ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › cmariejoseph ರವರ ಬ್ಲಾಗ್

ಏನಂತೀರಿ ?

June 7, 2007 - 9:08pm — cmariejoseph

ಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನ (ಇಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸ್ಥಾಪಕರಾದ ಸರ್ ಜೇಮ್ಶೇಠ್ಜಿ ಟಾಟಾರವರು ಅದರ ರಾಸಾಯನ ಶಾಸ್ತ್ರ ವಿಭಾಗದ ಹುಟ್ಟಿಗಾಗಿ ವಿಲಿಯಂ ರಾಮ್ಸೆಯನ್ನು ಆಹ್ವಾನಿಸಿದ್ದರು. ರಾಮ್ಸೆ ಕೆಲವರ್ಷ ಈ ಬಂಗಲೆಯಲ್ಲಿ ನೆಲೆಸಿದ್ದರಿಂದ ಇದಕ್ಕೆ 'ನಿಟಾನ್'ಎಂಬ ಹೆಸರಿಟ್ಟದ್ದು ಸೂಕ್ತವಾಗಿದೆ.
ನನ್ನ ಸ್ನೇಹಿತನೊಬ್ಬ ಅವನ ಮಗಳಿಗೆ ಸೌಚ ಎಂದು ಹೆಸರಿಟ್ಟಿದ್ದಾನೆ. ಆ ಹೆಸರಿಗೆ ಅರ್ಥವೇನಿರಬಹುದು ಎಂದು ತಿಣುಕಾಡಿದೆ. ಅವನನ್ನೇ ವಿಚಾರಿಸಿದಾಗ ತಿಳಿದುಬಂದದ್ದು ಸೌಮ್ಯ ಮತ್ತು ಚನ್ನೇಗೌಡರ ಸುಪುತ್ರಿಯಾಗಿರುವ ಅವಳಿಗೆ ಈ ಹ್ರಸ್ವರೂಪದ ಹೆಸರಂತೆ. ತುಂಬಾ ಚೆನ್ನಾಯಿತು ಎಂದುಕೊಂಡೆ. ಬೆಂಗಳೂರಿನ ಶೌಚಾಲಯಗಳೇ ನಿರ್ಮಲ ಎಂದು ಹೆಸರಿಟ್ಟುಕೊಳ್ಳುತ್ತಿರುವಾಗ ಇವನ್ಯಾವ ಸೀಮೆ ಗೂಬೆ ಅಂತೀರಾ?
ಟಿವಿ ನೋಡೋ ಚಟ ಇದ್ಮೇಲೆ ಧಾರವಾಹಿ ನೋಡೋ ಚಟಾನೂ ಇದ್ದದ್ದೇ. ಕೊನೆಯಲ್ಲಿ ಅವರು ಮುಂದುವರೆಯುವುದು ಎಂದು ತೋರಿಸುತ್ತಾರೆ, ನೋಡಿದ್ದೀರಾ? ಏನದು ಈ ಮುಂದುವರೆಯುವ ವಿಚಾರ? ನಿಂತಲ್ಲಿಯೇ ನಿಲ್ಲದೆ ಮುಂದಕ್ಕೆ ಹರಿಯುತ್ತಾ ಸಾಗುವುದು ಎನ್ನುವುದನ್ನೇ ಮುಂದುವರಿಯುವುದು ಎನ್ನಬಹುದಲ್ಲದೇ ಮುಂದುವರೆಯುವುದು ಎಂದರೆ ಏನಂತೀರಿ?

  • ಹೆಸರಿಗೆ ಅರ್ಥ
~.~
  • cmariejoseph ರವರ ಬ್ಲಾಗ್
  • Login or register to post comments
  • 400 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2007 - 11:06pm — ASHOKKUMAR

ಉ: ಏನಂತೀರಿ ?

ASHOKKUMAR's picture

ನಮ್ಮಲ್ಲಿ ಒಬ್ಬಳ ಹೆಸರು ಅಶೀಲ ಎಂದು. ಇಂತಹ ಹೆಸರು ಇಡುವ ಮೊದಲು ತಂದೆತಾಯಿ ಯೋಚಿಸಬೇಕು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 10:35am — Sunil Jayaprakash

ಉ: ಏನಂತೀರಿ ?

Sunil Jayaprakash's picture

ನಮ್ಮಲ್ಲಿ ಒಬ್ಬರ ಹೆಸರು ದ್ರೌಪದಿ ಅಂತ Smiling ನೀವೇ ಊಹಿಸಿ ಅದರ ಪರಿಣಾಮಗಳನ್ನು.

ಜೋಸೇಫರೇ, ಮುಂದುವರಿ ಹಾಗು ಮುಂದುವರೆಯ ಬಗ್ಗೆ.

ನಿಂತಲ್ಲಿಯೇ ನಿಲ್ಲದೆ ಮುಂದಕ್ಕೆ ಹರಿಯುತ್ತಾ ಸಾಗುವುದು ಎನ್ನುವುದನ್ನೇ ಮುಂದುವರಿಯುವುದು ಎನ್ನಬಹುದಲ್ಲದೇ ಮುಂದುವರೆಯುವುದು ಎಂದರೆ ಏನಂತೀರಿ?

ಮುಂದು + ಪರಿ = ಮುಂದುವರಿ.
ಪರಿ - ಹರಿ, ಹರಿಯುವಿಕೆ, ಓಟ, ಕಾಲುವೆ, ಹೊನಲು, ದಾರಿ, ಬಗೆ(ರೀತಿ)

ಮುಂದು + ಪರೆ = ಮುಂದುವರೆ.
ಪರೆ - ವಿಸ್ತಾರ, ಅಗರ, ಹರಡು, ಹಬ್ಬು, ಚದರು, ಕೆದರು, ಬೆಳಗ್ಗೆ, ಸುಸಿಲು(ಕಾಲ್ಯ), ಎರೆ, ಪರಿ, ಪೊರೆ.

ಪರಿ - ಹರಿಯುವುದು, ಪರೆ - ಹರಡುವುದು ಎರಡರ ನಡುವಿನ ಅರ್ಥಸೂಕ್ಷ್ಮತೆಯೇ ಆ ಎರಡು ಪದಗಳು ಅಷ್ಟು ಎಗ್ಗಿಲ್ಲದೆ ಬಳಕೆಯಲ್ಲಿರುವುದಕ್ಕೆ ಕಾರಣವಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2007 - 6:11pm — cmariejoseph

ಉ: ಏನಂತೀರಿ ?

cmariejoseph's picture

thumbaa dhanyavaadagaLu.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನ ಭಾರತೀಯ ವಿಜ್ಞಾನಸಂಸ್ಥೆಯ, ಶತಮಾನೋತ್ಸವ ದಿನದಂದು, ದಿವಂಗತ ಜಮ್‍ಷೆಡ್ಜಿ ಟಾಟಾ ರವರಿಗೆ, ನಮ್ಮೆಲ್ಲರ, ನಮನಗಳು !
  • *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
  • ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.
  • ಗ್ನು/ಲಿನಕ್ಸ್ ಹಬ್ಬ - ಏಪ್ರಿಲ್ ೨೬ ರಂದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ
  • "ಕದಿರ್ " - ಏನಿದು?
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator