ಬಿಡಿಸು ನೋಡೋಣ
ಅಲ್ಲಿ ಇಲ್ಲಿ ಬಿದ್ದ ಸಣ್ಣಪುಟ್ಟ ತಂತಿಗಳೂ ಸಹ ವಿದ್ಯುತ್ ಸ್ಪರ್ಶವಾದರೆ , ಛಾರ್ಜ್ ಆಗಿಬಿಡುತ್ತವೆ . ಹಾಗೆಯೇ ನಿತ್ಯದ ಸಾಮಾನ್ಯ ಶಬ್ದಗಳೂ ಸಹ ಅವು ಎಲ್ಲೆಲ್ಲೋ ಚಲ್ಲಾಪಿಲ್ಲಿಯಾಗಿ ಬಿದ್ದಿರಲಿ, ಕವಿಯ ಮಾಂತ್ರಿಕ ಸ್ಪರ್ಶಕ್ಕೆ ಸಿಕ್ಕಿದರೆ ಎಷ್ಟೊಂದು ಪ್ರಬಲ ಸಂವೇದನೆಗಳಾಗಿಬಿಡುತ್ತವೆ .
ಜನವರಿ ೦೮ರ ಮಯೂರದಲ್ಲಿ ಆರ್ . ತಾರಿಣಿ ಶುಭದಾಯಿನಿಯವರ ’ಬಿಡಿಸುನೋಡೋಣ’ ಕವನ , ನೋಡೋಣ ಬಿಡಿಸು? ಎನ್ನುವ ರೀತಿಯಲ್ಲಿಯೇ ಇದೆ .
ಕವನದಲ್ಲಿ ಒಂದು ಛಾಲೆಂಜ್ ಇದೆ ; ಬಿಡಿಸಲು ಸಾಧ್ಯವೇ? ಎಂಬ ಪ್ರಶ್ನೆಯೂ ಇದೆ ; ಬಿಡಿಸಲು ಸಾಧ್ಯವಿಲ್ಲ , ಎಂಬ ಉತ್ತರವೂ ಇದೆ .
ಮೊದಲು ಕಂದನ ಮೊಲೆ ಬಿಡಿಸುವ ಕಷ್ಟವನ್ನುಬೇವಿನ ಸೊಪ್ಪು , ಹಾಗಲರಸ ಎಲ್ಲ ಬಳಿದು ತಾನು ಸಾಕ್ಷಾತ್ ಪೂತನಿ ಎಂದು ನಂಬಿಸಿದರೂ ;ಬೆಳೆದ ಕೃಷ್ಣನ ಬೆರಳು ಚೀಪುವ ಕೊಳಲು ಚೀಪುವ ಪ್ರವೃತ್ತಿಯನ್ನು ಬಿಡಿಸಲು ಸಾಧ್ಯವಿಲ್ಲ ಎನ್ನುತ್ತಲೇ ಕವನದ ಆಶಯದ ಪರಿಧಿಗೆ ಎಳೆದುಕೊಳ್ಳುತ್ತಾ , ಅದನ್ನೇ ವಿಸ್ತರಿಸಿ ಬರೆಯುವುದನ್ನು ಬಿಡಿಸಲು ಬರೆ ಎಳೆದರೂ ಅಷ್ಟೇ , ದೊಣ್ಣೆಯಲ್ಲಿ ಗಣ್ಣಿಗೆ ಹೊಡೆದರೂ ಅಷ್ಟೆ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಸಾಧ್ಯವೇ ? ಎನ್ನುತ್ತಲೇ ಕೇವಲ ಮುವ್ವತ್ತು ಸಾಮಾನ್ಯ ಶಬ್ದಗಳನ್ನು ಬಳಸುತ್ತಾ ಒಳ್ಳೆಯ ಚಿಂತನೆಗೆಳಸುವ ಕವನ ಕಟ್ಟಿ ಕೊಡುತ್ತಾರೆ ಒಮ್ಮೆ ಓದಿ ನೋಡಿ

- csomsekraiah ರವರ ಬ್ಲಾಗ್
- Login or register to post comments
- 234 hits
- Email this blog





RSS: