Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › csomsekraiah ರವರ ಬ್ಲಾಗ್

ಕರ್ನಾಟಕ ಅಥವಾ ಕನ್ನಡತನ (೧)

January 28, 2008 - 8:44pm — csomsekraiah

ಕನ್ನಡಿಗರು ಅಭಿಮಾನಶೂನ್ಯರು! ಎಂಬ ಆಪಾದನೆ ತುಂಬಾ ಹಳೆಯದು.ಆ ಹಳೆಯ ಆಪಾದನೆ ಈಗ ಪ್ರಸ್ತುತವಾಗಲು ಮುಖ್ಯಕಾರಣ , ಬಲು ದೊಡ್ಡ ರಾಜ ಕಾರಣಿಗಳೂ; ಬಲು ದೊಡ್ಡ ಸಾಹಿತಿಗಳೂ , ಕರ್ನಾಟಕದಲ್ಲಿ ಹುಟ್ಟಲೇಬಾರದಾಗಿತ್ತು , ಎಂಬ ರೀತಿಯಲ್ಲಿ ಅಲವತ್ತುಕೊಳ್ಳುತ್ತ್ತಿರುವುದು ; ತಮ್ಮ ಸಾಧನೆಗೆ ಬೇರೆಲ್ಲಾದರೂ ಆಗಿದ್ದರೆ ತುಂಬಾ ಬೆಲೆ ಬರುತ್ತಿತ್ತು,ಎಂಬುದು ಅವರ ಮಾತಿನ ಹಿಂದಿನ ಅಳಲಿರಬಹುದು.

ಇದಕ್ಕೆ ಉದಾಹರಣೆಗಳನ್ನು ಕೊಡಲು, ಅವರೇನೂ ಶ್ರಮ ವಹಿಸಬೇಕಾಗಿಲ್ಲ. ಹೆಜ್ಜೆ, ಹೆಜ್ಜೆಗೆ ಉದಾಹರಣೆಗಳನ್ನು ಕೊಡಬಹುದಾದ ಅಸಂಖ್ಯ ಪುರಾವೆಗಳನ್ನು , ಒದಗಿಸಬಹುದು .

ಕನ್ನಡ ನಾಡಿನ ಯಾವುದೇ ಬಸ್ ನಿಲ್ದಾಣಕ್ಕೆ ಹೋದರೂ , ಯಾವ ಕಡೆಗೆ ಯಾವ ಬಸ್ಸು ಹೋಗುತ್ತದೆ ?ಎಂದು ತಿಳಿಯಲು ಕನ್ನಡದ ಜೊತೆಗೆ,ಆಂಗ್ಲ, ಹಿಂದಿ, ಗಡಿಭಾಗಗಳಾದರೆ ನೆರೆ ರಾಜ್ಯದ ಭಾಷೆ ಸಹ ಸಿಕ್ಕಿಯೇ ಸಿಗುತ್ತದೆ.ಆದರೆ ತಮಿಳು ನಾಡಿನ , ಕರ್ನಾಟಕಕ್ಕೆ ಹತ್ತಿರದ ಊರುಗಳಾದ ; ಸ್ವಲ್ಪ ಕನ್ನಡವನ್ನೂ ಬಲ್ಲ,ಈರೋಡಿಗೋ, ಕೊಯಮತ್ತೂರಿಗೋ, ಸೇಲಂ ಗೋ ಹೋಗಿ ಬಸ್ ನಿಲ್ದಾಣದಲ್ಲಿ ಇಳಿಯಿರಿ. ತಮಿಳಲ್ಲದೆ ಇನ್ನೊಂದು ಬೋರ್ಡು ಕಣ್ಣಿಗೆ ಬಿದ್ದರೆ , ಆಕಾಶವೇ ಕಳಚಿ ಬಿದ್ದೀತು. ತಮಿಳು ಬರದವನು ಅಲ್ಲಿ ಶುದ್ದ ಅವಿದ್ಯಾವಂತ.

ಇನ್ನು ಆಂಧ್ರದ ಕತೆ , ಅಲ್ಲಿನ ಒಳನಾಡಿನ ದೊಡ್ಡ ನಗರಗಳಲ್ಲಿ ,ಕಾರ್ಯ ನಿಮಿತ್ತ ಅನೇಕ ಸಾರಿ ವಾರ, ಎರಡುವಾರಗಳ ಕಾಲ ಉಳಿಯಬೇಕಾದ ಅನಿವಾರ್ಯತೆ ಈ ಲೇಖಕನಿಗೆ ಒದಗಿದೆ.ಕನ್ನಡ ನಾಡಿನ ಯಾವುದೇ ಪೂರ್ವದ ಜಿಲ್ಲೆಗಳಲ್ಲಿ , ತೆಲುಗಿನ ಪರಿಚಯ ಸಹಜವಾಗೇ ಇರುತ್ತದೆ. ಕನ್ನಡನಾಡಿನ ತೀರಾ ಒಳನಾಡಿನಲ್ಲೂ ತೆಲುಗಿನ ಪರಿಚಯ ಉಂಟು.ಆದರೆ ಆಂಧ್ರದ ಗಡಿ ಪ್ರವೇಶಿಸಿದರೆ ತೀರಿತು, ಕನ್ನಡ ಮಂಗಳ ಮಾಯ.

ವಿಜಯವಾಡ, ಗುಂಟೂರುಗಳ ನಡುವೆ , ಒಂದು ವಿಶ್ವವಿದ್ಯಾಲದ ಕ್ಯಾಂಪಸ್ ಇದೆ,ಎರಡು ನಗರಗಳ ನಡುವೆ ಎಡೆಬಿಡದೆ ಬಸ್ ಸಂಚಾರವಿರುತ್ತದೆ.ಅಲ್ಲಿ ಅನೇಕ ಬಾರಿ ತಿರುಗಾಡಿರುವ ನನಗೆ ವಿಚಿತ್ರ ಅನುಭವಗಳಾಗಿವೆ.ನಾನು ಕನ್ನಡದ ’ಮಯೂರ’ ಮಾಸಪತ್ರಿಕೆಯನ್ನು ಕೈಯ್ಯಲ್ಲಿ ಹಿಡಿದಿದ್ದರೆ,ಕ್ಯಾಂಪಸ್ ಗೆ ಹೋಗುವ ವಿದ್ಯಾರ್ಥಿಗಳು" ಏ ಲಿಪಿ ಇದಿ, ತೆಲುಗುಲಾಂಟಿ ಉನ್ನದಿ,, ಎಂದು ನನಗೆ ದಿಗ್ಭ್ರಮೆ ಹಿಡಿಸಿದ್ದಾರೆ.ಕನ್ನಡ ನಾಡಿನ ಒಬ್ಬ ಅನಕ್ಷರಸ್ಥನ ಕೈಗೆ ಎರಡೂ ಭಾಷೆಯ ಪುಸ್ತಕಗಳನ್ನು ಕೊಟ್ಟರೆ ಇದು ಕನ್ನಡ ಲಿಪಿ , ಇದು ತೆಲುಗು ಲಿಪಿ ಎಂದು ಧಾರಾಳವಾಗಿ ಗುರುತಿಸುತ್ತಾನೆ . ಅಂಥದರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಅವರಿಗೆ , ಪಕ್ಕದ ರಾಜ್ಯದ,ಎರಡು ಭಾಷೆಗಳಿಗೂ ಒಂದೇ ಮೂಲದಿಂದ ಉದಯಿಸಿದ ಲಿಪಿಯೊಂದು, ಕನ್ನಡದ್ದು ಎಂಬುದೂ ತಿಳಿಯಲಾರದಷ್ಟು ಅಜ್ಞತೆಯೇ?ಅಥವಾ ಅಸಡ್ಡೆಯೇ?ಈಗಲೂ ನನಗೆ ಅರ್ಥವಾಗಿಲ್ಲ.

ಕನ್ನಡ ನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಲು ನಡೆದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಯಾವುದೂ ಯಶಸ್ವಿಯಾಗಲಿಲ್ಲ.’ಕರ್ನಾಟಕ ಪಕ್ಷ’ ’ಕನ್ನಡ ಪಕ್ಷ’ ಉಹೂ, ಯಾವ ಹೆಸರೂ ಜನರನ್ನು ಮಂತ್ರಮುಗ್ಧಗೊಳಿಸಲಿಲ್ಲ.ನೆರೆಯ ತಮಿಳು ನಾಡು ಆಂಧ್ರಗಳಲ್ಲಿ ಸಿನಮಾಗಳ ಜನರೇ ಆರಾಧ್ಯ ದೈವಗಳಾದರು, ರಾಜಕೀಯ ಧುರೀಣರೂ ಆದರು, ಅಧಿಕಾರವನ್ನೂ ನಡೆಸಿದರು. ಆದರೆ ಕರ್ನಾಟಕ ಜಪ್ಪಯ್ಯಾ ಅಂದಿದ್ದರೆ ಕೇಳಿ. (ಮುಂದುವರಿಯುವುದು)

  • ಚಿಂತನೆ
Ornamental seperator
  • csomsekraiah ರವರ ಬ್ಲಾಗ್
  • Login or register to post comments
  • 199 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಕರ್ನಾಟಕ ಅಥವಾ ಕನ್ನಡತನ (೨)
  • ಕನ್ನಡ ತಮಿಳು ಕವಲುಗಳು ಹೀಗಾದವು!
  • ಕನ್ನಡದ ಚರ್ಚೆ
  • ಕನ್ನಡ-ತೆಲುಗು ಒಂದೇ ಲಿಪಿ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator