ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › csomsekraiah ರವರ ಬ್ಲಾಗ್

ಜೇನು ರಾಣಿಯ ಉತ್ತರಾಧಿಕಾರದ ಸಮಸ್ಯೆ

December 13, 2007 - 7:56am — csomsekraiah

ನಾನು ನನ್ನ ಮನೆಯ ಕಾಂಪೌಂಡಿನಲ್ಲಿ ಜೇನು ಪೆಟ್ಟಿಗೆಯನ್ನಿಡಲು ಯೋಚಿಸಿದೆ . ಯಥಾಪ್ರಕಾರ ನನ್ನ ಹುಚ್ಚು ಯೋಚನೆಗಳಿಗೆ ತಕ್ಷಣದ ಬೆಂಬಲ ದೊರೆಯುವುದು ನನ್ನ ಮೊಮ್ಮಕ್ಕಳಿಂದಲೇ , ಅವರು ತಾತ ಜೇನು ಪೆಟ್ಟಿಗೆ ತರುತ್ತೆ ,ನಮಗೆಲ್ಲಾ ತಿನ್ನಲು ಬೇಕಾದಷ್ಟು ಜೇನುತುಪ್ಪ .ಎಂದು ಚಪ್ಪಾಳೆ ತಟ್ಟಿ ಕುಣಿಯಲು ಆರಂಭಿಸಿಬಿಟ್ಟರು . " ಹೋ ಅದೊಂದು ಕಡಿಮೆ ಬಿದ್ದಿತ್ತು,, ಎಂಬ ನೀರಸ ಪ್ರತಿಕ್ರಿಯೆ ನಿರೀಕ್ಷಿಸಿದಂತೆಯೇ ಮನೆಯೊಡತಿಯಿಂದ ಬಂದೇ ಬಂದಿತು ." ನೋಡು ನೀನು ಹೀಗೆಲ್ಲಾ ಹಂಗಿಸಿದರೆ, ನಾಳೆ ಜೇನು ತುಪ್ಪದ ಒಂದು ಹನಿಯೂ ನಿನಗೆ ಸಿಕ್ಕುವುದಿಲ್ಲ,, ಎಂದು ಸಿಡುಕಿದೆ . "ಹೌದು ತಾತ, ಅಜ್ಜಿಗೆ ಜೇನುತುಪ್ಪ ತೋರಿಸಲೇಕೂಡದು ,, ಎಂದು ಮೊಮ್ಮಕ್ಕಳು ಠರಾವು ಪಾಸು ಮಾಡಿಬಿಟ್ಟರು .

ಜೇನು ಪೆಟ್ಟಿಗೆಯನ್ನಿಡಲು ನಿರ್ಧರಿಸಿದೆನಾದರೂ ಜೇನು ಸಾಕಣೆ ಬಗ್ಗೆ ನನಗೇನೂ ಗೊತ್ತಿರಲಿಲ್ಲ . ಅದಕ್ಕಾಗಿ ನಮ್ಮ ಹತ್ತಿರದ ಮೇಟಿಕುರ್ಕೆಯ ’ಮಧುವನ’ದ ಶಾಂತವೀರಯ್ಯನವರನ್ನು ಕಾಣಲು ಅವರ ಮನೆಗೆ ಹೋದೆ . ಅವರು ನಿವೃತ್ತ ತೋಟಗಾರಿಕೆ ಸಹಾಯಕ ನಿರ್ದೇಶಕರು ; ಜೇನು ಸಾಕಣೆ ತರಬೇತಿ ಕೇಂದ್ರವನ್ನು ನಡೆಸುತ್ತಿರುವವರು , ಸಾವಿರಾರು ಜೇನು ಗೂಡುಗಳನ್ನು ನಿಭಾಯಿಸುತ್ತಿರುವವರು . ಅವರ ತೋಟದಲ್ಲಿ ಎಲ್ಲೆಂದರಲ್ಲಿ ಜೇನು ಪೆಟ್ಟಿಗೆಗಳೇ ಪೆಟ್ಟಿಗೆಗಳು .

ಹಿಂದೆಲ್ಲಾ ವಿದ್ಯೆ ಕಲಿಯಲು ಋಷಿಗಳ ಹತ್ತಿರ ಸಮಿತ್ಪಾಣಿಗಳಾಗಿ ಶಿಷ್ಯರು ಹೋಗುತ್ತಿದ್ದರು ಎಂದು ನಮ್ಮ ಉಪನಿಷತ್ತುಗಳಲ್ಲಿ ಬರೆದಿಲ್ಲವೇ ? ಸಮಿತ್ತು ಗಿಮಿತ್ತು ಏನೂ ಇಲ್ಲದೆ ಖಾಲಿಪಾಣಿಯಾಗಿ ಚಿತ್ರದುರ್ಗದಿಂದ ಸುಮಾರು ಮುವ್ವತ್ತೈದು ಕಿಲೋಮೀಟರು ದೂರದ ಅವರ ತೋಟದ ಮನೆಗೆ ಬೆಳಗ್ಗೆ ಬೆಳಗ್ಗೆಯೇ ಹೋಗಿ ಪರಿಚಯ ಮಾಡಿಕೊಂಡು ನನ್ನ ಹಂಬಲವನ್ನು ಅರಿಕೆ ಮಾಡಿಕೊಂಡೆ .

ಅವರಿಗೆ ಎಲ್ಲಿಲ್ಲದ ಸಂತೋಷ , ಯಾರಾದರೂ ತಾವಾಗಿ ಮುಂದೆ ಬಂದು ಆಸಕ್ತಿ ವಹಿಸಿದರೆ , ಅಂತಹವರಿಗೆ ಕಲಿಸಲು ತುಂಬಾ ಸಂತೋಷಪಡುವ ವ್ಯಕ್ತಿ . ಅವರ ತೋಟವನ್ನೆಲ್ಲಾ ಸುತ್ತಿಸುತ್ತಾ ,ಇಡೀ ದಿನ ಜೇನಿನ ಜೀವನ ವಿಧಾನದ ಬಗ್ಗೆ , ಜೇನು ಕೃಷಿಯ ಬಗ್ಗೆ ತುಂಬಾ ಉಪಯುಕ್ತ ವಿಷಯಗಳನ್ನೆಲ್ಲಾ ತಿಳಿಸಿದರು .ನನ್ನ ಮನೆಯಲ್ಲಿ ಜೇನು ಪೆಟ್ಟಿಗೆಯನ್ನಿಡುವ ನನ್ನ ಆಸೆಗೆ " ಓಹೋ , ಹಾಗೇ ಮಾಡಿ , ಜೇನು ಗೂಡು , ಪೆಟ್ಟಿಗೆ ಎಲ್ಲವನ್ನೂ ಕೊಟ್ಟು ನಮ್ಮ ಕಂಠೇಶಿಯನ್ನು ಕಳುಹಿಸುತ್ತೇನೆ, ಗೂಡನ್ನು ಹೇಗೆ ನಿಭಾಯಿಸಬೇಕೆಂದು ಅವನು ತಿಳಿಸಿ ಕೊಡುತ್ತಾನೆ ,, ಎಂದರು

ನನಗೆ ಈ ಇರುವೆ, ಗೆದ್ದಲು, ಜೇನು, ಕೆಂಜಿಗ ಇವೆಲ್ಲಾ ತುಂಬಾ ಸೋಜಿಗದ ಕೀಟಗಳು .ಸಾವಿರಾರು ಸಂಖ್ಯೆಯ ಒಗ್ಗಟ್ಟಿನ ಇವುಗಳ ಸಮಾಜ ಜೀವನ ಪದ್ದತಿ ತುಂಬಾ ಕುತೂಹಲಕರ ವಿಷಯ . ಮನುಷ್ಯ ಈ ಭೂಮಿಯ ಮೇಲೆ ಅವತರಿಸುವುದಕ್ಕೆ ಕೋಟ್ಯಾಂತರ ವರ್ಷಗಳ ಮೊದಲಿನಿಂದಲೇ, ಇವುಗಳ ಸಾಮಾಜಿಕ ಜೀವನ ಹೀಗೆಯೇ ನಡೆಯುತ್ತಾ ಬಂದಿದೆ . ಅವುಗಳ ಬೌದ್ದಿಕ ಪ್ರಪಂಚ ಹೇಗೋ? ಅವುಗಳ ಭಾವ ವಲಯ ಹೇಗೋ? ಎಲ್ಲವೂ ವಿಸ್ಮಯಕಾರಕ . ಒಂದು ವೇಳೆ ಗಾತ್ರದಲ್ಲಿ ಅವುಗಳು ಮನುಷ್ಯನ ಸಮ ಇದ್ದಿದ್ದರೆ , ನಾಗರಿಕತೆಯನ್ನು ಕಟ್ಟುವ ಅವಕಾಶವನ್ನು ಮನುಷ್ಯನಿಗೆ ಬಿಟ್ಟುಕೊಡುತ್ತಲೇ ಇರಲಿಲ್ಲ . ಅವೇ ಎಲ್ಲವನ್ನೂ ಕಂಡು ಹಿಡಿದು ಬಿಡುತ್ತಿದ್ದವು . ಎಂದು ನನ್ನ ನಂಬಿಕೆ .

ಕಂಠೇಶಿ ಜೇನು ಪೆಟ್ಟಿಗೆ ತಂದು ಕಾಂಪೌಂಡಿನಲ್ಲಿ ಪ್ರತಿಷ್ಟಾಪಿಸಿದ . ಮೊಮ್ಮಕ್ಕಳು ಕುಣಿದಾಡುತ್ತಾ , ಆವಾಗಲೇ ಜೇನು ಕುಡಿದೊಷ್ಟು ಸಂತೋಷದಿಂದ ಸ್ವಾಗತಿಸಿದರು . ಕಂಠೇಶಿ ತುಂಬಾ ಓದಿದವನಲ್ಲವಾದರೂ ಜೇನು ಸಾಕಣೆ ವಿಷಯದಲ್ಲಿ ತುಂಬಾ ಬುದ್ದಿವಂತ ; ಜೇನು ಕೃಷಿಯ ಬಗ್ಗೆ ಅವನ ಪರಿಣಿತಿಗೆ ಕೊನೆಯೇ ಇಲ್ಲ .

"ಸಾಮಾನ್ಯ ಜೇನು ಹುಳುಗಳ ಆಯುಷ್ಯ ತುಂಬಾ ಕಡಿಮೆ , ಹೆಚ್ಚೆಂದರೆ ಎರಡು ಮೂರು ತಿಂಗಳು ; ಆದರೆ ರಾಣಿ ಜೇನು ಮಾತ್ರ ಹತ್ತಾರು ವರ್ಷ ನಿರಾಂತಂಕವಾಗಿ ಬದುಕುತ್ತದೆ . ,, "ಅದು ಹುಟ್ಟಿದ ಎರಡು ಮೂರು ವಾರಗಳಲ್ಲಿ ಒಂದೇ ಒಂದು ಸಾರಿ ಹೊರಬಂದು ವಾತಾವರಣದಲ್ಲಿ ಹಾರಾಡಿ ಗೂಡು ಸೇರಿಕೊಂಡರೆ ಮುಗಿಯಿತು , ಸ್ಥಳ ಬದಲಾವಣೆಯ ಹೊರತಾಗಿ ಹೊರಬರುವ ಪ್ರಶ್ನೆಯೇ ಇಲ್ಲ . ದಿನವೂ ಮೊಟ್ಟೆ ಇಡುತ್ತಾ ಗೂಡಿನಲ್ಲಿರುವುದು, ಗೂಡಿನ ಸ್ಠಿತಿ ಗತಿಗಳನ್ನು ನಿರಂತರ ಅವಲೋಕಿಸುತ್ತಾ ,ಅಲ್ಲಿನ ಜೀವನವನ್ನು ಸಕ್ರಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಅದರ ಕೆಲಸ ,, ಮುಂತಾದ ವಿಷಯಗಳನ್ನು ಕಂಠೇಶಿಯ ಬಾಯಲ್ಲಿ ಕೇಳುವುದೇ ಚಂದ .

" ಸರಿ ಈ ರಾಣಿಜೇನುಗಳು ಸೃಷ್ಟಿಯಾಗುವ ಬಗೆಯಾದರೂ ಹೇಗೆ ? ಅವುಗಳ ಧೀರ್ಘಾಯುಷ್ಯದ ಗುಟ್ಟಾದರೂ ಏನು ,,? ಎನ್ನುವ ನನ್ನ ಪ್ರಶ್ನೆಗೆ , "ರಾಣಿ ಜೇನುಗಳು ಎನ್ನುವ ಪ್ರಶ್ನೆಯೇ ಇಲ್ಲ , ಒಂದು ಗೂಡಿಗೆ ಒಂದೇ ರಾಣಿ ,ಇನ್ನೊಂದಕ್ಕೆ ಸ್ಥಳವಿಲ್ಲ ,, ಇರುವ ಒಬ್ಬಳು ರಾಣಿ ಅಕಸ್ಮಾತ್ತಾಗಿ ಸತ್ತು ಹೋದರೆ ಆಗ ಆ ಗೂಡಿನ ಗತಿ ಏನು,, ? ಎಂಬ ನನ್ನ ಪ್ರಶ್ನೆಗೆ , "ಇದಕ್ಕೆ ಉತ್ತರ ಮುಂದಿನ ವರ್ಷ ತಿಳಿಸುತ್ತೇನೆ ಅಲ್ಲಿಯ ವರೆಗೆ ಪ್ರಶ್ನೆ ಹಾಗೆಯೇ ಇರಲಿ,, ಎಂದ ಕಂಠೇಶಿ , ಎಲಾ ಇವನಾ , ಎಂತಹ ಕಿಲಾಡಿ ಇವನು, ಒಳ್ಳೇ ಬೇತಾಳ ವಿಂಶತಿ ಕತೆ ಮಾಡಿದನಲ್ಲಾ , ಎಂದುಕೊಂಡು ಸುಮ್ಮನಾದೆ .

  • ಕೀಟ ಪ್ರಪಂಚ
~.~
  • csomsekraiah ರವರ ಬ್ಲಾಗ್
  • Login or register to post comments
  • 341 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ
  • ಮಾರ್ಕಸ್ ಅರಿಲಿಯಸ್
  • ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
  • ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
  • ಹೂವುಗಳ ಪೆರ್ಚು (ಸಂತಾನೋತ್ಪತ್ತಿ)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator