Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › csomsekraiah ರವರ ಬ್ಲಾಗ್

ಭುಟ್ಟೊ ಬಗೆಗೆ ಇನ್ನಷ್ಟು

January 2, 2008 - 10:31am — csomsekraiah

ಬೆನಜೀರ್ ಮೊದಲ ಬಾರಿ ಭಾರತೀಯ ಪತ್ರಕರ್ತರ ಕ್ಯಾಮರ ಕಣ್ಣಿಗೆ ಸಿಕ್ಕಿದ್ದು ,ಸೀಮ್ಲಾ ಒಪ್ಪಂದದ ಸಂದರ್ಭದಲ್ಲಿ . ಅಪ್ಪ ಜುಲ್ಫಿಕರ್ ಆಲಿ ಭುಟ್ಟೊ ಜತೆ ಆವತ್ತು ಆಗಮಿಸಿದ್ದ ಬೆನಜೀರ್ , ಹದಿನೆಂಟರ ತುಂಬು ಜವ್ವನೆ . ಚಿಗರಯಂತೆ ಚಿಮ್ಮುತ್ತಾ ,ಉತ್ಸಾಹದ ಚಿಲುಮೆಯಾಗಿದ್ದ ; ಅಷ್ಟೇ ಮುಗ್ಧವಾಗಿ ಎಲ್ಲರೊಂದಿಗೆ ನಗು ನಗುತ್ತಾ ಬೆರೆಯುತ್ತಿದ್ದ , ಈ ಬಾಲಕಿಯನ್ನು ಹೆಮ್ಮೆಯಿಂದ ಮತ್ತು ಆತ್ಮೀಯವಾಗಿ ನೋಡಿ ಸಂತಸಪಡುತ್ತಿದ್ದ ,ಇಂದಿರಾ ಅವರ ಚಿತ್ರಗಳು ಆ ಕಾಲದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು .

ಜುಲ್ಫಿಕರ್ ಆಲಿ ಭುಟ್ಟೊ ಅತ್ಯಂತ ವಿಚಿತ್ರವಾದ ಕಲಸುಮೇಲೋಗರದ ವ್ಯಕ್ತಿತ್ವದ ನಾಯಕ . ಭಾರತದೊಂದಿಗೆ ಸಾವಿರ ವರ್ಷದ ಯುದ್ದವನ್ನು ನಡೆಸಬಲ್ಲೆ ಎಂದು ಪಾಕಿಸ್ತಾನದ ತುಂಬಿದ ಸಭೆಗಳಲ್ಲಿ ಬಡಾಯಿ ಕೊಚ್ಚುತ್ತಾ ,ಜನರ ಕರ ತಾಡನಗಳನ್ನು ಗಿಟ್ಟಿಸಬಲ್ಲ ಗಿಮಿಕ್ ವ್ಯಕ್ತಿತ್ವ. ಆದರೆ ಅವರಿಗೆ ಭಾರತದೊಡನೆ ದ್ವೇಷ ಪಾಕಿಸ್ತಾನದ ಅವನತಿ ಎಂಬ ಪ್ರಜ್ಝೆ ಸಹ ಇತ್ತು . ಅದಕ್ಕಾಗಿ ಭಾರತದೊಂದಿಗೆ ಸ್ನೇಹಕ್ಕಾಗಿ ಪ್ರಯತ್ನಗಳನ್ನೂ ಮಾಡದೆ ಇರುತ್ತಿರಲಿಲ್ಲ. ಇದನ್ನು ಅವತ್ತಿನ ವಿಶ್ಲೇಷಕರು ಪ್ರೀತಿ ಮತ್ತು ದ್ವೇಷದ ರಾಜಕಾರಣ ಎನ್ನುತ್ತಿದ್ದರು .

ಭುಟ್ಟೊಗೆ ರಾಜಕೀಯ ಉಳಿವಿಗಾಗಿ , ಭಾರತವನ್ನು ದ್ವೇಷಿಸದೆ ಅನ್ಯ ಮಾರ್ಗವೇ ಇರಲಿಲ್ಲ . ಪಾಕಿಸ್ತಾನದ ಜನರನ್ನು , ಅಲ್ಲಿನ ನಾಯಕವರ್ಗ ತಯಾರು ಮಾಡಿದ್ದೇ ಹಾಗೆ ! ಜನರ ಸಾಮಾನ್ಯರ ದಿನನಿತ್ಯದ ಸಮಸ್ಯೆಗಳ ಉದ್ವಿಜ್ಝತೆಯನ್ನು ಬೇರೆಡೆಗೆ ತಿರುಗಿಸಲು , ಪಕ್ಕದ ಇಲ್ಲದ ಶತ್ರುವನ್ನು ದೊಡ್ಡದಾಗಿ ಬಿಂಬಿಸುವುದೇ ತಮ್ಮ ಕುರ್ಚಿಯ ಉಳಿವಿಗೆ ಆಧಾರವೆಂದು ಅವರು ಧೃಢವಾಗಿ ನಂಬಿದ್ದರು . ಆದರೆ ಅದೇ ಕಾಲಕ್ಕೆ ಭಾರತದ ಜನತೆಗೆ ಅವರವೇ ಆದ ಗೋಳುಗಳು ಸಾಕಷ್ಟಿದ್ದವು . ಪಾಕಿಸ್ತಾನದ ನಾಯಕರ ಈ ರೀತಿಯ ತಾತ್ಕಾಲಿಕ ಕ್ರಮಗಳು ಅಲ್ಲಿನ ಸಾಮಾನ್ಯ ಜನರ ಚಿಂತನಾಕ್ರಮವನ್ನೇ ಹಾಳುಮಾಡಿದವು .

ಸೀಮ್ಲಾ ಒಪ್ಪಂದದ ಸಮಯದಲ್ಲಿ , ಜುಲ್ಫಿಕರ್ ಆಲಿ ಭುಟ್ಟೊ ರ ಪ್ರತಿ ನಡೆ ,ಅವರು ಪಾಕಿಸ್ತಾನದಲ್ಲಿ ಮಾಡುತ್ತಿದ್ದ ಭಾಷಣಗಳಿಗೆ ತದ್ವಿರುದ್ದವಾಗಿದ್ದವು . ಆ ಸಮಯದಲ್ಲಿ ರಾಜಕಾರಣಿಯೂ ; ಧರ್ಮದ ಬಂದಿಯೂ ಆಗಿರದ ಸಹಜ ಮನುಷ್ಯನೊಬ್ಬ ಪ್ರಕಟವಾಗಿದ್ದ .ಇಂದಿರಾ ಮತ್ತು ಭುಟ್ಟೊ ಇಬ್ಬರೂ ನಾಯಕರೂ , ಮಾತುಕತೆಗೆ ಮೊದಲನೇ ಮಹಡಿಯಲ್ಲಿ ಆಯೋಜಿಸಿದ್ದ ಸಭೆಗೆ ತೆರಳಲು ಮೆಟ್ಟಲೇರುವ ಸಮಯದಲ್ಲಿ , ಭುಟ್ಟೊ ಇಂದಿರಾರನ್ನು " ನೀವು ಮೊದಲು ಹತ್ತಿ ,, ಎಂದರು,"ಏಕೆ ? ನೀವೆ ಮುಂದೆ ಬನ್ನಿ ,, ಎಂದ ಇಂದಿರಾರಿಗೆ " ಇಲ್ಲ ಮಹಿಳೆಯರಿಗೇ ಮೊದಲ ಪ್ರಾಶಸ್ತ್ಯವಲ್ಲವೇ ? ,, ಎಂದು ನಗುತ್ತಾ ಭುಟ್ಟೊ ಪ್ರತಿಕ್ರಿಯಿಸಿದ್ದೂ ಪತ್ರಿಕೆಗಳಲ್ಲಿ ವರದಿಯಾಗಿತ್ತು .

ದಿನಗಳು ಕಳೆದವು ವಿಚಾರಶೀಲ ವ್ಯಕ್ತಿತ್ವದ ಇಂದಿರಾ ಸಹ ಅಧಿಕಾರ ಶಾಶ್ವತವೆಂಬ ಭ್ರಮೆಯಲ್ಲಿ , ಒಂದು ದುರ್ಬಲ ಘಳಿಗೆಯಲ್ಲಿ ದೇಶದ ಮೇಲೆ ತುರ್ತು ಸ್ಥಿತಿಯನ್ನು ಹೇರಿ, ಕರಾಳ ಶಾಸನಗಳನ್ನು ಜಾರಿಗೆ ತಂದರು , ಪರಿಣಾಮವೆಂದರೆ, ಜನಪ್ರಿಯತೆಯ ಶಿಖರದಿಂದ ಜಾರಿ ಕೆಳಬಿದ್ದರು .

ಇಂದು ಸಾವಿರ ವರ್ಷಗಳ ಯುದ್ದದ ಸರದಾರ ಭುಟ್ಟೊ ಇಲ್ಲ ; ಅಧಿಕಾರ ಶಾಶ್ವತವೆಂದು ನಂಬಿದ ನಾಯಕಿ ಇಂದಿರಾ ಇಲ್ಲ ;ಆವತ್ತಿನ ಉದಯೋನ್ಮುಖ ನಾಯಕಿ ಬೆನಜೀರ್ ಕೂಡಾ ಇಲ್ಲ . ಇವರೆಲ್ಲ ಬಲಿಯಾದದ್ದು ಧರ್ಮ ಮತ್ತು ರಾಜಕೀಯದ ತಪ್ಪು ಆಲೋಚನೆಗಳಿಗೆ .ಆವತ್ತು ಇಂದಿರಾ ಮತ್ತು ಭುಟ್ಟೊರನ್ನು ಹತ್ಯೆಗೈದ ಪಾತಕಿಗಳು ಸಾಧಿಸಿದ್ದು, ಕಡಿದು ಕಟ್ಟೆಹಾಕಿದ್ದು, ಏನೂ ಇಲ್ಲ ;ಎಲ್ಲವೂ ಒಂದು ದೊಡ್ಡ ಮೂರ್ಖ ದುಃಸಾಹಸ ವಿನಃ ಇನ್ನೇನೂ ಅಲ್ಲ . ಕೊಂದವರೂ ಮಣ್ಣಲ್ಲಿ ಮಣ್ಣಾಗಿ ಹೋದರು ಮಾತ್ರ. ಮುಂದೆ ಬೆನಜೀರ್ ಹಂತಕರೂ ಸಾಧಿಸುವುದೂ ಒಂದು ದೊಡ್ಡ ಶೂನ್ಯವನ್ನು . ಅವರೂ ಸಹ ಮರಣದ ಕಡೆಗೇ ಪಯಣಿಸುತ್ತಿರುವ ಹತಾಶ ಮಾನವರು . ಈ ಎಲ್ಲ ಹತ್ಯೆಗಳು ನಡೆದದ್ದು ರಾಜಕೀಯ ಮತ್ತು ಧರ್ಮದ ಕಾರಣಗಳಿಗಾಗಿ . ಪ್ರತಿ ಕ್ಷಣ ಹೊಸ ತಿರುವು ಪಡೆಯುವ ಜಗತ್ತಿನಲ್ಲಿ ರಾಜಕಾರಣ ಒಂದು ಕೊಕ್ಕೊ ಆಟ, ಅದು ಮಿಂಚಿ ಮರಯಾಗುವ ಮಾಯಾಂಗನೆ . ಇನ್ನು ಈ ಮಹಾನ್ ಧರ್ಮೋದ್ದಾರಕರನ್ನು ಯಾವ ಸ್ವರ್ಗದ ವೈಭವದ ಮಹಲುಗಳೂ ಸಹ ಸ್ವಾಗತಿಸಲು ಕಾದಿರುವುದಿಲ್ಲ ; ಅದು ಕೇವಲ ಮನುಷ್ಯನ ಪೆದ್ದು ಕಲ್ಪನೆ . ಮನುಷ್ಯ ತಾನಿರುವಲ್ಲಿಯೇ ತನ್ನ ಪ್ರಯತ್ನದಿಂದ ಮಾತ್ರ ಶಾಂತಿಯ ಸ್ವರ್ಗವನ್ನು ನಿರ್ಮಿಸಿಕೊಳ್ಳಬಲ್ಲ ; ತಪ್ಪು ಆಲೋಚನೆಗಳು ನರಕವನ್ನು ಮಾತ್ರ ಸೃಷ್ಟಿಸಬಲ್ಲವು.

ಮನುಷ್ಯನ ದಡ್ಡತನದ ಮುಂದುವರಿದ ಭಾಗ ಪಾಕಿಸ್ತಾನದಲ್ಲಿ ಈಗಾಗಲೇ ಆರಂಭವಾಗಿದೆ . ಕೇವಲ ಮತ ಬ್ಯಾಂಕ್ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ,ಇನ್ನೂ ಜಗತ್ತನ್ನು ಅರಿಯಬೇಕಾದ , ತುಂಬಾ ಕಲಿಯಬೇಕಾದ ವಯಸ್ಸಿನ ಬಿಲಾವಲ್ ನನ್ನು ರಾಜಕೀಯದ ಬೆಂಕಿಯ ಬಲೆಗೆ ಅಭಿಮನ್ಯುವನ್ನು ದೂಡಿದಂತೆ ದೂಡಲಾಗುತ್ತಿದೆ .ಇದೆನ್ನೆಲ್ಲಾ ತಿಳಿದೂ ತಿದ್ದಿಕೊಳ್ಳಲು ಬಾರದ್ದೇ ಮನುಷ್ಯ ಕುಲದ ಕರ್ಮ ಅಥವಾ ಪ್ರಾರಾಬ್ಧ .

  • ಪ್ರಚಲಿತ
Ornamental seperator
  • csomsekraiah ರವರ ಬ್ಲಾಗ್
  • Login or register to post comments
  • 195 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ
  • ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
  • ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್
  • ವಾರಣಾಸಿ,ಬಾಂಬ್ ಮತ್ತು ರಾಜಕೀಯ
  • ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator