ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › csomsekraiah ರವರ ಬ್ಲಾಗ್

ಹಾವೇರಿಯ ಸಾವು , ಯಾರು ಹೊಣೆ ?

June 13, 2008 - 11:45am — csomsekraiah

ವ್ಯವಸ್ಥೆಯ ಅಧ್ವಾನಕ್ಕೆ ಮುಗ್ಧ ಜೀವವೊಂದು ಬಲಿಯಾಯಿತು ; ಬಲಿಯ ನಂತರ ಬಲಿಯ ಮೇಲೆ ಹದ್ದಿನಂತೆ ಎರಗಿದ ಎಲ್ಲರಲ್ಲೂ ಇದ್ದದ್ದು ಮಾತ್ರ ಹೇಸಿಗೆ ತರಿಸುವಷ್ಟು ಸ್ವಾರ್ಥ ಮತ್ತು ಲೋಲುಪತೆ .
ನಮ್ಮ ಸರ್ಕಾರದ ಆಡಳಿತಾಂಗ ಎಷ್ಟು ನೈತಿಕ ಅಧಃಪಾತಾಳವನ್ನು ತಲುಪಿದೆಯೆಂದರೆ , ಯಾರೆಂದರೆ ಯಾರಿಗೂ ಅವರೂ ಸೇರಿದಂತೆ , ಎಲ್ಲರೂ ಜೀವಿಸುತ್ತಿರುವ ಸಾಮಾಜಿಕ ವಲಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಸ್ಥಿತಿಯನ್ನು ಮುಟ್ಟಿರುವುದು .ಪ್ರತಿಯೊಬ್ಬ ಅಧಿಕಾರಿಯೂ ಅವರವರ ಸಂಬಳ ,ಭತ್ಯೆ , ಗಿಂಬಳ ,ವರ್ಗಾವರ್ಗಿಗಳ ಚಿಂತೆಯಲ್ಲಿಯೇ ಮುಳುಗಿ , ಸಮಾಜಿಕ ಜೀವನವೇ ಮರೆತು ಹೋಗಿರುವ ಸ್ಥಿತಿಯಲ್ಲಿರುವುದು . ರಾಜ್ಯಪಾಲರ ಅವಧಿಯೆಂಬುದು , ಮತ್ತೂ ಕಡಿವಾಣವಿಲ್ಲದ ಸ್ಥಿತಿಯಾಗಿ ಅಧಿಕಾರ ಶಾಹಿಯ ಸುಗ್ಗಿಯ ಸಮಯವಾಗಿತ್ತು . ಮುಂಗಾರಿನ ಮಳೆಗೆ ಈ ರಾಜ್ಯದ ರೈತರಿಗೆ ಏನು ಬೇಕು ? ಎಂಬ ವಿಷಯ ಯಾರ ತಲೆಗೂ ಹೋಗಲೇ ಇಲ್ಲ .

ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ,ಅದರ ಅಮಲಿನಲ್ಲಿ ಮಂತ್ರಿ ಪದವಿಗೆ ; ನಂತರ ಖಾತೆಗಳಿಗೆ , ಅಧಿಕಾರ ಸಿಕ್ಕ ಘಳಿಗೆಯಿಂದ ಒದ್ದಾಡಿದ್ದರ ನೂರರಲ್ಲಿ ಹತ್ತು ಭಾಗದಷ್ಟು ಪ್ರಚಲಿತ ಸಮಸ್ಯೆಗಳಿಗೆ ಗಮನವನ್ನು ಕೊಟ್ಟು ಒದ್ದಾಡಿದ್ದರೆ ನಡೆದುಹೋದ ಅನಾಹುತದ ಬಹುಪಾಲು ಸಾಧ್ಯತೆಯನ್ನು ತಪ್ಪಿಸಬಹುದಾಗಿತ್ತು.

ಕಾಂಗ್ರೆಸ್ ಪಕ್ಷದವರಂತೂ ರಾಜ್ಯದ ಇಂತಹ ಸಂಕಟ ಸಮಯದಲ್ಲಿ ತಮ್ಮದೇ ಸರ್ಕಾರವಿರುವ ಕೇಂದ್ರದಿಂದ ಯಾವ ರೀತಿಯ ಸಹಕಾರವನ್ನು ಪಡೆಯಲು ಸಾಧ್ಯ ? ಎಂದು ಕಿಂಚಿತ್ತಾದರೂ ಚಿಂತಿಸದೆ , ಹನ್ನೆರಡು ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಸರಕಾರದ ಮೇಲೆ ಎಲ್ಲ ತಪ್ಪುಗಳನ್ನೂ ರವಾನಿಸಲು ತುದಿಗಾಲ ಮೇಲೆ ನಿಂತು , ತನ್ನ ಹತಾಸೆಯನ್ನು ಪ್ರದರ್ಶಿಸಿದ್ದಲ್ಲದೆ; ರಾಕ್ಷಸ ಆನಂದವನ್ನು ಅನುಭವಿಸಿತು .

ಕರ್ನಾಟಕದ ಜೆಡಿಎಸ್ ಅಂತೂ ಯಾರೂ ಕೇಳುವುದಕ್ಕಿಂತ ಮೊದಲೆ ತನ್ನ ಹೆಗಲು ತಡವರಿಸಿಕೊಳ್ಳುತ್ತಾ , ಮತ್ತದೇ ತನ್ನ ಹಳೆಯ ಗಿಮಿಕ್ ಗಳಿಗೇ ಮರೆ ಹೋಗಿ ಜನತೆಯೆದುರು ಇನ್ನಷ್ಟು ನಗ್ನವಾಯಿತು .

ಇನ್ನು ದೃಶ್ಯ ಮಾಧ್ಯಮಗಳಿಗೂ ಸಾಮಾಜಿಕ ಕಳಕಳಿಗೂ ಎಣ್ಣೇ ಶಿಗೇಕಾಯಿಯೊಷ್ಟೇ ಸಂಬಂಧ , ಮಾರಮ್ಮನ ಜಾತ್ರೆಯ ಕುಣಿತಗಳಂತಹ ಕುಣಿತಗಳಿಂದ ಜನತೆಯನ್ನು ಪ್ರಚೋದಿಸಿ ಬೆಂಕಿ ಹಚ್ಚುವುದರಲ್ಲಿ ಅವು ಯಾವಾಗಲೂ ಹಿಂದೆ ಬಿದ್ದದ್ದೇ ಇಲ್ಲ . ಇನ್ನು ಇಂತಹ ಸುಗ್ಗಿಯನ್ನು ಬಿಟ್ಟಾವೆಯೆ ? ಬಿಟ್ಟರೆ ಅವುಗಳ ಧಣಿಗಳಿಗೆ ಹಣದ ಹೊಳೆ ಹರಿಯುವುದಾದರೂ ಹೇಗೆ ?

ಇದೆಲ್ಲದರ ನಂತರವೂ ಗೋಲೀಬಾರಿಗೆ ಆದೇಶ ನೀಡಬೇಕಾದ ಜಿಲ್ಲಾಧಿಕಾರಿಯಾಗಲೀ , ತಹಸೀಲ್ದಾರರಾಗಲೀ ಆದೇಶ ನೀಡಿರಲೇ ಇಲ್ಲ , ಎಂದು ವರದಿಯಾಗಿದೆ . ಈವತ್ತಿಗೂ ಅದರ ಕಾರಣ ಕರ್ತರ ಬಗ್ಗೆ ಯಾವುದೇ ಮಾಹಿತಿ ಇಲ್ಲ . ಇದು ಜನ ತಂತ್ರವೇ ? ಇಂತಹ ವಿಷಮಯ ವಾತಾವರಣದಲ್ಲಿ ದೂರುವುದು ಯಾರಲ್ಲಿ ?

  • ಪ್ರಚಲಿತ
~.~
  • csomsekraiah ರವರ ಬ್ಲಾಗ್
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 13, 2008 - 12:04pm — roopablrao

ಉ: ಹಾವೇರಿಯ ಸಾವು , ಯಾರು ಹೊಣೆ ?

roopablrao's picture

ಇದಕ್ಕೆ ಹೊಣೆ ಭಾಜಪಾಗೆ ಮುಂಚೆ ಇದ್ದ ರಾಷ್ಟ್ರಪ್ತಿ ಆಳ್ವಿಕೆ ಠಾಕೂರ್ ಸಾಹೇಬರ ಆಸ್ಥಾನದಲ್ಲಿದ್ದ ಅಧಿಕಾರಿಗಳು.
ಸರಿಯಾದ ಸಮಯದಲ್ಲಿ ತಕ್ಕ ಸಲಹೆ ನೀಡಿ ಕೇಂದ್ರದ ಗಮನಕ್ಕೆ ತಂದಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲವೇನೋ
ಈ ಹಿಂದೆಯೇ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ರಸ ಗೊಬ್ಬರದ ಕೊರತೆಯನ್ನು ಗಮನಿಸಿ ಅದನ್ನು ಹೇಳಿಯೂ ಇತ್ತು ಆದರೆ ಏನಾದರೂ ಮಾಡುವ ಮೊದಲೇ ಅದು ಒಡೆದು ಚೂರಾಯಿತು
ನಂತರ ಠಾಕೂರ್ ಸಾಹೇಬರು ತಾವಾಯಿತು ತಮ್ಮ ಅಧಿಕಾರದ ರುಚಿ ನೋಡುವುದರ ಕಡೆಗೆ ಗಮನ ಹರಿಸಿದ್ದರಿಂದ ಇಂತ ಗಲಬೆ ಯಾಗಿದೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 1:11pm — shylaswamy

ಉ: ಹಾವೇರಿಯ ಸಾವು , ಯಾರು ಹೊಣೆ ?

shylaswamy's picture

ನಮ್ಮನ್ನಾಳುವ ಪಕ್ಷ ಯಾವುದೇ ಇರಲಿ, ಮೇಲಧಿಕಾರಿಗಳು ಯಾರೇ ಇರಲಿ ಎಲ್ಲರೂ ಸ್ವಾರ್ಥಿಗಳೇ. ಅದು ಎಂತಹಾ ದುರಂತವೇ ಆಗಲಿ ಅದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಎಲ್ಲರೂ. ಹೀಗಾಗಿ ನಮ್ಮ ದೇಶದಲ್ಲಿ ಬಡಿದು ತಿನ್ನುವ ಮಾನವ ರೂಪದ ಪ್ರಾಣಿಗಳು( ಇಲ್ಲಿ ಹದ್ದು ಎಂದು ಹೇಳಲು ನನಗೆ ಇಷ್ಟವಿಲ್ಲ. ಏಕೆಂದರೆ ಹದ್ದು ತನ್ನ ಹಸಿವಿಗಾಗಿ ಜೀವಿಯ ಮೇಲೆ ಎರಗುತ್ತದೆ. ಆಗಲೂ ಕೂಡ ಅದು ಆಜೀವಿಯು ಸಾಯುವ ವರೆಗೂ ಕಾಯುತ್ತದೆ.) ಸ್ವಾರ್ಥಿಗಳಾಗಿ ಇರುವತನಕ ಈ ದುರಂತಗಳು ನಡೆಯುತ್ತಲೇ ಇರುತ್ತವೇನೋ? ಇದಕ್ಕೆ ಕೊನೆ ಎಂದೋ ತಿಳಿಯದಾಗಿದೆ. ಬೇಲಿಯೇ ಎದ್ದು ಹೊಲ ಮೇದ ಹಾಗೆ, ಯಾರಲ್ಲಿ ದೂರಲು ಸಾಧ್ಯ?
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 2:06pm — lgnandan

ಉ: ಹಾವೇರಿಯ ಸಾವು , ಯಾರು ಹೊಣೆ ?

lgnandan's picture

ಇದಕ್ಕೆಲ್ಲ ಕಾರಣ ನಮ್ಮ ಅಧಿಕಾರಿಶಾಹಿಗಳ ಸ್ವಾರ್ಥ ನಿಲುವು. ಸರಿಯಾದ ಸರ್ಕಾರ ಇಲ್ಲದ ಸಮಯದಲ್ಲಿ ತಮ್ಮ ಬೇಳೆಯ ಬೇಯಿಸಿಕೊಳ್ಳಲು ರಾಷ್ಟ್ರಪತಿ ಅಡಳಿತವನ್ನು ಸರಿಯಾಗಿ ಉಪಯೋಗಿಸಿಕೊಂಡಂತಿದೆ. ರಾಷ್ಟ್ರಪತಿ ಅಡಳಿತ ನಮ್ಮ ರಾಜ್ಯಕ್ಕೆ ಬಡಿದ ಶಾಪ. ಇನ್ಮೇಲಾದರು ನಮ್ಮ ಜನ ಸಮ್ಮಿಶ್ರ ಸರ್ಕಾರಗಳಿಗೆ ಅವಕಾಶ ಕೊಡದೆ ಒಂದು ಪ್ರಾಮಾಣಿಕ ಪಕ್ಷಕ್ಕೆ ಬೆಂಬಲ ಸೂಚಿಸಬೇಕು.

-ನಂದನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 3:07pm — srinivasps

ಉ: ಹಾವೇರಿಯ ಸಾವು , ಯಾರು ಹೊಣೆ ?

srinivasps's picture

ಮಾಧ್ಯಮಗಳು ಕೂಡ ರಾಜಕೀಯದ ಬಗ್ಗೆ ಹೆಚ್ಚು ಲೇಖನಗಳನ್ನು ಬರೆಯುತ್ತಿವೆಯೇ ಹೊರತು ರೈತರು ಬೇರೆ ಯಾವ ರೀತಿ ರಸಗೊಬ್ಬರವಿಲ್ಲದೇ ಉಳುಮೆ ಮಾಡಬಹುದೆಂಬ ದಿಕ್ಕಿನಲ್ಲಿ ಯಾವುದೇ ಮಾಹಿತಿ ನೀಡಿಲ್ಲ..
ಬೇರೆ ಉಪಾಯಗಳ ಬಗ್ಗೆ, ಬೇರೆ ರಾಜ್ಯ/ದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಹೇಗೆ ಎದುರಿಸಿದ್ದರು ಎಂಬ ನಿಟ್ಟಿನಲ್ಲಿ ಬರೆದಿದ್ದರೆ ಎಷ್ಟು ಚೆನ್ನಿತ್ತು!

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 4:43pm — csomsekraiah

ಉ: ಹಾವೇರಿಯ ಸಾವು , ಯಾರು ಹೊಣೆ ?

csomsekraiah's picture

ಜ್ವಲಂತ ಸಮಸ್ಯೆಗೆ ಸ್ಪಂದಿಸಿದ , ಸ್ಪಂದಿಸುವ ಎಲ್ಲರಿಗೆ ಧನ್ಯವಾದಗಳು , ನಾಗರಿಕರ ಎಚ್ಚರ , ಒಂದು ನಾಡು ಸರಿ ದಾರಿಯಲ್ಲಿ ನಡೆಯಲು ಸಹಕಾರಿಯಾಗಬಲ್ಲದು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 9:08pm — karaddishivaraj

ಉ: ಹಾವೇರಿಯ ಸಾವು , ಯಾರು ಹೊಣೆ ?

karaddishivaraj's picture

ಅಧಿಕಾರಿಶಾಹಿಯ ನಿಷ್ರ್ಕಿಯತೆ ಯಿಂದಾಗಿ ಜಿವವೋಂದು ಬಲಿಯಾಯಿತು, ಕೆವಲ ನಾಲ್ಕು ದಿನ ಮೊದಲು ಅಧಿಕಾರಕ್ಕೆ ಬಂದ ಸರ್ಕಾರವೇನು ಮಾಡೀತು. ಅಧಿಕಾರಿಶಾಹಿಗೆ ಶಿಕ್ಷೆಯಾಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದ, ಹೊಸ ಬಿಜೆಪಿ ಸರ್ಕಾರ !
  • ಬಜೆಟ್ ಬೂಟಾಟಿಕೆ
  • ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ
  • ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ
  • ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator