದಯವಿಟ್ಟು?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?
  • ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ಇದು ಕರ್ನಾಟಕವಲ್ಲ ಕಾಣಿರೋ
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
Syndicate content

ಲೇಖಕರು

Chetan.Jeeral's picture

ಪೂರ್ಣ ಹೆಸರು
ಚೇತನ್ ಜೀರಾಳ

ಪರಿಚಯ

ಹಾಯ್
ನಾನು ವೃತ್ತಿಯಿಂದ ಒಬ್ಬ ಇಂಜಿನಿಯರ್ . ಪ್ರವೃತ್ತಿಯಿಂದ ಲೇಖಕ, ಆದ್ರೆ ಕನ್ನಡ ನನ್ನ ಪ್ರಾಣ. ನನ್ನ ಬಗ್ಗೆ ಉಳಿದೆಲ್ಲ ವಿವರ ಆನ್ ಇಂಟ್ರೆಸ್ಟಿಂಗ್.
ನನ್ನ ಇನ್ನೊಂದು ಬ್ಲಾಗ್
http://aatadabayalu.blogspot.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ನಾವು ಅದೆಷ್ಟು ಬಡವರು!
    January 10, 2009 - 8:25am
  • manjunath s reddy
    ಉ: ಯಾವುದು ಬೇಕು?
    January 10, 2009 - 8:20am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 181 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator