ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › csomsekraiah ರವರ ಬ್ಲಾಗ್

ಸೌಹಾರ್ದದ ಬಂಡಾಯ

December 10, 2007 - 10:56am — csomsekraiah

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯವೋ ಪುಣ್ಯ ; ಅಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಸುಗ್ಗಿಯೋ ಸುಗ್ಗಿ . ಮೂಡುಬಿದರೆಯ ಆಳ್ವಾಸ್ ಆಯಿತು , ಧರ್ಮಸ್ಥಳದ ಸಮ್ಮೇಳನ ಆಯಿತು . ಇನ್ನು ಉಡುಪಿಯ ಸಮ್ಮೇಳನದಲ್ಲಿ ಕೈಬಿಡಬಹುದಾದ ಅಂಶಗಳ ಪೂರೈಕೆಗಾಗಿ ಸೌಹಾರ್ದ ಸಾಹಿತ್ಯ ಸಮ್ಮೇಳನವೂ ನಡೆಯಿತು .

ಇದೆಲ್ಲಾ ಒಂಥರಾ ಒಳ್ಳೆಯ ಬೆಳವಣಿಗೆ ಇರಬಹುದು , ಬೇರೆ ಬೇರೆ ವಿಚಾರಧಾರೆಗಳು ಕನ್ನಡದಲ್ಲಿ ಹರಿಯುವುದು , ಚಿಂತನ ಹರಿತವಾಗಲು;ವಿಚಾರ ಶಕ್ತಿ ವಿಸ್ತರಿಸಲು ತುಂಬಾ ಉಪಯುಕ್ತವೂ ಆಗಬಹುದು . ಅದು ಸಂಘಟಕರ ಉದ್ದೇಶದ ಮೇಲೆ ಬಹುಮಟ್ಟಿಗೆ ಹೊಂದಿಕೊಂಡಿರುವ ವಿಷಯ. ಯಾರು ಏನೇ ಹೇಳಿದರೂ ಬಂಡಾಯ ಬಂಡಾಯವೇ ಶಿಷ್ಟರು ಯಾವುದನ್ನು ಕೈ ಬಿಡುತ್ತಾರೋ ಬಂಡಾಯದವರು ಅವುಗಳನ್ನು ಎತ್ತಿಕೊಳ್ಳುವುದು ಸಹಜವೇ ಅಲ್ಲವೆ ?

ಈಗ ಸಾಹಿತ್ಯ ಸಮ್ಮೇಳನಗಳು ಭೋಜನ ಸಮ್ಮೇಳನಗಳೂ ? ಆಗುತ್ತಿರುವುದು ಎಲ್ಲರಿಗೂ ಗೊತ್ತು , ಅದೂ ಸರಿಯೇ ಭೋಜನವೇ ಇಲ್ಲದಿದ್ದರೆ ಸಾಹಿತ್ಯವೆಲ್ಲಿಯದು?

ಸಾಂಪ್ರದಾಯಿಕ ವ್ಯವಸ್ಥೆಯ ಎಲ್ಲವನ್ನೂ ವಿರೋಧಿಸದಿದ್ದರೆ ಅದು ಬಂಡಾಯ ಹೇಗೆ ? ಸೌಹಾರ್ದ ಸಮ್ಮೇಳನದಲ್ಲಿ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯ ವಿರುದ್ದವೂ ಬಂಡಾಯವೆದ್ದು ವೆಜ್ ಮಾತ್ರ ಏಕೆ ? ನಾನ್ ವೆಜ್ ಏಕೆ ಬೇಡ ? ಅಂತಾ ಮೀನು , ಕೋಳಿಗಳಿಗೆ ಕತ್ತರಿ ಬಿದ್ದ ವರದಿ ಬಂದಿದೆ .

ಲಕ್ಷಾಂತರ ಜನಕ್ಕೆ ಭೋಜನ ವ್ಯವಸ್ಥೆ ಮಾಡುವ ಒರಿಜಿನಲ್ ಸಾಹಿತ್ಯ ಸಮ್ಮೇಳನ ಈ ಮಾದರಿಯನ್ನು ಅನುಸರಿಸಿದರೆ ಸಾವಿರಾರು ಪ್ರಾಣಿಗಳ ಜೀವಕ್ಕೆ ಬಂತು ಸಂಚಕಾರ . ಪ್ರತಿ ವರ್ಷವೂ ಕನ್ನಡಕ್ಕಾಗಿ ಎಷ್ಟೊಂದು ಪಾಪದ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರುತ್ತೋ ಆ ಭಗವಂತನೇ (ಅವನಿದ್ದರೆ) ಬಲ್ಲ . ಕನ್ನಡ ಸಾಹಿತ್ಯಕ್ಕೂ ರಕ್ತದ ಹೊಳೆಯಲ್ಲಿಯೇ ತೇಲುವ ಸಂಭ್ರಮ .

ಮನುಷ್ಯನ ಸೈದ್ದಾಂತಿಕ ಜಗಳಗಳಲ್ಲಿ ತಮ್ಮ ಪಾತ್ರವೇನೂ ಇಲ್ಲದಿದ್ದರೂ , ಏನೂ ಗೊತ್ತಿಲ್ಲದ ಈ ಮೂಕ ಜೀವಿಗಳು ಸಿದ್ದಾಂತದ ಹೆಸರಿನಲ್ಲಿ ಜನರ ಹೊಟ್ಟೆ ಸೇರಬೇಕಾದ ಅಸಹಾಯಕತೆಗೆ ಒಳಗಾಗುತ್ತವೆ . ಪಾಪ ಅವುಗಳಿಗೆ ಯಾವ ಧರ್ಮವಾಗಲೀ ,ಸಿದ್ದಾಂತವಾಗಲೀ ಇಲ್ಲವಲ್ಲ , ಮನುಷ್ಯನೆದುರು ಅವುಗಳನ್ನು ಕಾಪಾಡಲು .

  • ಭೋಜನ ಬಂಡಾಯ
~.~
  • csomsekraiah ರವರ ಬ್ಲಾಗ್
  • Login or register to post comments
  • 267 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ
  • ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ-ಅಧ್ಯಕ್ಷತೆ ಮಹಿಳೆ ವಹಿಸಬೇಕೇ?
  • ಯಕ್ಷಲೋಕದ ಧ್ವನಿ
  • ಯಕ್ಷಲೋಕದ ಧ್ವನಿ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator