20
June
2013

ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ ???

February 17, 2009 - 11:23am
Chikku123
ನಾನು ದಿನ ನಮ್ಮ ಆಫೀಸಿಗೆ ರಾಜಾಜಿನಗರದಿಂದ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಕೋರಮಂಗಲಕ್ಕೆ ಹೋಗ್ತೀನಿ. ಆ ಬಸ್ಸು ಮಹಾಲಕ್ಷ್ಮಿ ಲೇ ಔಟ್ನಿಂದ ಕೇಂದ್ರೀಯ ಸದನಕ್ಕೆ ಹೋಗುತ್ತೆ, ತುಂಬಾ ಜನ ಸರಕಾರಿ ನೌಕರರು ಅದರಲ್ಲಿ ಪ್ರಯಾಣ ಮಾಡ್ತರೆ. ಇವತ್ತು ನಾನು ಬ್ಯಾಗ್ ಹಾಕಿಕೊಂಡು ನಿಂತ್ಕೊಂಡಿದ್ದೆ, ಒಬ್ರು ಒಂದು 50 ವರ್ಷ ಇರಬಹುದು, ಅವ್ರದೊಂದು ಬ್ಯಾಗ್ ಇತ್ತು, ಪಾಪ ಆ ಮನುಷ್ಯ ನನ್ನ ಬ್ಯಾಗ್ನ ಕೇಳಿ ಇಟ್ಕೊಂಡ್ರು, ಅಲ್ದಲೆ ಇನ್ನೊಬ್ರದ್ದನ್ನು ಕೇಳಿ ಇಟ್ಕೊಂಡ್ರು. ಅವ್ರ ಹತ್ತಿರ 3 ಬ್ಯಾಗ್ . ಎದುರುಗಡೆ ಒಬ್ಬ ಕೂತಿದ್ದ ನನ್ನ ವಯಸ್ಸಿನವನು, ಸುಮಾರು 24ರಿಂದ 27 ವರ್ಷ ಇರಬಹುದು. ಆ ಹುಡುಗ ಅವ್ರನ್ನ ನೋಡಿದ್ರು ನೋಡದವನ ಹಾಗೆ ಕೂತಿದ್ದ. ಆಮೇಲೆ ನಂಗೆ ಸೀಟು ಸಿಕ್ತು, ನಾನು 2 ಬ್ಯಾಗ್ ಅವ್ರಿಂದ ಇಸ್ಕೊಂಡು ಕೂತೆ. ದೊಡ್ಡೋರಲ್ಲಿ ಇರೋ ಸಹಾಯ ಮನೋಭಾವ ನಮ್ಮಲ್ಲಿ ಯಾಕೆ ಇಲ್ಲ... ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ???
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Aravinda on
ಕನ್ನಡದಲ್ಲಿ ಬರೆಯಲು ೧. http://sampada.net/c... ೨. http://googlekannada... ೩. Baraha ವಿಂಡೋಸ್ ಬಳಸುವವರಿಗೆ ೪. SCIM ಗ್ನು/ಲಿನಕ್ಸ್ ಬಳಸುವವರಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by omshivaprakash on
ಮೇಘಾ, ಕನ್ನಡದಲ್ಲಿ ಪ್ರತಿಕ್ರಿಯೆಗಳನ್ನ ನೀಡಿ. ಬರಹ input method ಅಥವಾ ಗೂಗಲ್ ಟ್ರಾನ್ಸ್ಲಿಟರೇಟರ್ ಬಳಸ ಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Aravinda on
>> ದೊಡ್ಡೋರಲ್ಲಿ ಇರೋ ಸಹಾಯ ಮನೋಭಾವ ನಮ್ಮಲ್ಲಿ ಯಾಕೆ ಇಲ್ಲ... ಸಣ್ಣವರೆಲ್ಲರೂ ಹಂಗೆ ಅಲ್ಲ... ಕೆಲವರು ಮಾತ್ರ ಅಥವಾ ಸುಮಾರು ಮಂದಿ (ಹಂಗೇ ದೊಡ್ಡವರೆಲ್ಲರೂ ಒಳ್ಳೆಯವರಾ? ) >> ಅವ್ರು ಹಂಗೆ ನಾವ್ಯೆಲ್ಲ ಯಾಕೆ ಹಿಂಗೆ??? ನಾವು ಮನಸು ಮಾಡಿದ್ರೆ ಹಾಗೆ ಆಗ್ಬೋದು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by cherambane on
>> ಅದೇ ನಾನು ಕೇಳ್ತಾ ಇರೋದು, ನೀವೆಲ್ಲಾ ಯಾಕೆ ಹಿಂಗೆ ... ಬಶೀರ್ ಕೊಡಗು, ದುಬೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on
ಅದು ಸರಿ ಅರವಿಂದ್, ಇದ್ರಲ್ಲಿ ಉಲ್ಟಾ ಕೇಸ್ಗಳು ಇರ್ತವೆ, ಊರು ಅಂದ ಮೇಲೆ ಹೊಲಗೇರಿನು ಇರತ್ತೆ....ಯಾರ್ಯಾರಿಗೆ ಆ ಮನೋಭಾವ ಇರಲ್ವೋ ಅವರಿಗೆ ಈ ಲೇಖನ. ನಾವು ಮನಸು ಮಾಡೋದೇನು ನಾವು ಹಾಗೆ ಇದೀವಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ನಂಗೆ ನನ್ನ ಬಗ್ಗೆ ಶಂಖ ಊದ್ಕೊಲ್ಲೋ ಅಭ್ಯಾಸ ಇಲ್ಲ, ಸೋ ಆದರೂ ಹೇಳ್ತೀನಿ, ನಾವು ಆದಸ್ತು ನಮ್ಮ ಭಾರ ನಾವೇ ಹೊರಬೇಕು, ಆಗಿವುದಿಲ್ಲ ಎಂದಾಗ ಮಾತ್ರ ಬೇರೆಯವರ ಸಹಾಯ ಪಡೆಯಬೇಕು. ಸೋ ಇನ್ನು ನಾನು ಹಾಗಲ್ಲ, ನಾನು ಯಾರನ್ನು ಬ್ಯಾಗ್ ಕೊಡಿ ಎನ್ನುವುದಿಲ್ಲ, ಆದರೆ ಯಾರಾದರು ಕೊಟ್ಟರೆ ತೆಗೆದುಕೊಳ್ಳದೆ ಇರುವುದಿಲ್ಲ.,(ಆದರೆ ಸೋಮಾರಿಗಳು, ಅದನ್ನು(ಭಾರ) ಹೊರಬಲ್ಲವರು ಕೊಡ ಬಂದಾಗ ಮಾತ್ರ ಮುಲಾಜಿಲ್ಲದೆ ಆಗುವುಡಿಲ ಎಂದುಬಿಡುತ್ತೇನೆ...) ಇನ್ನು ಹಿರಿಯರ ಬಗ್ಗೆ ನನಗೂ ಒಳ್ಳೆ ಅಭಿಪ್ರಾಯವಿದೆ... ತಮ್ಮ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on
ಸಾರ್ ಬಿ.ಎಂ.ಟಿ.ಸಿ ಬಸ್, ರಾಜಾಜಿನಗರದಿಂದ ಕೋರಮಂಗಲ ಆಫೀಸಿಗೆ ಹೋಗೋ ಹೊತ್ತು, ಕಾಲಿಡೋಕೆ ಜಾಗ ಇರೊಲ್ಲ, ಬ್ಯಾಗ್ನ ನಮ್ಮ ಹತ್ರ ಇಟ್ಕೊಂಡ್ರೆ ಜನಗಳ ಬಾಯಿಯಿಂದ ಸುಪ್ರಭಾತ ಬರತ್ತೆ...ನಾನು ಆದಷ್ಟು ಬೇರೆಯವರಿಗೆ ತೊಂದ್ರೆ ಕೊಡೊಲ್ಲ, ಅದು ಅಲ್ಲದೆ ನನ್ನ ಬ್ಲಾಗ್ನಲ್ಲಿ ಸರಿಯಾಗಿ ಹೇಳಿದೀನಿ, ಏನಂತ ಅಂದ್ರೆ 'ಪಾಪ ಆ ಮನುಷ್ಯ ನನ್ನ ಬ್ಯಾಗ್ನ ಕೇಳಿ ಇಟ್ಕೊಂಡ್ರು' ಅಂತ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಇವತ್ತಿನ ಯುವಪೀಳಿಗೆಯೇ ಹಾಗಿದೆ ಚೇತನ್.... ಅವರಲ್ಲೊಬ್ಬ ನಿನ್ನಂಥವನು ಇರೋದು ನಿಜಕ್ಕೂ ಖುಷಿಯ ಸಂಗತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on
ಇಲ್ಲ ಮೇಡಮ್ ಒಳ್ಳೆಯವರೂ ಇದ್ದಾರೆ....ಆದರೆ ಕಡಿಮೆ ಪ್ರಮಾಣದಲ್ಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.