ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › cmariejoseph ರವರ ಬ್ಲಾಗ್

ಅಂಬಾಲಾ ನಗರದಲ್ಲಿ ವಿಹಾರ

March 3, 2008 - 5:44pm — cmariejoseph

ಹರ್ಯಾನಾ ರಾಜ್ಯದಲ್ಲಿರುವ ಅಂಬಾಲಾ ಶಹರ್ ಎಂಬುದು ಬಟ್ಟೆಗಳ ಸಗಟು ಮಾರಾಟ ಕೇಂದ್ರ. ಆದರೆ ನಿಜವಾದ ಜೀವತುಡಿತವಿರುವುದು ಅಂಬಾಲಾ ಕಂಟೋನ್ಮೆಂಟಿನಲ್ಲಿ ಮಾತ್ರ. ಬೇಸಿಗೆಯ ಹಗಲಿನ ಬೆಂಕಿಯಂಥ ಬಿರುಬಿಸಿಲಿಗೆ ಬೆಂದ ನಂತರ ಸಂಜೆ ತಂಪುಗಾಳಿ ಬೀಸುವಾಗ ವಾಕಿಂಗ್ ಹೊರಟು ತಳ್ಳುಗಾಡಿಗಳಲ್ಲಿ ಮಾರುವ ಗೋಲ್‌ ಗಪ್ಪೆ ಚಪ್ಪರಿಸುವುದು ತುಂಬಾ ಮಜವಾಗಿರುತ್ತೆ. ಗೋಲ್‌ ಗಪ್ಪೆ ಎಂದರೆ ಸಣ್ಣ ಗರಿಗರಿ ಪೂರಿಗಳೊಳಗೆ ಬೇಯಿಸಿದ ಆಲುಗಡ್ಡೆ ತುಂಬಿ ಎರಡು ರೀತಿಯ ಮಸಾಲೆ ನೀರಿನ ಮಡಕೆಯಲ್ಲಿ ಅದ್ದಿ ತೆಗೆದು ತಿನ್ನುವುದು.

ಸಂಜೆ ವಾಯುವಿಹಾರಕ್ಕೆ ಬಂದವರು ಮುದದಿಂದ ಸವಿಯುವ ಇನ್ನೊಂದು ತಿನಿಸು ಟಿಕ್ಕಿ. ಸಾಮಾನ್ಯವಾಗಿ ಟಿಕ್ಕಿ ಮಾರುವ ಅಂಗಡಿಗಳ ಮುಂದೆ ಹೆಣ್ಣು ಗಂಡೆಂಬ ಭೇದವಿಲ್ಲದೆ ದೊಡ್ಡ ಗುಂಪು ನೆರೆದಿರುತ್ತದೆ. ಬೆರಳು ದಪ್ಪದ ಸುಮಾರು ಎರಡು ಅಡಿ ವ್ಯಾಸದ ಕಬ್ಬಿಣದ ಕಾದ ಹೆಂಚಿನ ಮೇಲೆ ಕುದಿವ ಎಣ್ಣೆ. ಅಲ್ಲಿ ನಿಂತಿರುವಾತ ಹಿಡಿಯಷ್ಟಿರುವ ಟಿಕ್ಕಿ ಮುದ್ದೆಗಳನ್ನು ಮೆದುವಾಗಿ ಅದುಮಿ ಚಪ್ಪಟೆ ಮಾಡಿ ಆ ಕುದಿವೆಣ್ಣೆಯ ಮೇಲೆ ಚಕಚಕನೇ ಜಾರಿಸುತ್ತಾನೆ. ಕಂದು ಬಣ್ಣಕ್ಕೆ ತಿರುಗುವಷ್ಟು ಕರಿದ ಅನಂತರ ಅಲ್ಲಿ ಕುಳಿತಿರುವಾತ ಅವನ್ನು ನಾಜೂಕಾಗಿ ತೆಗೆದು ಮುತ್ತುಗದ ಎಲೆಯಂಥಾ ಎಲೆಯ ಮೇಲೆ ಸುಲಿದುಕೊಂಡು ಅದರ ಮೇಲೆ ಪುದಿನಾ ನೀರನ್ನೂ, ಮಸಾಲೆ ರಸವನ್ನೂ, ಕೊಂಚ ಮೊಸರನ್ನೂ ಹಾಕಿ, ಸ್ವಲ್ಪ ಉಪ್ಪು ಉದುರಿಸಿ ಅದರ ಮೇಲೊಂದು ಚಮಚೆ ಸಿಕ್ಕಿಸಿ ತಿನ್ನುವವರಿಗೆ ಕೊಡುತ್ತಾನೆ. ಇಸಕೊಂಡವರು ಲೊಟ್ಟೆ ಹಾಕುತ್ತಾ ಪಟ್ಟಾಂಗ ಹೊಡೆಯುತ್ತಾ ನಡುನಡುವೆ ಜೋರಾಗಿ ನಗುತ್ತಾ ಈ ಟಿಕ್ಕಿಯನ್ನು ಸವಿಯುತ್ತಾರೆ.

ಅಂಬಾಲಾದಲ್ಲಿ ಬಿಸಿಲುಗಾಲದ ರಾತ್ರಿ ಹನ್ನೊಂದಾದರೂ ಭರದಿಂದ ಬಿಕರಿಯಾಗುವ ಇನ್ನೊಂದು ತಿನಿಸು ಎಂದರೆ ತಳ್ಳುಗಾಡಿಗಳಲ್ಲಿ ಮಾರಲಾಗುವ ರಬ್ಡಿ ಫಲೂದಾ ಹಾಗೂ ಮಟ್ಕಾಕುಲ್ಫಿ. ಒಂದು ದೊಡ್ಡ ಹಂಡೆಯಂಥ ಮಡಕೆಯಲ್ಲಿ ಮುಚ್ಚಳವುಳ್ಳ ಪ್ಲಾಸ್ಟಿಕ್ ಕೋನ್‌ಗಳ ತುಂಬಾ ಕುಲ್ಫಿ ಸಿದ್ಧವಾಗಿರುತ್ತದೆ. ಈ ಕುಲ್ಫಿಯನ್ನು ಹೆರೆದು ತೆಗೆದು ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ಗಂಜಿಯಿಂದ ತಯಾರಿಸಿದ ನಾರುನಾರು ಶ್ಯಾವಿಗೆಯನ್ನು ಹಿಡಿಯಷ್ಟು ಹಾಕುತ್ತಾರೆ. ಅನಂತರ ಅದಕ್ಕೆ ಸ್ವಲ್ಪ ರಬ್ಡಿ, ಸ್ವಲ್ಪ ಜೇನು, ಸ್ವಲ್ಪ ಗುಲ್ಕನ್ ಸೇರಿಸಿ ಅದರ ಮೇಲೆ ಪಿಸ್ತಾ ಹಾಗೂ ಏಲಕ್ಕಿ ಚೂರುಗಳನ್ನು ಹಾಕಿ ಕೊಡುತ್ತಾರೆ. ಚಮಚೆಯಲ್ಲಿ ಕಲಸಿ ಒಂದು ಚೂರು ಬಾಯಿಗಿಟ್ಟರೆ ಸಿಹಿ, ತಂಪು ಪರಿಮಳದ ಸ್ವಾದಕ್ಕೆ ಮೈಮನ ಎಲ್ಲೋ ತೇಲುತ್ತದೆ. ರಬ್ಡಿ ಫಲೂದಾದಲ್ಲಿ ಅದೇ ಪದಾರ್ಥಗಳಿದ್ದರೂ ಕುಲ್ಫಿಯ ಬದಲಾಗಿ ಹೆಚ್ಚು ರಬ್ಡಿ ಇರುತ್ತದೆ.

ಖ್ಯಾತ ಚಿತ್ರನಟ ಅಮಿತಾಬ್ ಬಚನ್ ಮುಂತಾದ ತಾರೆಯರಿಂದ ಪ್ರಸ್ತಾಪಗೊಳ್ಳುವ ಅಂಬಾಲಾ ಕಂಟೋನ್ಮೆಂಟಿನ ಪೂರನ್‌ಸಿಂಗ್ ದಾಬಾ ಎಂಬ ಹೋಟೆಲು ತಾರಾ ಹೋಟೆಲೇನಲ್ಲ. ಇಲ್ಲಿನ ರೈಲುನಿಲ್ದಾಣದ ಎದುರು ಬಸ್‌ನಿಲ್ದಾಣದ ಪಕ್ಕ ಇರುವ ಈ ರಸ್ತೆಬದಿಯ ಹೋಟೆಲಿಗೆ ಬಿಸಿಲು ಹೊತ್ತಿನಲ್ಲಿ ಹೋಗಬಾರದು. ರಾತ್ರಿ ಧೂಳು ಕಾಣದಾಗ ತಿನ್ನುವ ಗೋಧಿಯ ರೊಟ್ಟಿ ಮತ್ತು ಮಾಂಸದ ಗೊಜ್ಜು ಬಲು ರುಚಿಯಾಗಿರುತ್ತೆ.

ಎಂದಾದರೂ ನೀವು ಉತ್ತರ ಇಂಡಿಯಾಕ್ಕೆ ಭೇಟಿ ಕೊಟ್ಟಾಗ ಈ ತಿನಿಸುಗಳನ್ನು ಮರೆಯದೆ ಸೇವಿಸಿರಿ.

  • ತಂಪು ಹೊತ್ತಿನ ತಿನಿಸು
~.~
  • cmariejoseph ರವರ ಬ್ಲಾಗ್
  • Login or register to post comments
  • 188 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬ್ರೆಡ್ ಬೋಂಡ
  • ಗೋದಿ ಹಲ್ವಾ
  • ಸಮ್ಮ್ ರ್ ಸ್ಪೆಶಿಯಲ್ ತಿನಿಸುಗಳು
  • ಕೋಡುಬಳೆ
  • ಬದನೇಕಾಯಿ ಎಣಗಾಯಿ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator