ಕಾಫೀ ಅಥವಾ ಟೀ?

ಬೆಳಗಾದ ತಕ್ಷಣ ನಿಮಗೆ ಏನು ಕುಡಿಬೇಕು ಅನ್ಸತ್ತೆ....

ನ‌ಂಗಂತೂ ಒಂದು ಲೋಟ ಕಾಫಿ, ಅದೂ ಫಿಲ್ಟರ್ನಲ್ಲಿ ಮಾಡಿದ್ದು (ಕಾಫಿ ಪುಡಿ ಹಾಕಿ), ನೀವು ಹೇಗೆ...

1) ಇನ್ಸ್ಟ್ಯಾಂಟ್ ಕಾಫಿಯೋ (ಬ್ರೂ, ನೆಸ್ಕಫೆ ಇತ್ಯಾದಿ)?

2) ಫಿಲ್ಟರ್ನಲ್ಲಿ ಮಾಡಿದ್ದೋ (ಕಾಫಿ ಪುಡಿ ಹಾಕಿ)?

ಟೀ ಬಗ್ಗೆ ಅಷ್ಟು ಅನುಭವ ಇಲ್ಲ, ಆದರೂ

3) ರೆಡ್ ಲೇಬಲ್ನಲ್ಲಿ ಟೀ ಮಾಡಿ ಕುಡಿತೀನಿ ಆಗಾಗ...

ಇನ್ನು...

4) ಹಾಲು ಕುಡಿಯುವವರು ಇದ್ದಾರೆ ಅಂದ್ಕೊಂಡಿದೀನಿ ಅಂದ್ರೆ ಬರೀ ಹಾಲು ಮತ್ತೆ ಸಕ್ಕರೆ ಅಥವಾ ಈಗಿನ ಮಕ್ಕಳ ತರ ಹಾರ್ಲಿಕ್ಸ್, ಬೋರ್ನ್ವಿಟ ಅಥವಾ ಬೂಷ್ಟೋ.

5) ಅತಿಥಿಗಳು ಮನೆಗೆ ಬಂದಾಗ ಏನು ಕೊಡ್ತೀರಾ, ಟೀ,ಕಾಫೀ,ಹಾಲು ಅಥವಾ ನೀರೋ???

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಾಫೀ ಅಥವಾ ಟೀ?

drushya pradeep's picture

ಬೆಳಿಗ್ಗೆ ಎದ್ದ ಕೂಡ್ಲೆ ಅಂತೇನಿಲ್ಲ..
ದಿನಕ್ಕೆ ಒಂದು ಸಾರಿ ಕಾಫಿ..
ಅಮ್ಮ ಮಾಡೋ ಕಾಫಿ ತುಂಬಾ ಇಷ್ಟ..
ಅಪರೂಪಕ್ಕೆ ಬ್ರೂ ಕುಡಿತೀನಿ...
ಟೀ ನಲ್ಲಿ ನೇಚರ್ ಕೇರ್....

ನನ್ನಿ
ದೃಶ್ಯ ಪ್ರದೀಪ :)

ಉ: ಕಾಫೀ ಅಥವಾ ಟೀ?

kashyapastron's picture

ಬೆಳಗ್ಗೆ ಎದ್ದ ಕೂಡಲೆ ಅಮ್ಮನ ಕೈ ಕಾಫಿ. ಆಮೇಲೆ ದಿನದಲ್ಲಿ ನಾನು ಚಹಾ ಹೆಚ್ಚು ಇಷ್ಟಪಡುತ್ತೇನೆ. ನಾನು ಮನೆಯಲ್ಲಿದ್ದರೆ ಗ೦ಟೆಗೆ ಒ೦ದು ಲೋಟ ಚಹಾ ಸಮಾರಾಧನೆ ನಡೆಯುತ್ತಿರುತ್ತದೆ.

ವಾಹ್ ತಾಜ್ ಸಕ್ಕತ್ ಕಣ್ರೀ. ಆಮೇಲೆ ಡಾರ್ಜಲಿ೦ಗ್ ನ ಹಸಿರು ಚಹಾ ನೂ ಸೊಗಸಾಗಿರುತ್ತೆ.

ಧನ್ಯವಾದಗಳು.

ಉ: ಕಾಫೀ ಅಥವಾ ಟೀ?

Chikku123's picture

ಬೆಳಗ್ಗೆ ಕಾಫಿ ಕುಡಿದರೆ ಏನೋ ಒಂತರ ಜೋಶ್, ನಾನು ಊರಿನಲ್ಲಿದ್ರೆ ದಿನಕ್ಕೆ 5ರಿಂದ 6 ಲೋಟ ಹೋಗತ್ತೆ, ದೃಶ್ಯ ಹಾಗೂ ರವೀಂದ್ರ ಹೇಳಿದ ಹಾಗೆ ಅಮ್ಮ ಮಾಡಿದ ಕಾಫಿ ನಾನು ಮಾಡಿದ್ದಲ್ಲ...

ಉ: ಕಾಫೀ ಅಥವಾ ಟೀ?

Indushree's picture

ನಾನಂತೂ Boost ಕುಡಿತೀನಿ..... ಕಾಫಿ ಟೀ ಎರಡೂ ಇಲ್ಲ....

ಉ: ಕಾಫೀ ಅಥವಾ ಟೀ?

Nagaraj.G's picture

ನಾನಂತು ಅರ್ಧ ಲೀಟರ್ ನೀರು ಕುಡೀತೀನಿ ಆರೋಗ್ಯಕ್ಕೆ ಓಳ್ಲೆಯದಂತೆ ಕಾಪಿ, ಟೀ. ಕುಡಿಯಲ್ಲ :(

ನಾಗರಾಜ್

ಉ: ಕಾಫೀ ಅಥವಾ ಟೀ?

Chikku123's picture

ನಾಗರಾಜ್, ಆರ್ಥಿಕ ಹಿಂಜರಿತ ಅಂತನೋ??? :) :)

ಉ: ಕಾಫೀ ಅಥವಾ ಟೀ?

Nagaraj.G's picture

ಚೇತನ್ ಆರ್ಥಿಕ ಇಂಜರಿತ ಅಂತ ಅಲ್ಲ ಕಾಪಿ, ಟೀ ಕುಡಿಯೋದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತ್ತೆ ಅದಕ್ಕೆ ..........

ನಾಗರಾಜ್

ಉ: ಕಾಫೀ ಅಥವಾ ಟೀ?

Chikku123's picture

ನಮಗಾಗಿಯಾದ್ರು ಅರ್ಧ‌ ಲೋಟ ಕುಡಿಯಿರಿ...:) :)

ಉ: ಕಾಫೀ ಅಥವಾ ಟೀ?

Nagaraj.G's picture

ಕುಡೀತಾ ಇದ್ದೆ ಚೇತನ್ ಬೇಡ ಅಂತ ಬಿಟ್ಟೆ ಇಷ್ಟ ಇಲ್ಲದ ಕೆಲ್ಸ ಏನೂ ಸಹ ಮಾಡಬಾರದಲ್ವಾ.....?
ನಮ್ಮ ಆಪೀಸಲ್ಲಿ ಕಾಪಿ, ಟೀ ಕೊಟ್ರೆ ಸರಿಯಾಗಿ ಅರ್ಧ ಲೀಟರ್ ಕೊಡ್ತಾರೆ :)

ನಾಗರಾಜ್

ಉ: ಕಾಫೀ ಅಥವಾ ಟೀ?

srani's picture

ಹೌದು ನಾಗರಾಜ್,

ಕಾಫಿ ಟೀ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ, ಅದು ಹೆಚ್ಚಾಗಿ ಕುಡಿದರೆ..
ಟೀಯನ್ನು ತುಂಬಾ ಬಿಸಿಯಾಗಿ ಕುಡಿಯಬಾರದಂತೆ.. ಇದು 60 deg C ಗಿಂತ ಕಡಿಮೆ ಇರಬೇಕು ಎಂದು ಇವತ್ತು FM Fever 104 ನಲ್ಲಿ ಹೇಳ್ತಿದ್ರು.

ಸ್ವಲ್ಪ ದಿನಗಳ ಹಿಂದೆ newspaper ನಲ್ಲಿ ಓದಿದ್ದೆ. ನಾವು ಕಾಫಿಯನ್ನು ಮಿತವಾಗಿ ಸೇವಿಸಬೇಕು ಇದು ಕ್ಯಾನ್ಸರ್ ತಡೆಯಲು ಒಳ್ಳೆಯದು ಅಂತ..

-ಶೋಭಾ

ಉ: ಕಾಫೀ ಅಥವಾ ಟೀ?

Chikku123's picture

Feವೆರ್ ಅಂತ ಹೆಸರು ಇಟ್ಕೊಂಡು ಹಾಗೆ ಹೇಳಿದ್ರಾ??? ;) ;-)

ಉ: ಕಾಫೀ ಅಥವಾ ಟೀ?

ananthesha nempu's picture

ನಾನು ಹಾಗೇ ಕಾಪಿ, ಟೀ. ಕುಡಿಯಲ್ಲ :)

ಉ: ಕಾಫೀ ಅಥವಾ ಟೀ?

Chikku123's picture

ಯಾಕ್ರೀ ಹಾಗೆ

ಉ: ಕಾಫೀ ಅಥವಾ ಟೀ?

hamsanandi's picture

ಒಳ್ಳೇ ಅಭ್ಯಾಸ ರೀ! ಕಾಫಿ ಟೀ ಬಿಡಬೇಕು (ಅಥವಾ ಕಡಿಮೆ ಮಾಡ್ಬೇಕು) ಅಂದ್ರೂ ಆಗ್ತಾ ಇಲ್ಲ ನೋಡಿ.

ಉ: ಕಾಫೀ ಅಥವಾ ಟೀ?

Chikku123's picture

ಬಿಡಬ್ಯಾಡ್ರೀ

ಉ: ಕಾಫೀ ಅಥವಾ ಟೀ?

Chikku123's picture

ಪರೀಕ್ಷೆ ಪಾಸ್ ಆಗಬೇಕಲ್ವ :) :‍)

ಬೆಳಗ್ಗೆ ಎದ್ದು ಒಂದ್ಸಲ ಕಾಫಿ ರುಚಿ ನೋಡಿ ಆಮೇಲೆ ಬಿಡೊಲ್ಲ..

ಉ: ಕಾಫೀ ಅಥವಾ ಟೀ?

Indushree's picture

ಸಂಜೆ ಒಂದೊಂದು ಸಲ ಕಾಫಿ ಕುಡಿತೀನಿ....ಆದ್ರೂ ಹಾಲೇ ಪ್ರಿಯ....
ಟೀ ಇದುವರೆಗೆ ಒಂದೇ ಸಲ ಕುಡಿದಿದ್ದು... ಸುಮಾರು ೭ ವರ್ಷಗಳ ಹಿಂದೆ....
ಪರೀಕ್ಷೆಯಲ್ಲಿ ಪಾಸಾಗೋಕೆ ಕಾಫಿ ಮುಖ್ಯ ಅಂತ ಅನ್ನಿಸ್ತಿಲ್ಲ... ನಿದ್ದೆ ಬಂದ್ರೆ ಮಲಗಿ ಬಿಡ್ತೀನಿ ;)

ಉ: ಕಾಫೀ ಅಥವಾ ಟೀ?

Chikku123's picture

ನಿದ್ರೆ ಬಂದ್ರೆ ನಾನೂ ಮಲಗ್ತೀನಿ ಇಂದುಶ್ರೀ ;) ;-)
ಟೀಗೆ ಬಾರೀ ಗ್ಯಾಪ್ ಕೊಟ್ಟಿದ್ದೀರಾ

ಉ: ಕಾಫೀ ಅಥವಾ ಟೀ?

shilpaam's picture

ಚಹಾ,ಕಾಫ್ಹಿ ನಿದ್ದೆ ಓಡಿಸುತ್ತೆ ಅಂತಾ ನನ್ನ ಗೆಳತಿ ಬಲವಂತವಾಗಿ ಪರೀಕ್ಷೆ ಸಮಯದಲ್ಲಿ ಒಮ್ಮೆ ಕುಡಿಸಿದ್ದಳು. ಬಾಯಿ ರುಚಿ ಕೆಟ್ಟದ್ದಷ್ಟೆ... ಕುಂಭಕರ್ಣನಂತೆ ನಿದ್ದೆ ಮಾಡಿದ್ದು ಸುಳ್ಳಲ್ಲಾ...

ಉ: ಕಾಫೀ ಅಥವಾ ಟೀ?

Chikku123's picture

:) :-)

ಉ: ಕಾಫೀ ಅಥವಾ ಟೀ?

uniquesupri's picture

ಪರೀಕ್ಷೆಯಲ್ಲಿ ಪಾಸಾಗಲಿಕ್ಕೆ
ಕಾಫಿ ಕುಡಿಬೇಕೋ
ಕಾಪಿ ಹೊಡೀಬೇಕೋ? ;)

ಉ: ಕಾಫೀ ಅಥವಾ ಟೀ?

Indushree's picture

ಎರಡೂ ಬೇಡ ಸುಪ್ರೀತ್... ಅದಕ್ಕೆ ನಾನು ಪಾಸಾಗಿರೋದೆ ಸಾಕ್ಷಿ....

ಉ: ಕಾಫೀ ಅಥವಾ ಟೀ?

uniquesupri's picture

:)

ನಂಗೂ ಎರಡೂ ಬೇಡ...
ಹಾಗೆ ಪಾಸಾಗೋಕೆ ಕಾಫಿನೇ ಬೇಕು ಅನ್ನೋದಾದ್ರೆ ನಂ ಸಿಲೆಬಸ್‌ನಲ್ಲಿ ಅದ್ನೂ ಸೇರಿಸಿ ಬಿಟ್ಟಿರೋರು!

ಉ: ಕಾಫೀ ಅಥವಾ ಟೀ?

srani's picture

ಇಂದು.. Is Boost is the secret of your energy!!!! :-)
ನಿಮ್ Secret ಹೇಲ್ಬಿಟ್ರಲ್ರಿ

ಚೇತನ್
ನಂಗೆ ಕಾಫಿ ಇಷ್ಟ ಆಗುತ್ತೆ. ದಿನಕ್ ಎರಡ ಸಲ ಕಾಫಿ, ಒಂದ್ ಸಲ ಟೀ ಕುಡಿತಿನಿ

ಉ: ಕಾಫೀ ಅಥವಾ ಟೀ?

Chikku123's picture

ನೀವು ನಮ್ಮ ಕಡೆ

ಉ: ಕಾಫೀ ಅಥವಾ ಟೀ?

Indushree's picture

ಅಯ್ಯೊ ಆ secret ಈ ಸಚಿನ್ ಧೋನಿ ಸೆಹ್ವಾಗ್ ಮುಂತಾದವರಿಂದ ಜಗಜ್ಜಾಹೀರಾಗಿದೆಯಲ್ರೀ ಶೋಭಾ ಅವರೆ.... Boost is the secret of winning energy... ಅಂತ

ಉ: ಕಾಫೀ ಅಥವಾ ಟೀ?

Nagaraj.G's picture

ಇಂದುಶ್ರೀ..Boost is the secret of winning energy...ನೀವು ಪರೀಕ್ಷೆಯಲ್ಲಿ ಪಾಸಾಗೊದಕ್ಕಾ.......?

ನಾಗರಾಜ್

ಉ: ಕಾಫೀ ಅಥವಾ ಟೀ?

Indushree's picture

ಅಯ್ಯೊ ಅದು Boost ಅವರ ಹೇಳಿಕೆ ಅಷ್ಟೆ....
ಪರೀಕ್ಷೆಯಲ್ಲಿ ಪಾಸಾಗೋದಕ್ಕೆ ನಾನು ಓದಿದ್ದೆ ಕಾರಣ ;)

ಉ: ಕಾಫೀ ಅಥವಾ ಟೀ?

uniquesupri's picture

>>>ಪರೀಕ್ಷೆಯಲ್ಲಿ ಪಾಸಾಗೋದಕ್ಕೆ ನಾನು ಓದಿದ್ದೆ ಕಾರಣ

ಹೌದಾ? ಅಷ್ಟೇ ಸಾಲದು ಎಕ್ಸಾಮಿನರ್ ಮಾರ್ಕ್ಸು ಕೊಡಬೇಕು. ನಮ್ಮ ವಿವಿಯಲ್ಲಿ ಅರವತ್ತಕ್ಕೆ ಬರೆದು ಬಂದವರಿಗೆ ಎಂಬತ್ತು ತೊಂಭತ್ತು ಕೊಟ್ಟು ಹರಸುವ ಎಕ್ಸಾಮಿನರ್ಸ್ ಇದ್ದಾರೆ.

ಉ: ಕಾಫೀ ಅಥವಾ ಟೀ?

Indushree's picture

:)
ನಮ್ದು autonomous college ಸುಪ್ರೀತ್.... ಅಷ್ಟೊಂದು ಕೊಟ್ಟು ಹರಸೋ ಎಕ್ಸಾಮಿನರ್ಸ್ ನಂಗೆ ಗೊತ್ತಿಲ್ಲ...

ಉ: ಕಾಫೀ ಅಥವಾ ಟೀ?

uniquesupri's picture

ನಿಮ್ ಕಾನ್ವೆಂಟು ಗೊತ್ತು ಬಿಡಿ.
ಅಲ್ಲಿ ನಮಗೆ ಸಲ್ಲಬೇಕಾದಷ್ಟು ಮಾರ್ಕು ಕೊಡೋದೇ ಹೆಚ್ಚು ಅನ್ಸುತ್ತೆ ಅಲ್ವಾ?

ಉ: ಕಾಫೀ ಅಥವಾ ಟೀ?

Indushree's picture

ಹೌದು ಸುಪ್ರೀತ್....

ಉ: ಕಾಫೀ ಅಥವಾ ಟೀ?

asuhegde's picture

1) ಇನ್ಸ್ಟ್ಯಾಂಟ್ ಕಾಫಿಯೋ (ಬ್ರೂ, ನೆಸ್ಕಫೆ ಇತ್ಯಾದಿ)? - ಅಲ್ಲ

2) ಫಿಲ್ಟರ್ನಲ್ಲಿ ಮಾಡಿದ್ದೋ (ಕಾಫಿ ಪುಡಿ ಹಾಕಿ)? - ಅಲ್ಲ

ಬೆಳಿಗ್ಗೆ ಎದ್ದ ಕೂಡಲೇ ಕುಡಿಯುವುದು ಒಂದು ಲೋಟಾ, ಸ್ವಲ್ಪ ಬಿಸಿ ಮಾಡಿದ ನೀರು ಮಾತ್ರ (ಆವಾಗ್ಲೆ ಹೇಳಿದ್ನಲ್ಲಾ...ಆರ್ಥಿಕ ಹಿಂಜರಿತ ಕಣ್ರೀ)
(http://sampada.net/b...)

3) ರೆಡ್ ಲೇಬಲ್ನಲ್ಲಿ ಟೀ ಮಾಡಿ ಕುಡಿತೀನಿ ಆಗಾಗ...- ನಾನೂ ಚಹ ಸೇವನೆ ಮಾಡುತ್ತೇನೆ. ಆಗಾಗ. ಜೊತೆಗೆ ದಿನಕ್ಕೊಮ್ಮೆ "ಗ್ರೀನ್ ಟೀ" ಡಿಕಾಕ್ಷನ್ ಕುಡೀತೀನಿ.

4) ಹಾಲು ಕುಡಿಯುವವರು ಇದ್ದಾರೆ ಅಂದ್ಕೊಂಡಿದೀನಿ ಅಂದ್ರೆ ಬರೀ ಹಾಲು ಮತ್ತೆ ಸಕ್ಕರೆ ಅಥವಾ ಈಗಿನ ಮಕ್ಕಳ ತರ ಹಾರ್ಲಿಕ್ಸ್, ಬೋರ್ನ್ವಿಟ ಅಥವಾ ಬೂಷ್ಟೋ.- ನನಗೆ ಅನ್ವಯಿಸುವುದಿಲ್ಲ.

5) ಅತಿಥಿಗಳು ಮನೆಗೆ ಬಂದಾಗ ಏನು ಕೊಡ್ತೀರಾ, ಟೀ,ಕಾಫೀ,ಹಾಲು ಅಥವಾ ನೀರೋ??? - ಮೊದಲು ನೀರು. ಆಮೇಲೆ ಅವರ ಇಷ್ಟಕ್ಕೆ ಅನುಗುಣವಾಗಿ.

ಉ: ಕಾಫೀ ಅಥವಾ ಟೀ?

Chikku123's picture

ಬೆಳಿಗ್ಗೆ ಎದ್ದ ಕೂಡಲೇ ಕುಡಿಯುವುದು ಒಂದು ಲೋಟಾ, ಸ್ವಲ್ಪ ಬಿಸಿ ಮಾಡಿದ ನೀರು ಮಾತ್ರ - ಹೆಗ್ಡೆಯವರೆ, ಇದು ಬೆಳಗ್ಗೆ ಆರಾಮಾಗಿರೋದಕ್ಕೆ ತುಂಬಾ ಅನುಕೂಲ‌ :) :)

ಉ: ಕಾಫೀ ಅಥವಾ ಟೀ?

manjunath s reddy's picture

ಕಾಫಿ, ಟೀ ಒಳ್ಳೇದೊ ಕೆಟ್ಟದ್ದೋ ನನ್ಗೆ ಗೊತ್ತಿಲ್ಲಾ... ಆದ್ರೆ ನಾನು ಕೆಲ್ಸ ಮಾಡೋವಾಗ unlimited ಆಗಿ ಕುಡೀತಾ ಇರ್ತೀನಿ...

ರಾತ್ರಿ ಎರೆಡು ಘಂಟೆ ಹೊತ್ನಲ್ಲಿ ಟೀ ಕುಡಿಯೋದಿಕ್ಕೆ ಗಿರಿನಗರದಿಂದ ಶಿವಾಜಿನಗರದವರೆಗೂ ಹೋಗ್ತೀನಿ...

ನನಗೆ ಟೀ ಕುಡಿಯೋವಾಗ್ಲೆಲ್ಲಾ ನೆನ್ಪಾಗೋದು.. ಮದ್ಯಪ್ರದೇಶದಲ್ಲಿ ನಾನು ಭಾಗವಹಿಸಿದ ರಾಷ್ಟ್ರೀಯ ಕಲಾ ಶಿಬಿರದಲ್ಲಿ ಈ ಟೀ ಯ ಬಗ್ಗೆ ಸುದೀರ್ಘ ಚರ್ಚೆಯೇ ನಡೆಯಿತು.. ಎಲ್ಲರದೂ ಒಂದೇ ಆತಂಕದ :( ಪ್ರಶ್ನೆ.. ಈ ಟೀ ಕಾಫಿ ಇಲ್ದೇ ಹೋಗಿದ್ರೆ... ಕಲಾವಿದರ ಗತಿ ಏನಪ್ಪಾ ಅಂತಾ.. :)

ಉ: ಕಾಫೀ ಅಥವಾ ಟೀ?

Chikku123's picture

ಸತ್ಯ, ಅವ್ರೇ ಅಲ್ಲ ನಮ್ಮ ಗತಿ???

ಉ: ಕಾಫೀ ಅಥವಾ ಟೀ?

Nagaraj.G's picture

ನಾನು ಸಹ ಮೊದಲು ರಾತ್ರಿ ಮೂರು ಗಂಟೆ ನಾಲ್ಕು ಗಂಟೆ ತನಕ ಎಡಿಟಿಂಗ್ ಕೆಲ್ಸ ಮಾಡ್ತಾ ಇದ್ದೆ ಆಗ ಇದೆಲ್ಲ ಕುಡಿತಾ ಇದ್ದೆ ಆದ್ರೆ ಯಾಕೋ ಇದ್ದಕ್ಕಿದ್ದ ಹಾಗೆ ಬಿಟ್ಟೆ.. ಈಗಲೂ ಸಹ ಎರಡು ಗಂತೆ ತನಕ ಕೆಲ್ಸ ಮಾಡ್ತೀನಿ ಕಾಪಿ, ಟೀ ಕುಡಿಬೇಕು ಅಂತ ಅನ್ಸೊಳ್ಳ............. :(

ನಾಗರಾಜ್

ಉ: ಕಾಫೀ ಅಥವಾ ಟೀ?

uniquesupri's picture

ಹೌದು ಸಾರ್ ಕಲಾವಿದರಿಂದಾಗಿಯೇ ಈ ಲೋಕ ಇಷ್ಟು ನಿಶೆಯಲ್ಲಿರುವುದು :)

ಕಲಾವಿದರು ಕಾಫಿ ಟೀ ಸಿಗರೇಟು ತಯಾರಕರಿಗೆ ಚಿರಋಣಿಗಳಾಗಿರಬೇಕು ;)

ಉ: ಕಾಫೀ ಅಥವಾ ಟೀ?

Chikku123's picture

ಹಾಗೆ ಕಾಫಿ,ಟೀ, ಸಿಗರೇಟ್ ಸಹ ಕಲಾವಿದರಿಗೆ ಋಣಿಯಾಗಿರಬೇಕು :):)

ಉ: ಕಾಫೀ ಅಥವಾ ಟೀ?

Chandrashekharss's picture

ಹೆಲೊ ಚೇತನ್,

ಹೆಚ್ಚು ಕಾಫಿ ಕುಡಿಯುವದರಿಂದ acidity problem ಶುರು ಆಗುತ್ತೆ..ಇದು ಸ್ವಾನುಭವ..

ಆದ್ದರಿಂದ ಇವಗಾ ನಾನು ಲೆಮನ್ ಟೀ ಅಥವಾ ಗ್ರೀನ್ ಟೀ ಕುಡಿತಿನಿ...ಹಾಗೆ ಸಾಯಂಕಾಲ ಒಂದು ಕಪ್ ಕಾಫಿ ಕುಡಿತಿನಿ...

ಉ: ಕಾಫೀ ಅಥವಾ ಟೀ?

Chikku123's picture

ಸುವಾಸನೆಗೆ ಮನಸ್ಸು ಆಕಡೆ ಹೋಗತ್ತೆ ಚಂದ್ರು :):)

ಉ: ಕಾಫೀ ಅಥವಾ ಟೀ?

roopablrao's picture

ಬೆಳಗ್ಗೆ ಎದ್ದ ತಕ್ಷಣ ಕಾಫಿ
ಕಾಫಿ ಕುಡಿದ ಮೇಲೆ ಒಂದು ಕಾಫಿ
ಕಾಫಿ ಕುಡಿದಾದ ಮೇಲೆ ಮತ್ತಿನ್ನೊಂದು ಕಾಫಿ
ಹೀಗೆ ಕಾಫೀನೆ ತಿಂಡಿ , ಊಟ ಆಗಿ ಹೋಗಿದೆ
ದಿನಕ್ಕೆ ಕಡಿಮೆ ಅಂದ್ರೂ ಆರು ಸಲ ಕಾಫಿ ಸಮಾರಾಧನೆ ನಡೀಲೇಬೇಕು
:)

ಉ: ಕಾಫೀ ಅಥವಾ ಟೀ?

Chikku123's picture

ರೂಪರವರು, ನಮಗೆ ಪ್ರತಿಸ್ಪರ್ಧಿ:)

ಉ: ಕಾಫೀ ಅಥವಾ ಟೀ?

Chandrashekharss's picture

ರೂಪಾರವ್ರೆ,

ಅಷ್ಟೊಂದು ಕಾಫಿ ಕುಡಿಬೆಡ್ರಿ....ಎಸಿಡಿಟಿ ಪ್ರಾಬ್ಲೆಮ್....

ಉ: ಕಾಫೀ ಅಥವಾ ಟೀ?

roopablrao's picture

ಆಗಲೆ ಅದು(ಅಸಿಡಿಟಿ) ನನ್ನೊಳಗೆ ಸೇರಿಕೊಂಡು ಬಿಟ್ಟಿದೆ. ಆಗಾಗ ಕಾಫಿಯ ಕೊಡುಗೆಯನ್ನ ನೆನಪು ಮಾಡ್ತಿರುತ್ತೆ
:)
:)

ಉ: ಕಾಫೀ ಅಥವಾ ಟೀ?

Nagaraj.G's picture

ಈ ಅಸಿಡಿಟಿಯಿಂದಲೇ ನಾನು ಕಾಪಿ, ಟೀ ಕುಡಿಯೋದನ್ನ ಬಿಟ್ಟದ್ದು ಅದು ಬಂದ್ರೆ ಆಯ್ತು ಕೆಲ್ಸ ಬೇಡ ಅಂದ್ರು ಹೋಗೋದಿಲ್ಲ :(

ನಾಗರಾಜ್

ಉ: ಕಾಫೀ ಅಥವಾ ಟೀ?

Chikku123's picture

ಇಲ್ಲಿವರೆಗೂ ನನಗೆ ಆ ಅನುಭವವಾಗಿಲ್ಲ, ಮುಂದೆ ಹೇಗೋ ಆದರೆ ಈಗ ಉಹುಂ

ಉ: ಕಾಫೀ ಅಥವಾ ಟೀ?

uniquesupri's picture

ಬೆಳಿಗ್ಗೆ ಎದ್ದೊಡನೆ, ಇಲ್ಲವೇ ರಾತ್ರಿಯೆಲ್ಲ ಎದ್ದಿದ್ದು ಬೆಳಿಗ್ಗೆ ಮಲಗಲು ರೆಡಿಯಾದೊಡನೆ ಕುಡಿಯುವುದು ಒಂದು ಲೋಟ ನೀರು ಅಷ್ಟೇ.

ಹಾಸ್ಟೆಲ್ ಗೆಳೆಯರ ಜೊತೆ ದಿನಕ್ಕೆರಡು ಬಾರಿ ಟೀ ಕುಡಿಯೋದು.

ಹಾಸ್ಟೆಲಲ್ಲಿ ಮಾಡಿದ ಕಲಗಚ್ಚು ಕಾಫಿ ಒಂದು ಸಲ ಇಷ್ಟೇ!

ಉ: ಕಾಫೀ ಅಥವಾ ಟೀ?

Chikku123's picture

ಸುಪ್ರೀತ್, ಟೀ ಅಭಿಮಾನಿ

ಉ: ಕಾಫೀ ಅಥವಾ ಟೀ?

uniquesupri's picture

ಅಭಿಮಾನಿ ಅಂತೇನಿಲ್ಲ. ಅದರಷ್ಟು ಸುಲಭಕ್ಕೆ ಬೇರೆ ‘ಪಾನೀಯ’ಗಳು ಸಿಕ್ಕುವುದಿಲ್ಲವಾದ್ದರಿಂದ ಅದು ಒಕೆ ;)