ನಾಗಸಂಪದ
ಸಾರ್ವತ್ರಿಕ
'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
June 18, 2007 - 11:39am — D.S.NAGABHUSHANA

- D.S.NAGABHUSHANA ರವರ ಬ್ಲಾಗ್
- Login or register to post comments
- 1234 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಪ್ರತಿಕ್ರಿಯೆಗಳು
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಭೈರಪ್ಪ, ಚಂಪಾ, ಎಲ್.ಎಸ್.ಎಸ್, ವಿಜಯ ಕರ್ನಾಟಕ, ಸಂಘ ಪರಿವಾರ, ಚಿದಾನಂದಮೂರ್ತಿ, ಬದ್ಧ ಓದುಗ ವರ್ಗ, ಇಸ್ಲಾಂ ಮೂಲಭೂತವಾದಿ, ಸಂಘ ಪರಿವಾರದ ಶಾಖೆಗಳ ಸಹಕಾರ, ಸಾಂಸ್ಕೃತಿಕ ರಾಜಕೀಯ ಮತ್ತು..ಮತ್ತು...ಮತ್ತು.... ಅಬ್ಬಬ್ಬಾ ..ಇಷ್ಟೇ ಸಾಕಾ ಅಥವಾ ಇನ್ನೂ ಬೇಕಾ? ಒಂದೆ ಕಲ್ಲಿನಿಂದ ತಾವು ಎಷ್ಟೊಂದು ಹಕ್ಕಿಗಳನ್ನು ಹೊಡೆಯಬೇಕಂತಿದ್ದೀರಿ?
ಯಾಕೋ ನೀವು ಏನು ಹೇಳಬೇಕಂತಿದ್ದಿರೋ ಅದನ್ನ ಸ್ವಲ್ಪ ಚುಟುಕಾಗಿ ಹೇಳಿದ್ರೆ ಓದುಗರಿಗೆ confuse ಅಗ್ತೀರಲಿಲ್ಲ ಅನ್ಸುತ್ತೆ.
quote ಹಿಂದೂಗಳಲ್ಲಿ ವೀರ್ಯವಂತಿಕೆಯನ್ನು ಸಾಧಿಸಲು 'ಅಶ್ವಮೇಧ ಯಾಗ'ವೊಂದು ಜರೂರಾಗಿ ನಡೆಯಬೇಕಿದೆ. ಅದರ ಪೂರ್ವ ಸಿದ್ಧತೆಗಳಾಗಿ ಈ 'ಸಾರ್ಥ' ಈ 'ಆವರಣ' ಇತ್ಯಾದಿ ವೀರ್ಯಪ್ರಚೋದಕಗಳು! quote
ಸ್ವಾಮಿ, ತಮಗೆ ಆವರಣದ ಮೇಲೆ ಮತ್ತು ಭೈರಪ್ಪನವರ ಮೇಲೆ ಅಗಾಧವಾದ ಸಿಟ್ಟಿದೆ ಅಂದು ಒಪ್ಪಿದೆ. ಅದು ಲೇಖನದಲ್ಲಿ ಪ್ರತಿ ಸಾಲಿನಲ್ಲಿ ವ್ಯಕ್ತವಾಗಿದೆ. ಆದರೆ ತಾವು ಉಪಯೋಗಿಸಿದ ಭಾಷೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಅನ್ನಿಸೋದಿಲ್ವಾ?
ಕೆಲವು ದಿನಗಳ ಹಿಂದೆ, ಸಂಪದದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಬಗ್ಗೆ ಚರ್ಚಿಸಿದ್ದೆವು. ಈ ಲೇಖನ ಟ್ಯಾಬ್ಲಾಯ್ಡಗಳಿಗೆ ಹೇಳಿ ಬರೆಸಿದಂತಿದೆ ಎಂದು ನನ್ನ ಅಭಿಪ್ರಾಯ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ತಾವು ತಪ್ಪು ತಿಳಿಯುವದಿಲ್ಲವೆಂದರೆ ಇನ್ನೊಂದು ಮಾತು(ಸಲಹೆ?).
ಈ ಲೇಖನ ’ಹಾಯ್’ ಅಥವಾ ’ಅಗ್ನಿ’ಗೆ ಅತ್ಯಂತ ಸೂಕ್ತವಿದೆ. ಅಲ್ಲಿ ಪ್ರಕಟವಾಗಿಲ್ಲವಾದರೆ, ಕಳುಹಿಸಿ ನೋಡಿ.
ಅದೇ ’ಲಂಕೇಶ್’ಕ್ಕೆ ಭಾಷೆ ಇನ್ನೂ ಸ್ವಲ್ಪ ಖಾರವಾಗಿ, ತಾರಕ ಸ್ವರದಲ್ಲಿರಬೇಕು ಅನ್ಸುತ್ತೆ.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಸತ್ಯ ಯಾವಾಗಲು ಕಹಿಯಾಗಿರುತ್ತ೦ತೆ. ಇಷ್ಟೇ ಸಾಕು ಈ ಬರಹಕ್ಕೆ ಪ್ರತಿಕ್ರಿಯೆ.
ಇವತ್ತು ಸತ್ಯವನ್ನ ಹೇಳಿದ್ದಕ್ಕೆ ನಮ್ಮ ರಾಷ್ಟ್ರಪತಿ ಸ್ಥಾನದ ಆಕಾ೦ಕ್ಷಿ ಪ್ರತಿಬಾ ಪಾಟೀಲರ ಗತಿಯೂ ಬೈರಪ್ಪನವರ ಸ್ಥಿತಿಯ೦ತಾಗಿದೆ. ಈ ವಾರ್ತೆ ಲೇಖನಕ್ಕೆ ಈ ಕೊ೦ಡಿಯಲ್ಲಿ ಓದಿ ನೋಡಿ.
http://www.ibnlive.com/news/india/06_2007/patil-veiled-under-a-controver...
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಸ್ವಾಮಿ ನಾಗಭೂಷಣರೇ,
ನಮ್ಮಲ್ಲಿ ಕೆಲವರು ನೀವು ಹೇಳಿದ೦ತೆ ಪತ್ರಿಕೆಯ ಆಶಯವನ್ನೇ ನಿಜವೆ೦ದು ಭಾವಿಸಬಹುದು....ಆದರೆ ಸ೦ಪದದ ಮ೦ದಿಯ೦ತೂ ಹಾಗಲ್ಲ....ಅನ೦ತಮೂರ್ತಿಯವರ ಋಜುವಾತನ್ನೇ ಓದಿದ್ದೇವೆ...ಆ ಭಾಷಣದ record ನ್ನೇ ಕೇಳಿದ್ದೇವೆ...ಇಲ್ಲಿ ಯಾರೊಬ್ಬರ ಹಸ್ತಕ್ಷೇಪವೂ ಇಲ್ಲ....ಆದರೂ ನಿಮಗೆ ಅನ೦ತಮೂರ್ತಿಯವರು ಆಡಿದ ಮಾತಿನಬಗ್ಗೆ , ನ೦ತರ ನಡೆದ ವಿದ್ಯಮಾನದ ಬಗ್ಗೆ ಇರುವ ಅನಿಸಿಕೆಯನ್ನು ನೋಡಿದರೆ, ನೀವೇ ಒಮ್ಮೆ ಅವರ ಋಜುವಾತನ್ನೋ ಅಥವಾ ಧ್ವನಿಮುದ್ರಿಕೆಯನ್ನೋ ಕೇಳುವುದೊಳಿತು...
with proof ಮಾತಾಡಿ ಸುಖಾ ಸುಮ್ಮನೆ ಎನೇನೋ ಹರಟಬೇಡಿ....ಮತ್ತು ಭೈರಪ್ಪನವರನ್ನು ಸೋಲಿಸಲೇಬೇಕೆ೦ದು ಇಷ್ಟೊ೦ದು ತಿಣುಕಬೇಡಿ.
-- ಶ್ರೀಶ ಕಾರಂತ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
<ಭಾರತದಲ್ಲಿ ಇಂದು ಇಸ್ಲಾಂ ಮೂಲಭೂತವಾದಿ ಅಥವಾ ಕೋಮುವಾದಿಯಾಗಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಕಣ್ಣೆದುರೇ ಕಾಣುವ ಘಟನೆ ಅಥವಾ ಬೆಳವಣಿಗೆಗಳಿಗೆ ಸಾಕ್ಷಿ ಯಾಕೆ ಬೇಕು? ಆದರೆ, ಇದನ್ನೆದುರಿಸುವುದು ನಾವೂ ಹಾಗೇ ಆಗುವುದರಿಂದಲ್ಲ. ಹಾಗಾದಾಗ ಎರಡೂ ಕಡೆ ಎಲ್ಲ ವಿವೇಕವೂ ಕಳೆದು ಹೋಗಿ ಮೃಗ ರಾಜ್ಯವೊಂದು ಸೃಷ್ಟಿಯಾಗುತ್ತದಷ್ಟೆ. 'ಆವರಣ'ದ ಬರವಣಿಗೆಯ ಹಿಂದಿನ ಕಹಿ ಮತ್ತು ಶೈಲಿ ನೋಡಿದರೆ. ಭೈರಪ್ಪನವರು ಇದನ್ನೇ ಬಯಸಿದಂತೆ ಕಾಣುತ್ತದೆ>
ನಿಮ್ಮರ್ಥದಲ್ಲಿ ಹಾಗಾದರೆ ಏನಾಗಬೇಕು.
ನಾವು ಏನುಮಾಡಬೇಕು. ಭೈರಪ್ಪನವರ ಕಾದ೦ಬರಿ ಇಷ್ಟು ಖರ್ಚಾದರೂ ನೀವೆ೦ದುಕೊ೦ಡ೦ತೆ ಅವರ ಆಶಯ ಈಡೇರಿಲ್ಲವಲ್ಲಾ..ಅದಕ್ಕೆ ನಿಮ್ಮ ಉತ್ತರವೇನು...ನಾವು ಏನೂ ಮಾಡದೇ ಕಾಶ್ಮಿರದಲ್ಲಿ ಸೃಷ್ಟಿಯಾಗಿರುವುದು ಯಾವ ಮನುಷ್ಯ ರಾಜ್ಯ?
<ಈ ತೀಟೆ ತೀರಿಸಿಕೊಳ್ಳವ ಆತುರದಲ್ಲಿ ಅವರನ್ನು ಕಾಡದೇ ಹೋಗಿರುವ ಒಂದು ಪ್ರಶ್ನೆ ಎಂದರೆ, ಹಿಂದೂಗಳಲ್ಲೇ ಏಕೆ ತಾವು ಯೋಚಿಸುವ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಒಂದು ದೊಡ್ಡ ಜನಸ್ತೋಮವೇ ಇದೆ ಎಂಬುದು.>
ಇದೇ ನಮ್ಮ ದೇಶದ ದೊಡ್ಡ ದುರ೦ತ ಎ೦ದು ನಿಮಗೇಕೆ ಅನ್ನಿಸುವುದಿಲ್ಲ...
<ಆದರೆ ಅವರಿಗೆ ಅನಂತಮೂರ್ತಿಯವರ ಹೇಳಿಕೆ, 'ಆವರಣ'ವೆಂಬ ತಮ್ಮ ಈ 'ಸಾಂಸ್ಕೃತಿಕ ಯೋಜನೆ'ಯ ವಿಶ್ವಾಸಾರ್ಹತೆಯನ್ನೇ ಭಂಗಗೊಳಿಸುವ ಪ್ರಯತ್ನವಾಗಿ ಕಂಡಿದೆ. ಹಾಗಾಗಿಯೇ ಈ ವ್ಯವಸ್ಥಿತ ದಾಳಿ.>
ವಿ.ಕ ದವರು ಮಾಡಿದ್ದು biased ಆಗಿಯೇ ಎ೦ಬುದನ್ನು ಒಪ್ಪುತ್ತೇನೆ. ಆದರೆ ಅಲ್ಲಿ ತಪ್ಪಿರಲಿಲ್ಲ. URA ಮಾನ ಹೋಯಿತು ಎ೦ದಮಾತ್ರಕ್ಕೆ ನಾವು ಸುಮ್ಮನೆ ಪತ್ರಿಕೆಯವರನ್ನು ಜರೆಯುವುದು ತಪ್ಪು...tv news(ನಿಮ್ಮ URA fan gaLu) ಚಾನಲ್ಲುಗಳು ತೋರಿಸುವಷ್ಟು ಸುಳ್ಳು ಸುಳ್ಳು ವಿಚಾರಗಳನ್ನೇನೂ ಇವರು ತೋರಿಸಿಲ್ಲವಲ್ಲ....ಅಲ್ಲಿರುವುದು ಸತ್ಯ...ಆದರೆ ನಿಮ್ಮ ವಿರುದ್ಧವಾಗಿರುವ ಸತ್ಯವೆ೦ಬುದೊ೦ದೇ ನಿಮಗೆ ತಲೆಬಿಸಿಯು೦ಟುಮಾಡಿರುವದನ್ನು ಕ೦ಡು ನಿಮಗೆ ದಿಗಿಲಾಗಿದೆಯೇ? ಸಹಜ ಬಿಡಿ....
<ಈ ಕಾದಂಬರಿಯಲ್ಲಿ ವರ್ತಮಾನಕ್ಕೆ ಸಂಬಂಧಿಸಿದಂತೆ ಬರುವ ಎಲ್ಲ ಶೀಲಗೆಟ್ಟ ಪಾತ್ರಗಳೂ ಬುದ್ಧಿಜೀವಿಗಳು, ಚಿಂತಕರು ಹಾಗೂ ವಿಚಾರವಾದಿಗಳೇ ಆಗಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.>
ಪರವಾಗಿಲ್ಲ ಸರಿಯಾಗಿ ಗುರುತಿಸುವ ಕಲೆ ನಿಮಗಿದೆ...ನೋಡಿ ನಮಗೆ ಹೀಗೆ ಹುಡುಕುವ, ವಿ೦ಘಡಿಸುವ ಬುದ್ಧಿಯೇ ಬರಲಿಲ್ಲ....ಬಹುಶ: ಇದಕ್ಕೇ ಏನೊ "ಕಳ್ಳನ ಮನಸ್ಸು ...." ಅನ್ನುವದು....
-- ಶ್ರೀಶ ಕಾರಂತ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಶ್ರೀಶ,
ನೀವು ಗುರುತಿಸಿರುವ ಕೊನೆಯ ಅಂಶವೇ, ಬಹುಶಃ ಅನೇಕರ ಹೊಟ್ಟೆಯುರಿಗೆ ಕಾರಣವಾಗಿರಬಹುದು. ಇನ್ನೊಂದು ಗಾದೆ ಮಾತು - "ಕುಂಬಳಕಾಯಿ ಕಳ್ಲ ಅಂದ್ರೆ ಹೆಗಲು ಮುಟ್ಟಿಕೊಂಡ್ರಂತೆ". ’ಆವರಣ’ ವಸ್ತುವನ್ನು ಐತಿಹಾಸಿಕ ದೃಷ್ಟಿಯಿಂದ ಪ್ರಶ್ನಿಸಲಿ, ಯಾರಿಗೂ ಬೇಜಾರಿಲ್ಲ. ಆದರೆ ಭೈರಪ್ಪನವರ ವೈಯಕ್ತಿಕ ನಿಂದನೆ ಮಾಡುವದು ಕೆಟ್ಟದಲ್ಲವೇ ನಾಗಭೂಷಣರೆ?
ದಯವಿಟ್ಟು ತಮ್ಮ ಲೇಖನವನ್ನು ತಾವೇ ಇನ್ನೊಮ್ಮೆ ಓದಿ ನೋಡಿ.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಬಹುಶಃ ಆವರಣ ಕುರಿತಂತೆ ಆರೋಗ್ಯಪೂರ್ಣ ಚರ್ಚೆ ಇನ್ನುಮುಂದೆ ಅಸಾಧ್ಯವೇನೋ ಎನಿಸುತ್ತಿದೆ. ಅನಂತಮೂರ್ತಿ ಅವರಾಗಲಿ, ಡಿ.ಎಸ್. ನಾಗಭೂಷಣ ಅವರಾಗಲಿ ನೇರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವ ಮುಖರಹಿತರ ಮಾತುಗಳನ್ನು, ನಂಜಿನ ಪ್ರತಿಕ್ರಿಯೆಗಳನ್ನು ಹೇಗೆ ಸ್ವೀಕರಿಸಬೇಕೋ ತಿಳಿಯುತ್ತಿಲ್ಲ.
ಭೈರಪ್ಪನವರ ಕಸುಬುದಾರಿಕೆಯನ್ನು ಮೆಚ್ಚುವವರು, ಅನಂತಮೂರ್ತಿಯವರ ಕಥೆಗಾರಿಕೆಯನ್ನು ಇಷ್ಟಪಡುವವರು ಒಬ್ಬರಲ್ಲೇ ಇರಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.
ಒಂದೊಂದೆ ಪದ-ವಾಕ್ಯ ಹಿಡಿದು ಜಗ್ಗಾಡಿ, ಅದಕ್ಕೆ ಪೂರಕವಾಗಿರುವ ಅಕ್ಕಪಕ್ಕದ ವಾಕ್ಯಗಳನ್ನು ಬಿಟ್ಟು ಟೀಕಿಸುವ ಮಾದರಿ ಯಾರಿಗೆ ಸರಿ?
ಸ್ವತಃ ಅನಂತಮೂರ್ತಿ ಅವರೇ ಗೃಹಭಂಗ ಕಾದಂಬರಿ ಮೆಚ್ಚಿದ್ದರು. ಸಾರ್ಥ, ಅವರಣವನ್ನು ಟೀಕಿಸಿದ್ದರು. ಭೈರಪ್ಪ ಅವರನ್ನು ಸಿದ್ಧಾಂತಗಳನ್ನು ಇಷ್ಟಪಡದ ಎಷ್ಟೋ ಜನರಿಗೆ ಈ ಟೀವಿಯಲ್ಲಿ ಬಂದ ಗೃಹಭಂಗ ಧಾರವಾಹಿ ಇಷ್ಟವಾಗದೆ ಉಳಿಯಲಿಲ್ಲ.
ಅನಂತಮೂರ್ತಿ ಅವರ ಬರಹಕ್ಕೂ ಸಾವಿರ ಟೀಕೆಗಳು ಬಂದಿವೆ. ಆದರೆ ಅವರ ಸೂರ್ಯನ ಕುದುರೆ ಕಥೆಯನ್ನು ಇಷ್ಟಪಡದವರು ಯಾರಾದರೂ ಇದ್ದರೆ ಹೇಳಿ?
ಇಂಥ ಸೂಕ್ಷ್ಮತೆಗಳು ಅರಿವಿಗೆ ಬರಬೇಕು. ಇಲ್ಲದಿದ್ದರೆ ಬದುಕು ದ್ವೇಷದ ಗೂಡಾಗುತ್ತದೆ.
ನಮ್ಮ ಅಭಿಪ್ರಾಯಗಳು ಏನೇ ಇರಲಿ. ಬೇರೆಯವರ ಅಭಿಪ್ರಾಯವನ್ನು ಗೌರವಿಸುವ ಸೌಜನ್ಯ ಈಗ ಹೊರಟುಹೋಗಿದೆ.
ಸಂಪದ ಬಳಗದ ಸದಸ್ಯರಲ್ಲಿ ಒಂದು ಮನವಿ......
ಇನ್ನು ಮುಂದೆ ಸಂಪದದಲ್ಲಿ ಆವರಣದ ಬಗ್ಗೆ ಬರಹಗಳು ಬಾರದಿರಲಿ. ನಂಜಿನ ಪ್ರತಿಕ್ರಿಯೆ ವ್ಯಕ್ತಪಡಿಸುವವರಿಗೆ ಮತ್ತೊಂದು ಅವಕಾಶ ದೊರೆಯದಿರಲಿ.
ಹೊನ್ನಾಳಿ ಚಂದ್ರಶೇಖರ್
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
"ಇನ್ನು ಮುಂದೆ ಸಂಪದದಲ್ಲಿ ಆವರಣದ ಬಗ್ಗೆ ಬರಹಗಳು ಬಾರದಿರಲಿ. ನಂಜಿನ ಪ್ರತಿಕ್ರಿಯೆ ವ್ಯಕ್ತಪಡಿಸುವವರಿಗೆ ಮತ್ತೊಂದು ಅವಕಾಶ ದೊರೆಯದಿರಲಿ."
ನಂಜಿನ ಪ್ರತಿಕ್ರಿಯೆಗಳು ಬರಬಾರದು ಎಂಬುದು ಎಲ್ಲ ಪ್ರಜ್ಞಾವಂತರು ಒಪ್ಪತಕ್ಕ ವಿಷಯವೇ. ಆದರೆ ಆವರಣದ ಬಗ್ಗೆ ಬರಹಗಳೇ ಬರಬಾರದೆಂದರೆ ? ಇದೊಂದು ಥರ ಅತಿಯಾಯಿತೆನಿಸುತ್ತದೆ. ಅಭಿಪ್ರಾಯ ಮಂಡನೆಗೂ ಯಾಕೀ ’ಸೆನ್ಸಾರ್’?
"ಪ್ರತಿಕ್ರಿಯೆ ನೀಡುವ ಮುಖರಹಿತರ ಮಾತುಗಳನ್ನು, ನಂಜಿನ ಪ್ರತಿಕ್ರಿಯೆಗಳನ್ನು ಹೇಗೆ ಸ್ವೀಕರಿಸಬೇಕೋ ತಿಳಿಯುತ್ತಿಲ್ಲ."
ಸ್ವಾಮಿ ನಾವಾರೂ (ಮೇಲೆ ಪ್ರತಿಕ್ರಿಯಿಸಿರುವವರು) ಮುಖರಹಿತರಲ್ಲ. ಬಹಳ ದಿನಗಳಿಂದ ಸಂಪದ ಬಳಗದಲ್ಲಿದ್ದೇವೆ. ಬಹುಶಃ ತಾವು ಗಮನಿಸಿಲ್ಲವೆನಿಸುತ್ತದೆ. ನನ್ನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ಯಾವುದೇ ಸಂಕೋಚವಿಲ್ಲದೆ ಖಾಸಗಿ ಸಂದೇಶ ಕಳುಹಿಸಬಹುದು. ಇಷ್ಟಾಗಿಯೂ ನಿಮ್ಮ ಅಭಿಪ್ರಾಯವೇ ಸರಿ ಎಂದರೆ ನಾನೇನೂ ಮಾಡಲಾಗುವದಿಲ್ಲ, ನಿಮ್ಮ ಅಭಿಪ್ರಾಯವನ್ನು ಗೌರವಿಸುವೆ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಪ್ರಿಯ ಹೊನ್ನಾಳಿಯವರೇ,
ನ೦ಜಿನ ಲೇಖನ ಬರೆದಿರುವವರು ನಿಮ್ಮ ಸ್ನೇಹಿತಾರಾದ ನಾಗಬೂಷಣರವರು. ಅವರ ಲೇಖನದ ದಾಟಿ,ಪದಗಳ ಬಳಕೆ ಸ೦ಪದದ ಇದುವರೆಗೂ ಯಾವ ಲೇಖನಗಳಲ್ಲೂ ಬ೦ದಿಲ್ಲ. ಮೊದಲು ಇವರು decent ಪದಗಳನ್ನ ಬಳಕೆ ಮಾಡಲಿ.
'ಆವರಣ' ಕಾಗಕ್ಕ-ಗೂಬ್ಬಕ್ಕ ಕಥೆಯಲ್ಲ ಅದು ಒ೦ದು ಸತ್ಯಾನ್ವೇಷಣೆ. ಇ೦ದಿನ ದಿನಗಳಲ್ಲಿ 'ಆವರಣ'ದ೦ತಹ ಕಾದ೦ಬರಿ ಬರೆಯಲು ದಿಲ್ ಇರಬೇಕು ಏಕೆ೦ದರೆ ಈ ರೀತಿ ಮಾತನಾಡುವುದುದರಿ೦ದ ಇಡೀ ವ್ಯವಸ್ಥೆಯಯನ್ನ ಎದುರು ಹಾಕಿಕೊಳ್ಳಬೇಕಾಗುತ್ತದೆ. ಇಡೀ ವ್ಯವಸ್ಥೆಯೇ ಎಡಪ೦ಥೀಯಮಯವಾಗಿದೆ, ಮಾದ್ಯಮಗಳು ಅಷ್ಟೇ.
ಕೆಸರೆರಚುವ ಆಟ ಪ್ರಾರ೦ಬಿಸಿದ್ದೇ ಅನ೦ತಮೂರ್ತಿಯವರು. ನಿಮಗೆ ಕಾದ೦ಬರಿಯಲ್ಲಿ ಬರುವ ಯಾವುದೇ ಘಟನೆ ಅತಿಶಯ/ಅಸತ್ಯದಿ೦ದ ಕೂಡಿದೆ ಎ೦ದರೆ ಸ೦ಶೋದಿಸಿ ನೀವೇಕೆ ಬೈರಪ್ಪನವರನ್ನ ಪ೦ಥಕ್ಕೆ ಆಹ್ವಾನಿಸಬಾರದು? ಅದನ್ನ ಬಿಟ್ಟು ಬೈರಪ್ಪ ಅ೦ತವನು/ಇ೦ತವನು ಅವನು ಕಾದ೦ಬರಿಕಾರನಲ್ಲ, ಅವನಿಗೇ ಬರೆಯಲಿಕ್ಕೇ ಬರುವುದಿಲ್ಲ ಎ೦ದು ತೀರ personnel attack ಮಾಡುವುದೇಕೆ?.
ತಲತಲಾ೦ತರದಿ೦ದ ಸುಳ್ಳು ಮಾಹಿತಿಗಳನ್ನ ನೀಡಿಕೊ೦ಡು, ತಮ್ಮನ್ನಲ್ಲದೇ ಬೇರಾರು ಬಾರತದ ಇತಿಹಾಸದ ಬಗ್ಗೆ ಮಾತನಾಡಕೂಡದು ಎ೦ದು ದರ್ಪದಿ೦ದ ಮೆರೆಯುತ್ತಿದ್ದ ಎಡರ೦ಗದ ಇತಿಹಾಸಕಾರರಿಗೆ ನಿಜವಾಗಿಯೂ 'ಆವರಣ' ಕುಟುಕಿರುವುದು ಸತ್ಯ.
'ಆವರಣ' ದ ಸ೦ಗತಿಗಳು ಸತ್ಯವಾಗಿದ್ದರೂ ಈಗಿನ ಸನ್ನಿವೇಶದಲ್ಲಿ ಇವುಗಳನ್ನು ಮೆಲುಕು ಆಕುವುದರಿ೦ದ ವಿವಿದ ದರ್ಮೀಯರ ನಡುವೆ ದ್ವೇಶ ಬೆಳೆಯುತ್ತದೆ೦ದು 'ಆವರಣ' ವಿರೋದಿಗಳ ವಾದ. ನಾವು ಬಹುಮ೦ದಿ ಹಿ೦ದೂಗಳೂ ಕೂಡ ಇದನ್ನ ಒಪ್ಪುತ್ತೇವೆ. ಸರಿ, ಹಾಗಾದರೆ ನೀವು ಎಡಪ೦ಥೀಯರು ಮತ್ತು ಮಾದ್ಯಮಗಳು ಬಾಬ್ರಿ ಮಸೀದಿ ಒಡೆದು ಆಕಿದ್ದು ಮತ್ತು ಗುಜರಾತ್ ಘಟನೆಗಳ೦ತಹ ಹೇಯ ಕೃತ್ಯಗಳನ್ನ ಕೆದಕಿ ಕೆದಕಿ ಹಿ೦ದು ಮತ್ತು ಆಲ್ಪಸ೦ಖ್ಯಾತರ ನಡುವೆ ಕ೦ದಕವನ್ನ ತೋಡುತ್ತಿರುವಿರೇಕೆ? ಬಾರತದ ಎಲ್ಲ ನಾಗರೀಕರ ಒಳಿತಿಗಾಗಿ ಮತ್ತು ಸಹ ಬಾಳ್ವೆಗಾಗಿ ನಮ್ಮ ಇತಿಹಾಸದ ಕೆಲವು ಘಟನೆಗಳನ್ನ ಮರೆಯಬೇಕು ಎ೦ದು ಆಜ್ನಾಪಿಸುವ ತಾವು, ಗುಜರಾತ್ ನ೦ತಹ ಘಟನೆಗಳನ್ನ ಮನಸಿಗೆ ಬ೦ದ೦ತೆ quote ಮಾಡುವುದೇಕೆ?. ಉತ್ತರಿಸುವಿರಾ ಹೊನ್ನಾಳಿಯವರೇ?
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
"ನಿಮಗೆ ಕಾದ೦ಬರಿಯಲ್ಲಿ ಬರುವ ಯಾವುದೇ ಘಟನೆ ಅತಿಶಯ/ಅಸತ್ಯದಿ೦ದ ಕೂಡಿದೆ ಎ೦ದರೆ ಸ೦ಶೋದಿಸಿ ನೀವೇಕೆ ಬೈರಪ್ಪನವರನ್ನ ಪ೦ಥಕ್ಕೆ ಆಹ್ವಾನಿಸಬಾರದು? "
ಆಶ್ಚರ್ಯವೆಂದರೆ ಇನ್ನೂವರೆಗೂ ಯಾರೂ ಕೊಡ ಆವರಣದ ಐತಿಹಾಸಿಕ ವಸ್ತುವಿನ ಸತ್ಯನಿಷ್ಠತೆಯನ್ನ ಪ್ರಶ್ನಿಸುತ್ತಿಲ್ಲ! ವಿಮರ್ಶೆಯ ಹೆಸರಿನಲ್ಲಿ ಬರೀ ಕುಂಟು ನೆಪಗಳು, ಕಾಗಕ್ಕ ಗುಬ್ಬಕ್ಕ ಕಥೆಗಳು, ಹಳೆಯ ನೆನಪುಗಳು, ಸಾಂಸ್ಕೃತಿಕ ರಾಜಕೀಯ ಇತ್ಯಾದಿ ನಡೆಯುತ್ತಿವೆಯೇ ಹೊರತು, ಯಾರೊಬ್ಬರು "ಭೈರಪ್ಪ ಇಲ್ಲಿ ಈ ರೀತಿ ತಪ್ಪಿದ್ದಾರೆ, ಸುಳ್ಳು ಚಿತ್ರಿಸಿದ್ದಾರೆ" ಎಂದು ಸಾಕ್ಷಿ ಸಮೇತ ವಾದಿಸುತ್ತಿಲ್ಲ. ಹಾಗಿದ್ದರೇ, ವಿಮರ್ಶೆಯ ಹೂರಣ (ಪರಿಭಾಷೆ?) ಏನು?
ಏನೇ ಆಗಲಿ, ಆವರಣದಿಂದಾಗಿ ಕನ್ನಡದ ಪುಸ್ತಕ ಸಂಸ್ಕೃತಿ ಬೆಳೆಯುತ್ತಿದೆ. ನನಗೆ ಗೊತ್ತಿರುವ ಅನೇಕ ಜನ ಮೊದಲ ಬಾರಿಗೆ ಕನ್ನಡ ಪುಸ್ತಕವೊಂದನ್ನ (ಆವರಣ ಎಂದು ಬೇರೆ ಹೇಳಬೇಕೆ?) ಓದಿದ್ದಾರೆ. ಇದೊಂದು ಸಂತಸದ ವಿಷಯವಲ್ಲವೆ?
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ನಿಮ್ಮ ಮಾತು ನೂರಕ್ಕೆನೂರು ಸತ್ಯ."ಆವರಣ"ದಂಥ ಗ್ರಂಥ ರಚಿಸಲು ದಿಲ್ ಅಷ್ಟೇ ಅಲ್ಲ, ಧೈಯ್ರ ಕೂಡ ಬೇಕು.ಅದು ಭೈರಪ್ಪನವರಲ್ಲಿದೆ.
ಆ ಕಾದಂಬರಿ ಉಳಿದೆಲ್ಲ ಜಾಗತಿಕ ಭಾಷೆಗಳಿಗೆ ಮುದ್ರಿತವಾಗಲೆಂದು ಹಾರೈಸುತ್ತೇನೆ. ಮನಸ್ಸಿನಿಂದ secular ಆಗಿರುವ ಪ್ರತಿಯೊಬ್ಬನೂ ಈ ಸತ್ಯವನ್ನು ತಿಳಿದುಕೊಳ್ಳಲು ಆ ಮೂಲಕ ಅನುಕೂಲವಾಗಲಿ.
ಇಲ್ಲಿ ಪ್ರತಿಕ್ರಿಯಿಸಿರುವ ಎಲ್ಲ ಬಂಧುಗಳಿಗೂ ಧನ್ಯವಾದಗಳು..
"ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ" -- ಇದನ್ನು ಅರಿತು ನಡೆಯುವುದು ನಮಗೆಲ್ಲ ಒಳ್ಳೆಯದು....
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಸರಿಯಾಗಿ ಹೇಳಿದಿರಿ. ಬದುಕು ದ್ವೇಷದ ಗೂಡಾಗುವುದೇ ಕೆಲವು agency ಗಳ ಗುರಿ. ಆದರೆ ಅದಕ್ಕೆ self defense ಅನ್ನೋ ಹಣೆಪಟ್ಟಿ.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ನಾಗಭೂಷಣರವರೇ,
"ಆವರಣ " ಕಾದಂಬರಿ ರಾಜಕೀಯ ಕಾರ್ಯಕ್ರಮ ಮಾಡಬಯಸುವವರಿಗೊಂದು ಚಾರ್ಚಾವೇದಿಕೆಯಾಗಿದೆ ಎಂಬುದನ್ನಂತೂ ಸರಿಯಾಗಿಯೆ ಗುರುತಿಸಿದ್ದೀರಿ. ವಸ್ತು ನಿಷ್ಠೆಯುಳ್ಳ ವಿಮರ್ಶೆಗೆ ಬದಲು ವ್ಯಕ್ತಿಗತ ಪರ- ವಿರೋಧ ಪಕ್ಷಗಳ ರಾಜಕೀಯ ಕನ್ನಡ ಸಾರಸ್ವತ ಲೋಕದಲ್ಲಿ ನಡೆಯುತ್ತಿರುವುದನ್ನು ಕಾಣುತ್ತಿರುವುದು ಕನ್ನಡಿಗರ ದುರಾದೃಷ್ಟವೆಂದೇ ಹೇಳಬೇಕು.
ವರದಿಗಾರರು ಯಾರೇ ಇರಲಿ ಸ್ವಾಮಿ, ಜವಾಬ್ದಾರಿಯುತ ಸ್ಥಾನದಲ್ಲಿರುವಂಥವರು ವೇದಿಕೆಯಲ್ಲಿ ಹೇಳಿದುದನ್ನಷ್ಟೇ ಅವರು ವರದಿ ಮಾಡುತ್ತಾರೆ. ತರಬೇತಿ ಇಲ್ಲದ ಹೊಸ ವರದಿಗಾರಂತೂ ಗಣ್ಯಾತಿಗಣ್ಯರೆನಿಸಿಕೊಂಡವರು ವೇದಿಕೆಯಲ್ಲಿ ಹೇಳಿದುದನ್ನು ತಿರುಚಿ ಬರೆಯಲಿಕ್ಕೆ ಖಂಡಿತ ಹೋಗಲಾರರಲ್ಲ.
ಭೈರಪ್ಪನವರು ಬರೆದಿರುವ "ಆವರಣ" ಕಾದಂಬರಿಯೇ ಅಲ್ಲ ಅಂತ ಅನಂತ ಮೂರ್ತಿಯವರಿಗೆ ಅನ್ನಿಸಿದ್ದರೆ, 'ಆವರಣ ಎಂಬದದೊಂದು ಕಾದಂಬರಿಯೇ ಅಲ್ಲ' ಎನ್ನುವುದಕ್ಕೂ ಅವರು ಕಾದಂಬರಿಕಾರರೇ ಅಲ್ಲ ಅಥವಾ ಅವರಿಗೆ ಕಾದಂಬರಿ ಬರೆಯಲ್ಲು ಗೊತ್ತಿಲ್ಲ ಎನ್ನುವುದಕ್ಕೂ ಬಹಳ ಅಂತರವಿದೆ ಎಂಬುದು ನಿಮಗೇಕೇ ಹೊಳೆಯಲಿಲ್ಲವೋ...
-ಎಂದಿದ್ದೀರಿ. ನನಗನ್ನಿಸುತ್ತಿದೆ. ಅನಂತ ಮೂರ್ತಿ, ಬಂಜೆಗೆರೆ ಜೈಪ್ರಕಾಶ್ ಇಂಥವರ ಅಪಾಯಕಾರಿ ಹೇಳಿಕೆಗಳನ್ನೂ ನೋಡಿದರೆ,ನಮ್ಮ ಧರ್ಮವೇ ಬೇರೆಲ್ಲ ಧರ್ಮಗಳಿಗಿಂತ ಒಳಗೊಳಗೇ ಸಿಕ್ಕಿ ಇಂಥವರ ವಿಪರೀತಾರ್ಥವಾದ ವಿರೋಧಾಭಾಸವಾದ ಹೇಳಿಕೆಗಳಲ್ಲಿ ನಮ್ಮನಮ್ಮೊಳಗೇ ವಿಷ ಬೀಜ ಬಿತ್ತುವಂತಾಗಿದೆ ಎನಿಸುತ್ತದೆಯಲ್ಲ...!
ನಿಮ್ಮ ಮಾತುಗಳಲ್ಲೇ ಹೇಳಬೇಕೆಂದರೆ- ಸೂಕ್ಷ್ಮ ಸಾಹಿತ್ಯ ಚಿಂತನೆ ಅಥವಾ ಚರ್ಚೆಗೆ ಚಾಲನೆ ನೀಡುವ ಮುನ್ನ ಎರಡು ಬಾರಿ ಯೋಚಿಸಿ ಮಾತುಗಳನ್ನಾಡುವುದನ್ನು ಅತ್ಯುನ್ನತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತುಗಳನ್ನಾಡುವ ಮುನ್ನ ಇತರರಿಗಿಂತಲೂ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದಲ್ಲವೇ.... ಯಾಕೆಂದರೆ,ನಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆಯಾಗಲಿ, ಸಾಹಿತ್ಯದ ಬಗ್ಗೆಯಾಗಲಿ ಅನಂತಮೂರ್ತಿಯವರ ಹೇಳಿಕೆಗಳು ಯಾವಾಗಲೂ ವಿವೇಕಯುತವಲ್ಲದೇ ವಿವಾದಾಸ್ಪದವಾಗಿಯೆ ಇರುತ್ತವೆಂಬುದನ್ನು ಬಹಳ ಹಿಂದಿನಿಂದಲೂ ಗಮನಿಸಿದ್ದೇನೆ. ಇದಕ್ಕೆ ಪುರಾವೆ ಬೇಕೆಂದರೆ-
ನನ್ನ ಲೇಖನ ಇಲ್ಲಿದೆ ನೋಡಿಇದೇ ನಮ್ಮ ನಾಡು..ಇವೇನಮ್ಮನುಡಿಗಳು....?!!
ಇನ್ನು ವಸ್ತುನಿಷ್ಠೆಗಿಂತಲೂ ಕನ್ನಡ ಸಾರಸ್ವತಲೋಕದಲ್ಲಿ ರಾಜಕೀಯ, ಗುಂಪುಗಾರಿಕೆ ಬೆಳೆಯುತ್ತಿರುವುದು ಹಿತಕರವಲ್ಲವೆಂಬುದನ್ನು ಎಲ್ಲರೂ ಗಾಢವಾಗಿ ಚಿಂತಿಸಬೇಕಿದೆ. ಅಂತಹ ವಸ್ತು ನಿಷ್ಠಚಿಂತನೆಗೆ ಕಾಲವಿದಾಗಿದೆ ಎಂಬುದನ್ನಂತೂ ತಿಳಿಸಿಕೊಟ್ಟಿರುವ ಕಾದಂಬರಿ "ಆವರಣ". ಅದು ಈ ರೀತಿಯಾಗಿ ಎಲ್ಲರ ಒಳ ಹೊರಗನ್ನು ಅನಾವರಣ ಮಾಡುತ್ತಿರುವುದಂತೂ ಖಂಡಿತ ಸ್ವಾಗತಾರ್ಹವೇ ಸರಿ.
-ಎಚ್.ಶಿವರಾಂ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ನಾನು ಮತ್ತೆ ಆವರಣದ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಕೊಂಡಿದ್ದೆ. ಆದರೆ ಇಲ್ಲಿರುವ ಬರಹಗಳು ಇದಕ್ಕೆ ಪ್ರೇರಣೆ ನೀಡುತ್ತಿವೆ. ನನಗೆ ಅತ್ಯಂತ ನೋವು ತರುವ ಸಂಗತಿ ಎಂದರೆ ಭೈರಪ್ಪನವರಾದಿಯಾಗಿ ಇಲ್ಲಿ ಹಲವರು ಮಂಡಿಸುತ್ತಿರುವ ಚಿಂತನಾ ವಿಧಾನದ ಹಿಂದಿನ ಮನಸ್ಥಿತಿ.
ಈ ಮೊದಲೇ ನಾನು ಜೈಗುರೂಜಿ, ಪ್ರಪಂಚ ಮುಂತಾದವರಿಗೆ ಒಂದು ಪ್ರಶ್ನೆ ಕೇಳಿದ್ದೆ ಅದು " ನಿಮಗೆ ಯಾರಾದರೂ ಮುಸ್ಲಿಂ ಗೆಳೆಯರಿದ್ದಾರೆಯೇ?" ಯಾರೂ ಈ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇಲ್ಲಿ ಮಂಡಿತವಾಗಿರುವ ಬಹುತೇಕ ವಾದಗಳು ಈ ಸಮಸ್ಯೆಯಿಂದಲೇ ಹುಟ್ಟಿಕೊಂಡಿರುವಂತೆ ಇದೆ. ನೀವೆಲ್ಲಾ ಯಾವ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದೀರಿ. 200-300 ವರ್ಷ ಆಡಳಿತ ನಡೆಸಿದ ಮುಸ್ಲಿಮರ ಬಗ್ಗೆ ಯಾಕೆ ಇಷ್ಟೆಲ್ಲಾ ಕಾರಿಕೊಳ್ಳುತ್ತಿದ್ದೀರಿ. ನಾನು ಈ ಹಿಂದೆಯೇ ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಬಿಡುತ್ತೇನೆ. ಈ 300 ವರ್ಷಗಳ ಮೊದಲಿನ ಸಾವಿರಾರು ವರ್ಷಗಳ ಇತಿಹಾಸದ ತಪ್ಪಿಗೆ ಈಗಿರುವ ಎಲ್ಲರನ್ನೂ ಗಲ್ಲಿಗೇರಿಸಬೇಕಿರುವಷ್ಟು ದೂರುಗಳು ದಲಿತನಾದ ನನಗೆ ಇದೆ.
ಮುಸ್ಲಿಮರು ತಮ್ಮ ಧರ್ಮ ಗ್ರಂಥದಲ್ಲಿರುವಂತೆ ನಡೆದುಕೊಳ್ಳುತ್ತಾರೆ ಎನ್ನುತ್ತೀರಿ. ಎಷ್ಟು ಮುಸ್ಲಿಮರು ಅದನ್ನು ಅನುಸರಿಸುತ್ತಾರೆ ಎಂದು ಪರಿಶೀಲಿಸಲು ಹೋಗಿದ್ದೀರಾ? ಹಿಂದೂ ಎಂದ ತಕ್ಷಣ ಬರೇ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ, ಆರ್ ಎಸ್ ಎಸ್ ಗಳು ನೆನಪಾಗುವಂತೆ ಕೆಲವು ಮುಸ್ಲಿಂ ಸಂಘಟನೆಗಳೂ ಅವರ ವರ್ತನೆಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ. ನಮ್ಮ ಊರಿನಲ್ಲಿರುವ ನಮ್ಮ ನೆರೆಮನೆಯವರೇ ಆಗಿರುವ ಯಾರನ್ನೂ ನಾವು ಉದಾಹರಣೆಯಾಗಿ ತೆಗೆದುಕೊಳ್ಳುವುದಿಲ್ಲ. ಭೈರಪ್ಪನವರೂ ಅವರನ್ನು ಭಯಂಕರವಾಗಿ ಬೆಂಬಲಿಸುತ್ತಿರುವವರು ಮಾಡುತ್ತಿರುವುದು ಇದನ್ನೇ.
ಈ ದೇಶದ ದಲಿತರು ಹಾಗೆ ಮಾಡಿದ್ದರೆ ನಡೆಯುತ್ತಿದ್ದ ಸಿವಿಲ್ ವಾರ್ ಕೊನೆಯಾಗುತ್ತಲೇ ಇರಲಿಲ್ಲ. ನಿಮ್ಮೆಲ್ಲರ ಕಾಲಿಗಾಗಿ ನನ್ನ ಸಮುದಾಯದವರು ತಯಾರಿಸುವ ಚಪ್ಪಲಿಗೆ ದನದ ಚರ್ಮ ಬಳಕೆಯಾಗುತ್ತದೆ. ನನ್ನವರು ಚರ್ಮವನ್ನು ಬಳಸಿ ಒಂದು ಉದ್ಯೋಗವನ್ನು ಕಂಡುಕೊಂಡಂತೆ ಅದರ ಮಾಂಸವನ್ನು ಆಹಾರವನ್ನಾಗಿಸಿಕೊಂಡಿದ್ದಾರೆ. ಇದು ಒಂದರ್ಥದಲ್ಲಿ ನಮಗೆ ಪೌಷ್ಠಿಕತೆಯನ್ನು ಒದಗಿಸುವ ಆಹಾರವೂ ಹೌದು. ಇದನ್ನು ತಿನ್ನದಂತೆ ಮಾಡಲು ಒಂದು ವರ್ಗ ಮಾಡುತ್ತಿರುವ ಸಂಚು ಎಷ್ಟು ದೊಡ್ಡದು. ಗೋವು ಪವಿತ್ರವಾದರೆ ಅದರ ಮಾಂಸವೇಕೆ ಪವಿತ್ರವಾಗಬಾರದು. ನಿಮಗೆ ಅನ್ನ ನೈವೇದ್ಯವಾಗಿದ್ದರೆ ನಮ್ಮ ಮಟ್ಟಿಗೆ ದನದ ಮಾಂಸವೇ ನೈವೇದ್ಯ.
ನೀವು ಹೇಳುತ್ತಿರುವ ತಥಾಕಥಿತ ಹಿಂದೂ ಧರ್ಮದ ಸಹಿಷ್ಣುತೆ ಈ ವಿಷಯಕ್ಕೆ ಬರುವಾಗ ಎಲ್ಲಿಗೆ ಹೋಗುತ್ತದೆ. ಕುರಾನ್ ನಲ್ಲಿ ಮುಸ್ಲಿಮರಲ್ಲದವರನ್ನು ಕೊಲ್ಲಬೇಕು ಎಂದಿರುವ ಹಾಗೆಯೇ ನಿಮ್ಮ ಮನುಸ್ಮೃತಿಯಲ್ಲಿ ದಲಿತನನ್ನು ಕೊಲ್ಲುವುದಕ್ಕೆ ಎಂತೆಂಥಾ ಕ್ಷುಲ್ಲದ ಕಾರಣಗಳನ್ನು ನೀಡಲಾಗಿದೆ ಎಂಬುದನ್ನು ನೀವು ಓದಿದಿದ್ದೀರಾ? ನಾವು ಹಾಗೆ ಮಾಡುತ್ತಿಲ್ಲ ಎಂದು ನೀವು ಮುಂದಿಡುವ ವಾದವನ್ನೇ ಮುಸ್ಲಿಮರೂ ಮುಂದಿಡಬಹುದು. ಇಷ್ಟಕ್ಕೂ ವರ್ತಮಾನದ ಭಾರತದಲ್ಲಿ ಕೋಮು ಗಲಭೆಗಳಲ್ಲಿ ಸತ್ತವರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯವರು ಎಂಬುದೇಕೆ ನಿಮಗೆ ಅರಿವಾಗುವುದಿಲ್ಲ?
ತಮ್ಮ ಆಹಾರವನ್ನು ತಾವು ತಿಂದದಕ್ಕೆ ದಲಿತರನ್ನು ಕೊಂದವರು ಹೇಳಿದ್ದೇನು? ನಮಗೆ ಮನುಷ್ಯನ ಜೀವಕ್ಕಿಂತ ಗೋವಿನ ಪ್ರಾಣ ಮುಖ್ಯ. ಇದನ್ನೇಕೆ ನೀವೆಲ್ಲಾ ಮರೆಯುತ್ತಿದ್ದೀರಿ. ಮೊದಲೇ ಹೇಳಿದಂತೆ ನನಗೆ ಅನ್ನಿಸುವುದು ಇಷ್ಟೇ. ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ನೋಡಿಕೊಳ್ಳಿ.
ರಮೇಶ್ ಸಮಗಾರ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಪ್ರಿಯ ರಮೆಶ್ ಅವರೆ,
ನಿಮಗೆ ಹೇಗೆ ನಮ್ಮ ಪ್ರತಿಕ್ರಿಯೆಗಳು ಪ್ರತಿಕ್ರಿಯೆ ಬರೆಯಲು ಪ್ರೇರಣೆ ನೀಡಿದವೋ ಹಾಗೆ ನಿಮ್ಮ ಸ್ನೇಹಿತರುಗಳಾದ ನಾಗಬೂಷಣ ಮತ್ತು ಹೋನ್ನಾಳಿಯವರ ಲೇಖನ ನಮಗೂ ಪ್ರೇರೇಪಿಸಿದ್ದು.
ನೀವು ಈ ಮುಖ್ಯ ಲೇಖನವನ್ನ ಪೂರ್ಣ ಓದಿದ್ದೀರಾ?
ಇಲ್ಲಿ ನೀವೇಕೆ ಹಿ೦ದಿನ ಮೊಗಲರಿಗೂ ಇ೦ದಿನ ಮುಸ್ಲೀಮರಿಗೂ ಸ೦ಬ೦ದವನ್ನ ಕಲ್ಪಿಸುತ್ತಿದ್ದೀರಾ ನನಗೆ ಅರ್ಥವಾಗುತ್ತಿಲ್ಲ!. ಇಲ್ಲಿ ಪ್ರಜ್ನಾವ೦ತರಾರು ಈ ತರಹದ ಹೋಲಿಕೆಯನ್ನ ಮಾಡಲು ಸಾದ್ಯವಿಲ್ಲ. ಪ್ರತಿಬಾರಿಯೂ ಜಾತಿ ಜಾತಿ ಎ೦ದು ಪದೇ ಪದೇ ಬರೆಯುತ್ತಿದ್ದೀರ ಯಾಕೆ೦ದು ನನಗೆ ಅರ್ಥವಾಗುತ್ತಿಲ್ಲ.
ಮೊಗಲರ ಕಾಲದಲ್ಲಿ ನಡೆದ ಹೇಯ ಕೃತ್ಯಗಳಿಗೂ ಇ೦ದಿನ ಮುಸ್ಲೀಮರಿಗೂ ಯಾವುದೇ ಸ೦ಬ೦ದವಿಲ್ಲ, ಇದನ್ನೇ ನಾವೆಲ್ಲ ಸಾರಿ ಹೇಳುತ್ತಿರುವುದು. ನೀವೆ ಏನೇನೋ ಅರ್ಥಮಾಡಿಕೊ೦ಡು ನಿ೦ದಿಸುತ್ತಿರುವುದು. ದಯವಿಟ್ಟು ತಿಳಿದುಕೊಳ್ಳಿ ನಾವ್ಯಾರು RSS/VHP/Bajarangiಗಗಳಲ್ಲ. ಇಲ್ಲಿ ಜಾತಿ, ದರ್ಮದ ಗು೦ಪುಗಳನ್ನಾಗಿ ಮಾಡುತ್ತಿರುವುದು ನೀವು. ಯಾವುದೋ ಶತಮಾನದ ಕಹಿ ಘ್ಹಟನೆಗಳನ್ನ ನೆನೆಪಿನಲ್ಲಿ ಇಟ್ಟುಕೊ೦ಡು ಮಸ್ಸಿಗೆ ಬ೦ದ ಹಾಗೆ ನಿ೦ದಿಸುತ್ತಿರುವುದು ತಾವು ಸ್ವಾಮಿ.
ಇ೦ದಿನ ಮುಸಲ್ಮಾನರನ್ನ ಮೊಗಲರ ಕಾಲದ ಆಗು ಹೋಗುಗಳಿಗೆ ಹೊಣೆ ಮಾಡಬೇಕೆ೦ದು ಮಾನವೀಯ ಗುಣವಿರುವ ಯಾವ ಹಿ೦ದೂ ಕೂಡ ಹೇಳುವುದಿಲ್ಲ. ಇವುಗಳನ್ನ ನಮ್ಮ vote bank ರಾಜಕಾರಣಿಗಳ ಹಾಗೆ ನೀವುಗಳೇ ಬಡ ಬಡಸಿತ್ತೀದ್ದೀರ, ಇದರ ಹಿ೦ದಿನ ಮರ್ಮ ತಿಳಿಯುತ್ತಿಲ್ಲ.
ಆದರೆ ಒ೦ದು ಮಾತು ನೆನಪಿಟ್ಟುಕೊಳ್ಳಿ ಹಿ೦ದೆ ಮೊಗಲರ ಕಾಲದಲ್ಲಿ ಹೀಗಾಯಿತ೦ತೆ ಎನ್ನುವ ಸತ್ಯವನ್ನ ಅರಿಯುವ ಸ್ವಾತ೦ತ್ರ್ಯ ನಮಗಿದೆ. ಅದನ್ನ ತಿಳಿಯಬಾರದು ಎ೦ದು ಹೇಳುವ ಹಕ್ಕು ಅನ೦ತಮೂರ್ತಿಯವರ ಹಾದಿಯಾಗಿ ಯಾರಿಗೂ ಇಲ್ಲ.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಮೊಗಲರ ಕಾಲದಲ್ಲಿ ನಡೆಯಲಾಗಿದೆ ಎನ್ನಲಾದ ಅನಾಚಾರಗಳನ್ನು ಹೇಳುವ ಸ್ವಾತಂತ್ರ್ಯ ನಿಮಗಿರುವಂತೆಯೇ ಅದನ್ನು ಹೇಳುವುದರ ಹಿಂದಿರುವ ಪ್ರೇರಣೆಗಳನ್ನು ಹೇಳುವ ಸ್ವಾತಂತ್ರ್ಯ ನನಗೂ ಇದೆ. ಅದೃಷ್ಟವಶಾತ್ ಸ್ವತಂತ್ರ ಭಾರತದಲ್ಲಿ ಓದಿ ಬರೆಯುವ ದಲಿತನ ನಾಲಿಗೆಯನ್ನು ಸೀಳುವುದು ಅಥವಾ ಕಿವಿಗೆ ಸೀಸ ಹೊಯ್ಯುವುದು ಅಪರಾಧ-ಹಾಗೆಂದು ದಲಿತರನ್ನು ಕೊಲ್ಲುವುದೇನೂ ನಿಂತಿಲ್ಲ. ಮೊಗಲರ ಕಾಲದಲ್ಲಿ ನಡೆದಿರುವುದನ್ನು ನೀವು ಹೇಳುವಾಗ ನನ್ನ ಇತಿಹಾಸವನ್ನೂ ನಾನು ನೋಡಿಕೊಂಡು ಅದನ್ನು ನಾಲ್ಕು ಜನಕ್ಕೆ ಹೇಳಲೇ ಬೇಕಲ್ಲ. ಇಲ್ಲದಿದ್ದರೆ ನನ್ನ ಸತ್ಯಶೋಧನೆ ನಡೆಯುವುದಾದರೂ ಹೇಗೆ? ಸತ್ಯ ಶೋಧನೆಯ ಕೆಲಸ ಕೇವಲ ಭೈರಪ್ಪನವರು ಮತ್ತು ಅವರ ಅಭಿಮಾನಿಗಳಾಗಿರುವವರಿಗೆ ಮಾತ್ರ ಸೀಮಿತವಾದ ಕೆಲಸವೇನೂ ಅಲ್ಲವಲ್ಲ.
ಜಾತಿ-ಜಾತಿ ಎಂದು ಸಮಾಜವನ್ನು ಯಾರು ಒಡೆದರು ಎಂಬುದನ್ನು ನಾನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಅಂಬೇಡ್ಕರ್ ಅವರ ಬರೆಹಗಳೆಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನೊಮ್ಮೆ ಓದಿ ನೋಡಿದರೆ ಸಾಕಾಗುತ್ತದೆ. ತೀರಾ ಆಧುನಿಕವಾದ ಜಾತೀಯತೆಯ ಉದಾಹರಣೆ ಕೊಡಬೇಕು ಎಂದರೆ ಐಐಟಿಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ದಲಿತರಿಗೆ ಕೊಡುವ ಉತ್ತರ ಪತ್ರಿಕೆಯ ಬಣ್ಣ ಸಾಧಾರಣವಾಗಿರುವುದಕ್ಕಿಂತ ಬೇರೆಯಾಗಿರುತ್ತದೆ. ಅಷ್ಟೇಕೆ ದಲಿತರು ಈ ಪ್ರವೇಶ ಪರೀಕ್ಷೆ ಪಾಸಾದರೂ ಒಂದು ಬ್ರಿಜ್ ಕೋರ್ಸ್ ಮಾಡಬೇಕಾಗುತ್ತದೆ.
ಈ ಬಗೆಯ ಹೆಗ್ಗಣಗಳು ತಟ್ಟೆಯಲ್ಲಿ ಬಿದ್ದಿರುವ ಸತ್ಯದ ಬಗ್ಗೆಯೇ ಒಂದು ಚೂರ ಗಮನ ಹರಿಸಿ ಎಂಬುದು ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ನನ್ನಂಥವರ ಬೇಡಿಕೆ (ಹೌದು. ನಮ್ಮ ಹಕ್ಕನ್ನೂ ನಾವು ಬೇಡಿಕೆಯಾಗಿಯೇ ಮುಂದಿಡಬೇಕಾಗಿದೆ). ನೀವು ಭಜರಂಗದಳದವರೆಂದೋ, ವಿಶ್ವ ಹಿಂದೂ ಪರಿಷತ್ತಿನವರೆಂದೋ ನಾನು ಹೇಳಿಲ್ಲ. ನಾನು ಹೇಳಿದ್ದು ನೀವು ಅವರು ಮಾತನಾಡುತ್ತಿರುವುದನ್ನೇ ಮಾತನಾಡುತ್ತಿದ್ದೀರಿ. ಅವರನ್ನು ನಮ್ಮನ್ನು ಕೊಂದಿರುವುದರಿಂದ ಅವರ ಬಗ್ಗೆ ನಮಗೆ ಭಯವಿದೆ. ಪರಿಣಾಮವಾಗಿ ಹಾಗೆ ಮಾತನಾಡುವವರನ್ನು ಕಂಡಾಗ ನಮಗೆ ಭಯವಾಗುತ್ತದೆ.
ಮೊಗಲರ ಕಾಲದಲ್ಲಿ ನಡೆದಿದೆಯನ್ನಲಾದ ಅಂತಾ ಅನಾಹುತಗಳ ನಂತರವೂ ಇಷ್ಟೊಂದು ಸಂಖ್ಯೆಯ ಹಿಂದೂಗಳು ಅಲ್ಲಲ್ಲ ಸವರ್ಣೀಯರು ಈ ದೇಶದಲ್ಲಿ ಉಳಿದುಕೊಂಡದ್ದು ಹೇಗೆ? ಶೋಷಕರೇ ಶೋಷಣೆಗೆ ಒಳಗಾದವರು ಎಂಬ ಗುಲ್ಲೆಬ್ಬಿಸುವ ತಂತ್ರದ ಹಿಂದೆ ನಿಜವಾದ ಶೋಷಿತರಾದ ನಮ್ಮಂಥವರು ಮಾತನಾಡಬಾರದು ಎಂಬ ಹುನ್ನಾರವಲ್ಲವೇ?
ರಮೇಶ್ ಸಮಗಾರ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಅಯ್ಯೊ ಎನ್ರೀ ಸ್ವಾಮಿ,
ನೀವೇ ಹೇಳಿದ ಹಾಗೆ, ೨೦೦-೩೦೦ ವರ್ಷಗಳ ಹಿ೦ದೆ ನಡೆದ ಮೊಗಲರ ಕಾಲದ ಘಟನೆಗಳನ್ನ ಈಗ ಚರ್ಚಿಸುವುದು ಸರಿಯಲ್ಲವೆ೦ದು, ಈಗ ದಶಕಗಳ ಮು೦ಚೆ ನಡೆದ ಜಾತಿ ಘಟನೆಗಳನ್ನ ಚರ್ಚಿಸುವುದೂ ಸರಿಯಲ್ಲ. ನಾವು ಜಾತಿ ರಹಿತ ಸಮಾಜಕ್ಕೆ ಮು೦ದಾಗಬೇಕಿದೆ. ಆಗ೦ತ ಇವೆಲ್ಲ ಒ೦ದೆರಡು ದಿನಗಳಲ್ಲಿ ಆಗುವ೦ತವಲ್ಲ. ಶತಮಾನಗಳಿ೦ದ ಬ೦ದಿರುವ ಆಚರಣೆಗಳು ತೊಲಗಬೇಕಾದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒ೦ದು ಕಡೆ ಇತಿಹಾಸವನ್ನ ಬಿಡೋಣ ಎನ್ನುತ್ತೀರ, ಇನ್ನೊ೦ದು ಕಡೆ ಇತಿಹಾಸದಲ್ಲಿ ನಮಗೆ ಅನ್ಯಾಯವಾಗಿದೆ ಅದಕ್ಕೆಇ೦ದು ಹೋರಾಡ್ಬೇಕು ಎನ್ನುತ್ತೀರ. ನಿಮ್ಮ ಮಾತು ರಾಜಕೀಯದಿ೦ದ ಪ್ರೇರೆಪಿತವಾದವು ಎನ್ನಿಸುತ್ತದೆ.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಇತಿಹಾಸವನ್ನು ನಾನು ಬಿಟ್ಟು ಬಿಡಬೇಕೆಂದು ಎಲ್ಲಿಯೂ ಹೇಳಿಲ್ಲ. ಇತಿಹಾಸದ ಕುರಿತು ಚರ್ಚಿಸುವಾಗ ನೆನಪಿರಬೇಕಾದ ಇತರ ಮಾಹಿತಿಗಳನ್ನು ನೆನಪಿಸುತ್ತಿದ್ದೇನೆ ಅಷ್ಟೇ. ಮೊಗಲರ ವಿಷಯವನ್ನು ಉತ್ಸಾಹದಿಂದ ಚರ್ಚಿಸಲು ಮುಂದಾಗುವ ನೀವು ಜಾತೀಯತೆಯ ಇತಿಹಾಸವನ್ನು ಕೆದಕಿದರೇಕೆ ಗಾಬರಿಯಾಗುತ್ತಿದ್ಗೀರಿ. ಅದು ಸಾವಿರಾರು ವರ್ಷಗಳ ಹಿಂದಿನಿಂದ ಇದೆ. ಈಗಲೂ ಮುಂದುವರಿಯುತ್ತಿದೆ. ಜಾತಿ ರಹಿತ ಸಮಾಜದತ್ತ ಹೋಗಬೇಕು ಎನ್ನುವ ನೀವು ಯಾರೂ ದಲಿತರಿಗೆ ಐಐಟಿಯಲ್ಲಿ ಬೇರೆ ಬಣ್ಣದ ಉತ್ತರ ಪತ್ರಿಕೆ ಕೊಡುತ್ತಾರೇಕೆ ಎಂದು ಯಾವತ್ತಾದರೂ ಕೇಳಿದ್ದೀರಾ?
ಸ್ವಾಮೀ ನೀವು ಬಾಯಿಗೆ ಬಂದ ಹಾಗೆ ಬೈಯ್ಯುತ್ತೀರಲ್ಲಾ ಎಡಪಂಥೀಯರು ಅವರೇ ಇದನ್ನು ಪಾರ್ಲಿಮೆಂಟಿನಲ್ಲಿ ಕೇಳಿದರು. ಆಗಲೂ ನೀವು ಹೇಳುತ್ತಿರುವ ಐಡಿಯಾಲಜಿಯನ್ನು ಪ್ರತಿಪಾದಿಸುವವರು ಹೌದಾ ಎಂದು ಕೇಳಲಿಲ್ಲ. ನೀವು ಮೊಗಲರು ಮಾಡಿದ ಅನ್ಯಾಯದ ಬಗ್ಗೆ ಹೇಳುತ್ತಿದ್ದೀರಿ. ನಾನು ಈಗ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿದೆ ಅಷ್ಟೇ. ಆಯಿತು ನಾವು ಜಾತೀಯತೆಯ ಐತಿಹಾಸಿಕ ಮತ್ತು ವರ್ತಮಾನದ ಸ್ವರೂಪದ ಬಗ್ಗೆಯೂ ಒಂದು ಚರ್ಚೆಯನ್ನು ಇಲ್ಲಿಯೇ ಆರಂಭಿಸೋಣ.
ರಮೇಶ್ ಸಮಗಾರ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಐಐಟಿ ಯನ್ನ ನಡೆಸುತ್ತಿರುವವರು ಯಾರು? ಅದನ್ನ ನಡೆಸುತ್ತಿರುವವರು ಒ೦ದು ಜಾತಿಯವರೇ? ಸರ್ಕಾರದವರಲ್ಲವ? ಈ ಸ೦ಗತಿಯನ್ನು ಹಿ೦ದೂಗಳ ಜಾತಿ ಪದ್ದತಿಗೆ ಹೋಲಿಸುವುದು ಎಷ್ಟು ಸಮ೦ಜಸ?
ಈಗ ಎಡ ಪ೦ಥೀಯರೇ ಅದಿಕಾರದಲ್ಲಿದ್ದಾರೆ ಆದಾಗ್ಯೂ ಏಕೆ ಹೀಗೆ ಆಗುತ್ತಿದೆ?
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಮಾನ್ಯರೇ,
ನಿಮ್ಮ ಒಂದೊಂದೇ ವಾಕ್ಯಗಳನ್ನು ಹೆಕ್ಕಿ ತೆಗೆದು ಅವುಗಳನ್ನು ಖಂಡಿಸುವ ವಿತಂಡವಾದಕ್ಕೆ ಇಳಿಯುವ ಮೂರ್ಖತನ ಮಾಡುವುದಿಲ್ಲ.
ಚುರುಮುರಿಯಲ್ಲಿನ ಸಂದರ್ಶನದಲ್ಲಿ ಭೈರಪ್ಪ ಸ್ಪಷ್ಟ ಪಡಿಸಿದ ಅಂಶಗಳಲ್ಲಿ ನನಗೆ ತಿಳಿದ ಕೆಲವನ್ನು ನಿಮ್ಮ ಮುಂದಿಡುವೆ...
ಆವರಣ ಇತಿಹಾಸದ ಜೊತೆಗೆ ಇತಿಹಾಸಕಾರರನ್ನೂ ಒಳಗೊಂಡಿದೆ. ಇತಿಹಾಸವನ್ನು ತಿರುಚಿ ಹೇಳುವ ಹಕ್ಕು ಯಾರಿಗೂ ಇಲ್ಲ. ಸತ್ಯವನ್ನು ಮರೆ ಮಾಚಿ ತಮಗೆ ಒಪ್ಪಿತವಾಗುವ ಇತಿಹಾಸವನ್ನು ನೀಡುವುದು ಒಂದು ಜನಾಂಗಕ್ಕೆ ನಾವು ಮಾಡುವ ಅಪರಾಧ. ಭಾರತದಲ್ಲಿದ್ದ ಅಸಂಖ್ಯಾತ ಜಾತಿಗಳ ಬಗ್ಗೆ, ಅವುಗಳ ಶೋಷಣೆಯ ಬಗ್ಗೆ, ಅವನ್ನು ವಿರೋಧಿಸಿದ ನಾಯಕರ ಬಗ್ಗೆ ನಾವು ಪಠ್ಯಪುಸ್ತಕಗಳಲ್ಲಿ ವಿಸ್ತೃತವಾದ ಪಾಠಗಳನ್ನು ಕಾಣುತ್ತೇವೆ... ಅಂಬೇಡ್ಕರರು ಇದ್ದಾಗಿನ ಸಮಯದಲ್ಲಿ ಅವರ ಮೇಲಾದ ಅಮಾನವೀಯ ದೌರ್ಜನ್ಯಗಳನ್ನು ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಹಿಸ್ಟರಿಯಲ್ಲಿ ಸಾಕಾಗುವುದಿಲ್ಲವೆಂದು ಕನ್ನಡ, ಹಿಂದಿ, ಇಂಗ್ಲೀಷ್ ಎಲ್ಲಾ ಭಾಷೆಗಳಲ್ಲೂ ಒದುತ್ತೇವೆ. ಎಂದೋ ನಡೆದ ದೌರ್ಜನ್ಯಗಳನ್ನು ಅಷ್ಟು ಸಾದ್ಯಂತವಾಗಿ ನೀಡುವ ಪ್ರಯತ್ನವೇಕೆ? ಇದರಿಂದಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತನ್ನದೇ ತರಗತಿಯ ಉಳಿದ ಜಾತಿಯ ಮಕ್ಕಳು ಶೋಷಕರಾಗಿ ಕಾಣಿಸುತ್ತಾರೆಯೇ? ಖಂಡಿತ ಸಾಧ್ಯವಿಲ್ಲ (ನೀವುಕೇಳಿದ ’ಮುಸ್ಲಿಂ ಗೆಳೆಯರ’ ಬಗೆಗಿನ ಪ್ರಶ್ನೆಗೆ..) ಅದು ದಲಿತರ, ಸವರ್ಣೀಯರ ನಡುವೆ ಸೌಹಾರ್ದ ಕೆಡಿಸಬಹುದು ಅಂತ ಸೆನ್ಸಾರ್‌ಗೆ ಒಳಗಾಗುತ್ತಾ...? ಇಲ್ಲ! ನಡೆದದ್ದನ್ನು ತಿಳಿಸುವ ಕರ್ತವ್ಯ ಇತಿಹಾಸದ್ದು... ಆವರಣದ ಉದ್ದೇಶ ಕೂಡ ಅದೇ, ಮಾರ್ಕ್ಸಿಸ್ಟ್ ಇತಿಹಾಸಕಾರರು ಮುಸ್ಲಿಂ ದೊರೆಗಳ ಬಗೆಗಿನ ಐತಿಹಾಸಿಕ ಸತ್ಯಗಳನ್ನು ಮರೆಮಾಚುವುದು ಅಪರಾಧವಲ್ಲವಾ?
ತಟ್ಟೆಯಲ್ಲಿನ ಹೆಗ್ಗಣದ ಬಗ್ಗೆ ಮಾತನಾಡುವುದಾದರೆ, ಭಾರತೀಯ ಸಂವಿಧಾನದಲ್ಲಿ ಆ ಎಲ್ಲಾ ಐತಿಹಾಸಿಕ ದೌರ್ಜನ್ಯಗಳನ್ನು ಖಂಡಿಸಲಾಗಿದೆ ಹಾಗೂ ಹಿಂದುಗಳ ಧಾರ್ಮಿಕ ನಂಬಿಕೆ ಆಚರಣೆಗಳಿಗೆ ಕಡಿವಾಣ ಹಾಕಲಾಗಿದೆ. ಭಾರತವೆಂಬ ದೇಶದ ಪ್ರಜೆಯಾದ ಪ್ರತಿಯೊಬ್ಬನೂ ಆ ನಿಯಮಗಳಿಗೆ ಬದ್ಧನಾಗಿರಬೇಕು ಎಂಬ ಕರಾರಿದೆ ಅದರಿಂದ ಒಂದು ಧರ್ಮದ ಜನರಿಗೇಕೆ ವಿನಾಯಿತಿ? ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎನ್ನುವ ಹಮ್ಮುರಬಿ ನ್ಯಾಯ ಪದ್ಧತಿಯ ಅಪಾಯಗಳನ್ನರಿತು ಅದನ್ನು ವರ್ಜಿಸಿದ ಮುಸ್ಲಿಂ ಸಮುದಾಯ ಈಗಲೂ ಕೌಟುಂಬಿಕ ಸಮಸ್ಯೆಗಳ ನ್ಯಾಯ ತೀರ್ಮಾನಕ್ಕೆ ಷರಿಯಾ ಕಾನೂನನ್ನೇ ಏತಕ್ಕೆ ಅಪ್ಪಿಕೊಂಡಿರುವುದು? ದೇಶಕ್ಕಿಂತ ಧರ್ಮವೇ ಹೆಚ್ಚಾಗುವುದಕ್ಕೇ? ಇತಿಹಾಸದಿಂದ ಕಲಿತ ಪಾಠದಿಂದಾಗಿ ಈಗ ಹಿಂದುಳಿದವರಿಗಾಗಿ ಸಕಲ ಸಾಮಾಜಿಕ ಸವಲತ್ತು, ಮೀಸಲಾತಿಗಳನ್ನು ದೊರಕಿಸಿ ಕೊಡಲಾಗಿದೆ... ಹೀಗೆ ಮುಸ್ಲಿಂ ಸಮುದಾಯಕ್ಕೇಕೆ ಸಂವಿಧಾನದ ಅಂಕುಶವಿಲ್ಲ...? ನಿಯಮ-ಕಟ್ಟಳೆಗಳಿಗೆ ಮಾತ್ರ ಹಿಂದುಗಳು ಬೇಕು ಆದರೆ ಸವಲತ್ತುಗಳಿಗೆ ಮಾತ್ರ ಮುಸ್ಲಿಂ ಸಮುದಾಯ... ಈ ತಾರತಮ್ಯವೇಕೆ..?
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಒಪ್ಪಿದೆ. ಒಂದು common civil code ಇರಬೇಕು, ಆಳುವ ಪಕ್ಷ ತುಷ್ಟೀಕರಣದ ರಾಜಕೀಯ ಮಾಡುವುದು ತಪ್ಪಬೇಕು (ಅದು ಮುಸ್ಲಿಮರ ಬಗ್ಗೆಯೇ ಇರಲಿ, ದಲಿತರ ಬಗ್ಗೇ ಇರಲಿ), ಜಾತಿ ಆಧಾರಿತ ಸೌಲಭ್ಯ ಸವಲತ್ತುಗಳಿಗೆ ಕಡಿವಾಣ ಹಾಕಬೇಕು (of course, gradual ಆಗಿ)... ಈ ಬಗ್ಗೆ ನೀವು ಹೋರಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ (ಅಷ್ಟೇ ಯಾಕೆ, ನಾವೆಲ್ಲರೂ ಬೆಂಬಲಿಸುತ್ತೇವೆ). ಆದರೆ, ಯಾರೋ ಯಾವಾಗಲೋ india ಮೇಲೆ ದಂಡೆತ್ತಿ ಬಂದ, ಅಷ್ಟು ದೋಚಿದ, ಇಷ್ಟು ಜನರನ್ನ ಮತಾಂತರಗೊಳಿಸಿದ, ಆ ದೇವಸ್ಥಾನ ಒಡೆದ... ಸ್ವಾಮಿ, ಅದು ಇತಿಹಾಸ. ಮುಗಿದದ್ದು. ಕಾಪಾಡಿಕೊಳ್ಳಬೇಕಾಗಿದ್ದವರು ನಮ್ಮ ತಾತ ಮುತ್ತಾತಂದಿರು. ಅವರು ಮಾಡಲಿಲ್ಲ. ನಾವು ಇವತ್ತು ನಮ್ಮನ್ನ ಕಾಪಾಡಿಕೊಳ್ಳಬೇಕಾದ್ದು ಬುದ್ಧಿವಂತಿಕೆಯೇ ಹೊರತು, ಆಗಿದ್ದನ್ನೆಲ್ಲಾ ಸರಿಪಡಿಸಹೊರಡುವುದಲ್ಲ. ಹಾಗೆಂದು ಯಾವ ಯಾವುದನ್ನ ಸರಿಪಡಿಸುತ್ತೀರಿ? "ಹಿಂದೂ" ಸಮಾಜದೊಳಗೇ ಶತಮಾನಗಳಿಂದ ಪರಸ್ಪರ ನಡೆದಿರುವ ದೌರ್ಜನ್ಯಗಳನ್ನ? (ಯಾರಾದರೂ ಈ ಪ್ರಶ್ನೆ ಕೇಳಿದರೇ ನಮ್ಮ ಬಳಿ ಸರಿ ಉತ್ತರ ಇಲ್ಲ)
Let us concentrate how to set right our present, not the past.
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಹಾಗಂತ ನಡೆದ ಸಂಗತಿಗಳನ್ನು ನಡೆದಿಲ್ಲ ಎಂದು ಇತಿಹಾಸದ ಮೂಲಕ ಮಕ್ಕಳಿಗೆ ತಿಳಿಸುವುದು ಅವರಿಗೆ ನಾವು ಮಾಡುವ ವಂಚನೆಯಾಗುವುದಿಲ್ಲವೇ...? ಇತಿಹಾಸವನ್ನು ಕಲಿಸುವುದಾದರು ಏತಕ್ಕೆ...?
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ನುಣುಚಿಕೊಳ್ಳಬೇಡಿ. ನನ್ನ ಪ್ರಶ್ನೆ ಅದಲ್ಲ ಅಂತ ನಿಮಗೂ ಗೊತ್ತು (ನಿಮ್ಮದೇ lineನಲ್ಲಿ ವಾದಿಸುವ ಇತರ ಅನೇಕರಂತೆ). ಸತ್ಯಾನ್ವೇಷಣೆಗೂ, ಸಿಕ್ಕಿದ ಗತ ಇತಿಹಾಸದ ಭೂತಗಳನ್ನು ಬದುಕಿರುವವರ ಮೇಲೆ ಛೂ ಬಿಡುವುದಕ್ಕೂ ವ್ಯತ್ಯಾಸವಿದೆ. ನಿಮ್ಮ ಮಾತಿನ ಅರ್ಥ, ಭೈರಪ್ಪನವರು ಮಾಡಿದಂಥ ಸತ್ಯಾನ್ವೇಷಣೆ ಇದುವರೆಗೆ ನಡೆದೇ ಇಲ್ಲ ಅಂತಲೋ? ಸ್ವಾಮಿ, ಭೈರಪ್ಪನವರು ಕಾದಂಬರಿಗೋಸ್ಕರ ಸಂಶೋಧನೆ ನಡಿಸಿದರು, ಆದರೆ ಸಂಶೋಧನೆಗೋಸ್ಕರವೇ ಸಂಶೋಧನೆ ನಡೆಸಿದ/ನಡೆಸುತ್ತಿರುವ ಅನೇಕ ಇತಿಹಾಸಕಾರರ ಗುಂಪೇ ಇದೆ. ಅದನ್ನ ರಾಜಕೀಯ ಕಾರಣಕ್ಕೆ hush up ಮಾಡುವುದು ಹೀನ ಅಂತ ನಾನೂ ಒಪ್ಪಿಕೊಳ್ಳುತ್ತೇನೆ. If your struggle is to oppose that (and thats all), my full support is there for you. ಆದರೆ ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ, ನಿಮ್ಮ ಉದ್ದೇಶ ಕೇವಲ ಈ 'ಸತ್ಯ'ಬಯಲಿಗೆಳೆದು ಸುಮ್ಮನಾಗುವುದಷ್ಟೇಯೇ ಅಂತ. ಬಯಲಿಗೆಳೆದ ಸತ್ಯವನ್ನ ಹೇಗೆಲ್ಲಾ ಉಪಯೋಗಿಸಲಾಗುತ್ತದೆ ಅಂತ ನಾವೆಲ್ಲಾ ನೋಡುತ್ತಿದ್ದೇವೆ.
ಸತ್ಯಾನ್ವೇಷಣೆ, ಸತ್ಯ ಪ್ರತಿಪಾದನೆಯನ್ನು demand ಮಾಡುವ ನಮಗೆ, ಅದನ್ನು ನೋಡಿ ತಡೆದುಕೊಂಡೂ ನಮ್ಮ ಮನುಷ್ಯತ್ವವನ್ನು ಕಾಯ್ದುಕೊಳ್ಳುವ ತಾಕತ್ತಿದೆಯೇ ಅಂತ ಮೊದಲು ಪ್ರಶ್ನಿಸಿಕೊಳ್ಳಬೇಕಲ್ಲವೇ ಸ್ವಾಮಿ? ಮತಾಂಧರು ಯಾವುದೇ ಮತಕ್ಕೆ ಸೇರಿದ್ದರೂ ಮತಾಂಧರೇ. ಅವರನ್ನು particular ಆಗಿ ಖಂಡಿಸುವ/ನಿವಾರಿಸುವ ಬದಲು, ಅವರ ಜಾತಿಯನ್ನೇ ದಂಡಿಸಹೊರಡುವುದು ಯಾವ ಅರಣ್ಯ ನ್ಯಾಯ ಸ್ವಾಮಿ? ಮತ್ತೆ ಈ ಮಾತನ್ನು ಮುಸ್ಲಿಂ ಪರ ಅಂತ interprete ಮಾಡೀರಿ, ಜೋಕೆ. ಈ ಪ್ರಶ್ನೆ ಎಲ್ಲಾ ಮತಾಂಧರಿಗೂ ಅನ್ವಯಿಸುತ್ತದೆ, and ಇದನ್ನ ಓದುವ ಯಾವ ಪ್ರಜ್ಞಾವಂತರಾದರೂ ಉತ್ತರಿಸಬೇಕಾದ ಪ್ರಶ್ನೆ (ಹಾಗಂತ, ಇಲ್ಲಿ ಉತ್ತರವನ್ನೇನೂ expect ಮಾಡಲ್ಲ ಬಿಡಿ ನಾನು; because when the arguement turns too logical it will be met either with abuses or with silence)
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ನುಣುಚಿಕೊಳ್ಳಬೇಡಿ. ನನ್ನ ಪ್ರಶ್ನೆ ಅದಲ್ಲ ಅಂತ ನಿಮಗೂ ಗೊತ್ತು (ನಿಮ್ಮದೇ lineನಲ್ಲಿ ವಾದಿಸುವ ಇತರ ಅನೇಕರಂತೆ). ಸತ್ಯಾನ್ವೇಷಣೆಗೂ, ಸಿಕ್ಕಿದ ಗತ ಇತಿಹಾಸದ ಭೂತಗಳನ್ನು ಬದುಕಿರುವವರ ಮೇಲೆ ಛೂ ಬಿಡುವುದಕ್ಕೂ ವ್ಯತ್ಯಾಸವಿದೆ. ನಿಮ್ಮ ಮಾತಿನ ಅರ್ಥ, ಭೈರಪ್ಪನವರು ಮಾಡಿದಂಥ ಸತ್ಯಾನ್ವೇಷಣೆ ಇದುವರೆಗೆ ನಡೆದೇ ಇಲ್ಲ ಅಂತಲೋ? ಸ್ವಾಮಿ, ಭೈರಪ್ಪನವರು ಕಾದಂಬರಿಗೋಸ್ಕರ ಸಂಶೋಧನೆ ನಡಿಸಿದರು, ಆದರೆ ಸಂಶೋಧನೆಗೋಸ್ಕರವೇ ಸಂಶೋಧನೆ ನಡೆಸಿದ/ನಡೆಸುತ್ತಿರುವ ಅನೇಕ ಇತಿಹಾಸಕಾರರ ಗುಂಪೇ ಇದೆ. ಅದನ್ನ ರಾಜಕೀಯ ಕಾರಣಕ್ಕೆ hush up ಮಾಡುವುದು ಹೀನ ಅಂತ ನಾನೂ ಒಪ್ಪಿಕೊಳ್ಳುತ್ತೇನೆ. If your struggle is to oppose that (and thats all), my full support is there for you. ಆದರೆ ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ, ನಿಮ್ಮ ಉದ್ದೇಶ ಕೇವಲ ಈ 'ಸತ್ಯ'ಬಯಲಿಗೆಳೆದು ಸುಮ್ಮನಾಗುವುದಷ್ಟೇಯೇ ಅಂತ. ಬಯಲಿಗೆಳೆದ ಸತ್ಯವನ್ನ ಹೇಗೆಲ್ಲಾ ಉಪಯೋಗಿಸಲಾಗುತ್ತದೆ ಅಂತ ನಾವೆಲ್ಲಾ ನೋಡುತ್ತಿದ್ದೇವೆ.
ಸತ್ಯಾನ್ವೇಷಣೆ, ಸತ್ಯ ಪ್ರತಿಪಾದನೆಯನ್ನು demand ಮಾಡುವ ನಮಗೆ, ಅದನ್ನು ನೋಡಿ ತಡೆದುಕೊಂಡೂ ನಮ್ಮ ಮನುಷ್ಯತ್ವವನ್ನು ಕಾಯ್ದುಕೊಳ್ಳುವ ತಾಕತ್ತಿದೆಯೇ ಅಂತ ಮೊದಲು ಪ್ರಶ್ನಿಸಿಕೊಳ್ಳಬೇಕಲ್ಲವೇ ಸ್ವಾಮಿ? ಮತಾಂಧರು ಯಾವುದೇ ಮತಕ್ಕೆ ಸೇರಿದ್ದರೂ ಮತಾಂಧರೇ. ಅವರನ್ನು particular ಆಗಿ ಖಂಡಿಸುವ/ನಿವಾರಿಸುವ ಬದಲು, ಅವರ ಜಾತಿಯನ್ನೇ ದಂಡಿಸಹೊರಡುವುದು ಯಾವ ಅರಣ್ಯ ನ್ಯಾಯ ಸ್ವಾಮಿ? ಮತ್ತೆ ಈ ಮಾತನ್ನು ಮುಸ್ಲಿಂ ಪರ ಅಂತ interprete ಮಾಡೀರಿ, ಜೋಕೆ. ಈ ಪ್ರಶ್ನೆ ಎಲ್ಲಾ ಮತಾಂಧರಿಗೂ ಅನ್ವಯಿಸುತ್ತದೆ, and ಇದನ್ನ ಓದುವ ಯಾವ ಪ್ರಜ್ಞಾವಂತರಾದರೂ ಉತ್ತರಿಸಬೇಕಾದ ಪ್ರಶ್ನೆ (ಹಾಗಂತ, ಇಲ್ಲಿ ಉತ್ತರವನ್ನೇನೂ expect ಮಾಡಲ್ಲ ಬಿಡಿ ನಾನು; because when the arguement turns too logical it will be met either with abuses or with silence)
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಸಾರ್, ಮನುಸ್ಮ್ರುತಿಯನ್ನು ಈಗ ಯಾರು ಓದುತ್ತಾರೆ?
ಆದರೆ ಕುರಾನನ್ನು ಎಲ್ಲ ಮುಸಲ್ಮಾನರೂ ಇನ್ನೂವರೆಗೂ ಓದುತ್ತಾರೆ.
ನೀವು ಹೇಳುವ ಹಾಗೆ ೨೦೦-೩೦೦ ವರ್ಷಗಳ ಹಿಂದೆ ಮುಸಲ್ಮಾನರಂತೆ ಹಿಂದುಗಲೂ ಕ್ರೂರಿಗಳಾಗಿದ್ದರು ಎಂದೇ ಒಪ್ಪಿಕೊಳ್ಳೋಣ.
ಆದರೆ ಹಿಂದೂಗಳು ಇವತ್ತು ಬದಲಾಗಿದ್ದಾರೆ. ಆದ್ದರಿಂದಲೇ K R Narayanan ರಾಷ್ಟ್ರಪತಿಯಾಗಿದ್ದು,
Dr.B.R.Ambedkar ಸಂವಿಧಾನ ನಿರ್ಮಾತ್ರು ಆಗಿದ್ದು.
ಆದರೆ ಮುಸಲ್ಮಾನರು ಬದಲಾಗಿಲ್ಲ.ಆದ್ದರಿಂದಲೇ ಇಂದಿಗೂ Osama Bin Laden ಮತ್ತು Afzal Guru(!?) ಅವರಂಥ ಕ್ರೂರಿಗಳು ಜನರ ಪ್ರಾಣ ತೆಗೆಯುತ್ತಿರುವುದು.
ನಿಮಗೇನಾದರೂ, ದುರದ್ರುಷ್ಟವಶಾತ್, ಮುಸಲ್ಮಾನ್ ಗೆಳೆಯರಿದ್ದಲ್ಲಿ ಎಚ್ಚರದಿಂದಿರಿ.ಆವರ ಮನೆಯಲ್ಲಿಯೂ AK-47,etc. ಇರಬಹುದು.
ಇನ್ನೂ ಒಂದು ಮಾತಿದೆ--"ಆತಂಕವಾದಿಗಳಿಗೆ ಯಾವುದೇ ಧರ್ಮವಿಲ್ಲ, ಜಾತಿಯಿಲ್ಲ....."
ಆದರೆ ಪೋಲೀಸರ ಕೈಗೆ ಸಿಕ್ಕಿಕೊಳ್ಳುವ ಪ್ರತಿಯೊಬ್ಬ ಉಗ್ರವಾದಿಯೂ ಮುಸಲ್ಮಾನನೇ ಆಗಿರುತ್ತಾನೆ ಏಕೆ?(ತಾವುಗಳು ಇದರಲ್ಲಿಯೂ ಹಿಂದೂಗಳ ತಪ್ಪನ್ನೇ ಹುಡುಕಿದರೂ ಸಂಶಯವಿಲ್ಲ!).
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಮುಸ್ಲಿಮರು ದಾಳಿಕೋರರು. ಈಗ ಮಾತನಾಡುತ್ತಿರುವ ತಾವೆಲ್ಲರೂ ಅದೇ ಅಲ್ಲವೇ? ಆರ್ಯರು ಮೊದಲು ಭಾರತದ ಮೇಲೆ ದಂಡೆತ್ತಿ ಬಂದದ್ದು. ದ್ರಾವಿಡ ಸಂಸ್ಕೃತಿಯ ಮೇಲೆ ವೈದಿಕ ಸಂಸ್ಕೃತಿಯನ್ನು ಹೇರಿದ್ದು. ಸ್ನೇಹಿತರ ಬಳಿ ಎ.ಕೆ-47 ಇರಬಹುದೆಂಬ ಅನುಮಾನಗಳು ನನಗಿಲ್ಲ. ಈ ಬಗೆಯ ಅನುಮಾನ ಯಾರ ಸಂಸ್ಕೃತಿ ಎಂದು ನಾನು ಮತ್ತೊಮ್ಮೆ ಹೇಳಬೇಕಿಲ್ಲ.
ರಮೇಶ್ ಸಮಗಾರ
ಉ:
ದಯವಿಟ್ಟು ಈ ರೀತಿ ಎಲ್ಲರನ್ನೂ ಒಂದೇ ಬುಟ್ಟಿಯಲ್ಲಿ ತೂಗಬೇಡಿ. ಕೆಟ್ಟವರು ಎಲ್ಲಿಲ್ಲ?
ಮುಸಲ್ಮಾನರಲ್ಲಿ ಕೆಲವು ಸಾಮಾಜಿಕ ಸುಧಾರಣೆ ಆಗಬೇಕಿದೆ ನಿಜ (ತಲಾಖ್ ಇತ್ಯಾದಿ), ಮತ್ತೆ ಕಾಲಧರ್ಮಕ್ಕೆ ಸರಿಯಾಗಿ, ಇಸ್ಲಾಂ ನಲ್ಲೂ ಬದಲಾವಣೆಗಳಾಗಬೇಕು. ಆದರೆ, ಈ ರೀತಿಯ ಆರೋಪ ಮಾಡುವುದು ಖಂಡಿತ ಸರಿಯಲ್ಲ. ಇದರಿಂದ, ನೀವು ಹೇಳುವ ಎಷ್ಟೋ ಸಂಗತಿಗಳು ಸರಿಯಿದ್ದರೂ, ಅವು ಬೆಲೆ ಕಳೆದುಕೊಳ್ಳಬಹುದು.
-ಹಂಸಾನಂದಿ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
"ಸಾರ್, ಮನುಸ್ಮ್ರುತಿಯನ್ನು ಈಗ ಯಾರು ಓದುತ್ತಾರೆ?
ಆದರೆ ಕುರಾನನ್ನು ಎಲ್ಲ ಮುಸಲ್ಮಾನರೂ ಇನ್ನೂವರೆಗೂ ಓದುತ್ತಾರೆ.
ನೀವು ಹೇಳುವ ಹಾಗೆ ೨೦೦-೩೦೦ ವರ್ಷಗಳ ಹಿಂದೆ ಮುಸಲ್ಮಾನರಂತೆ ಹಿಂದುಗಲೂ ಕ್ರೂರಿಗಳಾಗಿದ್ದರು ಎಂದೇ ಒಪ್ಪಿಕೊಳ್ಳೋಣ.
ಆದರೆ ಹಿಂದೂಗಳು ಇವತ್ತು ಬದಲಾಗಿದ್ದಾರೆ."
ಸ್ವಾಮಿ, ಅದು ಸರಿ. ಒಂದು ಪ್ರಶ್ನೆಗೆ ಉತ್ತರ ಕೊಡಿ. ಮನುಸ್ಮೃತಿಯಲ್ಲಿರುವುದು ಸರಿಯೋ ತಪ್ಪೋ ನಿಮ್ಮ ಅಭಿಪ್ರಾಯವೇನು? ನಂತರ ಚರ್ಚೆ ಮಾಡೋಣ. ಬರೀ ಮಾತಿಗೆ ಮಾತು ಹಾಕಿದರೆ ಏನೂ ಪ್ರಯೋಜನವಿಲ್ಲ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಹಿಂದೂಗಳು ಬದಲಾಗಿದ್ದಾರೆ....
ಈ ಬದಲಾದ ಹಿಂದೂಗಳೇ ಅಲ್ಲವೇ ಸ್ವಾಮಿ ಕಂಬಾಲಪಲ್ಲಿಯಲ್ಲೂ, ಖೈರ್ಲಾಂಜಿಯಲ್ಲೂ, ಬೆಲ್ಚಿಯಲ್ಲೂ ದಲಿತರನ್ನು ಕೊಂದದ್ದು. ಈ ಬದಲಾದ ಹಿಂದೂಗಳು ಮತ್ತು ಹಿಂದಿನದ್ದು ನೆನಪಿಟ್ಟುಕೊಳ್ಳದೇ ಕ್ಷಮಿಸಿದವರು ಗುಜರಾತ್ ನಲ್ಲಿ ಗರ್ಭಿಣಿಯ ಹೊಟ್ಟೆ ಬಗೆದು ಭ್ರೂಣವನ್ನು ಎತ್ತಿ ಹಿಡಿದು ಧರ್ಮ ಸಂಸ್ಥಾಪನೆ ಮಾಡಿದ್ದು. ಆಹಾ ಎಂಥಾ ಬದಲಾವಣೆ.
ಇನ್ನು ಮೊಘಲರ ಕಾಲದಲ್ಲಿ ಇದ್ದದ್ದು ಕೇವಲ ಔರಂಗಜೇಬ ಮಾತ್ರ ಅಲ್ಲ. ಅಕ್ಬರನೂ ಇದ್ದ. ಇಷ್ಟರ ಮೇಲೆ ನೋಡುವುದಾದರೆ ದೇವಸ್ಥಾನ ಉರುಳಿಸಿದ್ದು ಮೊಘಲರು ಮಾತ್ರ ಅಲ್ಲ. ಹರ್ಷವರ್ಧನನೂ ಮರಾಠರೂ ಈ ಕೆಲಸವನ್ನು ಸಾಕಷ್ಟು ಮಾಡಿದ್ದಾರೆ. ಇನ್ನು ಮತಾಂತರವನ್ನು ಅವರು ಮಾಡುವುದೇಕೆ ಸ್ವಾಮೀ ಸವರ್ಣೀಯರು ಕೆಳಜಾತಿಯನ್ನು ನಡೆಸಿಕೊಳ್ಳುತ್ತಿದುದನ್ನು ಮತ್ತು ಈಗಲೂ ನಡೆಸಿಕೊಳ್ಳುವುದನ್ನು ಕಂಡರೆ ಉತ್ತರ ಸಿಗುತ್ತದೆ. ನೀವು ಹೇಳಿದಂತೆ ಮತಾಂತರ ನಡೆದಿದ್ದರೆ ಇಲ್ಲಿ ಹಿಂದೂಗಳೇ ಇರುತ್ತಿರಲಿಲ್ಲ. ಇಂಥ ಸತ್ಯಗಳನ್ನು ಆವರಿಸಿರುವುದು ಏನು?
ರಮೇಶ್ ಸಮಗಾರ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ರಮೇಶ,
ಆಧಾರವಿಲ್ಲದೆ ಮಾತನಾಡುವದು ಬಲು ಸುಲಭ..
"ಗುಜರಾತ್ ನಲ್ಲಿ ಗರ್ಭಿಣಿಯ ಹೊಟ್ಟೆ ಬಗೆದು ಭ್ರೂಣವನ್ನು ಎತ್ತಿ ಹಿಡಿದು ಧರ್ಮ ಸಂಸ್ಥಾಪನೆ ಮಾಡಿದ್ದು." ಎಲ್ಲಿದೆ ಆಧಾರ?
ಆರುಂಧತಿರಾಯ್ ಎಂಬ ಉಟ್ಟು ಹೋರಾಟಗಾರ್ತಿ ದೆಹಲಿಯ ಎ.ಸಿ.ರೂಮ್ ನಲ್ಲಿ ಕುಳಿತು outlook ನಲ್ಲಿ ಬರೆದದೆಲ್ಲ ಸತ್ಯವೆಂದು ನೀವು ನಂಬುವದಾದರೆ ನಿಮ್ಮ ಜೊತೆ ವಾದ ಮಾಡಿ ಉಪಯೋಗವಿಲ್ಲ! ನೀವು outlook ಓದುತ್ತಿದ್ದ ಪಕ್ಶದಲ್ಲಿ ಮೇಲಿನ ಆರೋಪದ ರಾಯ್ ಲೇಖನದ ಸಂಚಿಕೆಯ ನಂತರ, ಅದಕ್ಕೆ ಸರಿಯಾದ ಉತ್ತರವನ್ನು ಕೊಟ್ಟಿದ್ದಾರೆ. ಆದರೆ ಉಟ್ಟು ಹೋರಾಟಗಾರ್ತಿ ಆರುಂಧತಿರಾಯ್ ಇನ್ನೊವರೆಗೂ ಉತ್ತರಿಸಿಲ್ಲ! ಮತ್ತು ಸುಳ್ಳುಗಳಿಗೆ ಉತ್ತರವೂ ಸಾಧ್ಯವಿಲ್ಲ..
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಅದನ್ನೇ ಸ್ವಾಮಿ ಆವರಣದ ಆಶಯ ಅಂತ ಹೇಳುತ್ತಿರುವುದು... ಭಾರತದ ಮೇಲೆ ದಾಳಿ ಮಾಡಿದ ಮುಸಲ್ಮಾನ ಸುಲ್ತಾನರಲ್ಲಿ ಅಕ್ಬರ್ ಹೇಗಿದ್ದನೋ ಹಾಗೆಯೇ ಔರಂಗಾಜೇಬ್ ಕೂಡಾ ಇದ್ದ ಎಂಬುದನ್ನು ಪಠ್ಯಪುಸ್ತಕಗಳಲ್ಲಿ ನೀಡಿ... ಅಕ್ಬರ್ ಮಾಡಿದ ಕೆಲಸಗಳ ಜೊತೆಗೆ ಔರಂಗಾಜೇಬನ ಕಾರ್ಯಗಳನ್ನೂ ಕೊಡಿ ಅಂತಲೇ ನಾವು ಹೇಳುವುದು.. ಆದರೆ ಕಮ್ಯುನಿಸ್ಟರಿಗೆ ಕಾಣುವುದೆಲ್ಲಾ ಕೆಂಪು!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ರಮೇಶರೆ,
ನೀವು ಪದೆ ಪದೆ ಮನು ಸ್ಮ್ರುತಿಯನ್ನು ಉದಾಹರಿಸುತ್ತಿದ್ದೀರಿ. ಒಮ್ಮೆ ಮನುಸ್ಮ್ರುತಿಯನ್ನು ಪಕ್ಕಕ್ಕಿಟ್ಟು ನೋಡಿದರೆ ನಿಮಗೆ ದಲಿತರನ್ನು ನೀವು ಹೇಳುವ ಹಾಗೆ ಕೆಟ್ಟದಾಗಿ ಬೇರೆ ಯಾವ ಹಿ೦ದು ಗ್ರ೦ಥದಲ್ಲಿಯು ಬರೆದಿಲ್ಲ. ಹಿ೦ದು ಧರ್ಮ ಎ೦ದರೆ ಬರಿ ಮನು ಸ್ಮ್ರುತಿಯಲ್ಲ. ನಾವು ಪವಿತ್ರ ಎ೦ದು ಪರಿಗಣಿಸುವ ರಾಮಾಯಣ ಹಾಗು ಮಹಾಭಾರತವನ್ನು ಬರೆದವೆರು ಬ್ರಾಹ್ಮಣರಲ್ಲ ಎ೦ದು ನಿಮಗೆ ತಿಳಿದಿರಬಹುದು. ಆದರೆ ಅದನ್ನು ಬ್ರಾಹ್ಮಣರು ಒಪ್ಪಿಕೊ೦ಡಿಲ್ಲವೆ?
ಮಹಾಭಾರತದಲ್ಲಿ ಯಕ್ಷ ಪ್ರಶ್ನೆಯಲ್ಲಿ ಧರ್ಮರಾಯನ ಉತ್ತರ ತಮಗೆ ಗೊತ್ತಿದೆ ಎ೦ದು ಭಾವಿಸುತ್ತೇನೆ - "ಹುಟ್ಟಿನಿ೦ದ ಯಾರೂ ಬ್ರಾಹ್ಮಣರಲ್ಲ, ಸ೦ಸ್ಕಾರಕ್ಕನುಗುಣವಾಗಿ ಒಬ್ಬಾತ ಚಾತುರ್ವರ್ಣದಲ್ಲಿ ಸ್ಥಾನ ಪಡೆಯುತ್ತಾನೆ."
ತಮಗೆ "ಸತ್ಯಕಾಮ ಜಾಬಾಲಿಯ" ಬಗ್ಗೆ ಗೊತ್ತೆ? ಜಾತಿಯೇ ಗೂತ್ತಿಲ್ಲದ ಅವನಿಗೆ ವಿದ್ಯೆ ಹೇಳಿಕೊಟ್ಟಿದ್ದು ಒಬ್ಬ ಬ್ರಾಹ್ಮಣ ಗುರುವೆ. ನೀವು ಪದೆ ಪದೆ ಉಲ್ಲೇಖಿಸುವ ಮನು ಸ್ಮ್ರುತಿ ಈಗಿಗಿ೦ತಲೂ ಆಗ ಪ್ರಬಲವಾಗಿರಬೇಕಲ್ಲವೆ? ಹಾಗಿದ್ದ ಪಕ್ಷದಲ್ಲಿ ಆ ಶಿಸ್ಯನ ಕಿವಿಯಲ್ಲಿ ಸೀಸ ಹಾಕಿರೆಬೇಕಿತ್ತಲ್ಲವೆ? ಅದಾವುದೊ ನಡೆದಿಲ್ಲ. ಕೇವಲ ಒ೦ದು ಗ್ರ೦ಥವನ್ನು ಉಲ್ಲೇಖಿಸಿ ಇಡೀ ಹಿ೦ದು ಧರ್ಮವನ್ನು ಅವಹೇಳನ ಮಾಡುವುದು ಸರಿಯಲ್ಲ.
---
ನೀವು ಹಲವು ಪ್ರಶ್ನೆಗಳನ್ನು ನಿಮ್ಮ ಪ್ರತಿಕ್ರಿಯೆಯಲ್ಲಿ ಕೇಳಿದ್ದೀರಿ. ನನ್ನ ಉತ್ತರಗಳು ಹೀಗಿವೆ:
೧. " ನಿಮಗೆ ಯಾರಾದರೂ ಮುಸ್ಲಿಂ ಗೆಳೆಯರಿದ್ದಾರೆಯೇ?"...
ನನಗೆ ಮುಸ್ಲಿ೦ ಧರ್ಮೀಯ ಗೆಳೆಯರಿದ್ದರು ಹಾಗು ಇದ್ದಾರೆ. ನಿಮಗೆ ಹಿ೦ದು ಗೆಳೆಯರಿದ್ದಾರೆಯೆ?
೨. "ಈ 300 ವರ್ಷಗಳ ... ’ಈಗಿರುವ ಎಲ್ಲರನ್ನೂ ಗಲ್ಲಿಗೇರಿಸಬೇಕಿರುವಷ್ಟು ದೂರುಗಳು ದಲಿತನಾದ ನನಗೆ ಇದೆ."
ತಮ್ಮ ದೂರುಗಳನ್ನು ಹೇಳಿ ಹಾಗು ಅವು ಸರಿ ಎ೦ದು ಅನ್ನಿಸಿದರೆ ನೀವು ಎಲ್ಲರನ್ನು ಗಲ್ಲಿಗೇರಿಸಿ. ಆದರೆ ನಿಮ್ಮದು ತಪ್ಪು ಎ೦ದು ತಿಳಿದರೆ ಯಾರನ್ನು ಗಲ್ಲಿಗೇರಿಸಬೇಕೆ೦ದು ತಮಗೆ ಗೊತ್ರಿರಬಹುದು. ಆದರೆ ದೂರುಗಳನ್ನೇ ಹೇಳದೆ ಎಲ್ಲರನ್ನೂ ಗಲ್ಲಿಗೇರಿಸಲು ಹೊರಟ ನಿಮ್ಮ ಮನೋಸ್ಥಿತಿ ನಮಗೆ ಅರ್ಥವಾಗುತ್ತಿಲ್ಲ.
೩. ಹಿ೦ದುಗಳು ತಪ್ಪನ್ನು ಅರ್ಥ ಮಾಡಿಕೊ೦ಡು ಅದನ್ನು ಸರಿಪಡಿಸಲು ತೊಡಗಿದ್ದಾರೆ. ಆದರೆ ತಾವು ಮಾತ್ರ ಅದೆ ಹಳೆಯ ಯೋಚನಾಶೈಲಿಯಲ್ಲಿ ಈಗಲೂ ಚಿ೦ತಿಸುದ್ದೀರಿ. ಎಲ್ಲರನ್ನು ಒ೦ದುಗೂಡಿಸಲು ತೊಡಗಿರುವ ಈ ಕಾಲದಲ್ಲಿ ಕೈಗೂಡಿಸಿ ಮುನ್ನಡೆಯಬೇಕಿದೆ.
---
ರ೦ಗನಾಥ್