Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › csomsekraiah ರವರ ಬ್ಲಾಗ್

ಕರುಣಾನಿಧಿಯ ಉದಾರ ತಮಿಳು

April 4, 2008 - 11:36am — csomsekraiah

ಇಡೀ ಪ್ರಪಂಚಕ್ಕೆ ಕಡ ಕೊಡುವಷ್ಟು ಭಾಷಾಂಧತೆಯನ್ನು ಪ್ರದರ್ಶಿಸುತ್ತಿರುವವರಿಂದ , ಕನ್ನಡ ಜನ ಉದಾರತೆಯ ಪಾಠ ಕಲಿಯಬೇಕಾಗಿದೆ .ಇದು ಕಳ್ಳನೇ, ’ಕಳ್ಳನನ್ನುಹಿಡಿಯಿರಿ’ ಎಂದು ಬೊಬ್ಬಿಡುತ್ತಾ ತಪ್ಪಿಸಿಕೊಂಡು ಹೋದವನ ಕತೆಯಂತಿದೆ .

ಇಷ್ಟು ವಯಸ್ಸು ಕಳೆದ ಮೇಲೆ ಈ ಮುದುಕರಾದ ಕರುಣಾನಿಧಿ,ಬೆಂಕಿ ಹಚ್ಚುವ ಮಾತುಗಳನ್ನು ಏಕೆ ಆಡುತ್ತಾರೆ ?ಎಂಬುದಕ್ಕೆ ಉತ್ತರ ಹುಡುಕಲು ತಿಣುಕಾಡಬೇಕಾಗಿಲ್ಲ. ನಿಲ್ಲಲೂ ಶಕ್ತಿ ಇಲ್ಲದ ಆದರೂ ಅಧಿಕಾರದ ಆಸೆಯ ಹುಚ್ಚು ಹತ್ತಿಸಿಕೊಂಡಿರುವ ಅವರು , ತಮಿಳರ ಕಣ್ಣಲ್ಲಿ ಹೀರೋ ಆಗಲು ,ಮತ್ತೆ ಐದು ವರ್ಷಗಳ ಅಧಿಕಾರ ಹಿಡಿಯಲು ಬಳಸಿಕೊಂಡಿದ್ದು ಈ ವಾಮ ಮಾರ್ಗವನ್ನು.ಅವರಿಗೆ ತಮಿಳರ ಹಿತವೂ ಮುಖ್ಯವಲ್ಲ ,ಕನ್ನಡಿಗರ ತಾಪತ್ರಯವೂ ಮುಖ್ಯವಲ್ಲ- ಅಧಿಕಾರ ಮಾತ್ರ ಮುಖ್ಯ . ಅವರ ಐದು ವರ್ಷದ ಅಧಿಕಾರದ ಆಸೆಗೆ ಬಲಿಯಾಗಬೇಕಾದ್ದು ಮಾತ್ರ , ಜನಾಂಗಗಳ ನಡುವಣ ಸಾಮರಸ್ಯ .

ಈ ನಾಡಿನ ದುರಂತವೆಂದರೆ ,ಇಡೀ ಜೀವಮಾನದಲ್ಲಿ ರಾಜಕೀಯದಲ್ಲೇ ಇದ್ದು, ಬೇಕಾದಷ್ಟು ಕಬಳಿಸಿ , ಪಿಂಜರಾಪೋಲುಗಳಾದರೂ ,ಅಧಿಕಾರ ನನಗೆ ,ನನ್ನ ನಂತರ ನನ್ನ ಮಕ್ಕಳಿಗೆ ಎಂದು ಪರದಾಡುವ ಚರಿತ್ರ ಹೀನ ರಾಜಕಾರಣಿಗಳಿಂದ ತುಂಬಿ ಹೋಗಿರುವುದು .ಇಲ್ಲದಿದ್ದರೆ ವಯಸ್ಸು ಕಳೆದ ನಂತರವೂ ಜನಗಳ ಮನಸ್ಸುಗಳಿಗೆ ಬೆಂಕಿ ಹಚ್ಚುವ ; ಇಲ್ಲವೇ ತಮ್ಮ ವ್ಯಕ್ತಿತ್ವವನ್ನೇ ಮಾರಿಕೊಂಡು ,ಗುಲಾಮರ ತರಹ ಹಲ್ಲು ಕಿಸಿಯುವ ಈ ವ್ಯಕ್ತಿಗಳ ರಾಜಕಾಣಕ್ಕೆ ಅರ್ಥವಾದರೂ ಏನು ?

  • ರಾಜಕೀಯ
Ornamental seperator
  • csomsekraiah ರವರ ಬ್ಲಾಗ್
  • Login or register to post comments
  • 504 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 4, 2008 - 12:13pm — varunbhatbm

ಉ: ಕರುಣಾನಿಧಿಯ ಉದಾರ ತಮಿಳು

varunbhatbm's picture

ಸರಿಯಾಗಿ ಹೇಳಿದ್ರಿ..
ಕರುಣಾನಿಧಿ ಒಬ್ಬ ನೀಚ ರಾಜಕಾರಣಿ. ಇಷ್ಟು ವರ್ಷ ರಾಜಕಾರಣ ಮಾಡಿ ಅವರು ಒಳ್ಳೆಯದನ್ನು ಕಲಿಯೊಲ್ಲ, ಇನ್ನೂ ಹೆಚ್ಚು ಹೆಚ್ಚು ಕುತಂತ್ರ, ದುರ್ಬುಧ್ಧಿಯನ್ನು ರೂಢಿಸಿಕೊಳ್ತಾರೆ. ತಾವು ಬೇರೆಯವರಿಗೆ ಮಾದರಿ ಆಗಬೇಕು ಅಂತ ಅವರಿಗೆ ಅನ್ನಿಸೋದಿಲ್ಲ.
ಇವರ ಹಾದಿಯಲ್ಲೇ ನಮ್ಮ ಕರ್ನಾಟಕದ ರಾಜಕಾರಣಿ ಒಬ್ಬರು ಸಾಗ್ತಾ ಇದ್ದಾರೆ..
ದೇವರು ಜನರನ್ನು ಕಾಪಾಡಲಿ..

-ವರುಣ ಭಟ್

  • Login or register to post comments
  • link
  • Email this ಪ್ರತಿಕ್ರಿಯೆ
April 4, 2008 - 9:04pm — csomsekraiah

ಉ: ಕರುಣಾನಿಧಿಯ ಉದಾರ ತಮಿಳು

csomsekraiah's picture

ಧನ್ಯವಾದಗಳು ವರುಣ ಭಟ್ಟರೆ

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 10:53am — mahesha

ಉ: ಕರುಣಾನಿಧಿಯ ಉದಾರ ತಮಿಳು

mahesha's picture

everything is fair in love and war

ಶಬ್ದಮಣಿದರ್ಪಣದಲ್ಲಿ ಒಂದು ಪದ್ಯದಲ್ಲೇ ಹೇಳಿದೆ..

"ಆ ತಿಗಳರು/ತಮಿಳರು ಏನು ನಮಗೆ ಕಾವೇರಿಯನ್ನು ಕಡಕ್ಕೆ ಕೊಟ್ಟಿದ್ದಾರೋ" ಎಂಬ ಸಿಟ್ಟು ಬಂದಿದೆ...

ಆ ಹೊಯ್ಸಳರ ಕಾಲದಿಂದಲೂ ತಮಿಳರು ನಾವ್ ಕನ್ನಡಿಗರ ಮೇಲೆ ಕಾವೇರಿ-ನೀರಿಗಾಗಿ ಬವರ/ಯುದ್ದದಲ್ಲಿ ಇದ್ದಾರೆ.

ಹೊಯ್ಸಳರು ಕನ್ನಂಬಾಡಿಯಲ್ಲಿ ಕಟ್ಟಿದ್ದ ಅಣೆಯನ್ನು ಚೋಳದೊರೆ ಒಡೆಯುವನು......

ಬುದ್ದಿವಂತೆ ಮಯ್ಸೂರಸರೂ, ದಿವಾನ ವಿಶ್ವೇಶ್ವರಯ್ಯನೋರು, ಅದೇ ಜಾಗದಲ್ಲಿ ಕನ್ನಂಬಾಡಿ ಕಟ್ಟೆಯನ್ನು ಮತ್ತೆ ಕಟ್ಟಿದರು.. ಆಗ ತಮಿಳರು ಏನೆಲ್ಲ ಮಾಡಿದ್ರು ಗೊತ್ತಲ್ಲ.. ಬ್ರಿಟಿಶರ ಮದ್ರಾಸು ಪಡೆಯಿಂದ ಕೇಆರ್‍-ಎಸ್ ಅನ್ನು ಮುತ್ತಿಸಿದರು. ಸೊತಂತ್ರ ಬಂದ ಮೇಲೂ ಆ ಪಡೆ ೨೦-೨೫ ವರ್ಶ ಕನ್ನಂಬಾಡಿ ಕಾಯಿತು..

ಅದೆಲ್ಲ ಹಾಳಾಗಲಿ.. ಈ ನೀರಿಗಾಗಿ ಹೋರಾಡಿದ ಸತ್ತ ಪೆಟ್ಟು ತಿಂದ ಮಂಡ್ಯ ಮಯ್ಸೂರು, ಹಾಸನ , ಚಾಮರಾಜನಗರದ ರೈತರು ಕಡಮೆಯೇ, ಅವರು ೪೦೦ ವರ್ಶದಿಂದ ಹೋರಾಡ್ತಿದ್ದಾರೆ.. ಅವರ ಗವ್ರವಕ್ಕಾದ್ರೂ ಹೊಗೇನಕಲ್ ತಪ್ಪಿಸಬೇಕು..

ನಾನ್ ನಮ್ ಮಂಡ್ಯದಲ್ಲಿ ಚಿಕ್ಕಂದಿನಲ್ಲಿ ನೋಡಿದ್ದೀನಿ... ಬಂಗಾರಪ್ಪನೋರ ಕಾಲದಲ್ಲಿ, ಪೋಲಿಸರ ಲಾಟಿ ಏಟುಗಳನ್ನು ತಾಳಿಕೊಂಡು ಪಟ್ಟು ಸಡಿಲಿಸದಂತೆ ಹೋರಾಡಿದರು; ಮಾದೇಗೌಡರು ಮುಂದಾಳು; ಆಗ ಯಾವ ಕರಮೇ ಇತ್ತು? ಆದ್ರೆ ಕಾವೇರಿ ಮೇಲೆ ಹಕ್ಕು ಇತ್ತೇ ಇಲ್ಲ..

ಮಂಡ್ಯದ ಒಬ್ಬ ರಯ್ತರ ಹುಡುಗ ಹೀಗೆ ಯೋಚಿಸ್ತಾನೆ
"
ನನ್ನ ತಾತ, ಅವನ ತಾತ, ಅವನ ತಾತ, ಈ ನೆಲವನ್ನು ಉತ್ತಿ ಬಿತ್ತಿದ್ದಾರೆ.. ಕನ್ನಂಬಾಡಿ ಕಟ್ಟೆಗೆ ನಮ್ಮ ಬೆವರ ಜೊತೆಗೆ ನಮ್ಮ ನೆಲವನ್ನೂ ತೆತ್ತಿದ್ದಾರೆ. ಕಾವೇರಿ ನನ್ ತಲೆಮಾರಿನ ಆಸ್ತಿ.. ನನ್ನ ಅಜ್ಜನ ಬಳುವಳಿ, ಉಡುಗೊರೆ, ಅವರ ಗವ್ರವ, ಹೋರಾಟ, ಗಟ್ಟಿತನದ ಚಿನ್ನೆ.

ಇಂದು ಅದನ್ನ ಈ ರಾಜಕೀಯದೋರು ಆ ನಮ್ ತಲೆತಲೆಮಾರಿನ ಹಗೆಗಳಾದ ತಮಿಳಿಗೆ ಕಸಿದು ಈಯ್ಯುತ್ತಿದ್ದಾರೆ..
ಇಲ್ವೇ
ಆ ತಮಿಳುನೆಲದವರು ಮೋಸದಿಂದಲೇ, ಕೂಳತನದಿಂದಲೇ ಎರಗಿ ಕಸಿದುಕೊಳ್ಳುತ್ತಿದ್ದಾರೆ..

ನಾನು ನನ್ ತಂದೆ ಆಸ್ತಿ ಕಾವೇರಿಯನ್ನ ಕಾಪಾಡಿಕೊಳ್ಳಬೇಕು" ಅಂತ....

ಈ ಬಾವೆನ ಕಾವೇರಿಸೀಮೆಯಲ್ಲಿ ಇರದ ಕನ್ನಡಿಗರಲ್ಲಿ ಇಲ್ಲದಿದ್ರೇ ಏನು ನಿಬ್ಬರ/ಅತಿಶಯವಲ್ಲ.... ಇವರಿಗೆ ಬೆಂಬಲ ಕೊಡದಿದ್ರೂ ಇವರ ನಿರಂತರ ಹೋರಾಟಕ್ಕೆ ಗವ್ರವವನ್ನು, ತಮ್ಮ ಎದೆಯಲ್ಲೊಂದು ಮೆದುಜಾಗವನ್ನು ಕೊಡದ ದೇಶಭಕ್ತರು, ಮಹಾಧರ್ಮಪಾಲಿರಿದ್ದಾರೆ. ಅದೇ ನಮ್ಮ ಕನ್ನಡದೇಶಕ್ಕೆ ಗೆದ್ದಲು.!! Sad

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 10:56am — mahesha

ಉ: ಕರುಣಾನಿಧಿಯ ಉದಾರ ತಮಿಳು

mahesha's picture

ಕರಮೇ = ಕರವೇ ಅಂತ ಇರಬೇಕಿತ್ತು!

  • Login or register to post comments
  • link
  • Email this ಪ್ರತಿಕ್ರಿಯೆ
April 5, 2008 - 4:11pm — csomsekraiah

ಉ: ಕರುಣಾನಿಧಿಯ ಉದಾರ ತಮಿಳು

csomsekraiah's picture

ಪ್ರೀತಿಯ ಮಹೇಶ್ ನಿಮಗೆ ನನ್ನಿ , ಪ್ರತಿ ಕ್ರಿಯೆಯಾಗಿ ಒಂದು ಲೇಖನವನ್ನೇ ಬರೆದಿದ್ದೀರಿ , ಅದು ನಿಮ್ಮೊಳಗಿನ ಬೇಸರ ನೋವುಗಳ ಪ್ರತೀಕ . ಈ ಚುನಾವಣೆ, ಬಹುಮತಗಳ ಆಟದಲ್ಲಿ ಕನ್ನಡಿಗರು ಬಲಿಪಶುಗಳಾಗುತ್ತಿರುವುದು , ನೆರೆಯವರು ಸಮಯ ಸಾಧಕರಂತೆ ನಡೆದುಕೊಳ್ಳುತ್ತಿರುವುದು , ಇದೆಲ್ಲವನ್ನೂ ಕಂಡರೆ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿರುವ ಕನ್ನಡಿಗರದೇ ಈ ಕಾಲಕ್ಕೆ ತಪ್ಪಿರಬಹುದೇ ಎನಿಸುತ್ತದೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ
  • ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?
  • ಯುಗ ಯುಗಾದಿ ಕಳೆದರೂ
  • ತಪ್ಪು ಯಾರದ್ದು?
  • ಕರುಣಾನಿಧಿಯ Independence day special article ಹಿಂದು ಪೇಪರಲ್ಲಿ!!! ಎಲ್ರೂ ಓದಿ,!!
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator