Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › csomsekraiah ರವರ ಬ್ಲಾಗ್

ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ

December 29, 2007 - 9:53am — csomsekraiah

ಪಾಕಿಸ್ತಾನದ ಜನ ನಾಯಕಿ ಹತ್ಯೆಗೀಡಾಗಿದ್ದಾರೆ . ಇದು ಧರ್ಮಾಂಧರ ಕೃತ್ಯವೋ? ರಾಜಕೀಯ ಹತ್ಯೆಯೋ? ಗೊಂದಲಗಳು , ಸಂಶಯಗಳು ಹುತ್ತಗಟ್ಟುತ್ತಿವೆ. ಕಾರಣ ಆ ರಾಷ್ಟ್ರದಲ್ಲಿ ಧರ್ಮ, ಸೈನ್ಯ, ರಾಜಕೀಯ ಎಲ್ಲವೂ ಅಪವಿತ್ರವಾಗಿ ಬೆರಕೆಯಾಗಿರುವುದು . ಇದು ಆ ರಾಷ್ಟ್ರದಂತೆಯೇ ಆಧುನಿಕ ಜಗತ್ತಿನ ಭಯಾನಕ ಪಿಡುಗೂ ಹೌದು .

ಮನುಷ್ಯನ ವಿಚಾರಶೀಲತೆಯನ್ನು ; ಜಾಗೃತಿಯನ್ನು ,ವ್ಯಕ್ತಿಗಳ ಕೊಲೆಗಳಿಂದ ಹತ್ತಿಕ್ಕಬಹುದೆಂಬ ಬುದ್ದಿಗೇಡಿ, ಅವಿವೇಕಿಗಳ ಕೃತ್ಯಕ್ಕೆ ಇನ್ನೊಂದು ಬಲಿ ನಡೆದು ಹೋಗಿದೆ .ಇದು ಇಂದು ನಿನ್ನೆಯದಲ್ಲ , ಮಾನವ ಕುಲ ನಿರಂತರವಾಗಿ ಎದುರಿಸುತ್ತಲೇ ಬಂದಿರುವ ದುರಂತ. ತಮ್ಮ ವಿಚಾರಗಳಿಗಾಗಿ ಪ್ರಾಣ ತೆತ್ತವರು ಎಷ್ಟೊಂದು ಜನ ! ಕೊಂದ ಕೊಲೆಪಾತಕಿಗಳಿಗೆ , ಕಿಂಚಿತ್ತು ವಿಚಾರದ ಬೆಳಕು ಅವರ ಹೃದಯಗಳಲ್ಲಿದ್ದರೆ ;ತಮ್ಮ ಪಾತಕಮಯ ಹಸ್ತಗಳನ್ನು ಒಮ್ಮೆ ನೋಡಿಕೊಳ್ಳಲಿ , ಅಲ್ಲಿ ಅಂಟಿರುವ ಘೋರ ಪಾಪಮಯ ಕಾಲುಷ್ಯ; ಮಾನವತೆಗೆ ಅವರು ಮಾಡಿರುವ ಪರಮ ಅಪಚಾರ ಅಂತಹವರ ಅರಿವಿಗೆ ಬಂದೀತು .

ಒಂದು ಜೀವದ ಬಲಿಯಲ್ಲಿ ಆ ಜೀವದ ವಿಚಾರಗಳ ಅಂತ್ಯವಾಗುವುದಿಲ್ಲ ;ಇನ್ನೂ ಅತ್ಯಂತ ಪ್ರಜ್ವಲವಾಗಿ ಬೆಳಗುತ್ತವೆ . ಈ ವಿಷಯ ಅಂಧಕಾಸುರರಿಗೆ ಅರ್ಥವಾಗುವುದು ಕಷ್ಟ .

ಬೆನಜೀರ್ ಪ್ರಧಾನ ಮಂತ್ರಿಯಾಗಿದ್ದಾಗ ,ನೆರೆದೇಶಗಳೊಡನೆ ಬಾಂಧ್ಯವ್ಯಗಳನ್ನು ಇನ್ನೂ ಘಟ್ಟಿಗೊಳಿಸಬಹುದಾಗಿತ್ತು . ಕಾಶ್ಮೀರದ ಭಯೋತ್ಪಾದಕರ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿತ್ತು , ಅವರ ಮಿತಿಗಳಲ್ಲಿ ಇವೆಲ್ಲ ಸಾಧ್ಯವಾಗಲಿಲ್ಲ . ಆದರೆ ಇತ್ತೀಚೆಗಿನ ಬೆನಜೀರ್ ತುಂಬಾ ಮಾಗಿದ ವ್ಯಕ್ತಿತ್ವದವರಾಗಿದ್ದರು . ಪ್ರಖರ ಆಲೋಚನೆಗಳಿಂದ, ವೈಚಾರಿಕವಾಗಿ ಪ್ರಬುದ್ದರಾಗಿದ್ದರು .ರಾಜಕಾರಣದಲ್ಲಿ ಸೈನ್ಯ ಮತ್ತು ಧರ್ಮಗಳ ಹಸ್ತಕ್ಷೇಪಗಳನ್ನು ನಿರ್ದಾಕ್ಷಿಣ್ಯವಾಗಿ ಕಟು ಮಾತುಗಳಿಂದ ವಿರೋಧಿಸುತ್ತಿದ್ದರು. ಪ್ರಜಾಪ್ರಭುತ್ವ ಮಾತ್ರ ಒಂದು ರಾಷ್ಟ್ರವನ್ನು ; ಒಂದು ಜನಜೀವನವನ್ನು ಉನ್ನತಗೊಳಿಸಬಲ್ಲುದು ಎಂಬ ನಂಬಿಕೆಯನ್ನು ಧೃಢವಾಗಿ ಪ್ರತಿಪಾದಿಸುತ್ತಿದ್ದರು . ಅವರ ಇಂತಹ ನಡೆಯಿಂದ ತಮ್ಮ ರಾಷ್ಟ್ರದಲ್ಲಿ ತಮ್ಮ ಜೀವಕ್ಕೆ ಅಪಾಯವಿರುವುದು ಅವರಿಗೆ ತಿಳಿದೇ ಇತ್ತು .ಅದಕ್ಕೆ ಎದೆಯೊಡ್ಡಿಯೇ ಅವರು ಪಾಕಿಸ್ತಾನಕ್ಕೆ ಮರಳಿದ್ದರು .

ಜನ ಜೀವನದಲ್ಲಿ ಸೈನ್ಯ ಬ್ಯಾರಕ್ಕಿನಲ್ಲಿ , ಧರ್ಮ ತನ್ನ ಜಾಗದಲ್ಲಿ ಇದ್ದಾಗ ಮಾತ್ರ ಯಾವುದೇ ರಾಷ್ಟ್ರ ಸ್ವಾಭಿಮಾನದಿಂದ ತಲೆಯೆತ್ತಿ ಉನ್ನತಿಯನ್ನು ಸಾಧಿಸಬಲ್ಲದು , ಇಲ್ಲದೆ ಹೋದರೆ ಅಂತಹ ರಾಷ್ಟ್ರಗಳು ತಲುಪಬಹುದಾದ ಗತಿಗೆ ಪಾಕಿಸ್ತಾನ ಒಂದು ಜ್ವಲಂತ ಉದಾಹರಣೆ .ಇದು ಭಾರತಕ್ಕೂ ಪಾಠ .

ಬೆನೆಜೀರ್ ಹುತಾತ್ಮರಾಗಿರುವುದು, ಮನುಷ್ಯ ಕುಲ ತನ್ನ ರೀತಿ ನೀತಿಗಳನ್ನು ಪುನರ್ವಿಮರ್ಶಿಸಿಕೊಳುವ; ಆತ್ಮಾವಲೋಕನ ಮಾಡಿಕೊಳುವ ; ತನ್ನ ಕರುಣೆಯ ದಾರಿಯನ್ನು ಖಚಿತಪಡಿಸಿಕೊಳ್ಳುವ ಸಮಯ. ಆ ಜೀವದ ತ್ಯಾಗ ವ್ಯರ್ಥವಾಗದಿರಲಿ ಮನುಷ್ಯನ ಮನಸ್ಸಿನ ಅಂಧಕಾರಕ್ಕೆ ಬೆಳಕಾಗಲಿ .

  • ಪ್ರಚಲಿತ ವಿಧ್ಯಮಾನ
Ornamental seperator
  • csomsekraiah ರವರ ಬ್ಲಾಗ್
  • Login or register to post comments
  • 284 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 30, 2007 - 5:29pm — ಗಣೇಶ

ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ

ಗಣೇಶ's picture

ಸೋಮಣ್ಣನವರೆ,
ಸೈನ್ಯ ಬ್ಯಾರಕ್ಕಿನಲ್ಲಿ,ಧರ್ಮ ತನ್ನ ಜಾಗದಲ್ಲಿ ಇದ್ದಾಗ...ಇದು ಭಾರತಕ್ಕೂ ಪಾಠ. ಬೆನಜಿರ್ ಹತ್ಯೆಗೆ ಸಂತಾಪ ಸೂಚಿಸುವ ಜತೆಗೆ ಭಾರತೀಯರಿಗೂ ಎಚ್ಚರಿಸಿದ್ದೀರಿ.
ಸೈನ್ಯವನ್ನು,ಮತಾಂಧರನ್ನು,ಸ್ವಲ್ಪ ಮಟ್ಟಿಗೆ ಅಮೆರಿಕಾವನ್ನೂ ತನ್ನ ಹಿಡಿತದಲ್ಲಿಟ್ಟಿರುವ ಮುಷರಫ್ ಕೆಳಗಿಳಿಯದೇ ಪಾಕ್ ಉದ್ಧಾರವಾಗದು.ಆದರೆ ಮುಷರಫ್ರನ್ನು ಕೆಳಗಿಳಿಸುವವ ಅವ್ರಿಗಿಂತಲೂ ಘೋರ ಮತಾಂಧನಾದರೆ?
ಕರ್ನಾಟಕದ ಮಹಾನ್ ರಾಜಕಾರಣಿಗಳಾಗುತ್ತಿದ್ದರೆ, ಮುಷರಫ್ ಸರಕಾರವನ್ನು ೧ ವಾರದಲ್ಲೇ ಉರುಳಿಸುತ್ತಿದ್ದರು. Smiling

  • Login or register to post comments
  • link
  • Email this ಪ್ರತಿಕ್ರಿಯೆ
December 31, 2007 - 4:26pm — csomsekraiah

ಉ: ಬೆನಜೀರ್ ಭುಟ್ಟೊ ನಿಷ್ಕರುಣೆಯ ಕೊಲೆ

csomsekraiah's picture

ಪ್ರೀತಿಯ ಗಣೇಶರಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು . ಜನರನ್ನು ಒಂದು ಸಾರಿ ಪಪ್ಪು ದಾರಿಯಲ್ಲಿ ನಡೆಯಲು ಪ್ರೇರೇಪಿಸಿದರೆ ,ಪುನಃ ಅವರನ್ನು ತಿದ್ದುವುದು ಬಲು ಕಷ್ಟದ ಕೆಲಸ , ಪಾಕಿಸ್ತಾನಕ್ಕೆ ಆಗಿರುವುದು ಇದೇ. ನಮ್ಮ ಭಾರತೀಯ ನಾಯಕರುಗಳು ಸಹ , ಸದ್ಯದ ಲಾಭಕ್ಕಾಗಿ ದೇಶದ ಹಿತವನ್ನು ಕಡೆಗಣಿಸುತ್ತಿರುವುದ ಪರಿಣಾಮವನ್ನು ಭವಿಷ್ಯದ ಜನ ಅನುಭವಿಸಬೇಕಾಗುತ್ತದೇನೋ ಎನ್ನುವುದೇ ಚಿಂತೆ .ಕುದಿಯುವ ಕಡಾಯಿಯಂತಹ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು ನೀವೆಲ್ಲಾ , ಸಾಹಿತ್ಯ , ಒಳ್ಳೆಯ ಚಿಂತಕರ ಸಹವಾಸ ,ಸಂಪದದಂತಹ ವೇದಿಕೆ ಇವುಗಳಿಂದ ಸ್ವಲ್ಪವಾದರೂ ಸಮಾಧಾನವಾಗಿ ಬದುಕಬಹುದು ಎಂಬುದೇ ಸಮಾಧಾನದ ವಿಷಯ .

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭುಟ್ಟೊ ಬಗೆಗೆ ಇನ್ನಷ್ಟು
  • ಆಟ, ಧರ್ಮ ಮತ್ತು ರಾಜಕೀಯ
  • ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)
  • ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
  • ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೨)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator