June 3, 2011 - 11:30am
ಎಲ್ಲಿ ಹೋಗುವಿರಾ ಮೋಡಗಳೇ
ಸ್ವಲ್ಪ ಇಲ್ಲಿ ನಿಂತು ಹೋಗಿ
ಕಾದು ಕೆಂಪಾಗಿರುವ ಬುವಿಯನ್ನು
ತಂಪು ಮಾಡಿ ಹೋಗಿ
ಉಸಿರಿಲ್ಲದೆ ನಿಂತಿರುವ ಮರಗಳನ್ನು
ಹಸಿರು ಮಾಡಿ ಹೋಗಿ
ದಿನವಿಡೀ ದುಡಿದು ದಣಿದ ದೇಹಕೆ
ಹನಿಗಳ ಸಿಂಚನ ನೀಡಿ ಹೋಗಿ
ಬಾಯಾರಿ ನೀರನ್ನು ಹುಡುಕುತ್ತಿರುವ ಹಕ್ಕಿಗಳಿಗೆ
ಹನಿಗಳನ್ನು ಕೊಟ್ಟು ಹೋಗಿ
ನಿಮ್ಮನ್ನೇ ನಿರೀಕ್ಷಿಸುತ್ತಿರುವ ನೇಗಿಲಯೋಗಿಗೆ
ನೀರನ್ನು ನೀಡಿ ಹೋಗಿ
ಮುಂದೆ ಸಾಗುತ್ತಿರುವ ಮುಂಗಾರಿನ ಮೋಡಗಳೇ
ಮರೆಯದೇ ನಿಂತು ನಮ್ಮನ್ನು ಹರಸಿ ಹೋಗಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹೋಗುವ ಮುನ್ನ
ಚಿತ್ರ ಹಾಗೂ ಕವನ ಎರಡೂ ಚಂದ ಉಂಟು
ಉ: ಹೋಗುವ ಮುನ್ನ
ಧನ್ಯವಾದ ಜಯಂತವ್ರೆ
ಉ: ಹೋಗುವ ಮುನ್ನ
ಚೆನ್ನಾಗಿದೆ, ಚಿಕ್ಕೂ. 'ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ' ಎಂಬ ಹಾಡು ನೆನಪಾಯಿತು.
ಉ: ಹೋಗುವ ಮುನ್ನ
ಧನ್ಯವಾದ ಸರ್
ಉ: ಹೋಗುವ ಮುನ್ನ
ಸುಂದರ ಚಿತ್ರ, ಉತ್ತಮ ಚಿತ್ರಣ.
ಉ: ಹೋಗುವ ಮುನ್ನ
ಧನ್ಯವಾದ ನಾಗರತ್ನವ್ರೆ
ಉ: ಹೋಗುವ ಮುನ್ನ
<ನಿನ್ನನ್ನೇ ನಿರೀಕ್ಷಿಸುತ್ತಿರುವ ನೇಗಿಲಯೋಗಿಗೆ
ನೀರನ್ನು ನೀಡಿ ಹೋಗಿ>
ನಿಮ್ಮನ್ನೇ ಎಂದಾಗಬೇಕು!
ನಿಜಕ್ಕೂ ಮಳೆ ಬರುವ ತನಕ ಒಮ್ಮೆ ಮಳೆ ಬಂದರೆ ಸಾಕು ಎಂದೆನಿಸುತ್ತದೆ. ಸುರಿಯುತ್ತಲೇ ಇದ್ದರೆ ಒಮ್ಮೆ ನಿಲ್ಲಬಾರದೇ ಎನ್ನುತ್ತೇವೆ. ನಮ್ಮ ಇಷ್ಟಗಳೆಲ್ಲಿ ಪ್ರಕೃತಿಯ ಇಚ್ಛೆಗಳೆಲ್ಲಿ!!!
ಉ: ಹೋಗುವ ಮುನ್ನ
ಆಗಬಹುದು ಹಾಗೂ
<ನಿಜಕ್ಕೂ ಮಳೆ ಬರುವ ತನಕ ಒಮ್ಮೆ ಮಳೆ ಬಂದರೆ ಸಾಕು ಎಂದೆನಿಸುತ್ತದೆ. ಸುರಿಯುತ್ತಲೇ ಇದ್ದರೆ ಒಮ್ಮೆ ನಿಲ್ಲಬಾರದೇ ಎನ್ನುತ್ತೇವೆ> :) ಸತ್ಯ
ಉ: ಹೋಗುವ ಮುನ್ನ
ಸುಂದರ ಚಿತ್ರದೊಂದಿಗೆ ಚಂದದ ಕವನ
-ಭಾಗ್ವತ
ಉ: ಹೋಗುವ ಮುನ್ನ
ಧನ್ಯವಾದ ಭಾಗ್ವತವ್ರೆ
ಉ: ಹೋಗುವ ಮುನ್ನ
ಚಿಕ್ಕು ಚಿತ್ರ ಚೆನ್ನಾಗಿದೆ
ಕವನಕ್ಕೆ
'ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ...'
ಕವನದ ಸ್ಪೂರ್ತಿ ಇದ್ದಂತಿದೆ
-ಪಾರ್ಥಸಾರಥಿ
ಉ: ಹೋಗುವ ಮುನ್ನ
ಇಲ್ಲ ಅದಲ್ಲ ಸ್ಫೂರ್ತಿ
ಮಳೆ ಬಂದಿದಕ್ಕೆ ಒಂದು ಲೇಖನ ಬರೆದೆ, ಅದರ ಟೈಟಲ್ಲೇ ಇದಕ್ಕೆ ಸ್ಫೂರ್ತಿ.
ನೀವುಗಳೆಲ್ಲ ಹೇಳಿದ್ಮೇಲೆ ಆ ಕವಿತೆ ಜ್ಞಾಪಕಕ್ಕೆ ಬಂತು
ಪ್ರತಿಕ್ರಿಯೆಗೆ ಧನ್ಯವಾದ ಪಾರ್ಥವ್ರೆ
ಉ: ಹೋಗುವ ಮುನ್ನ
ಚಿಕು, ಒಳ್ಳೆಯ ಕವನ, ಆದರೆ ಕವನದೊಂದಿಗೆ ಈ ಚಿತ್ರ ಕಂಡು ನನಗನಿಸಿದ್ದು - ಮೊದಲೆರಡು ಹಾಗೂ ಕೊನೆಯ ಎರಡು ಸಾಲುಗಳಿಗೆ ಮಾತ್ರ ಈ ಚಿತ್ರ ಸರಿಹೊಂದುತ್ತೆ. <ಕಾದು ಕೆಂಪಾಗಿರುವ ಬುವಿಯನ್ನು> ಚಿತ್ರದಲ್ಲಿ ಹಸಿರೇ ಹಸಿರು ತುಂಬಿದೆ. <ಉಸಿರಿಲ್ಲದೆ ನಿಂತಿರುವ ಮರಗಳನ್ನು ಹಸಿರು ಮಾಡಿ ಹೋಗಿ> ಹೂ ಬಿಟ್ಟ ಸಸಿಗಳು ನಗು ನಗುತ್ತಾ ನಿಂತಿವೆ. ಬರೇ ಕಾರ್ಮೋಡಗಳ ಚಿತ್ರ ಮಾತ್ರ ಇದ್ದಿದ್ದರೆ ಇನ್ನಷ್ಟು ಅರ್ಥಪೂರ್ಣವಾಗಿರುತಿತ್ತು - ಇದು ನನಗನಿಸಿದ್ದು.
ಉ: ಹೋಗುವ ಮುನ್ನ
ನೀವು ಹೇಳಿದ್ದು ಸರಿ ಶ್ರೀನಿವಾಸವ್ರೆ
ಕವನ ಹಾಕೋವಾಗ ಇದು ಚೆನ್ನಾಗಿರತ್ತೆ ಅಂತ ಹಾಕ್ದೆ.
ನೀವು ಹೇಳಿದ್ಮೇಲೆ ಹೌದಲ್ಲ ಅನ್ಸ್ತು, ಚಿತ್ರ ಹುಡ್ಕಿದೆ. ಈಗೊಂದು ಹಾಕಿದೀನಿ, ಸರಿ ಆಗ್ಬಹುದು.
ಪ್ರತಿಕ್ರಿಯೆಗೆ ಧನ್ಯವಾದ
ಉ: ಹೋಗುವ ಮುನ್ನ
ಚೇತನ್ ನಿಮ್ಮ ಕವನ ಓದುವ ಹೊತ್ತಿಗೆ ಇಲ್ಲಿ ಬಾರಿ ಮಳೆ.ನಿಮ್ಮ ಕವನದ ಪ್ರಭಾವವಿರಬಹುದು!(ಸುಮ್ನೆ ತಮಾಷೆಗೆ)
ಉ: ಹೋಗುವ ಮುನ್ನ
ಹ್ಹ ಹ್ಹ
ಮಳೆ ಅಲ್ಲಿ ಬರಲೇಬೇಕು ಬಿಡಿ
ಧನ್ಯವಾದ ನಂದೀಶ್