January 8, 2010 - 12:11pm
ಬರುವೆನೆಂದೆ ನನ್ನಮ್ಮನ ಕರೆಗೆ
ಮಾರನೆ ದಿನ ಹೊರಟೆ ಊರಿಗೆ
ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ
ಹಾಕಂದೆ ನಾ ಚಿತ್ರಾನ್ನವನ್ನ
ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ
ನೋಡಿದಳು ನನ್ನ ನಾಚಿಕೆಯನ್ನ
ಹೋದೆವು ಹುಡುಗಿಯ ಮನೆಗೆ
ಬಂದವು ಉಪ್ಪಿಟ್ಟು ಕೇಸರಿಬಾತು ನಮ್ಮೆಡೆಗೆ
ಚಿತ್ರ ನೋಡಿ ಬಂದಿದ್ದ ನಾನು
ಅವಳನ್ನು ನೋಡಿ ಆಮೇಲೆತ್ತಲಿಲ್ಲ ಮುಖವನು
ಉಪ್ಪಿಟ್ಟು ಉಪ್ಪಾಗಿತ್ತು
ಕೇಸರಿಬಾತು ಕಹಿಯಾಗಿತ್ತು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಉಪ್ಪಿಟ್ಟು ಉಪ್ಪಾಗಿತ್ತು
<<<ಉಪ್ಪಿಟ್ಟು ಉಪ್ಪಾಗಿತ್ತು
ಕೇಸರಿಬಾತು ಕಹಿಯಾಗಿತ್ತು>>>
ಅಯ್ಯೋ ಪಾಪ, ಚೇತನ್, ಹೀಗಾಗ್ಬಾರ್ದಿತ್ತು!!
ಉ: ಉಪ್ಪಿಟ್ಟು ಉಪ್ಪಾಗಿತ್ತು
ಮಂಜುವ್ರೇ, ಅದು ಅನುಭವ ಅಲ್ಲ.
ಅನುಭವ ಆದವರಿಂದ ಕೇಳಿ ತಿಳಿದದ್ದನ್ನ ಇಲ್ಲಿ ಇಳಿಸಿದ್ದೇನೆ.
ಇಲ್ಲಿವರೆಗೆ ಒಂದೂ ಉಪ್ಪಿಟ್ಟು ತಿಂದಿಲ್ಲ!! ನೀವು ಹಿಂಗೆ ಹೇಳಿದ್ರೆ ಹೆಂಗೆ?
ಮುಂದೆ ಆಗಬಹುದೇನೋ ಆಗ ಪಾಪ ಅನ್ನಬಹುದು :)
ಉ: ಉಪ್ಪಿಟ್ಟು ಉಪ್ಪಾಗಿತ್ತು
ಸರಿ, ಹಾಗಾದರೆ, ನೀವು ಉಪ್ಪಿಟ್ಟು ಕೇಸರಿಭಾತ್ ತಿನ್ನುವ ಕಾಲ ಬೇಗ ಹತ್ತಿರ ಬರಲಿ ಎಂದು ಹಾರೈಸಲೇ ?
ಉ: ಉಪ್ಪಿಟ್ಟು ಉಪ್ಪಾಗಿತ್ತು
ಹೂ ಕಣ್ರೀ ಮಂಜುವ್ರೇ
ಉ: ಉಪ್ಪಿಟ್ಟು ಉಪ್ಪಾಗಿತ್ತು
ಉಪ್ಪಿಟ್ಟು ಕೇಸರಿ ಬಾತ್ ಸೇರಿದರೆ "ಚೌ ಚೌ ಬಾತ್ ಹೈ"
ಉಪ್ಪಿಟ್ಟು ಕೇಸರಿ ಬಾತ್ ಸೇರಿದರೆ "ಚೌ ಚೌ ಬಾತ್ ಹೈ"
ನಿಮಗೂ ಹುಡುಗಿ ಗೊತ್ತಾದ ದಿನ ನಾವಂತೇವೆ "ವಾಹ್ ಕ್ಯಾ ಬಾತ್ ಹೈ!"
:)
ಉ: ಉಪ್ಪಿಟ್ಟು ಉಪ್ಪಾಗಿತ್ತು
ನಮ್ ಹುಡುಗರಲ್ಲಿ ಯಾರಾದ್ರು ಹುಡುಗಿ ನೋಡೋಕ್ಕೆ ಹೋದಾಗ "ಏನಮ್ಮ ಉಪ್ಪಿಟ್ ಕಾರ್ಯಕ್ರಮ ಏನಾಯಿತು" ಅಂತ ಕೇಳೋ ಪದ್ಧತಿ ಉಂಟು.
ಕವನ ಚೆನ್ನಾಗಿದೆ ಚೇತನ್
ಸರಿ, Next ಎಲ್ಲಿದೆ ಉಪ್ಪಿಟ್ ಕಾರ್ಯಕ್ರಮ ಚೇತನ್?? ಎಲ್ಲಾರೂ ಇದ್ರೆ ತಿಳಿಸಿ ಪ್ಪ , ನಾವು ಬರ್ತಿವಿ ...."ಉಪ್ಪಿಟ್ ತಿನ್ನೋಕ್ಕೆ"
-ಚೈತನ್ಯ
ಉ: ಉಪ್ಪಿಟ್ಟು ಉಪ್ಪಾಗಿತ್ತು
ನಾವು ಕೇಳೋದು ಇಲ್ಲಿವರೆಗೆ ಎಷ್ಟು ಉಪ್ಪಿಟ್ಟು ಅಂತ ಚೈತನ್ಯವ್ರೆ.
ಶುರುವಾದಾಗ ಹೇಳುವ ಕಣ್ರೀ :)
ಉ: ಉಪ್ಪಿಟ್ಟು ಉಪ್ಪಾಗಿತ್ತು
ಚೆನ್ನಾಗಿದೆ ಹೆಗ್ಡೆಯವರೆ ಶಾಯರಿ
ನೀವು ಹಾಗೆ ಹೇಳುವುದಕ್ಕೆ ಇನ್ನು ಸ್ವಲ್ಪ ಕಾಯ್ಬೇಕ್ರೀ :)
ಉ: ಉಪ್ಪಿಟ್ಟು ಉಪ್ಪಾಗಿತ್ತು
ಚೇತನ್,
ಕಾಯ್ತಾ ಇದೀವಿ ನಿಮ್ಮ ಸರದಿಗಾಗಿ.
ಸ್ವಂತ ಅನುಭವದ ಕವನಕ್ಕಾಗಿ..
ನಿಮ್ಮೊಲವಿನ,
ಸತ್ಯ..:-)
ಉ: ಉಪ್ಪಿಟ್ಟು ಉಪ್ಪಾಗಿತ್ತು
:) :)
ಬರೆಯೋಣ ಅನುಭವವಾದಾಗ
ಪ್ರತಿಕ್ರಿಯೆಗೆ ಧನ್ಯವಾದ ಸತ್ಯವ್ರೆ
ಉ: ಉಪ್ಪಿಟ್ಟು ಉಪ್ಪಾಗಿತ್ತು
ನೀವು ಈ ಕವನ ಬರೆದು ಸರಿಯಾಗಿ ಇವತ್ತಿಗೆ ಎರಡು ವರ್ಷ ಚೇತನ್...
ನಿಮಗೆ ಗೊತ್ತ?
ಜನವರಿ ೦೮ ಅಂತ ಡೇಟ್ ನೋಡಿ 'ಇವತ್ತೇ'(೦೮-೦೧-೨೦೧೨) ಬರೆದದ್ದು ಅಂತ ಪ್ರತಿಕ್ರಿಯೇಗಳನ್ ನೋಡಿದರೆ ಎರಡು ವರ್ಷ ಹಿಂದಿನದು ಅಂತ ಗೊತ್ತಾಯ್ತು:)
ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ
ಹಾಕಂದೆ ನಾ ಚಿತ್ರಾನ್ನವನ್ನ
ಹೋದೆವು ಹುಡುಗಿಯ ಮನೆಗೆ
ಬಂದವು ಉಪ್ಪಿಟ್ಟು ಕೇಸರಿಬಾತು ನಮ್ಮೆಡೆಗೆ
ಚೇತನ್.... ನಿಮ್ಮ ಈ ಉಪ್ಪಿಟ್ಟು ಕಂ ಹುಡುಗಿ 'ವರ್ಣನೆ ' ಹಿಡಿಸಿತು..
>>>>ನೀವು ಬ್ರ್ಹಮಚಾರಿ ಅಂತ ತಿಳಿದು 'ಹಾಲು-ಸಕ್ರೆ' ಕುಡಿದಸ್ಟು ಸ0ತಸ ಆಯ್ತು!!
ಆದ್ರೆ 'ಅನುಭವ' ಇಲ್ಲ ಎಂವ ನೀವ್ 'ಅನುಭವಸ್ತ್ರ0ತೆ' ಬರೆದದ್ದು....!!
ಇರ್ಲಿ ಬಿಡಿ.....
ನನಗೆ ಸಂದೇಹ
ಈ ಕೆಳಗಿನ ಈ ಬರಹಕೊ
ನಿಮ್ಮ ಈ ಕವನಕ್ಕೆ ಲಿಂಕು ಇಲ್ಲವಸ್ತೆ?
ಸುಬ್ಬ 'ಹೆಣ್ಣು' ನೋಡಲು ಹೋಗಿದ್ದು-
http://sampada.net/%...
ಶೀಘ್ರದಲ್ಲಿಯೇ ನಿಮಂ ಉಪ್ಪಿಟ್ಟು-ಕೆಸರಿಬಾತು ಪ್ರೋಗ್ರಾಮ್ ನೆರವೇರಲಿ...
ನಮ್ ಬಾಯಿ........ ಲಿ..
ಬ್ರ್ಹಮಾಚಾರಿಗಳಿಗೆ ಜಯವಾಗಲಿ.......